ಹೈದರಾಬಾದ್: ಸೆರೆಬ್ರಲ್ ಪಾಲ್ಸಿ ಎಂಬುದು ಮಿದುಳಿನ ಅಸ್ವಸ್ಥತೆ ಅಥವಾ ನರಗಳ ಅಸ್ವಸ್ಥತೆಯಾಗಿದೆ. ಪ್ರತಿ ವರ್ಷ ಅಕ್ಟೋಬರ್ 6ರಂದು ವಿಶ್ವ ಸೆರೆಬ್ರಲ್ ಪಾಲ್ಸಿ ದಿನವನ್ನು ಆಚರಿಸಲಾಗುವುದು. ಸಮಾಜದಲ್ಲಿ ಸೆರೆಬ್ರಲ್ ಪಾಲ್ಸಿ ಬಗ್ಗೆ ಅರಿವು ಮೂಡಿಸುವುದು, ಈ ಸಮಸ್ಯೆಯಿಂದ ಬಳಲುತ್ತಿರುವ ಮಂದಿ ಸಾಧ್ಯವಾದಷ್ಟು ಮಂದಿಗೆ ದೊಡ್ಡ ಅಥವಾ ಚಿಕ್ಕ ಸಹಾಯ ಮಾಡುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಸೆರೆಬ್ರಲ್ ಎಂದರೆ ಮಿದುಳು ಆಗಿದ್ದು, ಪಾಲ್ಸಿ ಎಂದರೆ ದುರ್ಬಲತೆ, ಪಾರ್ಶ್ವವಾಯುವಿನಂತಹ ಸ್ಥಿತಿಯಾಗಿದೆ.
ಈ ದಿನಾಚರಣೆಯ ಪ್ರಮುಖ ಉದ್ದೇಶ: ವಿಶ್ವ ಸೆರೆಬ್ರಲ್ ಪಾಲ್ಸಿ ದಿನದ ಪ್ರಮುಖ ಉದ್ದೇಶ ಈ ಕುರಿತು ಜಾಗೃತಿ ಮಾತ್ರ ಮೂಡಿಸುವುದಲ್ಲ. ಈ ಸಮಸ್ಯೆಗೆ ಕಾರಣ, ಇದರ ಲಕ್ಷಣ ತಿಳಿಸುವ ಜೊತೆಗೆ ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸ್ವ ಸಹಾಯಕ್ಕೆ ನೆರವಾಗುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಿಸುವುದೇ ಈ ದಿನದ ಮಹತ್ವ ಹಾಗೂ ಉದ್ದೇಶ ಆಗಿದೆ. ಹಾಗೇಯೇ ಈ ಸಮಸ್ಯೆ ಹೊಂದಿರುವ ಜೀವಿಸಲು ಎಲ್ಲ ಹಕ್ಕು ನೀಡುವುದಾಗಿದೆ. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಮತ್ತು ಅಗತ್ಯವಾದ ಚಿಕಿತ್ಸೆಯನ್ನು ಲಭ್ಯವಾಗುವಂತೆ ನೋಡಿಕೊಳ್ಳುವುದು ಮತ್ತು ಸಾರ್ವಜನಿಕರು ಇಂತಹ ಸಂತ್ರಸ್ತರ ಸಹಾಯಕ್ಕೆ ಮುಂದೆ ಬರುವಂತೆ ಹುರಿದುಂಬಿಸುವುದಾಗಿದೆ.
ಈ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ರೋಗ ನಿರ್ಣಯ ಮತ್ತು ಚಿಕಿತ್ಸೆಯೊಂದಿಗೆ ಸಹಾಯ ಮಾಡಲು ಮತ್ತು ಅವರಿಗೆ ಧನಸಹಾಯವನ್ನು ನೀಡಲು 1948 ರಲ್ಲಿ ಯುನೈಟೆಡ್ ಸೆರೆಬ್ರಲ್ ಪಾಲ್ಸಿ ಅಸೋಸಿಯೇಷನ್ ಅನ್ನು ಕೂಡ ರಚಿಸಲಾಯಿತು.
ಸೆರೆಬ್ರಲ್ ಪಾಲ್ಸಿಯ ಗುಣಲಕ್ಷಣ
- ಸ್ನಾಯುಗಳಲ್ಲಿ ಬದಲಾವಣೆ
- ಮಾತನಾಡಲು ಕಷ್ಟ ಪಡುವುದು
- ನಡೆಯಲು ಮತ್ತು ಕೂರಲು ಕಷ್ಟಪಡುವುದು
- ವಸ್ತುಗಳನ್ನು ಹಿಡಿಯಲು ಸಮಸ್ಯೆ
- ಮಾನಸಿಕ ಸಮತೋಲನ ತಪ್ಪುವುದು
- ಮಾನಸಿಕ ಅಥವಾ ಬೌದ್ಧಿಕ ಅಸಮರ್ಥತೆ
- ನುಂಗಲು ಕಷ್ಟಪಡುವುದು
ಈ ದಿನದ ಧ್ಯೇಯ: ವಿಶ್ವ ಸೆರಬ್ರಲ್ ದಿನ 2023ಯ ಮುಖ್ಯ ಧ್ಯೇಯವಾಕ್ಯ, ಒಟ್ಟಿಗೆ ಬಲವಾಗಿ ಸಮಾಜದಲ್ಲಿ ಏಕತೆ, ಸಹಕಾರ ಮತ್ತು ಬೆಂಬಲದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದಾಗಿದೆ. 2012ರಲ್ಲಿ ಮೊದಲ ಬಾರಿಗೆ ವಿಶ್ವದಾದ್ಯಂತ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಮಕ್ಕಳು ಮತ್ತು ವಯಸ್ಕರಿಗೆ ಸಮವಾದ ಹಕ್ಕು ನೀಡುವುದು. ಅವರಿಗೆ ಎಲ್ಲಾ ಸಾಧ್ಯವಾದ ಮಾರ್ಗದಲ್ಲಿ ಸಹಾಯ ಮಾಡುವ ಗುರಿಯನ್ನು ಹೊಂದಿತು. ಸೆರಬ್ರಲ್ ಪಾಲ್ಸಿ ಅಲಯನ್ಸ್ ವಿಶ್ವ ಸೆರಬ್ರಲ್ ಪಾಲ್ಸಿ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 6ರಂದು ಆಚರಿಸಲು ಮುಂದಾಯಿತು.
ಇದನ್ನೂ ಓದಿ: World Smile Day 2023: ಮನಸಾರೆ ನಕ್ಕು ಬಿಡಿ ಒಮ್ಮೆ... ಕಾರಣ ಇಷ್ಟೇ ಇಂದು ವರ್ಲ್ಡ್ ಸ್ಮೈಲ್ ಡೇ!