ETV Bharat / sukhibhava

ಬಾಲ್ಯದಲ್ಲಿ ಅನುಭವಿಸಿದ ಆಘಾತಗಳು ವಯಸ್ಕರಲ್ಲಿನ ಕೋಪಕ್ಕೆ ಕಾರಣ; ಅಧ್ಯಯನ - ಖಿನ್ನತೆ ಜೊತೆಗೆ ಕೋಪಿಷ್ಠರಾಗುವ ಸಾಧ್ಯತೆ ಇದೆ

ಬಾಲ್ಯದ ಜೀವನದ ಘಟನೆಗಳು ವಯಸ್ಕರದಾದ ಮೇಲೂ ಪರಿಣಾಮ ಬೀರುತ್ತದೆ. ಅದರಲ್ಲೂ ಬಾಲ್ಯದಲ್ಲಿನ ನಿರ್ಲಕ್ಷ್ಯಗಳು ದೊಡ್ಡವರಾದ ಬಳಿಕ ಕೋಪಿಷ್ಠ ಮನೋಭಾವನೆ ಬೆಳೆಸುತ್ತದೆ.

Childhood traumas cause anger in adults; study

author img

By

Published : Mar 27, 2023, 3:16 PM IST

ವಾಷಿಂಗ್ಟನ್​​: ಬಾಲ್ಯದಲ್ಲಿ ಆಘಾತ ಅನುಭವಿಸಿದ ಮಕ್ಕಳು ದೊಡ್ಡವರಾದ ಬಳಿಕ ಆತಂಕ, ಖಿನ್ನತೆ ಜೊತೆಗೆ ಕೋಪಿಷ್ಠ ಮನೋಭಾವನೆ ಮೂಡಿಸುವ ಸಾಧ್ಯತೆ ಇದೆ ಎಂಬುದನ್ನು ಸಂಶೋಧನೆ ತಿಳಿಸಿದೆ. ಬಾಲ್ಯದಲ್ಲಿ ಅನುಭವಿಸಿದ ಆಘಾತಗಳಿಂದ ವಯಸ್ಕರಾದ ಬಳಿಕ ಅವರನ್ನು ಹೆಚ್ಚು ಕ್ರೋಧಿತರನ್ನಾಗಿ ಮಾಡುತ್ತದೆ. ಇದರು ಸಾಮಾಜಿಕ ಸಂವಹನ ಮತ್ತು ಮಾನಸಿಕ ಅರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ಯಾರಿಸ್​ನಲ್ಲಿನ ಯುರೋಪಿಯನ್​ ಕಾಂಗ್ರೆಸ್​ ಆಫ್​ ಸೈಕಿಯಾಟ್ರಿಕ್ಸ್​ ತಿಳಿಸಿದೆ.

ಈ ಹಿಂದಿನ ಸಂಶೋಧನೆಯಲ್ಲಿ ಆತಂಕ ಮತ್ತು ಖಿನ್ನತೆ ಎರಡನ್ನೂ ಹೊಂದಿರುವ ಶೇ 40ರಷ್ಟು ರೋಗಿಗಳು ಹೆಚ್ಚು ಕೋಪಕ್ಕೆ ಒಳಗಾಗುತ್ತಾರೆ ಎಂದು ತಿಳಿಸಲಾಗಿದೆ. ಇವರಲ್ಲಿ ಶೇ 5ರಷ್ಟು ಜನ ಆರೋಗ್ಯಕರ ನಿಯಂತ್ರಣ ಸಮಸ್ಯೆಗಳನ್ನು ಹೊಂದಿರುತ್ತಾರೆ. ಈ ಆತಂಕ ಮತ್ತು ಖಿನ್ನತೆ ನಡುವಿನ ಕೋಪದ ಸಂಬಂಧ ಅಧ್ಯಯನ ನಡೆಸಲು ನೆದರ್ಲ್ಯಾಂಡ್​ ಅಧ್ಯಯನ ಡೇಟಾವನ್ನು ಒದಗಿಸಿದೆ.

2004ರಲ್ಲಿ ಈ ಅಧ್ಯಯನ ಆರಂಭಿಸಲಾಗಿತ್ತು. ಈ ವೇಳೆ 18ರಿಂದ 65 ವರ್ಷದ ಬಳಗಿನವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಬಾಲ್ಯದ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಅಧ್ಯಯನದಲ್ಲಿ 2276 ಮಂದಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ಬಾಲ್ಯದಲ್ಲಿ ಆಘಾತ, ಪೋಷಕರನ್ನು ಕಳೆದುಕೊಂಡಿರುವುದು ಅಥವಾ ಪೋಷಕರ ವಿಚ್ಛೇದನ ಕುರಿತು ಪ್ರಶ್ನಾವಳಿಗಳನ್ನು ಕೇಳಲಾಗಿದೆ. ಇದೇ ವೇಳೆ ಅವರಿಗೆ ಬಾಲ್ಯದಲ್ಲಿ ಆದ ನಿರ್ಲಕ್ಷ್ಯದ ಅನುಭವ, ದೈಹಿಕ ಮತ್ತು ಲೈಂಗಿಕ ಕಿರುಕುಳದ ಕುರಿತು ಕೂಡ ಮಾಹಿತಿ ಪಡೆಯಲಾಗಿದೆ. ಅಧ್ಯಯನದ ಭಾಗಿದಾರರು ಕೂಡ ಅನೇಕ ಮಾನಸಿಕ ಆರೋಗ್ಯದ ಲಕ್ಷಣ ದಿಂದ ಒತ್ತಡ ಮತ್ತು ಖಿನ್ನತೆಗಳು ಕೋಪಕ್ಕೆ ಕಾರಣವಾಗಿರುವ ಕುರಿತು ಪರಿಶೀಲನೆ ನಡೆಸಿದ್ದಾರೆ.

ಅಧ್ಯಯನ ಕುರಿತು ಮಾತಾಡಿರುವ ಪ್ರಮುಖ ಸಂಶೋಧಕರ ನೈನ್ಕೆನ್​ ಡೆ ಬ್ಲೆಸ್, ಸಾಮಾನ್ಯವಾಗಿ ಕೋಪದ ಬಗ್ಗೆ ಆಶ್ಚರ್ಯಕರವಾಗಿ ಕಡಿಮೆ ಸಂಶೋಧನೆ ಇದೆ. ಖಿನ್ನತೆ ಮತ್ತು ಆತಂಕದ ಕುರಿತು ನೆದರ್ಲ್ಯಾಂಡ್​​ ಅಧ್ಯಯನವಾಗಿದ್ದು, ಇದು ಸಾಕಷ್ಟು ಉತ್ತಮ ವೈಜ್ಞಾನಿಕ ದತ್ತಾಂಶ ನೀಡಿದೆ. ಬಾಲ್ಯದ ಆಘಾತದ ದತ್ತಾಂಶ ಕೋಪದ ಮಟ್ಟಕ್ಕೆ ಸಂಬಂಧಿಸಿದೆ ಎಂಬುದನ್ನು ಪತ್ತೆ ಮಾಡಲಾಗಿದೆ.

ಬಾಲ್ಯದಲ್ಲಿ 1.3 ಮತ್ತು 2 ಬಾರಿಗಿಂತ ಹೆಚ್ಚು ಭಾವನಾತ್ಮಕ ನಿರ್ಲಕ್ಷ್ಯ ಅಥವಾ ಮಾನಸಿಕ ಕಿರುಕುಳಕ್ಕೆ ಒಳಗಾದರೆ, ಕೋಪದ ಸಮಸ್ಯೆ ಕಾರಣವಾಗುತ್ತದೆ. ಬಾಲ್ಯದಲ್ಲಿನ ಆಘಾತ ವಯಸ್ಕರಾದ ಬಳಿಕ ಹೆಚ್ಚಿನ ಕೋಪಕ್ಕೆ ಕಾರಣವಾಗುತ್ತದೆ. ಆದ್ರೆ ಈ ಆಘಾತಗಳು ಕೋಪಕ್ಕೆ ಕಾರಣವಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲವಾದರೂ ಇದರ ಸಂಬಂಧ ಸ್ಪಷ್ಟವಾಗಿದೆ ಎಂಬುದನ್ನು ಅಧ್ಯಯನ ವಿವರಿಸಿದೆ.

ಸುಲಭವಾಗಿ ಕೋಪಗೊಳ್ಳುವುದರಿಂದ ಅನೇಕ ತೊಂದರೆಗಳು ಉದ್ಬವಿಸುತ್ತದೆ. ಇದರೊಂದಿಗೆ ಸಾಮಾಜಿಕ ಸಂವಹನ ಕಷ್ಟವಾಗುತ್ತದೆ. ಜೊತೆಗೆ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ತಕ್ಷಣಕ್ಕೆ ಕೋಪಗೊಳ್ಳುವ ಈ ಜನರು ಮಾನಸಿಕ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುವ ಮನಸ್ಥಿತಿ ಹೊಂದಿರುತ್ತಾರೆ. ಈ ಹಿನ್ನೆಲೆ ಕೋಪವು ಅವರ ಉತ್ತಮ ಜೀವನಕ್ಕೆ ಅಡ್ಡಿ ಆಗುತ್ತದೆ.

ಕೋಪದಿಂದ ಕೂಡಿರುವ ವ್ಯಕ್ತಿ ತನ್ನ ಈ ಸಮಸ್ಯೆಗೆ ಚಿಕಿತ್ಸಕರ ಬಳಿ ತೆರಳುವುದಿಲ್ಲ. ಇದರಿಂದ ಅವರಲ್ಲಿನ ಆತಂಕ ಮತ್ತು ಖಿನ್ನತೆಯಿಂದ ಈ ಕೋಪವನ್ನು ಅಧ್ಯಯನ ಮಾಡಬೇಕು. ಈ ಹಿಂದಿನ ಆಘಾತಗಳು ಪ್ರಸ್ತುತದ ಖಿನ್ನತೆಗೆ ಚಿಕಿತ್ಸೆಗೆ ಕಾರಣವಾಗಿರುತ್ತವೆ. ಈ ಹಿನ್ನೆಲೆ ಮನೋವಿಜ್ಞಾನಿಗಳು ರೋಗಿಗಳ ಸರಿಯಾದ ಕಾರಣಗಳನ್ನು ಅರ್ಥೈಸಿಕೊಳ್ಳಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ಪುರುಷರಿಗಿಂತ ಮಹಿಳೆಯರಲ್ಲೇ ಹೃದಯಾಘಾತ ಹೆಚ್ಚಂತೆ! ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.