ನ್ಯೂಯಾರ್ಕ್: ಬ್ರೊಕೊಲಿ ಮೊಳಕೆ ಅಥವಾ ಕ್ರೂಸಿಫೆರಸ್ ತರಕಾರಿಗಳು ಸೇರಿದಂತೆ ಹೆಚ್ಚಿನ ಫೈಬರ್ ಆಹಾರಗಳು ಕರುಳಿನ ಉರಿಯೂತದ ರೋಗದ ಲಕ್ಷಣವನ್ನು ಕಡಿಮೆ ಮಾಡುವ ಮತ್ತು ರೋಗಿಗಳ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಇಲಿಗಳ ಮೇಲೆ ನಡೆಸಿದ ಈ ಅಧ್ಯಯನವನ್ನು ಎಂಸಿಸ್ಟಂ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕೆ ಸಂಶೋಧಕರು ಇಂಟರ್ಲೆಕಿನ್-10-ನಾಕ್ಔಟ್ (ಐಎಲ್-10-ಕೆಒ) ಇಲಿಗಳ ಮಾದರಿಯನ್ನು ಅನುಸರಿಸಿದ್ದಾರೆ. ಇಲಿಗಳ ರೋಗ ನಿರೋಧಕ ಶಕ್ತಿಯನ್ನು ತನಿಖೆ ಮಾಡಲಾಗಿದ್ದು, ಬ್ರೊಕೊಲಿ ಮೊಳಕೆ ಆಹಾರಗಳು, ಕ್ರೋನ್ಸ್ ಪೀಡಿತ ಕರುಳಿನೊಳಗಿನ ಸೂಕ್ಷ್ಮಜೀವಿಗಳು ಹೇಗೆ ಸಂಯೋಜನೆ ನಡೆಸಿ, ಕರುಳಿನ ಉರಿಯೂತದ ಮೆಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗಿದೆ.
ಮೈನೆ ಯುನಿವರ್ಸಿಟಿ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಇದಕ್ಕಾಗಿ ಐಎಲ್-10-ಕೆಒ ನಾಲ್ಕು ಇಲಿಗಳ ಗುಂಪಿನ ಮೇಲೆ ಸಂಶೋಧನೆ ನಡೆಸಲಾಗಿದೆ. ಮೊದಲ ಸುತ್ತಿನಲ್ಲಿ ಹದಿವಯಸ್ಸಿನ ಇಲಿಗಳು ಅಂದರೆ ನಾಲ್ಕು ವಾರದ ಇಲಿಗಳನ್ನು ಅಧ್ಯಯನ ನಡೆಸಲಾಗಿದೆ. ಈ ವೆಳೆ ಕಚ್ಚಾ ಬ್ರೊಕೊಲಿಯ ಮೊಳಕೆಗಳನ್ನು ನೀಡಲಾಗಿದೆ.
ಎರಡನೇ ಸುತ್ತಿನ ಅಧ್ಯಯನದಲ್ಲಿ ಇದೇ ರೀತಿ ಎರಡು ಡಯಟ್ ಗ್ರೂಪ್ ಹೊಂದಲಾಗಿದೆ. ಇಲ್ಲಿ ಏಳು ವಾರದ ಇಲಿಗಳನ್ನು ಪರೀಕ್ಷೆ ಮಾಡಲಾಗಿದೆ. ಈ ಇಲಿಗಳಿಗೆ ಏಳು ದಿನಗಳ ಕಾಲ ತಿನ್ನಿಸಲಾಗಿದ್ದು, ಅದರ ಲಕ್ಷಣಗಳನ್ನು ಗಮನಿಸಲಾಗಿದೆ.
ಅಧ್ಯಯನ ಕುರಿತು ಮಾತನಾಡಿರುವ ಪ್ರಮುಖ ಲೇಖಕರಾದ ಲೊಕ ಹೊಲ್ಕೊಮ್ಬ್, ಫಲಿತಾಂಶದಲ್ಲಿ ಅನೇಕ ಅಚ್ಚರಿ ಫಲಿತಾಂಶವನ್ನು ನಾವು ಕಂಡಿದ್ದೇವೆ. ಮೊದಲಿಗೆ ನಾವು ಇಲಿಗಳು ಬ್ರೊಕೊಲಿ ಮೊಳಕೆ ಡಯಟ್ ಸೇವಿಸಿದಾಗ ರಕ್ತದಲ್ಲಿ ಸಲ್ಫೊರಾಫೇನ್ ಎಂಬ ಉರಿಯೂತದ ಮೆಟಾಬೊಲೈಟ್‌ನ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವುದು ಕಂಡು ಬಂದಿದೆ ಎಂದಿದ್ದಾರೆ.
ಅಷ್ಟೇ ಅಲ್ಲದೇ, ಇಲಿಗಳಲ್ಲಿ ಇಮ್ಯುನೊಕೊಪ್ರೊಮೈಸ್ಡ್ ಮತ್ತು ಕೊಲೈಟಿಸ್ ಕೂಡ ಕಂಡು ಬಂದಿದೆ, ಇದು ಸಲ್ಫೊರಾಫೇನ್ ಹೆಚ್ಚಿಸಿದ್ದು, ಅತಿಸಾರ ಸೇರಿದಂತೆ ಅನೇಕ ಗಂಭೀರ ರೋಗದ ವಿರುದ್ಧ ರಕ್ಷಣೆ ಮಾಡಿದೆ.
ಹದಿ ವಯಸ್ಸಿನ ಗುಂಪಿನ ಇಲಿಗಳು ದೊಡ್ಡ ಇಲಿಗಳ ಗುಂಪಿಗೆ ಹೋಲಿಗೆ ಮಾಡಿದಾಗ ಉತ್ತಮವಾಗಿ ಸ್ಪಂದಿಸಿದೆ. ಸಣ್ಣ ಇಲಿಗಳಲ್ಲಿ ರೋಗದ ಲಕ್ಷಣಗಳು ಸೌಮ್ಯವಾಗಿದ್ದು, ಅದರ ಕರುಳಿನ ಸೂಕ್ಷ್ಮಾಣುಗಳು ಸಮೃದ್ಧವಾಗಿವೆ. ಯುವ ವಯಸ್ಸಿನ ಇಲಿಗಳ ಕರುಳಿನಲ್ಲಿ ಬಲವಾದ ಬ್ಯಾಕ್ಟಿರಿಯಲ್ ಸಮುದಾಯ ಕಂಡು ಬಂದಿದೆ.
ನಾಲ್ಕು ಇಲಿಗಳ ಗುಂಪಿನಲ್ಲಿ ನಡೆದ ಅಧ್ಯಯನದಲ್ಲಿ ಸಣ್ಣ ವಯಸ್ಸಿನ ಇಲಿಗಳಲ್ಲಿ ಬ್ರೊಕೊಲಿ ಮೊಳಕೆಯು ಸೌಮ್ಯ ರೋಗದ ಲಕ್ಷಣವನ್ನು ತೋರಿದ್ದು, ಕರುಳಿನ ಬ್ಯಾಕ್ಟೀರಿಯಾವನ್ನು ಪುನರ್ ಸ್ಥಾಪಿಸಿದೆ ಎಂದಿದ್ದಾರೆ ಲೇಖಕರು. (ಐಎಎನ್ಎಸ್)
ಇದನ್ನೂ ಓದಿ: ಕರುಳಿನ ಆರೋಗ್ಯ ಹೆಚ್ಚಿಸುತ್ತೆ ಬ್ರೊಕೊಲಿ..