ETV Bharat / sukhibhava

ಬ್ರೊಕೊಲಿಯಲ್ಲಿರುವ ಈ ಅಂಶಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ - ನಮ್ಮ ಪೋಷಕರು ಹೇಳುವುದನ್ನು ಕೇಳಿರುತ್ತೇವೆ

ಬ್ರೊಕೊಲಿ ಆರೋಗ್ಯಕ್ಕೆ ಉತ್ತಮ ಎಂಬುದನ್ನು ವಿಜ್ಞಾನಿಗಳು ಪುರಾವೆ ಸಮೇತ ತೋರಿಸಿದ್ದಾರೆ.

broccoli this compound helpful for health

author img

By ETV Bharat Karnataka Team

Published : Oct 30, 2023, 4:57 PM IST

ಒಸ್ಕಾ: ಹಸಿರು ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು. ಅವುಗಳನ್ನು ಹೆಚ್ಚು ಸೇವಿಸಬೇಕು ಎಂಬುದನ್ನು ನಮ್ಮ ಪೋಷಕರು ಹೇಳುವುದನ್ನು ಕೇಳಿರುತ್ತೇವೆ. ಅದು ಅನೇಕ ಬಾರಿ ಸತ್ಯ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಅಂತಹದ್ದೇ ಸಂಶೋಧನೆ ಬ್ರೊಕೊಲಿ ತರಕಾರಿ ಮೇಲೂ ನಡೆದಿದೆ.

ಅಮೆರಿಕದ ಜನರಲ್ಲಿ ಹೆಚ್ಚಾಗಿ ಜನಪ್ರಿಯವಾಗಿರುವ ಈ ಬ್ರೊಕೊಲಿ ಇದೀಗ ಭಾರತದಲ್ಲೂ ನಿಧಾನವಾಗಿ ಪರಿಚಯವಾಗುತ್ತಿದೆ. ಬ್ರೊಕೊಲಿ ಮತ್ತು ಕ್ರಿಸಿಫೆರೊಸ್​​ ತರಕಾರಿ ಮಧುಮೇಹ ಮತ್ತು ಕ್ಯಾನ್ಸರ್​ ಅಪಾಯ ಕಡಿಮೆ ಮಾಡುತ್ತದೆ. ಇದರಲ್ಲಿರು ಗ್ಲುಸಿನೊಲೇಟ್ಸ್​​ ಐಸೊಥಿಯೋಸೈನೇಟ್​ನಂತಹ ಅರ್ಗೊನೊಸಲ್ಫರ್​​ ಸಂಯುಕ್ತಗಳು ಇದಕ್ಕೆ ಕಾರಣ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್​ ಸಕ್ರಿಯದಂತಹ ಜೀವಸಕ್ರಿಯದ ವಿವಿಧ ದರಗಳಿವೆ.

ಬ್ರೊಕೊಲಿಯ ಮೊಳಕೆಯಲ್ಲಿ ಪಾಲಿಸಲ್ಫೈಡ್ಸ್ ಅಂಶವಿದೆ. ಒಸ್ಕಾ ಮೊಟ್ರೋಪಾಲಿಟನ್​ ಯುನಿವರ್ಸಿಟಿ ಗ್ರಾಜುಯೇಟ್​​ ಸ್ಕೂಲ್​ ಆಫ್​ ಸೈನ್ಸ್​ನ ಪ್ರೊ.ಹಿದೆಶಿ ಇಹರಾ ಮತ್ತು ಅಸಿಸ್ಟೆಂಟ್​​ ಪ್ರೊ.ಶಿಂಗೊ ಕಾಸಮಟ್ಸು ತಂಡ ನಡೆಸಿದ ಅಧ್ಯಯನದಲ್ಲಿ ಬ್ರೊಕೊಲಿ ಮೊಳಕೆಯಾಗುವಾಗ ಮತ್ತು ಬೆಳೆಯುವಾಗ ಅದರಲ್ಲಿ ಪಾಲಿಸಲ್ಫೈಡ್ಸ್ ಗುಣಮಟ್ಟ ಪರಿಶೀಲಿಸಲಾಗಿದೆ.

ಬ್ರೊಕೊಲಿ ಮತ್ತು ಕ್ರಿಸಿಫೆರಸ್​ ತರಕಾರಿ ಪಾಲಿಸಲ್ಫೈಡ್ಸ್ ಸಂಯುಕ್ತ ಹೊಂದಿದೆ ಎಂದು ಈ ಹಿಂದಿನ ಅಧ್ಯಯನವೂ ತಿಳಿಸಿದೆ. ಬ್ರೊಕೊಲಿ ಮೊಳಕೆಯಲ್ಲಿ ಅದರಲ್ಲೂ ಬೆಳವಣಿಗೆಯಲ್ಲಿ ಇದರ ಪ್ರಮಾಣ ಗಮನಾರ್ಹವಾಗಿದೆ. ಪಾಲಿಸಲ್ಫೈಡ್ಸ್‌ನ ಅದ್ಬುತ ಆಗರವೇ ಬ್ರೊಕೊಲಿ. ಇದರಲ್ಲಿನ ಪಾಲಿಸಲ್ಫೈಡ್ಸ್ ಅಂಶ ಒಟ್ಟಾರೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಅಧ್ಯಯನದ ಫಲಿತಾಂಶ ತಿಳಿಸುವಂತೆ, ಪಾಲಿಸಲ್ಫೈಡ್ಸ್‌ ಸಸ್ಯದ ಮೊಳಕೆಯೊಡೆಯುವಿಕೆ ಮತ್ತು ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಪಾರ್ಶ್ವವಾಯು, ಕ್ಯಾನ್ಸರ್​, ಊರಿಯೂತ ಮತ್ತು ಆಕ್ಸಿಡೆಟಿವ್​ ಒತ್ತಡ ಸಂಬಂಧಿತ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸಾ ವಿಧಾನದ ಅಭಿವೃದ್ಧಿಗೆ ಅಜ್ಞಾತ ಪಾಲಿಸಲ್ಫೈಡ್‌ಗಳು ಕಾರಣವಾಗಬಹುದು.

ಬ್ರೊಕೊಲಿ ಆರೋಗ್ಯ ಲಾಭಗಳು: ರುಚಿಕರ ಮತ್ತು ಆರೋಗ್ಯಕರವಾಗಿರುವ ಬ್ರೊಕೊಲಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಸಿರು ತರಕಾರಿ ಡಯಟ್​ ಯೋಜನೆ ರೂಪಿಸಿದರೆ ಇದು ಅತ್ಯುತ್ತುಮ ಆಯ್ಕೆ. ಬ್ರೊಕೊಲಿಯಲ್ಲಿ ಪ್ರೊಟೀನ್​, ಫ್ಯಾಟ್​, ಫೈಬರ್​​, ವಿಟಮಿನ್​ ಸಿ, ಎ, ಎ ಮತ್ತು ಬಿ9 ಇರುತ್ತದೆ. ಪೊಟಾಷಿಯಂ ಮತ್ತು ಪಾಸ್ಪರಸ್​​ ಹೊಂದಿರುವ ಇದು ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ.

ಕ್ಯಾನ್ಸರ್​ ವಿರುದ್ಧ ಹೋರಾಡುವ ಶಕ್ತಿಯೂ ಇದಕ್ಕಿದ್ದು, ಸ್ತನ ಮತ್ತು ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಲು ಬ್ರೊಕೊಲಿ ಅತ್ಯಂತ ಸೂಕ್ತ ಎಂದು ಸಂಶೋಧನೆ ತೋರಿಸುತ್ತದೆ. ಇದರಲ್ಲಿ ಉತ್ತಮ ಆ್ಯಂಟಿ ಆಕ್ಸಿಡೆಂಟ್​ ಗುಣವಿದೆ. ಇದರಿಂದ ದೇಹಕ್ಕೆ ಹೆಚ್ಚಿನ ವಿಟಮಿನ್​ ಸಿ ಲಭ್ಯವಾಗುತ್ತದೆ. ಅಲ್ಲದೇ ದೇಹದಲ್ಲಿ ಉಂಟಾಗುವ ಊರಿಯೂತವನ್ನು ಇದು ಕಡಿಮೆ ಮಾಡಬಲ್ಲದು. (ಎಎನ್​ಐ)

ಇದನ್ನೂ ಓದಿ: Drumsticks: ನುಗ್ಗೇಕಾಯಿ ಎಂದು ಹೀಗಳಿಯುವ ಮುನ್ನ ಅದರ ಆರೋಗ್ಯ ಪ್ರಯೋಜನವನ್ನೊಮ್ಮೆ ತಿಳಿದು ಬಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.