ETV Bharat / sukhibhava

ನಿಮ್ಮ ಡಯಟ್​ನಲ್ಲಿ ಕಪ್ಪು ದ್ರಾಕ್ಷಿ ಬಳಸಿದ್ರೆ ಏನೆಲ್ಲ ಪ್ರಯೋಜನ?

ಕಪ್ಪು ದ್ರಾಕ್ಷಿಯನ್ನು ಜಾಮ್​, ಡೆಸಾರ್ಟ್​​ ಮತ್ತು ಇನ್ನು ಅನೇಕ ರೂಪದಲ್ಲಿ ಸೇವಿಸುತ್ತೇವೆ. ಆರೋಗ್ಯಕ್ಕೆ ಕಪ್ಪು ದ್ರಾಕ್ಷಿಯ ಪ್ರಯೋಜವೇನು ಎಂಬ ಮಾಹಿತಿ ಇಲ್ಲಿದೆ.

black grapes health benefits
black grapes health benefits
author img

By ETV Bharat Karnataka Team

Published : Dec 23, 2023, 1:58 PM IST

ಬೆಂಗಳೂರು: ಹಣ್ಣುಗಳಲ್ಲಿ ವಿಶೇಷವಾಗಿ ಸೆಳೆಯುವ ಹಣ್ಣು ದ್ರಾಕ್ಷಿ. ಹಸಿರು, ಕೆಂಪು ಮತ್ತು ಕಪ್ಪು ಬಣ್ಣದ ದ್ರಾಕ್ಷಿಗಳಲ್ಲಿ ತಮ್ಮದೇ ಆದ ವಿಶೇಷ ಗುಣವನ್ನು ಹೊಂದಿದೆ. ಗಾಢ ನೇರಳೆ ಬಣ್ಣದ ಕಪ್ಪು ದ್ರಾಕ್ಷಿ ಹುಳಿ ಸಿಹಿಯ ಮಿಶ್ರಣವಾಗಿರುತ್ತದೆ. ದ್ರಾಕ್ಷಿಯಲ್ಲಿ ಅಧಿಕ ಮಟ್ಟದ ಅಂತೊಸೈನಿನ್ಸ್​​ ಆಮ್ಲವೂ ಅದರ ಕಪ್ಪು, ಗಾಢ ನೇರಳೆ ಬಣ್ಣಕ್ಕೆ ಕಾರಣವಾಗಿದೆ. ಇದರ ಬಣ್ಣದ ಹೊರತಾಗಿ ದ್ರಾಕ್ಷಿ ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿದೆ, ಕಪ್ಪು ದ್ರಾಕ್ಷಿಯನ್ನು ಜಾಮ್, ಡೆಸಾರ್ಟ್​​ ಮತ್ತು ಇನ್ನು ಅನೇಕ ರೂಪದಲ್ಲಿ ಸೇವಿಸುತ್ತೇವೆ. ಈ ಕಪ್ಪು ದ್ರಾಕ್ಷಿಯು ಆರೋಗ್ಯಕ್ಕೆ ಹೇಗೆಲ್ಲ ಉತ್ತಮ ಎಂಬ ಮಾಹಿತಿ ಇಲ್ಲಿದೆ.

ಹೃದಯಕ್ಕೆ ಒಳ್ಳೆಯದು: ಕಪ್ಪು ದ್ರಾಕ್ಷಿಯಲ್ಲಿ ರೆಸವರ್ಟ್ರೊಲ್​ ಮತ್ತು ಕ್ವರ್ದೆಟಿನ್​ ಎಂಬ ಎಂಡು ಆ್ಯಂಟಿ ಆಕ್ಸಿಡೆಂಟ್​ ಇರುತ್ತದೆ. ಇದು ಹೃದಯದ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಸಹಾಯಕವಾಗಿದೆ. ಇದು ಎಲ್​ಡಿಎಲ್​ ಕೊಲೆಸ್ಟಾರ್​​ ಮಟ್ಟವನ್ನು ಕಾಪಾಡುತ್ತದೆ. ಕಪ್ಪು ದ್ರಾಕ್ಷಿಯಲ್ಲಿ ಅಧಿಕ ಮಟ್ಟದ ಪೊಟಾಶಿಯಂ ಮತ್ತು ಫೈಬರ್​​ ಇದ್ದು, ರಕ್ತದೊತ್ತಡವನ್ನು ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ.

ಮೈಗ್ರೇನ್​, ತಲೆನೋವಿಗೆ ಪರಿಹಾರ: ಪಿಎಂಎಸ್​​ ಲಕ್ಷಣದಂತಹ ಮೂಡ್​ ಸ್ವಿಂಗ್​​ ಮತ್ತು ತಲೆನೋವು ಅನುಭವಿಸುತ್ತಿದ್ದರೆ, ಕಪ್ಪು ದ್ರಾಕ್ಷಿ ಸಹಾಯ ಮಾಡುತ್ತದೆ. ಕಪ್ಪು ದ್ರಾಕ್ಷಿಯು ರಿಪೊಫ್ಲವಿನ್​ ಮೈಗ್ರೇನ್​ ಮತ್ತು ತಲೆನೋವು ಉಪಶಮನಕ್ಕೆ ಪ್ರಯೋಜನಕಾರಿಯಾಗಿದೆ.

ಚರ್ಮ ಮತ್ತು ಕೂದಲಿನ ರಕ್ಷಣೆ: ಕಪ್ಪು ದ್ರಾಕ್ಷಿಯಲ್ಲಿ ಅಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್​ ಮತ್ತು ವಿಟಮಿನ್​ ಇ ಇರುತ್ತದೆ. ಇದು ಕೂದಲಿನ ಬುಡದಲ್ಲಿನ ರಕ್ತದ ಪರಿಚಲನೆ ಹೆಚ್ಚಿಸುತ್ತದೆ. ಇದು ಕೂದಲಿನ ನಷ್ಟ ತಪ್ಪಿಸುತ್ತದೆ. ಅಲ್ಲದೇ, ಅಕಾಲಿಕ ನೆರ ಕೂದಲಾಗುವುದನ್ನು ತಡೆಯುತ್ತದೆ. ಜೊತೆಗೆ ಇದು ಚರ್ಮದ ಸುಕ್ಕು ನಿವಾರಿಸಿ, ಚರ್ಮದ ಕೋಶವನ್ನು ಪುನರ್​ಸ್ಥಾಪಿಸುತ್ತದೆ.

ಕಣ್ಣಿನ ದೃಷ್ಟಿಗೆ ಸಹಾಯ: ಕಪ್ಪು ದ್ರಾಕ್ಷಿಯಲ್ಲಿ ಕ್ಯಾರೊಟಿನಾಯ್ಡ್‌ಗಳು ಲುಟೀನ್ ಮತ್ತು ಜಿಯಾಕ್ಸಾಂಥಿನ್ ಸೇರಿವೆ, ಇದು ಕಣ್ಣಿನ ಆರೋಗ್ಯಕ್ಕೆ ಸಹಾಯಕಾರಿಯಾಗಿದೆ. ಕೆಲವು ಅಧ್ಯಯನಗಳ ಪ್ರಕಾರ ದ್ರಾಕ್ಷಿ ಆಕ್ಸಡೆವಿಟ್​​ ಹಾನಿಯನ್ನು ತಡೆದು, ಕುರುಡುತನವನ್ನು ತಪ್ಪಿಸುತ್ತದೆ.

ಕ್ಯಾನ್ಸರ್​ ವಿರುದ್ಧ ಹೋರಾಡುಲು ಸಹಾಯ: ಕಪ್ಪು ದ್ರಾಕ್ಷಿಯಲ್ಲಿ ಆ್ಯಂಟಿ ಮುಟಜೆನಿಕ್​ ಮತ್ತು ಆ್ಯಂಟಿಆಕ್ಸಿಡೆಂಟ್​​ ಕ್ಯಾನ್ಸರ್​ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿನ ಆ್ಯಂಟಿಆಕ್ಸಿಡೆಂಟ್​​ ಮತ್ತು ನಿರ್ದಿಷ್ಟ ಸಂಯುಕ್ತಗಳು ಮಲಿಗ್ನೆಂಟ್​ ಕೋವನ್ನು ಅಡ್ಡಿಪಡಿಸುತ್ತದೆ.

(ಎಎನ್​ಐ)

ಇದನ್ನೂ ಓದಿ: ನಿಮ್ಮ ಮಗು ತರಕಾರಿಗಿಂತ ಹೆಚ್ಚಾಗಿ ಹಣ್ಣು ಸೇವಿಸುತ್ತದೆಯೇ?; ಆರೋಗ್ಯಕ್ಕೆ ಒಳ್ಳೆಯದಾ? ಇಲ್ಲಿದೆ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.