ನವದೆಹಲಿ: ಹೂಕೋಸಿನ ಮಾದರಿಯಲ್ಲಿರುವ ಬ್ರೊಕೊಲಿ ಆರೋಗ್ಯ ಪ್ರಯೋಜನ ಕುರಿತು ಬಹುತೇಕರಿಗೆ ತಿಳಿದಿದೆ. ಈ ಬ್ರೊಕೊಲಿ ಸಣ್ಣ ಕರುಳಿನ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಸಂಬಂಧ ಅಮೆರಿಕದ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಅಧ್ಯಯನ ನಡೆಸಿದೆ.
ಕರುಳಿನ ಒಳಪದವರ ಮೇಲಿರುವ ಆರಿಲ್ ಹೈಡ್ರೋಕಾರ್ಬನ್ ರಿಸೆಪ್ಟರ್ ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಬ್ರೊಕೊಲಿಯಲ್ಲಿರುವ ಆರಿಲ್ ಹೈಡ್ರೋಕಾರ್ಬನ್ ರಿಸೆಪ್ಟರ್ ಲಿಗಂಡ್ಸ್ ಅದನ್ನು ಬಂಧಿಸುತ್ತದೆ. ಈ ಬಂಧಿಸುವಿಕೆಯು ಕರುಳಿನ ಕೋಶಗಳ ಕಾರ್ಯಗಳ ಮೇಲೆ ಪರಿಣಾಮ ಬೀರುವ ವಿವಿಧ ಚಟುವಟಿಕೆಗಳನ್ನು ಪ್ರಾರಂಭಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಲ್ಯಾಬೊರೇಟರಿ ಇನ್ವೆಸ್ಟಿಗೇಶನ್ ಜರ್ನಲ್ನಲ್ಲಿ ಪ್ರಕಟವಾಗಿದೆ.
ನೀರಿನ ಅಂಶಗಳು ಬ್ರೊಕೊಲಿಯಲ್ಲಿರುವ ಅಂಶವು ಕರುಳಿನ ಕೋಶಗಳನ್ನು ಜೋಡಿಸುವ ಕೆಲವು ಜೀವಕೋಶಗಳಿಗೆ ಪ್ರಯೋಜನಕಾರಿ ಆಗಿದೆ. ಇದು ನೀರು ಮತ್ತು ಪೋಷಕಾಂಶಗಳ ಸುಲಭವಾಗಿ ದೇಹಕ್ಕೆ ಹಾದುಹೋಗಲು ಸಹಾಯ ಮಾಡುತ್ತದೆ. ಹಾನಿಕಾರಕ ಆಹಾರ ಕಣಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊರಗಿಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಈ ಜೀವಕೋಶಗಳು ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಎಂಟ್ರೊಸೈಟ್ಗಳು, ಲೋಳೆಯ ರಕ್ಷಣಾತ್ಮಕ ಪದರವನ್ನು ಸ್ರವಿಸುವ ಗೋಬ್ಲೆಟ್ ಕೋಶಗಳು ಮತ್ತು ಪನೆತ್ ಜೀವಕೋಶಗಳು, ಜೀರ್ಣಕಾರಿ ಕಿಣ್ವಗಳನ್ನು ಒಳಗೊಂಡಿರುವ ಲೈಸೋಸೋಮ್ಗಳನ್ನು ಸ್ರವಿಸುತ್ತದೆ.
ಸಣ್ಣ ಕರುಳಿನಲ್ಲಿ ಆಹಾರದ ಸಾಗಣೆಯ ಸಮಯವನ್ನು ಇದು ಕಡಿಮೆ ಮಾಡುತ್ತದೆ. ಕರುಳನ್ನು ಆವರಿಸಿರುವ ಜೀವಕೋಶಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ. ಈ ಸಂಬಂಧ ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ ಎಂದು ಅಧ್ಯಯನ ತಿಳಿಸಿದೆ.
ಇದರಿಂದ ಜೀರ್ಣಾಂಗವ್ಯೂಹದ ಸೆಲ್ಯುಲಾರ್ ಮತ್ತು ಮೆಟಾಬಾಲಿಕ್ ಸಂಗ್ರಹವನ್ನು ಮರುರೂಪಿಸಬಹುದು. ಬ್ರೊಕೊಲಿ ಲಿಗಂಡ್‌ಗಳಲ್ಲಿ ಸಮೃದ್ಧವಾಗಿದ್ದು ಇದು ಸಣ್ಣ ಕರುಳಿನ ಆರೋಗ್ಯ ಮತ್ತು ಸ್ಥಿತಿ ಸ್ಥಾಪಕತ್ವ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನದ ಲೇಖಕ ಆಂಡ್ರ್ಯೂ ಪ್ಯಾಟರ್ಸನ್ ಮಾಹಿತಿ ನೀಡಿದ್ದಾರೆ.
ಬ್ರೊಕೊಲಿ ಪೋಷಕಾಂಶದ ಆಗರ: ರುಚಿಕರ ಮತ್ತು ಆರೋಗ್ಯಕರವಾಗಿರುವ ಬ್ರೊಕೊಲಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಸಿರು ತರಕಾರಿ ಡಯಟ್ ಯೋಜನೆ ರೂಪಿಸಿದರೆ ಇದು ಅತ್ಯುತ್ತುಮ ಆಯ್ಕೆ ಆಗಿರಲಿದೆ. ಬ್ರೊಕೊಲಿಯಲ್ಲಿ ಪ್ರೊಟೀನ್, ಫ್ಯಾಟ್, ಫೈಬರ್, ವಿಟಮಿನ್ ಸಿ, ಎ, ಎ ಮತ್ತು ಬಿ9 ಇರುತ್ತದೆ. ಪೊಟಾಷಿಯಂ ಮತ್ತು ಪಾಸ್ಪರಸ್ ಹೊಂದಿರುವ ಇದು ಅನೇಕ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬ್ರೊಕೊಲಿ ಮುಖ್ಯವಾಗಿದೆ. ಇದರಲ್ಲಿನ ಫೈಬರ್ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗುವಂತೆ ಸಹಾಯ ಮಾಡುತ್ತದೆ. ಜೊತೆಗೆ ದೇಹದ ರಕ್ತದ ಎಲ್ಡಿಲ್ ಅನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಕೂಡ ಇದಕ್ಕಿದ್ದು, ಸ್ತನ ಮತ್ತು ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಲು ಬ್ರೊಕೊಲಿ ಅತ್ಯಂತ ಸೂಕ್ತವಾಗಿದೆ ಎಂದು ಸಂಶೋಧನೆ ತೋರಿಸುತ್ತದೆ. ಇದರಲ್ಲಿ ಉತ್ತಮ ಆ್ಯಂಟಿ ಆಕ್ಸಿಡೆಂಟ್ ಗುಣವಿದೆ. ಇದರಿಂದ ದೇಹಕ್ಕೆ ಹೆಚ್ಚಿನ ವಿಟಮಿನ್ ಸಿ ಲಭ್ಯವಾಗುತ್ತದೆ. ಅಲ್ಲದೇ ದೇಹದಲ್ಲಿ ಉಂಟಾಗುವ ಊರಿಯೂತವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ವಿಶ್ವ ಹೋಮಿಯೋಪತಿ ದಿನ: ಸಾಂಪ್ರದಾಯಿಕ, ನೈಸರ್ಗಿಕ ಚಿಕಿತ್ಸೆ ಮಹತ್ವ ಇದು