ETV Bharat / sukhibhava

ಡಯಟ್​ ವೇಳೆ ಮಿದುಳಿನ ಸಂವಹನ ಬದಲಾಗುತ್ತಂತೆ: ಅಧ್ಯಯನ - ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ

ಹಸಿವಾದಾಗ ಮಿದುಳಿಗೆ ನರಗಳು ಬಲವಾದ ಸಂಕೇತ ನೀಡುತ್ತವೆ ಎಂದು ಹೊಸ ಅಧ್ಯಯನ ತಿಳಿಸುತ್ತದೆ.

brain-communication-changes-when-dieting-study

author img

By

Published : Mar 29, 2023, 11:09 AM IST

ಡಯಟ್​ ವೇಳೆ ಮಿದುಳಿನ ಸಂವಹನ ಬದಲಾಗುತ್ತದೆ ಎಂದು ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಮೆಟಾಬಾಲಿಸಮ್ ರಿಸರ್ಚ್ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ಸಂಶೋಧಕರು ತೋರಿಸಿದ್ದಾರೆ. ಇಲಿಗಳ ಮೇಲೆ ಈ ಕುರಿತು ಅಧ್ಯಯನ ನಡೆಸಲಾಗಿದೆ. ಹಸಿವಾದಾಗ ನರಗಳು ಬಲವಾದ ಸಂಕೇತ ನೀಡುತ್ತವೆ. ಇದರಿಂದಾಗಿ ನಾನು ಹೆಚ್ಚು ತಿನ್ನುತ್ತೇವೆ. ಹೆಚ್ಚು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ದೀರ್ಘಕಾಲದ ಅಧ್ಯಯನ ಡಯಟ್​ ಬಳಿಕ ತೂಕ ನಿರ್ವಹಣೆಗೆ ಸಹಾಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.

ಡಯಟ್​ನಲ್ಲಿ ಜನರು ಕೇವಲ ಅಲ್ಪಕಾಲದ ಪರಿಣಾಮವನ್ನು ಮುಖ್ಯವಾಗಿ ಗಮನಿಸುತ್ತಾರೆ. ನಾವು ದೀರ್ಘಕಾಲದಲ್ಲಿ ಮಿದುಳಿನ ಬದಲಾವಣೆಗಳನ್ನು ನೋಡುತ್ತೇವೆ ಎಂದು ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಮೆಟಾಬಾಲಿಸಮ್ ರಿಸರ್ಚ್ನ ಹೆನ್ನಿಂಗ್​ ಫೆನ್​ಸೆಲ್ಯೂ ತಿಳಿಸಿದ್ದಾರೆ. ಅಧ್ಯಯನದಲ್ಲಿ ಸಂಶೋಧಕರು ಇಲಿಗಳ ಮುಂದೆ ಆಹಾರ ಇಟ್ಟು ಯಾವ ಸರ್ಕ್ಯೂಟ್​ನಿಂದ ಬದಲಾವಣೆ ಆಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಇದಕ್ಕಾಗಿ ಅವರು ಹೈಪೋಥಾಲಮಸ್‌ನಲ್ಲಿರುವ ನ್ಯೂರಾನ್‌ಗಳ ಗುಂಪನ್ನು ಪರೀಕ್ಷಿಸಿದರು. ಇದು ದೇಹದಲ್ಲಿನ ಹಸಿವಿನ ಭಾವನೆಯನ್ನು ನಿಯಂತ್ರಿಸುತ್ತದೆ. ಇಲಿಗಳು ಡಯಟ್​ನಲ್ಲಿದ್ದಾಗ ಎಜಿಆರ್​ಪಿ ನ್ಯೂರಾನ್​ಗಳನ್ನು ಉತ್ತೇಜಿಸುವ ಸಂಕೇತಗಳನ್ನು ಕಳುಹಿಸುತ್ತವೆ. ಮಿದುಳಿನಲ್ಲಿ ನಡೆಯುವ ಈ ಬದಲಾವಣೆಯನ್ನು ಡಯಟ್​​ ಬಳಿಕವೂ ದೀರ್ಘಕಾಲದವರೆಗೆ ಕಂಡು ಹಿಡಿಯಬಹುದಾಗಿದೆ.

ಯೊಯೊ ಪರಿಣಾಮ ತಡೆ: ಎಜಿಆರ್​ಪಿ ನ್ಯೂರನ್​ ನ್ಯೂರನ್​ ಮಾರ್ಗಗಳನ್ನು ಪ್ರತಿಬಂಧಿಸುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಇದು ಯೋ-ಯೋ ಪರಿಣಾಮವನ್ನು ಕಡಿಮೆ ಮಾಡಲು ನಮಗೆ ಅವಕಾಶ ನೀಡುತ್ತದೆ ಎಂದು ಫೆನ್ಸೆಲಾವ್​ ತಿಳಿಸಿದ್ದಾರೆ. ಮಾನವರಲ್ಲಿ ನರಗಳ ಮಾರ್ಗಗಳನ್ನು ಬಲಪಡಿಸುವ ಕಾರ್ಯವಿಧಾನಗಳನ್ನು ಹೇಗೆ ನಿರ್ಬಂಧಿಸಬಹುದು ಎಂಬುದನ್ನು ಅಧ್ಯಯನದಲ್ಲಿ ಸಂಶೋಧಿಸಲಾಗುತ್ತಿದೆ. ಇಲಿಗಳು ಡಯಟ್​ನಲ್ಲಿ ಎಜಿಆರ್​ಪಿ ನ್ಯೂರಾನ್‌ಗಳನ್ನು ಉತ್ತೇಜಿಸುವ ನರಕೋಶದ ಮಾರ್ಗಗಳು ಹೆಚ್ಚಿದ ಸಂಕೇತಗಳನ್ನು ಕಳುಹಿಸುತ್ತವೆ. ಮೆದುಳಿನಲ್ಲಿನ ಈ ಆಳವಾದ ಬದಲಾವಣೆಯನ್ನು ಆಹಾರದ ನಂತರ ದೀರ್ಘಕಾಲದವರೆಗೆ ಕಂಡುಹಿಡಿಯಬಹುದು ಎಂದು ಸಂಶೋಧನೆಯಲ್ಲಿ ಸಾಧ್ಯವಾಯಿತು ಎಂದು ಅಧ್ಯಯನಕಾರರು ತಿಳಿಸಿದ್ದಾರೆ

ಈ ಎರಡು ನ್ಯೂರಾನ್‌ಗಳ ನಡುವಿನ ಭೌತಿಕ ನರಪ್ರೇಕ್ಷಕ ಸಂಪರ್ಕವು ಸಿನಾಪ್ಟಿಕ್ ಪ್ಲಾಸ್ಟಿಟಿ ಪ್ರಕ್ರಿಯೆಯಲ್ಲಿ ಡಯಟ್​ ಮತ್ತು ತೂಕ ನಷ್ಟದೊಂದಿಗೆ ಹೆಚ್ಚು ಹೆಚ್ಚಾಗುತ್ತದೆ. ಇದು ದೀರ್ಘಕಾಲೀನ ಅತಿಯಾದ ಹಸಿವಿಗೆ ಕಾರಣವಾಗುತ್ತದೆ. ಡಯಟ್​ ತೂಕ ನಿರ್ವಹಣೆಯಲ್ಲಿ ಹಸಿವಿನ ಚಾಲನೆಯ ದೀರ್ಘಾವಧಿಯ ಅನುಕೂಲಕ್ಕೆ ಆಧಾರ ವಾಗಬಹುದು. ಇದರ ಪರಿಣಾಮವಾಗಿ ಆಹಾರ ಸೇವನೆಗೆ ಪ್ರೇರಣೆ ನೀಡುತ್ತದೆ. ಇದರಿಂದ ನಷ್ಟವಾದ ತೂಕವನ್ನು ಮರಳಿ ಪಡೆಯುವುದು, ಇದು ಹೆಚ್ಚಿನ ಮಾನವ ಆಹಾರ ಕ್ರಮ ಪರಿಪಾಲಕರಲ್ಲಿ ಕಂಡುಬರುತ್ತದೆ. ನಂತರ ಕಡಿಮೆ ದೇಹದ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಔಷಧಿಗಳ ಭವಿಷ್ಯದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ. ಡಯಟ್​​ ನಂತರ ಕಡಿಮೆ ದೇಹದ ತೂಕದ ದೀರ್ಘಕಾಲೀನ ನಿರ್ವಹಣೆಯನ್ನು ಬೆಂಬಲಿಸಲು ಚಿಕಿತ್ಸಕ ತಂತ್ರಗಳನ್ನು ಅಭಿವೃದ್ಧಿಪಡಿಸಲು ಹೊಸ ತರ್ಕಗಳನ್ನು ಈ ಅಧ್ಯಯನ ಒದಗಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಸಸ್ಯಾಧಾರಿತ ಡಯಟ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.