ಬಂಜೆತನ ಅಥವಾ ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳಂತಹ ಪದಗಳನ್ನು ನಾವು ಕೇಳಿದ್ದೇವೆ. ಆದರೆ, ದ್ವಿತೀಯ ಬಂಜೆತನವೂ ಇದೆ ಎಂಬುದು ನಿಮಗೆ ತಿಳಿದಿದೆಯೇ?. ಹೌದು, ಸಾಮಾನ್ಯವಾಗಿ ಈ ಮೊದಲು ಬಂಜೆತನ ಅಂದರೆ ಅದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದು ಎಂದು ಅರ್ಥೈಸಲಾಗುತ್ತಿತ್ತು.
ಆದ್ರೆ, ಇದು ಪುರುಷರಲ್ಲಿಯೂ ಕಂಡು ಬರುತ್ತದೆ ಎಂಬುದು ಇದೀಗ ತಿಳಿದು ಬಂದಿದೆ. ಅದರಲ್ಲಿಯೂ ದ್ವಿತೀಯ ಬಂಜೆತನ ಎಂಬುದು ಕೇಳಿ ಬರುತ್ತಿದೆ. ಆದ್ರೆ, ಈ ಸಮಸ್ಯೆ ಮಹಿಳೆಯರ ಬದಲಾಗಿ ಪುರುಷರಲ್ಲಿ ಕಂಡು ಬರುತ್ತಿದೆ ಎಂಬುದು ಹೊಸ ವಿಚಾರ. ಹಾಗಾದ್ರೆ, ಈ ಸಮಸ್ಯೆಗೆ ವೈಜ್ಞಾನಿಕ ಕಾರಣವೇನು ಎಂಬುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ..
ಪುರುಷರಲ್ಲಿ ದ್ವಿತೀಯ ಬಂಜೆತನದ ಕಾರಣಗಳು
ದಂಪತಿ ಈಗಾಗಲೇ ಒಂದು ಮಗುವನ್ನು ಹೊಂದಿದ್ದು, 2ನೇ ಮಗುವಿಗಾಗಿ ಮತ್ತೆ ಪ್ರಯತ್ನಿಸುತ್ತಿರುವಾಗ ಈ ಸಮಸ್ಯೆ ಕಂಡು ಬರುತ್ತದೆ. ಒಂದು ಮಗುವಿನ ನಂತರ ಎಷ್ಟೇ ಪ್ರಯತ್ನಪಟ್ಟರೂ ಮಹಿಳೆ ಗರ್ಭಿಣಿಯಾಗುವುದಿಲ್ಲ. ಈ ರೋಗನಿರ್ಣಯವು ಗೊಂದಲಮಯವಾಗಿರಬಹುದು. ಆದರೆ, ಕಳೆದ ಬಾರಿ ಗರ್ಭಿಣಿಯಾಗಲು ಯಾವುದೇ ತೊಂದರೆ ಇರಲಿಲ್ಲ. ಹಾಗಾದರೆ, ಈಗ ಅದು ಏಕೆ ಆಗುತ್ತಿಲ್ಲ?. ಅನೇಕ ಸಂದರ್ಭಗಳಲ್ಲಿ ಎಲ್ಲಾ ದ್ವಿತೀಯ ಬಂಜೆತನ ಪ್ರಕರಣಗಳಲ್ಲಿ ಸುಮಾರು 3ನೇ ಒಂದು ಭಾಗವು ಪುರುಷರಲ್ಲಿ ಕಾಣಿಸಿಕೊಂಡಿದೆ ಎಂಬುದು ತಿಳಿದು ಬಂದಿದೆ.
ವಯಸ್ಸಾದಂತೆ ದ್ವಿತೀಯ ಬಂಜೆತನ ಪುರುಷರಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ದಂಪತಿ 2ನೇ ಮಗುವಿಗೆ ಪ್ರಯತ್ನಿಸಿದಾಗ ಸಾಮಾನ್ಯವಾಗಿ ಇದು ಮುಂಚೂಣಿಗೆ ಬರುತ್ತದೆ. ಆದರೆ, ಇದು ಎಲ್ಲಾ ಪುರುಷರಲ್ಲಿಯೂ ಕಂಡು ಬಂದಿಲ್ಲ. ಕೆಲವು ಜನ ಮಾತ್ರ ದ್ವಿತೀಯ ಬಂಜೆತನದಿಂದ ಬಳಲುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿ, ವ್ಯಾಯಾಮ ಮತ್ತು ಮದ್ಯಪಾನ ಮತ್ತು ತಂಬಾಕಿನಂತಹ ದುರ್ಗುಣಗಳನ್ನು ಕಡಿಮೆ ಮಾಡಿದಾಗ ಪುರುಷರ ವೀರ್ಯದ ಆರೋಗ್ಯವನ್ನು ಹೆಚ್ಚಿಸಬಹುದು.
ಆದರೆ, ಎಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಿದರೂ ಕೆಲವು ಪುರುಷರು ದ್ವಿತೀಯ ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ಚಂಡೀಗಢದ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಹಿರಿಯ ಫಲವತ್ತತೆ ಸಲಹೆಗಾರರಾದ ಕಂಚಿ ಖುರಾನಾ ವಿವರಿಸುತ್ತಾರೆ.
ದ್ವಿತೀಯ ಬಂಜೆತನದ ಕಾರಣಗಳು
ವರಿಕೊಸೆಲೆ : ವೆರಿಕೋಸೆಲೆ ಎನ್ನುವುದು ವೃಷಣದಲ್ಲಿ ಅಥವಾ ವೃಷಣಗಳನ್ನು ಆವರಿಸಿರುವ ಚರ್ಮದ ಚೀಲದಲ್ಲಿ ಹಿಗ್ಗುವಿಕೆಯಾಗಿದೆ. ಇದು ಪುರುಷರಲ್ಲಿ ವೀರ್ಯ ಉತ್ಪಾದನೆ ಮತ್ತು ಬಂಜೆತನವನ್ನು ಉಂಟು ಮಾಡುವ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಬಂಜೆತನ ಪುರುಷರಲ್ಲಿ ಸುಮಾರು 30 ಪ್ರತಿಶತದಷ್ಟು ಜನರು ವೆರಿಕೋಸಿಲ್ ಹೊಂದಿರಬಹುದು. ಬಿಸಿಯಾದ ವಾತಾವರಣವು ವೀರ್ಯಾಣುಗಳಿಗೆ ಮಾರಕವಾಗಬಹುದು. ಇದರಿಂದಾಗಿ ಅವು ಕಡಿಮೆಯಾಗುತ್ತವೆ ಮತ್ತು ಸಾಯುತ್ತವೆ. 5ರಲ್ಲಿ 1 ಪುರುಷ ದ್ವಿತೀಯ ಬಂಜೆತನ ಪ್ರಕರಣಗಳಿಂದ ನರಳುತ್ತಿದ್ದಾರೆ.
ಟೆಸ್ಟೋಸ್ಟೆರಾನ್ ಮಟ್ಟದ ಕುಗ್ಗುವಿಕೆ : ಟೆಸ್ಟೋಸ್ಟೆರಾನ್ ಅಥವಾ ಪುರುಷ ಲೈಂಗಿಕ ಹಾರ್ಮೋನ್ ವೀರ್ಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಯಸ್ಸಾಗುವಿಕೆ, ಜನನಾಂಗ ಅಥವಾ ಮೂತ್ರದ ಅಂಗಗಳಿಗೆ ಗಾಯ ಅಥವಾ ಜೆನಿಟೂರ್ನರಿ ಸೋಂಕುಗಳು, ಥೈರಾಯ್ಡ್ ಕಾಯಿಲೆ, ಸಿಡುಬು, ಒತ್ತಡ ಅಥವಾ ಜನನಾಂಗದ ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಟೆಸ್ಟೋಸ್ಟೆರಾನ್ ಮಟ್ಟಗಳು ಕಡಿಮೆಯಾಗಬಹುದು.
ಅನಾರೋಗ್ಯಕರ ಅಭ್ಯಾಸಗಳು: ತಂಬಾಕು, ಡ್ರಗ್ಸ್ ಮತ್ತು ಆಲ್ಕೋಹಾಲ್ ನಿಮ್ಮ ದ್ವಿತೀಯ ಬಂಜೆತನಕ್ಕೆ ಕಾರಣವಾಗಬಹುದು. ಮೊದಲನೇ ಬಾರಿ ಆರೋಗ್ಯಕರವಾಗಿ ಗರ್ಭಿಣಿಯಾಗಿರಬಹುದು. ಆದರೆ, ದುರಾಭ್ಯಾಸವನ್ನು ಮುಂದುವರೆಸಿದ್ರೆ ದೇಹದಲ್ಲಿ ಜೀವಾಣುಗಳ ಸಂಗ್ರಹಕ್ಕೆ ತೊಂದರೆಯಾಗುತ್ತದೆ.
ಕಳಪೆ ವೀರ್ಯ ಗುಣಮಟ್ಟ : ವಯಸ್ಸಾದಂತೆ ಪುರುಷರ ವೀರ್ಯದ ಗುಣಮಟ್ಟ (ವೀರ್ಯವನ್ನು ಸಾಗಿಸುವ) ಕ್ಷೀಣಿಸುತ್ತದೆ. 40 ವರ್ಷಗಳ ನಂತರ ಕಳಪೆ ಗುಣಮಟ್ಟದ ವೀರ್ಯವು ಪುರುಷರಲ್ಲಿ ದ್ವಿತೀಯ ಬಂಜೆತನಕ್ಕೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.
ಒತ್ತಡ : ನಿದ್ರಾಹೀನತೆ, ದೀರ್ಘಕಾಲದ ಆತಂಕ, ಮಾನಸಿಕ ಒತ್ತಡ ಮೊದಲಾದವುಗಳು ದೈಹಿಕ ಅಭಿವ್ಯಕ್ತಿಯಾಗಿ ಬದಲಾಗುತ್ತದೆ. ಇದರಿಂದಾಗಿ ದ್ವಿತೀಯ ಬಂಜೆತನಕ್ಕೆ ಕಾರಣವಾಗುತ್ತದೆ.
ಪ್ರಾಸ್ಟೇಟ್ ಹಿಗ್ಗುವಿಕೆ : ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ ಕಡಿಮೆ ವೀರ್ಯ ಎಣಿಕೆಗೆ ಕಾರಣವಾಗುತ್ತದೆ ಮತ್ತು ಸ್ಖಲನಕ್ಕೆ ಅಡ್ಡಿಯಾಗಬಹುದು. ಕ್ಯಾನ್ಸರ್ ಅಥವಾ ಇತರ ಪರಿಸ್ಥಿತಿಗಳಿಂದಾಗಿ ಪ್ರಾಸ್ಟೇಟ್ ಅನ್ನು ತೆಗೆದು ಹಾಕಿದರೆ ಅದು ವೀರ್ಯದ ಹಿಮ್ಮುಖ ಸ್ಖಲನಕ್ಕೆ ಕಾರಣವಾಗಬಹುದು. ಅದು ಬಂಜೆತನಕ್ಕೂ ಕಾರಣವಾಗಬಹುದು.
ಔಷಧಿಗಳ ಬಳಕೆ : ಕೆಲವು ಪ್ರತಿಜೀವಕಗಳು ಮತ್ತು ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಬಳಸಲಾಗುವ ಕೆಲವು ಔಷಧಿಗಳು ವೀರ್ಯದ ಎಣಿಕೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ಕ್ಯಾನ್ಸರ್‌ಗಳಿಗೆ ಬಳಸುವ ಕೀಮೋಥೆರಪಿ ಅಥವಾ ರೇಡಿಯೊಥೆರಪಿಯು ವೀರ್ಯದ ಸಂಖ್ಯೆ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು : ಕೀಟನಾಶಕಗಳು, ಸೀಸ, ಕೈಗಾರಿಕಾ ರಾಸಾಯನಿಕಗಳು ಮತ್ತು ಅತಿಯಾದ ಶಾಖ ಅಥವಾ ಶೀತವು ಮನುಷ್ಯನ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು. ನಾವು ವಾಸಿಸುವ ಜಗತ್ತಿನಲ್ಲಿ ಪ್ರತಿದಿನವೂ ಅರಿವಿಗೆ ಬಾರದೆ ವಿಷಕ್ಕೆ ದೇಹವನ್ನು ಒಡ್ಡಿಕೊಳ್ಳುತ್ತೇವೆ. ಆದರೆ, ಕೆಲವು ವಿಷಗಳು ಹೆಚ್ಚು ಹಾನಿಕಾರಕವಾಗಿದೆ. ಸೀಸ ತುಂಬಿದ ಉತ್ಪನ್ನಗಳು, ಕೀಟನಾಶಕಗಳು, ಹಾನಿಕಾರಕ ರಾಸಾಯನಿಕಗಳು ಮತ್ತು ವಿಕಿರಣಗಳು ವೀರ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತವೆ.
ವಾಣಿಜ್ಯ ಲೈಂಗಿಕ ಲೂಬ್ರಿಕಂಟ್ ಬಳಕೆ: ಕಡಲೆಕಾಯಿ, ಕುಸುಬೆ ಮತ್ತು ಸಸ್ಯಜನ್ಯ ಎಣ್ಣೆಗಳು ಮತ್ತು ಪೆಟ್ರೋಲಿಯಂ ಜೆಲ್ಲಿಗಳು ಸೇರಿದಂತೆ ವಿಷಕಾರಿಯಾದ ಲೂಬ್ರಿಕಂಟ್‌ಗಳು ವೀರ್ಯಕ್ಕೆ ವಿಷಕಾರಿ. ಇವು ಫಲವತ್ತತೆಯನ್ನು ಕಡಿಮೆ ಮಾಡುತ್ತದೆ.
ಅತಿಯಾದ ತೂಕ : ಇದು ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ. ಬೊಜ್ಜು, ಅಧಿಕ ತೂಕ ಮತ್ತು ಟೈಪ್ 2 ಡಯಾಬಿಟಿಸ್ ಬಂಜೆತನಕ್ಕೆ ಸಾಮಾನ್ಯ ಕಾರಣಗಳಾಗಿವೆ. ಆಗಾಗ ತೂಕದ ಹೆಚ್ಚಳ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ವೀರ್ಯ ಉತ್ಪಾದನೆ ಮತ್ತು ಗುಣಮಟ್ಟಕ್ಕೆ ಅಡ್ಡಿಪಡಿಸುತ್ತದೆ.