ETV Bharat / sukhibhava

Oral sex.. ಗಂಟಲು ಕಾನ್ಸರ್​ಗೆ ಈ ರೀತಿಯ ಸಂಭೋಗ ಕೂಡ ಕಾರಣ.. - ಗಂಟಲಿನ ಕ್ಯಾನ್ಸರ್​ಗೆ ಧೂಮಪಾನ ಮತ್ತು ಮದ್ಯಪಾನ ಕಾರಣ

ಕ್ಯಾನ್ಸರ್ ಗಂಟಲಿನ ವಿವಿಧ ಸ್ಥಳಗಳಲ್ಲಿ ಮತ್ತು ಗಂಟಲಿನ ಸುತ್ತಲೂ ಬೆಳೆಯಬಹುದು. ಉದಾಹರಣೆಗೆ ಬಾಯಿಯ ಕುಳಿಯಲ್ಲಿ, ಮೂಗಿನ ಕುಹರದ ಹಿಂದಿನ ಜಾಗದಲ್ಲಿ, ಟಾನ್ಸಿಲ್‌ಗಳಲ್ಲಿ ಅಥವಾ ನಾಲಿಗೆಯ ತಳದಲ್ಲಿ ಕಾನ್ಸರ್​ ಉಂಟಾಗಬಹುದು.

Can oral sex cause throat cancer
ಗಂಟಲು ಕಾನ್ಸರ್​ಗೆ ಈ ರೀತಿಯ ಸಂಭೋಗ ಕೂಡ ಕಾರಣ...
author img

By

Published : Jul 5, 2022, 7:16 PM IST

ಕ್ಯಾನ್ಸರ್​ ಹರಡುವಿಕೆ ಬಗ್ಗೆ ಮತ್ತೊಂದು ಆಘಾತಕಾರಿ ಅಂಶವೊಂದು ಹೊರಬಿದ್ದಿದೆ. ಗಂಟಲಿನ ಕ್ಯಾನ್ಸರ್​ಗೆ ಧೂಮಪಾನ ಮತ್ತು ಮದ್ಯಪಾನ ಜೊತೆಗೆ ಮೌಖಿಕ ಸಂಭೋಗ ಮತ್ತು ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕದಿಂದಲೂ ಕಾರಣವಾಗುತ್ತದೆ. ಮಾನವ ಪ್ಯಾಪಿಲೋಮವೈರಸ್ (ಹೆಚ್​​ಪಿವಿ) ಪ್ರಸರಣದಿಂದಾಗಿ ಈ ಕ್ಯಾನ್ಸರ್​​ ಕಂಡುಬರಬಹುದು ಎಂದು ಇತ್ತೀಚಿನ ಹೊಸ ಸಂಶೋಧನೆಗಳು ಒತ್ತಿಹೇಳುತ್ತಿವೆ.

ಗಂಟಲಿನ ಕ್ಯಾನ್ಸರ್‌ನ ಅಂಕಿ-ಅಂಶಗಳ ಕುರಿತಂತೆ ಬ್ರಸೆಲ್ಸ್ ಕ್ಯಾನ್ಸರ್ ರಿಜಿಸ್ಟ್ರಿ ಫೌಂಡೇಶನ್ ಪ್ರಕಾರ, 2019ರಲ್ಲಿ 2,766 ಹೊಸ ಮೆದುಳು ಮತ್ತು ಕುತ್ತಿಗೆಯ ಕ್ಯಾನ್ಸರ್ ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ 2,058 ಪುರುಷರು ಹಾಗೂ 708 ಮಹಿಳೆಯರು ಸೇರಿದ್ದಾರೆ. ಗಂಟಲು ಕ್ಯಾನ್ಸರ್​ಗೆ ಒಳಗಾಗುವ ಮಹಿಳೆಯರಿಗಿಂತ ಹೆಚ್ಚಿನ ಪುರುಷರು ಇದ್ದಾರೆ. ಇದರ ಅನುಪಾತವು ಸುಮಾರು 70:30 ಎಂದು ಅಂದಾಜಿಸಲಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಪುರುಷರು ಹೆಚ್ಚು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿದ್ದಾರೆ. ಆದಾಗ್ಯೂ, ಇತ್ತೀಚೆಗೆ ಮಹಿಳೆಯರೂ ಇದಕ್ಕೆ ತುತ್ತಾಗುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಮಾನವ ಪ್ಯಾಪಿಲೋಮ ವೈರಸ್‌ (ಹೆಚ್​​ಪಿವಿ)ನಿಂದ ಉಂಟಾಗುವ ಗಂಟಲು ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆಯು ಹೆಚ್ಚಾಗಿದೆ ಎಂದು ಯುಜೆಡ್​ (Universitaire ziekenhuizen) ಲ್ಯುವೆನ್‌ನ ಪ್ರಾಧ್ಯಾಪಕ ಡಾ.ಪಿಯರೆ ಡೆಲೇರೆ ತಿಳಿಸಿದ್ದಾರೆ. ಪುರುಷರು ಮತ್ತು ಮಹಿಳೆಯರಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಲೈಂಗಿಕವಾಗಿ ಹರಡುವ ಹೆಚ್​​ಪಿವಿ ಸೋಂಕು ಬಾಯಿಯ ಕುಹರದ ಹಿಂದೆ ಕ್ಯಾನ್ಸರ್​ನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಗಂಟಲಿನ ಕ್ಯಾನ್ಸರ್ ಮೌಖಿಕ ಸಂಭೋಗದ ಮೂಲಕ ಹರಡುವುದನ್ನು ಒಳಗೊಂಡಿರುತ್ತದೆ. ಬಹುಪಾಲು ಪ್ರಕರಣಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ದೇಹದಿಂದ ವೈರಸ್​ನ್ನು ತೆಗೆದುಹಾಕುತ್ತದೆ. ಆದರೆ, ಕೆಲವೊಮ್ಮೆ ಅದು ಮಾಡುವುದಿಲ್ಲ ಮತ್ತು ವೈರಸ್ ಬಾಯಿಯ ಕುಹರದ ಜೀವಕೋಶಗಳಲ್ಲಿ ನೆಲೆಗೊಳ್ಳುತ್ತದೆ. ಇದರ ಪರಿಣಾಮವಾಗಿ ಜೀವಕೋಶಗಳು ರೂಪಾಂತರಕ್ಕೆ ಒಳಗಾಗಿ ಗಂಟಲಿನ ಕ್ಯಾನ್ಸರ್​​ಗೆ ಕಾರಣವಾಗಬಹುದು ಡಾ. ಡೆಲೇರೆ ವಿವರಿಸಿದ್ದಾರೆ.

ಗಂಟಲಿನ ಕ್ಯಾನ್ಸರ್ ವಿವಿಧ ಸ್ಥಳಗಳಲ್ಲಿ ಮತ್ತು ಗಂಟಲಿನ ಸುತ್ತಲೂ ಬೆಳೆಯಬಹುದು. ಉದಾಹರಣೆಗೆ ಬಾಯಿಯ ಕುಳಿಯಲ್ಲಿ, ಮೂಗಿನ ಕುಹರದ ಹಿಂದಿನ ಜಾಗದಲ್ಲಿ, ಟಾನ್ಸಿಲ್‌ಗಳಲ್ಲಿ ಅಥವಾ ನಾಲಿಗೆಯ ತಳದಲ್ಲಿ ಕಾನ್ಸರ್​ ಉಂಟಾಗಬಹುದು. ಇದರ ರೋಗಲಕ್ಷಣಗಳು ಸಾಮಾನ್ಯವಾಗಿ ಮೊದಲಿಗೆ ಅಸ್ಪಷ್ಟವಾಗಿರುತ್ತವೆ. ತೀವ್ರವಾದ ಹಂತದಲ್ಲಿ ಮಾತ್ರ ಇದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ ಎಂದು ಮಾಹಿತಿ ಅವರು ನೀಡಿದ್ದಾರೆ.

ಆದಾಗ್ಯೂ, ಈ ಕಾನ್ಸರ್​ನ್ನು ಹಲವಾರು ಲಕ್ಷಣಗಳಿಂದಲೂ ಆರಂಭದಲ್ಲೇ ತಿಳಿಯಬಹುದು. ಅದು ಹೇಗೆಂದರೆ ನಿರಂತರವಾಗಿ ಗಂಟಲು ನೋವು ಹಾಗೂ ಗಂಟಲಿನ ನೋವು ಹೋಗದಂತೆ ತೋರುವುದು ಕೂಡ ಒಂದು ಲಕ್ಷಣವಾಗಿದೆ. ಅಲ್ಲದೇ, ಕೆಮ್ಮುವಾಗ ರಕ್ತ ಬರುವುದು, ನುಂಗುವಾಗ ಸಮಸ್ಯೆ ಹಾಗೂ ಕುತ್ತಿಗೆ ಗ್ರಂಥಿಗಳು ಊದಿಕೊಳ್ಳುವುದು ಈ ಕಾನ್ಸರ್​ನ ಪ್ರಮುಖ ಲಕ್ಷಣಗಳಾಗಿವೆ ಎಂದು ಡಾ. ಡೆಲೇರೆ ಹೇಳಿದ್ದಾರೆ.

ನೆಮ್ಮದಿ ವಿಷಯ ಎಂದರೆ ಹೆಚ್​​ಪಿವಿ ಸೋಂಕಿನಿಂದಾಗ ಉಂಟಾಗುವ ಗಂಟಲಿನ ಕ್ಯಾನ್ಸರ್​​ ಗುಣಮುಖಕ್ಕೆ ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿ ಸಾಕಾಗುತ್ತದೆ. ಆದರೆ, ಇದು ತಂಬಾಕು ಮತ್ತು ಆಲ್ಕೋಹಾಲ್ ಸೇವನೆಯ ಪರಿಣಾಮವಾಗಿ ಉಂಟಾದ ಗಂಟಲಿನ ಕ್ಯಾನ್ಸರ್​ಗೆ ಮಾತ್ರ ಅನ್ವಯಿಸುತ್ತದೆ.

ಇದೇ ವೇಳೆ ಗಂಟಲಿನ ಗ್ರಂಥಿಗಳಲ್ಲಿನ ಮೆಟಾಸ್ಟೇಸ್‌ಗಳ ಕಂಡು ಬಂದರೆ ಅದನ್ನು ರೋಬೋಟ್‌ಗಳ ನೆರವಿನಿಂದ ಹೊರತೆಗೆಯಬಹುದು. ಒಂದು ವೇಳೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಕೆಲವೊಮ್ಮೆ ಗಂಟಲಿನ ಭಾಗವನ್ನು ತೆಗೆಯಬೇಕಾಗುತ್ತದೆ. ಇದು ರೋಗಿಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ನಂತರ ಆತ ಮಾತನಾಡಲು ಮತ್ತು ನುಂಗಲು ಕಷ್ಟವಾಗುತ್ತದೆ. ಆರಂಭಿಕ ಹಂತಗಳಲ್ಲಿ ಕ್ಯಾನ್ಸರ್ ಪತ್ತೆಯಾದರೆ ಶೇ.90ರಷ್ಟು ಗುಣಪಡಿಸುವ ಸಾಧ್ಯತೆ ಇದೆ. ತಡವಾಗಿ ಪತ್ತೆಯಾದರೆ ಇದರ ಸಾಧ್ಯತೆಗಳು ಸುಮಾರು ಶೇ.60ರಷ್ಟು ಮಾತ್ರ ಎಂದು ಡಾ.ಪಿಯರೆ ಡೆಲೇರೆ ವಿವರಿಸಿದ್ದಾರೆ.

ಇದನ್ನೂ ಓದಿ: ಮುಂಗಾರಿನಲ್ಲಿ ಆರೋಗ್ಯವಾಗಿರಲು 6 ಸರಳ ಯೋಗಾಸನ.. ಟ್ರೈ ಮಾಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.