ETV Bharat / sukhibhava

ಶ್ವಾಸಕೋಶ ಸಮಸ್ಯೆ ಹೊಂದಿರುವವರ ಮಕ್ಕಳು, ವಯಸ್ಕರಲ್ಲಿ ಹವಾಮಾನ ಬದಲಾವಣೆ ಮತ್ತಷ್ಟು ಅಪಾಯ ಹೆಚ್ಚಿಸಿದೆ: ಅಧ್ಯಯನ

ಹವಾಮಾನ ಬದಲಾವಣೆ ಪ್ರತಿಯೊಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ ಇದು ಮತ್ತಷ್ಟು ಕಳಪೆ ಪರಿಣಾಮ ಬೀರುತ್ತದೆ.

Climate change can add more risks for kids adults with lung conditions

author img

By ETV Bharat Karnataka Team

Published : Sep 4, 2023, 5:13 PM IST

ಪ್ಯಾರಿಸ್( ಫ್ರಾನ್ಸ್​)​ : ಅಸ್ತಮಾ ಮತ್ತು ಕ್ರಾನಿಕಲ್​ ಅಬ್ಸ್​ಟ್ರಾಕ್ಟಿವ್​ ಪಲ್ಮನರಿ ಡಿಸೀಸ್​ (ಸಿಒಪಿಡಿ)ಯಂತಹ ಶ್ವಾಸಕೋಶ ಸಮಸ್ಯೆಯನ್ನು ಎದುರಿಸುತ್ತಿರುವ ಮಕ್ಕಳು ಮತ್ತು ವಯಸ್ಕರಲ್ಲಿ ಹವಾಮಾನ ಬದಲಾವಣೆ ಹೆಚ್ಚಿನ ಅಪಾಯ ಒಡ್ಡಲಿದೆ ಎಂದು ಅಧ್ಯಯನ ತಿಳಿಸಿದೆ.

ಯುರೋಪಿಯನ್​ ರೆಸ್ಪಿರೇಟರಿ ಜರ್ನಲ್​ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಹವಾಮಾನ ಬದಲಾವಣೆಗಳಾದ ಶಾಖದ ಅಲೆ, ಕಾಳ್ಗಿಚ್ಚು ಮತ್ತು ಪ್ರವಾಹ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸಾಕ್ಷ್ಯವನ್ನು ತಂದಿದೆ. ಇದರಿಂದ ವಿಶ್ವದಲ್ಲಿ ಮಿಲಿಯಂತರ ಜನರು ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಿಸುತ್ತದೆ.

ಹವಾಮಾನ ಬದಲಾವಣೆ ಪ್ರತಿಯೊಬ್ಬರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಉಸಿರಾಟ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ ಇದು ಮತ್ತಷ್ಟು ಕಳಪೆ ಪರಿಣಾಮ ಬೀರುತ್ತದೆ. ಈ ಜನರು ಈಗಾಗಲೇ ಉಸಿರಾಟದ ಸಮಸ್ಯೆ ಎದುರಿಸಿದ್ದು, ಅವರು ಈ ಹವಾಮಾನ ಬದಲಾವಣೆಯಿಂದ ಮತ್ತಷ್ಟು ಸೂಕ್ಷ್ಮಗೊಳ್ಳುತ್ತಾರೆ. ಅವರ ರೋಗದ ಲಕ್ಷಣಗಳು ಮತ್ತಷ್ಟು ಕೆಟ್ಟದಾಗುತ್ತದೆ ಎಂದು ಯುರೋಪಿಯನ್​ ರೆಸ್ಪಿರೇಟರಿ ಸೊಸೈಟಿ ಎನ್ವರಮೆಂಟಲ್​ ಅಂಡ್​ ಹೆಲ್ತ್​ ಕಮಿಟಿ ಫ್ರೊ ಜೊರಾನಾ ಜೊವನೊವಿಕ್​ ಅಂಡ್ರೆಸೆನ್​ ತಿಳಿಸಿದ್ದಾರೆ.

ವಾಯು ಮಾಲಿನ್ಯ ಈಗಾಗಲೇ ಶ್ವಾಸಕೋಶವನ್ನು ಹಾನಿ ಮಾಡಿದೆ. ಇದೀಗ ಹವಾಮಾನ ಬದಲಾವಣೆ ಶ್ವಾಸಕೋಶ ರೋಗಿಗಳಿಗೆ ಭಾರಿ ಆಘಾತ ಉಂಟು ಮಾಡುವ ಪರಿಣಾಮವನ್ನು ಹೊಂದಿದ್ದೆ ಎಂದಿದ್ದಾರೆ. ಈ ಪರಿಣಾಮವೂ ಹೆಚ್ಚಿನ ತಾಪಮಾನ ಮತ್ತು ಪರ್ಯಾಯವಾಗಿ ಗಾಳಿಮೂಲದ ಅಲರ್ಜಿಗಳನ್ನು ಹೆಚ್ಚಿಸುತ್ತದೆ.

ಪದೇ ಪದೆ ಬದಲಾಗುತ್ತಿರುವ ಹವಾಮಾನ ಬದಲಾವಣೆಗಳಾದ ಶಾಖದ ಅಲೆ, ಬರ ಮತ್ತು ಕಾಳ್ಗಿಚ್ಚು ವಾಯು ಮಾಲಿನ್ಯ ಮತ್ತು ಧೂಳಿನಿಂದ ಕೂಡಿದ ಬಿರುಗಾಳಿ ಸಮಸ್ಯೆಗೆ ಕಾರಣವಾಗುತ್ತದೆ. ಈ ವರದಿಯೂ ಶಿಶು ಮತ್ತು ಮಕ್ಕಳಲ್ಲಿ ಹೆಚ್ಚಿನ ಅಪಾಯವನ್ನು ಹೊಂದಿದೆ. ಕಾರಣ ಅವರಲ್ಲಿ ಇನ್ನೂ ಶ್ವಾಸಕೋಶ ಅಭಿವೃದ್ಧಿ ಆಗುತ್ತಿರುತ್ತದೆ

ಈ ವರ್ಷ ವಿಶ್ವದಲ್ಲಿನ ತಾಪಮಾನ ಹೆಚ್ಚಳ ಹೊಸ ದಾಖಲೆ ಸೃಷ್ಟಿಸಿದೆ. ಯುರೋಪ್​ ಶಾಖದ ಅಲೆ, ಕಾಳ್ಗಿಚ್ಚು ಮತ್ತು ಮಳೆಬಿರುಗಾಳಿ, ಪ್ರವಾಹಗಳಿಗೆ ತುತ್ತಾಗಿವೆ. ಇದು ಇಲ್ಲಿನ ಜನರನ್ನು ಹೈರಾಣುಗೊಳಿಸಿದೆ. ಶ್ವಾಸಕೋಶ ವೈದ್ಯರು ಮತ್ತು ನರ್ಸ್​​ಗಳು ಹೊಸ ಅಪಾಯಗಳ ಕುರಿತು ನಾವು ನಮ್ಮ ರೋಗಿಗಳಿಗೆ ವಿವರಿಸಬೇಕಾಗಿದೆ ಇದರಿಂದ ಅವರು ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು.

ನಮ್ಮ ರೋಗಿಗಳಿಗೆ ಅಪಾಯದ ಕುರಿತು ನಾವು ವಿವರಿಸಬೇಕಿದೆ. ಇದರಿಂದ ಹವಾಮಾನ ಬದಲಾವಣೆ ಅಡ್ಡ ಪರಿಣಾಮದ ರಕ್ಷಣೆ ಮಾಡಬೇಕಿದೆ. ನಮಗೆ ಉಸಿರಾಡಲು ಶುದ್ದ ಮತ್ತು ಸುರಕ್ಷಿತ ಗಾಳಿ ಬೇಕಿದೆ. ನಮ್ಮ ಗ್ರಹ ಮತ್ತು ಆರೋಗ್ಯದ ಮೇಲೆ ಹವಾಮಾನ ಬದಲಾವಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನೀತಿ ನಿರೂಪಕರಿಂದ ಸರಿಯಾದ ಕ್ರಮ ಅವಶ್ಯವಾಗಿದೆ ಎಂದು ಪ್ರೋ ಆಂಡ್ರೆಸೆನ್​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಹವಾಮಾನ ಬದಲಾವಣೆ ಭಾರತದ ಅಂತರ್ಜಲ ಮಟ್ಟದ ಕುಸಿತವನ್ನು ಮೂರು ಪಟ್ಟು ಹೆಚ್ಚಿಸಲಿದೆ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.