ETV Bharat / sukhibhava

ತೃತೀಯ ಲಿಂಗಿಗಳ ಬಗ್ಗೆ ಆರೋಗ್ಯ ವೃತ್ತಿಪರರಲ್ಲಿ ಪಕ್ಷಪಾತ ಧೋರಣೆ: ಅಧ್ಯಯನ

ಅಧ್ಯಯನ ಫಲಿತಾಂಶದಲ್ಲಿ ಆರೋಗ್ಯ ವೃತ್ತಿಪರ ನರ್ಸ್​​ಗಳು ತೃತೀಯ ಲಿಂಗಿಗಳ ವಿಚಾರದಲ್ಲಿ ಹೆಚ್ಚು ಪೂರ್ವಗ್ರಹಿಕೆ ಹೊಂದಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

author img

By ETV Bharat Karnataka Team

Published : Nov 6, 2023, 11:26 AM IST

Biased attitudes among health professionals towards transgender people

ಲಂಡನ್​: ಆರೋಗ್ಯ ವೃತ್ತಿಪರರಲ್ಲದವರಿಗೆ ಹೋಲಿಕೆ ಮಾಡಿದಾಗ ಆರೋಗ್ಯ ವೃತ್ತಿಪರರು ಮತ್ತು ಅದರಲ್ಲೂ ವಿಶೇಷವಾಗಿ ನರ್ಸ್​​ಗಳು ತೃತೀಯ ಲಿಂಗಿಗಳ ಬಗ್ಗೆ ಹೆಚ್ಚಿನ ಪಕ್ಷಪಾತ ಧೋರಣೆ ಅಥವಾ ಪೂರ್ವಗ್ರಹ ಪೀಡಿತ ನಿಲುವು ಹೊಂದಿರುತ್ತಾರೆ ಎಂದು ಹೊಸ ಅಧ್ಯಯನ ಕಂಡುಕೊಂಡಿದೆ. ಜರ್ನಲ್​ ಹೆಲಿಯೊನಬ್​ನಲ್ಲಿ ಪ್ರಕಟವಾದ ಅಧ್ಯಯನ ವರದಿಯನುಸಾರ, ನರ್ಸಿಂಗ್​ ಆರೋಗ್ಯ ವೃತ್ತಿಪರರು ಮೇಲಿನ ಹೇಳಿಕೆಯನ್ನು ಸಮ್ಮತಿಸುತ್ತಾರೆ ಎಂಬುದು ಗಮನಾರ್ಹ.

ಒಬ್ಬ ವ್ಯಕ್ತಿ ತನ್ನ ಲಿಂಗವನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದು ನಾನು ನಂಬುತ್ತೇನೆ ಅಥವಾ ಪುರುಷ ಅಲ್ಲ, ಮಹಿಳೆಯೂ ಅಲ್ಲ ಎಂದು ಹೇಳುವ ವ್ಯಕ್ತಿಯಲ್ಲಿ ಏನಾದರು ತಪ್ಪಿದೆ ಎಂದು ನಂಬುತ್ತೇನೆ ಎಂಬ ವ್ಯಾಖ್ಯಾನವನ್ನು ಆರೋಗ್ಯ ವೃತ್ತಿಪರೇತರಿಗಿಂತ ಆರೋಗ್ಯ ವೃತ್ತಿಪರರು ನಂಬುತ್ತಾರೆ ಎಂದು ಅಧ್ಯಯನ ಹೇಳುತ್ತದೆ.

ತೃತೀಯ ಲಿಂಗಿಗಳ ಬಗ್ಗೆ ಪೂರ್ವಾಗ್ರಹ: ನಮ್ಮ ಅಧ್ಯಯನ ಫಲಿತಾಂಶವು ಆರೋಗ್ಯ ವೃತ್ತಿಪರ ನರ್ಸ್​​ಗಳು ತೃತೀಯ ಲಿಂಗಿಗಳ ವಿಚಾರದಲ್ಲಿ ಹೆಚ್ಚಿನ ಪೂರ್ವಗ್ರಹಿಕೆ ಹೊಂದಿರುತ್ತಾರೆ ಎಂದು ಲೇಖಕ ಎಕ್ಸೆಟರ್ ವಿಶ್ವವಿದ್ಯಾಲಯದ ಡರ್ವಿಶೈರ್​ ಮತ್ತು ಕೊವೆಂಟ್ರಿ ವಿಶ್ವವಿದ್ಯಾಲಯದ ಟಾಮಿಸ್​ ಕೆಯಿ ತಿಳಿಸಿದ್ದಾರೆ. ಈ ಸಂಶೋಧನೆಗೆ 11,996 ಮಂದಿ ವೃತ್ತಿಪರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಆರೋಗ್ಯೇತರ ವೃತ್ತಿಪರರು 22,445 ಮಂದಿ ಭಾಗಿಯಾಗಿದ್ದರು. ಆರೋಗ್ಯೇತರ ವೃತ್ತಿಪರರ 1,77,810 ಪ್ರತಿಕ್ರಿಯೆಗಳಿಗೆ ಹೋಲಿಸಲಾಗಿದೆ.

ಪರೀಕ್ಷೆಯ ಮೊದಲು ಮತ್ತು ನಂತರದಲ್ಲಿ ಪ್ರಶ್ನಾವಳಿಗಳ ಮೂಲಕ ನಡೆಸಲಾದ ಅಧ್ಯಯನದಲ್ಲಿ ಆರೋಗ್ಯ ವೃತ್ತಿಪರರು ತೃತೀಯ ಲಿಂಗಿಗಳನ್ನು ವೈಯಕ್ತಿಕವಾಗಿ ತಿಳಿದುಕೊಳ್ಳುವುದು ಕಡಿಮೆಯಾಗಿದೆ. ದಾದಿಯರು ಲೈಂಗಿಕತೆ ಮತ್ತು ಲಿಂಗ ಗುರುತನ್ನು ಸಂಯೋಜಿಸುವ ಸಾಧ್ಯತೆ ಹೆಚ್ಚು ಎಂದು ತೋರಿಸಿದೆ.

ಹೆಚ್ಚು ಜನರೊಂದಿಗೆ ಸಂವಹನ: ಅಧ್ಯಯನದಲ್ಲಿ ಭಾಗಿಯಾದವರಿಗೆ ತಮ್ಮ ಪ್ರತಿನಿತ್ಯದ ಜೀವನದಲ್ಲಿ ತೃತೀಯ ಲಿಂಗಿಗಳ ಜೊತೆಗಿನ ಸಂಬಂಧವನ್ನು ಕೇಳಲಾಗಿದೆ. ಆರೋಗ್ಯೇತರ ವೃತ್ತಿಪರರಿಗಿಂತ ಹೆಚ್ಚಾಗಿ ನರ್ಸ್​ ಮತ್ತು ನರ್ಸೇತರ ಆರೋಗ್ಯ ವೃತ್ತಿಪರರು ತೃತೀಯ ಲಿಂಗಿಗಳನ್ನು ಹೆಚ್ಚಾಗಿ ಭೇಟಿಯಾಗುತ್ತಾರೆ. ಆದರೆ, ತಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರಲ್ಲಿ ತೃತೀಯ ಲಿಂಗಿಗಳು ಕಡಿಮೆ ಎಂದು ವರದಿ ಮಾಡಿದ್ದಾರೆ.

ನರ್ಸ್​ ಮತ್ತು ನರ್ಸ್​ ಅಲ್ಲದ ಆರೋಗ್ಯ ವೃತ್ತಿಪರರು ಕೆಲಸದ ಸಂದರ್ಭದಲ್ಲಿ ತೃತೀಯ ಲಿಂಗಿಗಳೊಂದಿಗೆ ಸಂವಹನ ನಡೆಸುವುದು ಕೇಲವ ಕೆಲಸಕ್ಕೆ ಮಾತ್ರ ಸೀಮಿತ ಎಂದು ಅಧ್ಯಯನ ತಿಳಿಸಿದೆ ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್​ಎಸ್​​)

ಇದನ್ನೂ ಓದಿ: ತೂಕ ನಷ್ಟಕ್ಕೆ ಈ ಪಾನೀಯ ಸೇವಿಸಿ ಸಾಕು; ಆಮೇಲೆ ನೋಡಿ ಬದಲಾವಣೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.