ನವದೆಹಲಿ: ಕೋವಿಡ್ 19 ಸೋಂಕಿತ ರೋಗಿಗಳಿಗೆ ಕೋಶ ಚಿಕಿತ್ಸೆ (Cell therapy) ಮಾಡುವುದರಿಂದ ರೋಗದಿಂದ ಸಾವಿನ ಅಪಾಯವನ್ನು ಶೇ 60ರಷ್ಟು ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನ ಹೇಳಿದೆ. ವ್ಯವಸ್ಥಿತ ಪರಿಶೀಲನೆ ಮತ್ತು ಬೃಹತ್ ವಿಶ್ಲೇಷಣೆಯು ಕೋಶ ಚಿಕಿತ್ಸೆಯ 195 ಪ್ರಾಯೋಗಿಕ ಪರೀಕ್ಷೆಯ ಮೂಲಕ ಕೋವಿಡ್ ಗುರಿಯಾಗಿಸಿದೆ. 2020 ಜನವರಿ ಮತ್ತು ಡಿಸೆಂಬರ್ 2021ರ ನಡುವೆ ಯುರೋಪ್ ಸೇರಿದಂತೆ 30 ದೇಶಗಳಲ್ಲಿ 26 ಪ್ರಯೋಗಗಳ ಮೂಲಕ ನಡೆಸಲಾಗಿದ್ದು, ಸಂಶೋಧನಾ ವರದಿಯನ್ನು 2022ರಲ್ಲಿ ಪ್ರಕಟಿಸಲಾಗಿದೆ.
ಅಧ್ಯಯನವನ್ನು ಬ್ರೆಜಿಲ್ನ ಸೌ ಪೌಲೊ ಯುನಿವರ್ಸಿಟಿಯ ಸಂಶೋಧಕರ ತಂಡ ನಡೆಸಿದ್ದು, ಜರ್ಮನಿ ಮತ್ತು ಅಮೆರಿಕದ ಸಹ ಉದ್ಯೋಗಿಗಳು ಕೂಡ ಭಾಗಿಯಾಗಿದ್ದರು. ಈ ಅಧ್ಯಯನವನ್ನು ಜರ್ನಲ್ ಫ್ರಂಟಿರ್ಸ್ ಇನ್ ಇಮ್ಯೂಲೊಜಿಯಲ್ಲಿ ಪ್ರಕಟಿಸಲಾಗಿದೆ.
ಕೋಶ ಚಿಕಿತ್ಸೆ ಇತ್ತೀಚಿನ ದಿನದಲ್ಲಿ ಮಹತ್ವ ಹೊಂದಿದ್ದು, ಕ್ಯಾನ್ಸರ್ ಮತ್ತು ಆಟೋಇಮ್ಯೂನ್, ಹೃದಯ ಮತ್ತು ಸೋಂಕಿನ ರೋಗದಲ್ಲಿ ಬಳಕೆ ಮಾಡಲಾಗುತ್ತಿದೆ. ಸಾಂಕ್ರಾಮಿಕತೆ ಸಮಯದಲ್ಲಿ ಕೋವಿಡ್ ಚಿಕಿತ್ಸೆಯಲ್ಲಿ ಇದರ ಬಳಕೆ ಸಂಬಂಧ ಅನೇಕ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗಿದೆ.
ಕೋವಿಡ್ ರೋಗಿಗಳಲ್ಲಿ ಚಿಕಿತ್ಸೆಯಲ್ಲಿ ಹೇಗೆ ಕೋಶ ಚಿಕಿತ್ಸೆ ಕಾರ್ಯಾಚರಣೆ ನಡೆಸಲಿದೆ. ಮತ್ತು ಸಂಬಂಧದ ಸಂಕೀರ್ಣತೆ ಏನು ಎಂಬುದನ್ನು ಅಧ್ಯಯನ ಮಾಡುವ ಗುರಿಯನ್ನು ಸಂಶೋಧನೆ ಹೊಂದಿತ್ತು ಎಂದು ಯುಎಸ್ಪಿ ಮೆಡಿಕಲ್ ಸ್ಕೂಲ್ನ ಪ್ರೊ.ಒಟೊವಿಯೊ ಕ್ಯಾಬ್ರಲ್ ಮಾರ್ಕ್ಯೂಸ್ ಹೇಳಿದರು.
ಈ ಚಿಕಿತ್ಸೆಯ ತಂತ್ರದಲ್ಲಿ ಕಾಂಡ ಕೋಶವನ್ನು ಬಳಕೆ ಮಾಡಲಾಗುವುದು. ಇದನ್ನು ರೋಗಿಗಳ ಅಥವಾ ದಾನಿಗಳಿಂದ ಪಡೆಯಲಾಗುವುದು. ಕೋಶವನ್ನು ಚಿಕಿತ್ಸೆಗೆ ಒಳಪಡಿಸುವ ಮುನ್ನ ಪ್ರಯೋಗಾಲಯದಲ್ಲಿ ಸುಧಾರಣೆಗೆ ಒಳಪಡಿಸಲಾಗುವುದು. ಪ್ರಯೋಗಾಲಯದ ಪರೀಕ್ಷೆಯಲ್ಲಿ ಈ ಕೋಶ ಚಿಕಿತ್ಸೆಯು ಕೋವಿಡ್ ರೋಗಿಗಳಲ್ಲಿ ಊರಿಯೂತದ ತೀವ್ರತೆಯನ್ನು ಮಿತಿಗೊಳಿಸಿದೆ. ಶ್ವಾಸಕೋಶದ ಹಾನಿ ಕಡಿಮೆ ಮಾಡಿದ್ದು, ಶ್ವಾಸಕೋಶ ಉತ್ತಮವಾಗಿ ಕಾರ್ಯಾಚರಣೆ ಮಾಡಲು ಸಹಾಯ ಮಾಡಿದೆ.
ಕೋಶ ಚಿಕಿತ್ಸೆ ಕೋವಿಡ್ ರೋಗಿಗಳಿಗೆ ಸಹಾಯಕ ಚಿಕಿತ್ಸೆ ನೀಡಿದರೂ, ಕೋವಿಡ್ನಿಂದ ರಕ್ಷಣೆ ಪಡೆಯುವಲ್ಲಿ ಲಸಿಕೆಯೇ ಉತ್ತಮ ಎಂಬುದಕ್ಕೆ ಒತ್ತು ನೀಡಲಾಗಿದೆ ಎಂದು ಅಧ್ಯಯನ ಲೇಖಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಕೋವಿಡ್ಗಿಂತ ಶೇ 40ರಷ್ಟು ಹೆಚ್ಚಿನ ಸಾವಿನ ದರ ಹೊಂದಿದೆ ಈ ಭಯಂಕರ ನಿಫಾ; ತಜ್ಞರ ಎಚ್ಚರಿಕೆ