ETV Bharat / sukhibhava

ಮಗುವಿನಲ್ಲಿ ಏಕಾಗ್ರತೆ ಕೊರತೆಗೆ ಪ್ರಮುಖ ಕಾರಣ ಈ ಸ್ಕ್ರೀನ್​ ಟೈಂ; ಬೀ ಕೇರ್​​​ಫುಲ್​ ಎಂದ ಸಂಶೋಧಕರು - ಓದಿನಲ್ಲಿ ನಿರಾಸಕ್ತಿ ತೋರುತ್ತಿದೆ

ಮಗುವಿನಲ್ಲಿ ಏಕಾಗ್ರತೆ ಕೊರತೆ ಅನುಭವಿಸಿ, ಓದಿನಲ್ಲಿ ನಿರಾಸಕ್ತಿ ತೋರುತ್ತಿದೆ ಎಂದರೆ ಅದಕ್ಕೆ ಕಾರಣ ಹೆಚ್ಚು ಗಂಟೆಗಳ ಕಾಲ ಅವರು ಡಿಜಿಟಲ್​ ಸಾಧನದಲ್ಲಿ ಕಳೆಯುತ್ತಿರುವುದಾಗಿದೆ.

children-lack-concentration-due-to-their-screen-time

author img

By ETV Bharat Karnataka Team

Published : Nov 22, 2023, 4:18 PM IST

ಮಕ್ಕಳು ಇಂದು ಅತಿಹೆಚ್ಚು ಸಮಯವನ್ನು ಸ್ಕ್ರೀನ್​ ಮುಂದೆ ಕಳೆಯುತ್ತಿದ್ದು, ಇದು ಗಂಭೀರವಾದ ಸಾರ್ವಜನಿಕ ವಿಷಯವಾಗಿದೆ. ಮಕ್ಕಳ ಹೆಚ್ಚಾಗಿ ಕಂಪ್ಯೂಟರ್​, ಟಿವಿ ಮತ್ತು ಮೊಬೈಲ್​ ವೀಕ್ಷಣೆ ಮಾಡುತ್ತಿದ್ದಾರೆ. ಇದು ಅವರಲ್ಲಿ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಅವರಲ್ಲಿ ಅರಿವಿನ ಕೊರತೆ, ಏಕಾಗ್ರತೆ, ಯೋಜನೆ ಮತ್ತು ಸಮಸ್ಯೆಗಳನ್ನು ಬಿಡಿಸುವ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಈ ಸಂಬಂಧ ವಿಜ್ಞಾನಿಗಳು ಅನೇಕ ಅಧ್ಯಯನಗಳನ್ನು ನಡೆಸಿದ್ದು, ಈ ಸಂಬಂಧ ನಿರ್ಣಯಕ್ಕೆ ಬಂದಿದ್ದಾರೆ. ಅಧಿಕ ಕಾಲ ವಿಡಿಯೋ ಗೇಮ್​ ಬಳಕೆ, ಇಂಟರ್​ನೆಟ್​ ಬ್ರೌಸಿಂಗ್​, ಸಾಮಾಜಿಕ ಮಾಧ್ಯಮ ಅಥವಾ ಸ್ಮಾರ್ಟ್​​ ಫೋನ್​ ಬಳಕೆ ಅವರಲ್ಲಿ ಅರಿವಿನ ಸಮಸ್ಯೆಗೆ ಕಾರಣವಾಗಬಹುದು

ಸ್ಕ್ರೀನ್​ ಟೈಂ ಮಕ್ಕಳ ಶಿಕ್ಷಣ ಮತ್ತು ಕಲಿಕೆಗೆ ಸಹಾಯಕವಾಗಿದ್ದರೂ ಅತಿಯಾದ ಬಳಕೆ ಅವರಲ್ಲಿ ಶೈಕ್ಷಣಿಕ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಮಕ್ಕಳು ಅತಿ ಹೆಚ್ಚು ಕಾಲ ಆರೈಕೆದಾರರು, ಸ್ನೇಹಿತರಿಗಿಂತ ಹೆಚ್ಚಾಗಿ ಅವರು ಇದರಲ್ಲಿ ಸಮಯ ಕಳೆಯುವುದರಿಂದ ಭಾಷಾ ಅಭಿವೃದ್ಧಿ ಮೇಲೆ ಕೂಡ ಪರಿಣಾಮ ಬೀರುತ್ತದೆ.

ಅರಿವಿನ ಕೊರತೆ ಎಂಬುದು ಗಂಭೀರ ಅಂಶವಾಗಿದ್ದು, ಇದಕ್ಕೆ ಸೂಕ್ತ ಚಿಕಿತ್ಸೆ ನೀಡದೇ ಹೋದಲ್ಲಿ ಹೆಚ್ಚು ಪರಿಣಾಮಗಳಿಗೂ ಕಾರಣವಾಗಬಹುದು. ಈ ಹಿಂದಿನ ಅಧ್ಯಯನಗಲ್ಲೂ ಕೂಡ ಮಕ್ಕಳು ಮತ್ತು ವಯಸ್ಕರು ಇದರ ಗಂಭೀರ ಅಪಾಯದಲ್ಲಿ ಇರುವ ಕುರಿತು ಪತ್ತೆ ಮಾಡಲಾಗಿದೆ. ಮಕ್ಕಳ ಮಿದುಳು ಇನ್ನು ಬೆಳವಣಿಗೆ ಹಂತದಲ್ಲಿರುತ್ತದೆ. ಈ ಹಂತದಲ್ಲಿ ಅರಿವಿನ ಕೊರತೆಯಿಂದ ಹೆಚ್ಚಾಗಿ ಸಮಸ್ಯೆ ಉಂಟಾಗುತ್ತದೆ. ಅಧಿಕ ಸ್ಕ್ರೀನ್​​​ ಟೈಂ ಸಾಮಾಜಿಕ ಮತ್ತು ಭಾವನಾತ್ಮಕ ತೊಡಕಿಗೆ ಕೂಡ ಕಾರಣವಾಗುತ್ತದೆ.

ಅಷ್ಠೆ ಅಲ್ಲದೇ, ಇವು ಮಕ್ಕಳನ್ನು ನಿಷ್ಕ್ರಿಯರನ್ನಾಗಿ ಮಾಡಿ, ಜಡ ಜೀವನಶೈಲಿಯ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದರಿಂದ ಮಕ್ಕಳಲ್ಲಿ ಸ್ಥೂಲಕಾಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೂ ಗುರಿಯಾಗುತ್ತಾರೆ. ಇದು ಅವರ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಮಕ್ಕಳ ಸ್ಕ್ರೀನ್​ ಟೈಂ ಬಳಕೆ ಗಡಿಯನ್ನು ರೂಪಿಸುವುದು, ಪೋಷಕರ ನಿಯಂತ್ರಣ ಮತ್ತು ಉತ್ತಮ ಸ್ಕ್ರೀನ್​ ನಡವಳಿಕೆ ಅಭ್ಯಾಸಗಳನ್ನು ಮಾಡುವ ಮೂಲಕ ಇದರ ಮೇಲ್ವಿಚಾರಣೆ ನಡೆಸುವ ಸಾಧ್ಯತೆ ಇದೆ. ಮಗುವಿನ ಆರೋಗ್ಯಯುತ ಅಭಿವೃದ್ಧಿ ಮತ್ತು ಯೋಗಕ್ಷೇಮಕ್ಕೆ, ಜ್ಞಾನದ ಹೆಚ್ಚಳಕ್ಕೆ ಪರ್ಯಾಯ ಚಟುವಟಿಕೆಗಳಿಗೆ ಅವರನ್ನು ಉತ್ತೇಜಿಸಿ, ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕಿದೆ.

ಇದನ್ನೂ ಓದಿ: ಮಕ್ಕಳ ಮಿದುಳಿನ ಮೇಲೆ ಟೆಕ್​ ಸಾಧನಗಳ ಪರಿಣಾಮವೇನು?: ಅಧ್ಯಯನದಲ್ಲಿ ಕುತೂಹಲದ ಮಾಹಿತಿ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.