ನಾವು ನಮ್ಮ ಕೆಲಸದೊತ್ತಡದಲ್ಲಿ ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಸಮಸ್ಯೆ ಬಂದಾಗ ಮಾತ್ರ, ‘ಮೊದಲೇ ಹುಷಾರಾಗಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವೇ’ ಎಂದು ಚಿಂತಿಸುತ್ತೇವೆ. ಸಮಸ್ಯೆ ಬರುವ ಮುನ್ನವೇ ಎಚ್ಚೆತ್ತುಕೊಂಡರೆ ಹೇಗೆ?. ಹೃದಯದ ಆರೋಗ್ಯ ಕಾಪಾಡುವ ಉತ್ತಮ ಆಹಾರಗಳು ಯಾವುವು ನೋಡೋಣ.
ಮೊಸರು: ಮೊಸರು. ಅದರಲ್ಲೂ ಕೆನೆ ತೆಗೆದ ಹಾಲಿನಿಂದ ಮಾಡಿದ ಮೊಸರು ಹೃದಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಪೊಟ್ಯಾಶಿಯಂ, ಮೆಗ್ನೀಸಿಯಂ, ಕ್ಯಾಲ್ಸಿಯಂ ಮತ್ತು ಖನಿಜ ಲವಣಗಳಿದ್ದು ಹೃದಯಾಘಾತವನ್ನು ನಿಯಂತ್ರಿಸುತ್ತದೆ. ಅಧಿಕ ರಕ್ತದೊತ್ತಡವು ರಕ್ತನಾಳಗಳನ್ನು ಸಂಕುಚಿತಗೊಳಿಸುವ ಮೂಲಕ ಹೃದಯದ ಮೇಲೆ ಒತ್ತಡ ಹೆಚ್ಚಿಸುತ್ತದೆ. ಹಾಗಾಗಿ ಮೊಸರು ಮತ್ತು ಮಜ್ಜಿಗೆಯನ್ನು ಊಟದಲ್ಲಿ ಸೇರಿಸುವುದು ಒಳಿತು.
ಇದನ್ನೂ ಓದಿ: ಕಾಫಿ, ಚಹಾ ಸೇವನೆ ಮಾಡುವುದರಿಂದ ಸೊಂಟ ಮುರಿತದ ಅಪಾಯ ಕಡಿಮೆ ಮಾಡಬಹುದು.. ಅಧ್ಯಯನ
ವಾಲ್‌ನಟ್ಸ್: ವಾಲ್‌ನಟ್ಸ್‌ನಲ್ಲಿ ವಿಟಮಿನ್ಸ್, ಖನಿಜಗಳು, ಉತ್ತಮ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇದರಲ್ಲಿ ಸೋಡಿಯಂ ಕೂಡ ಕಡಿಮೆ ಇರುತ್ತದೆ. ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಸಹಾಯಕ. ದಿನಕ್ಕೆ ಅರ್ಧ ಕಪ್ ವಾಲ್‌ನಟ್ಸ್ ತಿನ್ನುವ ಜನರು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾದರೆ, ರಕ್ತನಾಳಗಳಲ್ಲಿ ಪ್ಲೇಕ್ ರಚನೆಯ ಅಪಾಯ ಕಡಿಮೆಯಾಗುತ್ತದೆ.
ಅವರೆಕಾಳು: ದ್ವಿದಳ ಧಾನ್ಯಗಳ ಜಾತಿಗೆ ಸೇರಿರುವ ಅವರೆಕಾಳಿನಲ್ಲಿ ಪೊಟ್ಯಾಶಿಯಂ, ಫೈಟೊಕೆಮಿಕಲ್ಸ್ ಹೆಚ್ಚಿವೆ. ಇದರ ಸೇವನೆಯಿಂದ ನೀರಿನಲ್ಲಿ ಕರಗುವ ಫೈಬರ್ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿಸದಂತೆ ತಡೆಯುತ್ತದೆ. ನೀರಿನಲ್ಲಿ ಕರಗದ ನಾರಿನಂಶವು ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಅಧಿಕ ತೂಕ ತಡೆಯುತ್ತದೆ. ಕೊಲೆಸ್ಟ್ರಾಲ್ ಮತ್ತು ಅಧಿಕ ತೂಕ ಎರಡೂ ಹೃದಯಕ್ಕೆ ಅಪಾಯಕಾರಿ ಅಂಶಗಳು.
ಇದನ್ನೂ ಓದಿ: ನಿಮ್ಮ ಫಿಟ್ನೆಸ್ ಹೆಚ್ಚಿಸಿಕೊಳ್ಳಬೇಕೇ: ಹಾಗಾದರೆ 5 ಆರೋಗ್ಯಕರ ಆಯುರ್ವೇದ ಪದಾರ್ಥಗಳನ್ನು ನೀವೂ ಟ್ರೈ ಮಾಡಿ
ಮೀನು: ಸಮುದ್ರ ಮೀನುಗಳಲ್ಲಿ ದೇಹಕ್ಕೆ ಹಾನಿಮಾಡುವ ಕೊಬ್ಬಿನಂಶ ಕಡಿಮೆ. ಹೃದಯ ಸ್ಥಿರವಾಗಿ ಬಡಿದುಕೊಳ್ಳಲು, ರಕ್ತದೊತ್ತಡ ಕಡಿಮೆ ಮಾಡಲು, ಉರಿಯೂತದ ಪ್ರಕ್ರಿಯೆಯನ್ನು ನಿಯಂತ್ರಣದಲ್ಲಿಡಲು, ರಕ್ತನಾಳಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಲು ಒಮೆಗಾ-3 ಕೊಬ್ಬಿನಂಶ ಅಧಿಕವಾಗಿದೆ. ಸಮುದ್ರ ಮೀನುಗಳಲ್ಲಿ ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಧಿಕವಾಗಿದ್ದು, ಹೃದಯಕ್ಕೆ ಒಳ್ಳೆಯದು.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪಿನ ಎಲೆಗಳು ಹಸಿರು ಬಣ್ಣ ಹೊಂದಿದ್ದು, ನೈಟ್ರೇಟ್ ಲಭ್ಯವಿದೆ. ಪಾಲಕ್ ಸೇವನೆಯಿಂದ ನಮ್ಮ ದೇಹವು ಇವುಗಳನ್ನು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ. ಇದು ಸರಾಗವಾದ ರಕ್ತ ಪರಿಚಲನೆ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಾಯಕ. ಪರಿಣಾಮವಾಗಿ, ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಪಾಲಕ್ ಫೈಟೊಕೆಮಿಕಲ್ಸ್ ಫೈಬರ್ ಗುಣಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲ, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಫೋಲೇಟ್ ಎಂಬ ಬಿ ವಿಟಮಿನ್ ಲಕ್ಷಣ ಹೊಂದಿದೆ.
ಇದನ್ನೂ ಓದಿ: ಕಡಿಮೆ ಕ್ಯಾಲೋರಿ ಪಾನೀಯ, ಆಹಾರಗಳಿಂದಲೂ ಸಂಭವಿಸಬಹುದು ಹೃದಯಾಘಾತ - ಪಾರ್ಶ್ವವಾಯು!