ETV Bharat / sukhibhava

ಚೀನಾದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ: ಕಾರಣವೇನು?

Respiratory illnesses among children in China: ಚೀನಾದಲ್ಲಿ ವಿವಿಧ ವಯಸ್ಸಿನ ಜನರು ವಿಭಿನ್ನ ರೋಗಕಾರಕಗಳಿಗೆ ಗುರಿಯಾಗುತ್ತಿದ್ದಾರೆ.

china paediatric departments overload with respiratory illnesses among children

author img

By ETV Bharat Karnataka Team

Published : Nov 27, 2023, 11:35 AM IST

ಬೀಜಿಂಗ್​​: ಚೀನಾದ ಮಕ್ಕಳಲ್ಲಿ ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ತೀವ್ರ ಉಸಿರಾಟ ತೊಂದರೆಗೆ ಕಾರಣವಾಗುವ ರೋಗಕಾರಕಗಳು ಉಲ್ಬಣವಾಗುತ್ತಿವೆ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ದೇಶದ ಬಹುತೇಕ ಆಸ್ಪತ್ರೆಗಳ ಮಕ್ಕಳ ವಿಭಾಗಗಳು ರೋಗಿಗಳಿಂದ ತುಂಬಿದೆ ಎಂದು ವರದಿಯಾಗಿದೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯುಕ್ತರ ವಕ್ತಾರ ಮಿ ಫೆಂಗ್​ ಮಾತನಾಡುತ್ತಾ, ಇನ್ಫುಯೆನ್ಸ​ ಜೊತೆಗೆ ರೈನೋವೈರಸ್‌ಗಳು, ಮೈಕೋಪ್ಲಾಸ್ಮಾ ನ್ಯುಮೋನಿಯಾ, ರೆಸ್ಪಿರೆಟರಿ ಸಿನ್ಸಿಟಿಯಲ್ ವೈರಸ್ ಮತ್ತು ಅಡೆನೊವೈರಸ್‌ಗಳಿಂದಾಗಿ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ ಎಂದು ಸೌತ್​ ಚೀನಾ ಮಾರ್ನಿಂಗ್​ ಪೋಸ್ಟ್​ ವರದಿ ಮಾಡಿದೆ.

ಇದೇ ವೇಳೆ ಮಕ್ಕಳ ಮತ್ತು ಜ್ವರ ಹೊರರೋಗಿ ಸೇವೆಗಳ ಬೇಡಿಕೆ ಹಿನ್ನೆಲೆೆಯಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸುವ ಮತ್ತು ಶಾಲೆಗಳಲ್ಲಿ ಸಮಸ್ಯೆಗಳ ತಡೆಗೆ ಕ್ರಮ ಸೇರಿದಂತೆ ಸಕಾಲಿಕ ಮತ್ತು ನವೀಕೃತ ಮಾಹಿತಿ ನೀಡುವಂತೆ ಒತ್ತಾಯಿಸಲಾಗುತ್ತಿದೆ. ರೋಗಗಳ ತಡೆಗಟ್ಟುವಿಕೆಗೆ ಪರಿಣಾಮಕಾರಿ ಪ್ರಯತ್ನ ನಡೆಸಬೇಕು. ಪ್ರಮುಖ ಸ್ಥಳಗಳು ಮತ್ತು ಜನಸಂಖ್ಯೆ ಅಧಿಕವಿರುವ ಸ್ಥಳಗಳಾದ ಶಾಲೆ, ಚೈಲ್ಡ್​ಕೇರ್​ ಸಂಸ್ಥೆ, ನರ್ಸಿಂಗ್​​ ಹೋಮ್​ನಲ್ಲಿ ನಿಯಂತ್ರಣ ಮಾದರಿಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.

ವಿವಿಧ ವಯಸ್ಸಿನ ಗುಂಪಿನ ಜನರು ವಿಭಿನ್ನ ರೋಗಕಾರಕಗಳಿಗೆ ಗುರಿಯಾಗುತ್ತಿದ್ದಾರೆ. ಇನ್ಫುಯೆನ್ಸ​ ಇದರ ಹಿಂದಿರುವ ಪ್ರಮುಖ ಕಾರಣ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ. ಈ ಕುರಿತು ಮಾತನಾಡಿರುವ ಸಿಡಿಸಿ ಮುಖ್ಯಸ್ಥ ವಾಂಗ್​ ಹುವಾಕಿಂಗ್​​, 5ರಿಂದ 14 ವರ್ಷದ ಮಕ್ಕಳಲ್ಲಿ ಮೈಕ್ರೋಪ್ಲಾಸ್ಮ ನ್ಯೂಮೋನಿಯಾ ಸೋಂಕು ಹೆಚ್ಚಾಗಿ ಕಾಣಸಿಕೊಂಡಿದೆ. ಉಳಿದ ಮಂದಿ ವಿವಿಧ ಬಗೆಯ ಮತ್ತು ವೈರಸ್​ ಸಂಯೋಜನೆಯಿಂದ ರೋಗಕ್ಕೆ ತುತ್ತಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಐದು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಲ್ಲಿ ನ್ಯೂಮೋನಿಯಾಕ್ಕೆ ಕಾರಣವಾಗುವ ಸಾಮಾನ್ಯ ರೋಗಕಾರಕವೇ ಈ ಮೈಕ್ರೋಪ್ಲಾಸ್ಮ. ಚೀನಾದಲ್ಲಿ ಪ್ರತಿ ಎರಡರಿಂದ ನಾಲ್ಕು ವರ್ಷಕ್ಕೊಮ್ಮೆ ಈ ರೋಗ ಉಲ್ಬಣವಾಗುವುದು ಸಾಮಾನ್ಯವಾಗಿದೆ. ಬೀಜಿಂಗ್​ನಲ್ಲಿ ಕಳೆದ ಮೈಕ್ರೋಪ್ಲಾಸ್ಮ ಪಾಸಿಟಿವಿಟಿ ದರ ಶೇ 40ರಷ್ಟಿದೆ. 2019ರಲ್ಲಿ ದಾಖಲಾದ ಪ್ರಕರಣಕ್ಕಿಂತ ಇದು ಶೇ 1.3ರಷ್ಟು ಹೆಚ್ಚು ಎಂದು ಆರೋಗ್ಯ ದತ್ತಾಂಶ ವಿಶ್ಲೇಷಕ ಸಂಸ್ಥೆ ಏರ್​ಫಿನಿಟಿ ಲಿಮಿಟೆಡ್​​ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಚೀನಾ ನ್ಯೂಮೋನಿಯಾ ಪ್ರಕರಣ; ಭಾರತದಲ್ಲಿ ಕಣ್ಗಾವಲಿಗೆ ಕರೆ ನೀಡಿದ ವೈದ್ಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.