ETV Bharat / sukhibhava

ಭಾರತದಲ್ಲಿ ನಿರಂತರವಾಗಿ ಹೆಚ್ತಿದೆ ಬ್ರೈನ್​ ಟ್ಯೂಮರ್​; ಶೇ 20ರಷ್ಟು ಪ್ರಕರಣ ಮಕ್ಕಳಲ್ಲಿ ಪತ್ತೆ

author img

By

Published : Jun 8, 2023, 4:13 PM IST

ಪ್ರತಿ ವರ್ಷ ಭಾರತದ 40,000- 50,000 ಜನರಲ್ಲಿ ಬ್ರೈನ್​ ಟ್ಯೂಮರ್ ಪ್ರಕರಣ ಪತ್ತೆಯಾಗುತ್ತಿರುವುದು ಆತಂಕಕಾರಿ.

Brain tumor cases are constantly increasing in India

ನವದೆಹಲಿ: ಭಾರತದಲ್ಲಿ ಬ್ರೈನ್​ ಟ್ಯೂಮರ್​ ಪ್ರಕರಣಗಳು ನಿರಂತರವಾಗಿ ಹೆಚ್ಚಳವಾಗುತ್ತಿವೆ. ಆತಂಕಕಾರಿ ವಿಚಾರ ಎಂದರೆ, ಮಕ್ಕಳಲ್ಲಿ ಕೂಡ ಶೇ 20ರಷ್ಟು ಪ್ರಕರಣಗಳು ಏರಿಕೆ ಕಂಡಿವೆ. ಈ ವಿಚಾರವನ್ನು ವಿಶ್ವ ಬ್ರೈನ್​ ಟ್ಯೂಮರ್​ ದಿನದ ಅಂಗವಾಗಿ ತಜ್ಞ ವೈದ್ಯರು ತಿಳಿಸಿದ್ದಾರೆ. ಜೂನ್​ 8ರಂದು ಜಗತ್ತಿನೆಲ್ಲೆಡೆ ವಿಶ್ವ ಬ್ರೈನ್​ ಟ್ಯೂಮರ್​ ದಿನವನ್ನಾಗಿ ಆಚರಿಸಲಾಗುತ್ತಿದೆ. ಟ್ಯೂಮರ್​ ಕುರಿತು ಸಾರ್ವಜನಿಕರಲ್ಲಿ ಅರಿವಿನ ಜೊತೆಗೆ ಶಿಕ್ಷಣ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುವುದು.

2020ರಲ್ಲಿ ಭಾರತೀಯರಲ್ಲಿ ಕಂಡು ಬರುತ್ತಿರುವ 10 ಸಾಮಾನ್ಯ ಟ್ಯೂಮರ್​ನಲ್ಲಿ ಬ್ರೈನ್​ ಟ್ಯೂಮರ್​ ಒಂದು. ದಿ ಇಂಟರ್​ನ್ಯಾಷನಲ್​ ಅಸೋಸಿಯೇಷನ್​ ಆಫ್​ ಕ್ಯಾನ್ಸರ್​ ರಿಜಿಸ್ಟ್ರಿಸ್​ (ಐಎಆರ್​ಸಿ) ವರದಿ ಅನುಸಾರ, ಪ್ರತಿ ವರ್ಷ ಭಾರತದಲ್ಲಿ 28 ಸಾವಿರ ಬ್ರೈನ್​ ಟ್ಯೂಮರ್​ ಪ್ರಕರಣಗಳು ವರದಿಯಾಗುತ್ತಿವೆ. ವಾರ್ಷಿಕವಾಗಿ 24 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ.

ದೇಶದಲ್ಲಿ ಬ್ರೈನ್​ ಟ್ಯೂಮರ್​ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ನಿರಂತವಾಗಿ ಎಲ್ಲ ವರ್ಗದ ಜನರಲ್ಲಿ ಏರುತ್ತಿದೆ. ಪ್ರತಿ ವರ್ಷ 40,000 ದಿಂದ 50,000 ಜನರಲ್ಲಿ ಪ್ರಕರಣ ಪತ್ತೆಯಾಗುತ್ತಿದೆ. ಇದರಲ್ಲಿ ಶೇ 20ರಷ್ಟು ಮಕ್ಕಳಲ್ಲಿ ಕಂಡು ಬರುತ್ತಿದೆ ಎಂದು ವೈದ್ಯ ಆದಿತ್ಯ ಗುಪ್ತಾ ತಿಳಿಸಿದ್ದಾರೆ.

ಭಾರತದಲ್ಲಿ ಕೇಂದ್ರ ನರ ವ್ಯವಸ್ಥೆಯ ಟ್ಯೂಮರ್​ ಪ್ರಕರಣಗಳು ಹೆಚ್ಚುತ್ತಿದೆ. ಪ್ರತಿ ಲಕ್ಷ ಜನರಲ್ಲಿ 5 ರಿಂದ 10 ರಷ್ಟು ಮಂದಿಯಲ್ಲಿ ಇದು ಕಾಣಿಸಿಕೊಳ್ಳುತ್ತಿದೆ. ಕೆಲವೇ ಜನರು ಇದರ ಬಗ್ಗೆ ತಿಳಿದಿದ್ದು, ಕೇವಲ ಶೇ 2ರಷ್ಟು ಮಂದಿ ಈ ಟ್ಯೂಮರ್​ಗಳು ಕ್ಯಾನ್ಸರ್​ ಆಗುತ್ತದೆ ಎಂಬ ಬಗ್ಗೆ ಮಾಹಿತಿ ಹೊಂದಿದ್ದಾರೆ ಎಂದು ಡಾ. ರವೀಂದ್ರ ಶ್ರೀವಾತ್ಸವ ಮಾಹಿತಿ ನೀಡಿದರು.

ಟ್ಯೂಮರ್​ಗಳನ್ನು ಆರಂಭದಲ್ಲಿ ಪತ್ತೆ ಮಾಡುವುದು ಕೂಡ ಕಷ್ಟಕರ. ವಾಕರಿಕೆ, ನಿರಂತರ ತಲೆನೋವು, ರೋಗಗ್ರಸ್ತವಾಗುವಿಕೆ, ದೃಷ್ಟಿ ಸಮಸ್ಯೆ ಮತ್ತು ಅರಿವಿನ ಬದಲಾವಣೆಗಳಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಅದರಲ್ಲೂ ಮೊದಲೆರಡು ಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಬ್ರೈನ್​ ಟ್ಯೂಮರ್​​ ಅಪಾಯದ ಅಂಶಗಳು ಟ್ಯೂಮರ್​ ಆಗಿ ಬದಲಾಗುತ್ತವೆ ಎಂದು ಡಾ.ಶಶಿ ಶೇಖರ್​ ಸಿಂಗ್​ ತಿಳಿಸಿದ್ದಾರೆ. ಬ್ರೈನ್​ ಟ್ಯೂಮರ್​ ಉಂಟಾಗಲು ನಿಖರ ಕಾರಣವೇನು ಎಂಬುದರ ಬಗ್ಗೆ ತಿಳಿದಿಲ್ಲ. ವಯಸ್ಕರಲ್ಲಿ ಗ್ಲಿಯೊಮಾಸ್ ಹೆಚ್ಚು ಸಾಮಾನ್ಯ. ಆದರೆ ಮೆಡುಲ್ಲೊಬ್ಲಾಸ್ಟೊಮಾಗಳು ಮಕ್ಕಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಟ್ಯೂಮರ್​ ಆಗಿದೆ. ಆನುವಂಶಿಕ ಮತ್ತು ಕುಟುಂಬದ ಆರೋಗ್ಯ ಇತಿಹಾಸ, ವಿಕಿರಣ ಚಿಕಿತ್ಸೆ ಅಥವಾ ಪರಮಾಣು ಅಪಘಾತಗಳಿಗೆ ಒಡ್ಡಿಕೊಳ್ಳುವಿಕೆಯಿಂದ ಇದು ಸಂಭವಿಸಬಹುದು. ಮಹಿಳೆಯರಿಗೆ ಹೋಲಿಕೆ ಮಾಡಿದಾಗ ಗ್ಲಿಯೊಮಾಸ್ ಪುರುಷರಲ್ಲಿ ಸಾಮಾನ್ಯ.

ಬ್ರೈನ್​ ಟ್ಯೂಮರ್​ ಬೆಳವಣಿಗೆಯಲ್ಲಿ ಕೆಲವು ಪರಿಸರ ಅಂಶಗಳು ವಹಿಸುವ ಪಾತ್ರವನ್ನು ಅರ್ಥಮಾಡಿಕೊಳ್ಳಲು ಸಂಶೋಧನೆ ನಡೆಯುತ್ತಿದೆ. ಕೆಲವು ಅಧ್ಯಯನಗಳು ಕೆಲವು ರಾಸಾಯನಿಕಗಳು ಅಥವಾ ವಿದ್ಯುತ್ಕಾಂತೀಯ ಕ್ಷೇತ್ರಗಳಿಗೆ ಒಡ್ಡಿಕೊಳ್ಳುವಿಕೆಗೆ ಬ್ರೈನ್​ ಟ್ಯೂಮರ್​ ಸಂಬಂಧವನ್ನು ತಿಳಿಸುತ್ತದೆ. ಆದರೂ ಈ ಬಗ್ಗೆ ಹೆಚ್ಚಿನ ಅಧ್ಯಯನ ಅವಶ್ಯಕತೆ ಇದೆ. ಬ್ರೈನ್​ ಟ್ಯೂಮರ್​ ಅಪಾಯವನ್ನು ಕಡಿಮೆ ಮಾಡಿ, ಮಿದುಳಿನ ಆರೋಗ್ಯ ಕಾಪಾಡಲು ಸಮತೋಲಿತ ಆಹಾರ, ವ್ಯಾಯಾಮ ಮತ್ತು ಉತ್ತಮ ನಿದ್ರೆ ಅವಶ್ಯಕತೆ. ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ಬ್ರೈನ್ ಟ್ಯೂಮರ್ ದಿನ: ರೋಗ ಲಕ್ಷಣ ತಿಳಿದ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.