ETV Bharat / sukhibhava

ತಾಪಮಾನ ಏರಿಕೆ: ಆರೋಗ್ಯ ಸೌಲಭ್ಯ ಹೆಚ್ಚಿಸಲು ಅಗತ್ಯ ಕ್ರಮವಹಿಸುವಂತೆ ಕೇಂದ್ರದ ಸೂಚನೆ

ತಾಪಮಾನದ ಏರಿಕೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳನ್ನು ಎದುರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ.

central-instruction-to-take-necessary-measures-to-health-facilities

author img

By

Published : Feb 28, 2023, 4:39 PM IST

ನವದೆಹಲಿ: ಮಾರ್ಚ್​ ಆರಂಭವಾಗುತ್ತಿದ್ದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ನಿಧಾನವಾಗಿ ಬಿಸಿಲಿನ ತಾಪ ಏರ ತೊಡಗಿದೆ. ಚಳಿಯಿಂದ ನಡುಗುತ್ತಿದ್ದ ರಾಜ್ಯಗಳಲ್ಲೂ ಇದೀಗ ಸೂರ್ಯ ಸುಡಲಾರಂಭಿಸಿದ್ದಾನೆ. ಏಪ್ರಿಲ್​, ಮೇ ಹೊತ್ತಿಗೆ ಈ ತಾಪಮಾನ ಬಹಳಷ್ಟು ಏರಿಕೆಯಾಗಲಿದೆ. ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈ ಸುಡು ಬಿಸಿಲಿನಿಂದ ಜನರು ತತ್ತರಿಸಲಿದ್ದು, ಬಿಸಿಲಿನ ಬೆಗೆಯಿಂದ ಸಾವನ್ನಪ್ಪಿರುವ ವರದಿಗಳು ನಮ್ಮ ಮುಂದೆ ಇದೆ. ಈ ಹಿನ್ನೆಲೆಯಲ್ಲಿ ಬಿಸಿಲಿನ ತಾಪದಿಂದ ಅನಾರೋಗ್ಯಕ್ಕೆ ತುತ್ತಾಗುವ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಕುರಿತಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡಿದೆ.

ರಾಷ್ಟ್ರೀಯ ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ಅಡಿ ಬರುವ ಎಲ್ಲ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಬಿಸಿಲಿನ ಸಂಬಂಧಿತ ಕಾಯಿಲೆ ಬಗ್ಗೆ ಕಣ್ಗಾವಲು ಇಡಲು ಮಾರ್ಚ್​ 1ರಿಂದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯನ್ನು ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​​​ ಪತ್ರ ರವಾನಿಸಿದ್ದಾರೆ. ಪಿ ಫಾರ್ಮ್​ ಮಟ್ಟದ ಲಾಗಿನ್ ಮಾಹಿತಿಯನ್ನು ಬಳಸಿಕೊಂಡು ಎಲ್ಲಾ ಆರೋಗ್ಯ ಸೌಲಭ್ಯಗಳು ಭಾಗವಹಿಸುವಂತೆ ಖಚಿತಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಜೊತೆಗೆ ನಿಗದಿತ ಸ್ವರೂಪಗಳ ಪ್ರಕಾರ ಪ್ರಕರಣಗಳು ಮತ್ತು ಇತರ ಪಟ್ಟಿಗಳನ್ನು ತಯಾರಿಸುವಂತೆ ಸೂಚಿಸಲಾಗಿದೆ.

ರಾಜ್ಯದ ಆರೋಗ್ಯ ಇಲಾಖೆ ಈ ಅಂಕಿ - ಅಂಶಗಳ ಗಮನ ಹರಿಸಬೇಕು. ಶಾಖಾ ಸಂಬಂಧಿತ ಸಮಸ್ಯೆಗಳ ನಿರ್ವಹಣೆಗೆ ಆರೋಗ್ಯ ಅಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಬಿಸಿಲಿನ ಬೇಗೆಯ ಸಮಸ್ಯೆ ಅರಿತು ಆರೋಗ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಬೇಕು. ಈ ಸಂಬಂಧ ಎನ್​ಸಿಡಿಸಿ ತರಬೇತಿ ಅಭಿವೃದ್ಧಿ ಪಡಿಸಲಿದೆ. ಎಲ್ಲರಿಗೂ ತರಬೇತಿ ಲಭ್ಯವಾಗಿದೆ ಎಂದು ತಿಳಿಸಲಾಗಿದೆ

ಶಾಖಾ ಸಂಬಂಧಿತ ಸಮಸ್ಯೆಯಿಂದ ಬಳಲುವವರಿಗೆ ಅಗತ್ಯ ಔಷಧ, ಹೆಚ್ಚಿನ ದ್ರವ ಆಹಾರ ಮತ್ತು ಐಸ್​ ಪ್ಯಾಕ್​, ಒಆರ್​ಎಸ್​ ಸೇರಿದಂತೆ ಎಲ್ಲ ಅಗತ್ಯತೆಗಳು ಲಭ್ಯವಾಗುವಂತೆ ನೋಡಿಕೊಳ್ಳಿವಂತೆ ಸಚಿವಾಲಯ ತಿಳಿಸಿದೆ. ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಬೇಕು. ಬೇಸಿಗೆಯಲ್ಲಿ ಉದ್ಭವಿಸುವ ವಿದ್ಯುತ್​ ಸಮಸ್ಯೆ ಹೊರತಾಗಿ ರೋಗಿಗಳನ್ನು ತಂಪಾಗಿಡುವ ಕೂಲಿಂಗ್​ ಅಪ್ಲೈಯನ್ಸ್​ ಅನ್ನು ಅಳವಡಿಸಬೇಕು. ಇದಕ್ಕಾಗಿ ಸೋಲಾರ್​ ಪ್ಯಾನೆಲ್​ ಅನ್ನು ಅಳವಡಿಸಬೇಕು ಎಂದು ಕೂಡ ಕೇಂದ್ರದ ಪತ್ರದಲ್ಲಿ ತಿಳಿಸಲಾಗಿದೆ.

ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳುವ ಮಾರ್ಗ: ಬಿಸಿಲಿನ ತಾಪ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉದ್ಭವಿಸಲಿದೆ. ಈ ಹಿನ್ನೆಲೆ ಪ್ರಖರ ಬಿಸಿಲಿಗೆ ಹೆಚ್ಚು ಮೈಯೊಡ್ಡದಂತೆ ನೋಡಿಕೊಳ್ಳಬೇಕು. ಬೇಸಿಗೆಯಲ್ಲಿ ದೇಹ ಹೆಚ್ಚು ನಿರ್ಜಲೀಕರಣಗೊಳ್ಳುತ್ತದೆ. ಈ ರೀತಿ ಆಗದಂತೆ ಕಾಪಾಡಲು, ಹೆಚ್ಚು ನೀರು, ದ್ರವರೂಪದ ಆಹಾರ, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಫ್ಯಾನ್ ಅಡಿ ಕುಳಿತುಕೊಳ್ಳುವ ಮೂಲಕ ಅಥವಾ ಇತರ ವಿಧಾನಗಳ ಮೂಲಕ ನಿಮ್ಮ ಚರ್ಮವನ್ನು ತಂಪಾಗಿರಿಸಲು ಪ್ರಯತ್ನಿಸಿ.

ಹಗುರವಾದ, ಸಡಿಲವಾದ ಬಟ್ಟೆಗಳನ್ನು ಧರಿಸಿ, ತೊಡೆಗಳು, ಒಳ ತೊಡೆಗಳು ಮತ್ತು ಬೆನ್ನಿನಂತಹ ಬೆವರು ಸಂಗ್ರಹಗೊಳ್ಳುವ ದೇಹದ ಭಾಗಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಅಲ್ಲದೆ, ಸ್ನಾನದ ನಂತರ ಈ ಪ್ರದೇಶಗಳನ್ನು ಸ್ವಚ್ಛವಾದ ಟವೆಲಿನಿಂದ ಸರಿಯಾಗಿ ಒಣಗಿಸಿ ಮತ್ತು ಔಷಧೀಯ ಟಾಲ್ಕಮ್ ಪೌಡರ್​ನ್ನು ಹಚ್ಚುವುದು ಉತ್ತಮ.

ಇದನ್ನೂ ಓದಿ: ಬೇಸಿಗೆಯಲ್ಲಿ ಕಾಡುವ ಒಣ ತುಟಿ ಸಮಸ್ಯೆ; ಇಲ್ಲಿದೆ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.