ಬೆಂಗಳೂರು: ನಮ್ಮ ತಾಯಿ, ಗೃಹಿಣಿ, ಶಿಕ್ಷಕಿ, ಸ್ನೇಹಿತ ಮತ್ತು ವೈದ್ಯೆ ಹೀಗೆ ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಶಕ್ತಿ ಆಕೆಯಲ್ಲಿದೆ. ಆಕೆಯನ್ನು ನಮಗೆ ಸಕಲವೂ ಆಗಿರುತ್ತಾಳೆ ಎಂಬುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ತಾಯಿ ಮತ್ತು ಮಗುವಿನ ನಡುವಿನ ಸಂಬಂಧ ಸ್ವಾರ್ಥರಹಿತ, ಬಿಗಿಯಾದ, ಪ್ರೀತಿಯ ತಳಪಾಯುವಾಗಿರುತ್ತದೆ. ಮಗುವಿಗೆ ತಾಯಿ ಇಡೀ ಜೀವನವನ್ನೇ ಮುಡುಪಾಗಿಟ್ಟಾಗ ಆಕೆಯನ್ನು ಖುಷಿಯಾಗಿಡುವುದು ನಮ್ಮ ಜವಾಬ್ದಾರಿಯಾಗುತ್ತದೆ. ಆಕೆ ಮಾಡಿದಷ್ಟನ್ನು ನಾವು ಮಾಡಲು ಸಾಧ್ಯವಾಗದಿದ್ದರೂ, ಆಕೆಗೆ ಕೆಲವು ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ಆಕೆಯ ಬಗೆಗಿನ ಪ್ರೀತಿಯನ್ನ ತೋರ್ಪಡಿಸಬಹುದು. ಅದಕ್ಕೆ ಉತ್ತಮ ದಿನ ಎಂದರೆ ತಾಯಂದಿರ ದಿನ (ಮೇ 14). ಈ ದಿನದಂದು ಆಕೆಯ ಮನಸ್ಸನ್ನು ಮೆಚ್ಚಿಸಲು ಕೆಲವು ಉಡುಗೊರೆಗಳನ್ನು ನೀಡಬಹುದಾಗಿದ್ದು, ಅವುಗಳ ಪಟ್ಟಿ ಇಲ್ಲಿದೆ.
ಪ್ರೀತಿಯ ಹೂವು: ಹೂವಿನ ಬೊಕ್ಕೆ ನೀಡುವುದು ಎಂದಿಗೂ ಉತ್ತಮ ಆಲೋಚನೆ. ಇದರಲ್ಲಿ ಗುಲಾಬಿ, ಆರ್ಕಿಡ್, ಟ್ಯೂಲಿಪ್ ಮುಂತಾದ ವಿಧ ವಿಧವಾದ ಹೂವುಗಳನ್ನು ಆಯ್ಕೆ ಮಾಡಿ ಆಕೆಗೆ ಉಡುಗೊರೆ ನೀಡಬಹುದು. ಇದರಲ್ಲೂ ನಿಮಗೆ ಹಲವು ಆಯ್ಕೆಗಳು ಇದ್ದು, ಆಕೆಯ ಇಷ್ಟದಂತೆ ಕೂಡ ಹೂವುಗಳನ್ನು ಆರಿಸಬಹುದು. ಒಂದು ವೇಳೆ ನಿಮ್ಮ ತಾಯಿಗೆ ಯಾವ ಹೂವು ಇಷ್ಟ ಎಂದು ತಿಳಿಯದಿದ್ದರೆ ಗುಲಾಬಿ ಉತ್ತಮ ಆಯ್ಕೆ. ಕಾರಣ ಇದು ಪ್ರೀತಿಯ ಸಂಕೇತ.
ಪರ್ಸನಲೈಸ್ಡ್ ಕಾಫಿ ಮಗ್: ಆಕೆ ಪ್ರತಿನಿತ್ಯ ಉಪಯೋಗಿಸುವಂತೆ ನೀವು ಉಡುಗೊರೆ ನೀಡಬಯಸಿದರೆ ಇದು ಬೆಸ್ಟ್ ಆಗಿರಲಿದೆ. ಈ ಕಪ್ ಮೂಲಕ ಆಕೆಯ ಬಿಡುವಿಲ್ಲದ ಸಮಯದ ನಡುವೆಯೂ ಆಕೆ ತನ್ನಿಷ್ಟದ ಪಾನೀಯಗಳನ್ನು ಎಂಜಾಯ್ ಮಾಡುತ್ತಾರೆ. ಈ ವೇಳೆ ನೀವು ನೀಡಿದ ಕಪ್ನಲ್ಲಿ ಸಂದೇಶಗಳು, ಅಥವಾ ಇನ್ನಿತರ ಚಿತ್ರಗಳನ್ನು ಗಮನಿಸಿದಾಗ ಆಕೆ ಮನಸು ಉಲ್ಲಾಸಗೊಳ್ಳುತ್ತದೆ. ಆಕೆಗೆ ಪ್ರತಿ ನಿತ್ಯ ನಿಮ್ಮ ಪ್ರೀತಿಯನ್ನು ತಲುಪಿಸುವ ಮಾರ್ಗ ಕೂಡ ಇದಾಗಿರುತ್ತದೆ.
ಚಾಕೋಲೆಟ್: ಆಹಾರಗಳು ಅದರಲ್ಲೂ ವಿಶೇಷವಾಗಿ ಚಾಕೋಲೆಟ್ಗಳು ತಾಯಿಯ ಮನಸ್ಸನ್ನು ಗೆಲ್ಲುತ್ತದೆ. ಆಕೆಯ ಇಷ್ಟವಾದ ಚಾಕೋಲೆಟ್ಗಳನ್ನು ಆಯ್ಕೆ ಮಾಡಿ ನೀಡಿ. ಇದರಲ್ಲಿ ಆಕೆಯ ಆರೋಗ್ಯದ ಬಗ್ಗೆ ಕಾಳಜಿವಹಿಸಿದರೆ, ನಟ್ಸ್, ಕ್ಯಾರಾಮೆಲ್ನಂತಹ ಚಾಕೋಲೆಟ್ ಆಯ್ಕೆ ಮಾಡಬಹುದು. ಚಾಕೋಲೆಟ್ನಿಂದು ತುಂಬಿದ ಬ್ಯಾಸ್ಕೆಟ್ ಜೊತೆಗೆ ಗುಲಾಬಿ ಅಲಂಕಾರ ಆಕೆಯನ್ನು ಮನಸೋಲುವಂತೆ ಮಾಡುತ್ತದೆ.
ಕುಟುಂಬದ ಫೋಟೋ: ತಾಯಂದಿರಿಗೆ ಕುಟುಂಬವೇ ಎಲ್ಲಕ್ಕಿಂತ ಮೊದಲಾಗಿರುತ್ತದೆ. ಇಂತಹ ಕುಟುಂಬದ ಫೋಟೋವನ್ನು ಉತ್ತಮ ಸಂದೇಶದ ಮೂಲಕ ನೀಡಿದಾಗ ಆಕೆ ಮತ್ತಷ್ಟು ಸಂತಸ ಪಡುತ್ತಾರೆ. ಇದಕ್ಕಾಗಿ ಸಂದೇಶಗಳನ್ನು ಉತ್ತಮವಾಗಿ ಆಯ್ಕೆ ಮಾಡಬೇಕಾಗುತ್ತದೆ. ತಮ್ಮ ಮನೆಯ ಲಿವಿಂಗ್ ರೂಮ್, ಬೆಡ್ ರೂಮ್ ಅಥವಾ ಇನ್ನಿತರೆ ವಿಶೇಷ ಜಾಗದಲ್ಲಿ ಇಂತಹ ಫೋಟೋಗಳನ್ನು ಹಾಕುವುದು. ಮನೆ ಅಂದದ ಜೊತೆ ಕುಟುಂಬಸ್ಥರ ಅನ್ಯೋನ್ಯತೆಗೆ ಸಾಕ್ಷಿಯಾಗುತ್ತದೆ.
ಆಭರಣಗಳು: ತಾಯಂದಿರ ದಿನ ಮಾತ್ರವಲ್ಲದೇ, ಎಲ್ಲಾ ದಿನಕ್ಕೂ ಉಡುಗೊರೆ ನೀಡಲು ಉತ್ತಮ ಆಯ್ಕೆ ಆಭರಣವಾಗುತ್ತದೆ. ಆಕೆಗೆ ಇಷ್ಟವಾಗುವಂತಹ ಪೆಂಡೆಂಟ್, ಉಂಗುರ, ಹರಳಿನ ವಾಚ್, ಟ್ರೆಂಡಿ ಬ್ರೆಸ್ಲೆಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಾಗಿರುತ್ತದೆ. ಆಕೆಯ ಮುಂದೆ ಇಂತಹ ವಸ್ತುಗಳನ್ನು ಹಿಡಿದಾಗ ಆಕೆಗೆ ಈ ದಿನ ವಿಶೇಷವಾಗದೇ ಇರಲಾರದು.
ಇದನ್ನೂ ಓದಿ: ನೀವು 'ಆರೋಗ್ಯ ವಿಮೆ' ತೆಗೆದುಕೊಳ್ಳಲು ಬಯಸುವಿರಾ?: ಈ ಸಲಹೆಗಳನ್ನು ನೆನಪಿಡಿ