ETV Bharat / sukhibhava

ಅಧಿಕ ತೂಕ ಹೊಂದಿದ್ದರೆ ಸಾವಿನ ಅಪಾಯ ಶೇ 90 ರಷ್ಟು ಹೆಚ್ಚಾಗಬಹುದು: ಅಧ್ಯಯನ - ಕಡಿಮೆ ಮರಣದ ಅಪಾಯ

ಅತಿ ಹೆಚ್ಚು ಬೊಜ್ಜು ಅಥವಾ ಅಧಿಕ ತೂಕ ಹೊಂದಿರುವ ಜನರಿಗೆ ಮರಣದ ಅಪಾಯ ಹೆಚ್ಚು ಎಂದು ಹೊಸ ಸಂಶೋಧನೆಯೊಂದು ಹೇಳಿದೆ.

ಅಧಿಕ ತೂಕ ಹೊಂದಿದ್ದರೆ ಸಾವಿನ ಅಪಾಯ ಶೇ 90 ರಷ್ಟು ಹೆಚ್ಚಾಗಬಹುದು: ಅಧ್ಯಯನ
Obesity can raise risk of death by more than
author img

By

Published : Feb 26, 2023, 4:35 PM IST

ನ್ಯೂಯಾರ್ಕ್ : ಅಧಿಕ ತೂಕ ಅಥವಾ ಬೊಜ್ಜು ಈ ಹಿಂದೆ ನಂಬಿದ್ದಕ್ಕಿಂತ ಹೆಚ್ಚು ಆರೋಗ್ಯಕ್ಕೆ ಮಾರಕವಾಗಿದೆ ಎಂದು ತಿಳಿದು ಬಂದಿದೆ. ಹೊಸ ಅಧ್ಯಯನದ ಪ್ರಕಾರ ಇದು ಸಾವಿನ ಅಪಾಯವನ್ನು ಶೇಕಡಾ 22 ರಿಂದ 91 ರಷ್ಟು ಹೆಚ್ಚಿಸುತ್ತದೆ. ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುವ ಜನರು ಹೆಚ್ಚಿನ ಮರಣ ಪ್ರಮಾಣ ಹೊಂದಿದ್ದಾರೆ ಎಂದು ಅಧ್ಯಯನವು ತೋರಿಸಿದೆ. ಜರ್ನಲ್ ಪಾಪ್ಯುಲೇಶನ್ ಸ್ಟಡೀಸ್‌ನಲ್ಲಿ ಪ್ರಕಟವಾದ ಈ ಸಂಶೋಧನಾ ವರದಿಗಳು ಅಧಿಕ ತೂಕವು ಕೆಲ ವಿರಳ ಪ್ರಕರಣಗಳಲ್ಲಿ ಮಾತ್ರ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಈಗಾಗಲೇ ನಂಬಿಕೆಯಲ್ಲಿರುವ ಸಿದ್ಧಾಂತವನ್ನು ವಿರೋಧಿಸುತ್ತದೆ.

ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ (ಸಾಮಾನ್ಯವಾಗಿ ಅಧಿಕ ತೂಕದೊಂದಿಗೆ ಸಂಬಂಧಿಸಿರುವ) ಮರಣದ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಹೇಳಿದ ಹಲವಾರು ಅಧ್ಯಯನ ವರದಿಗಳಿಗೆ ಹೊಸ ವರದಿಯು ವಿರುದ್ಧವಾಗಿದೆ.

ಸಾಮಾನ್ಯವಾಗಿ ಬಿಎಂಐ ತೀರಾ ಹೆಚ್ಚಿನ ಮಟ್ಟ ತಲುಪುವವರೆಗೂ ಅದರಿಂದ ಮರಣದ ಅಪಾಯ ಇರುವುದಿಲ್ಲ ಮತ್ತು ಅಧಿಕ ತೂಕ ಹೊಂದುವುದರಿಂದ ಕೆಲ ಪ್ರಯೋಜನಗಳೂ ಇವೆ ದಿಂದ ಕೆಲವು ಬದುಕುಳಿಯುವ ಪ್ರಯೋಜನಗಳಿವೆ ಎಂಬುದು ಈ ಹಿಂದಿನಿಂದಲೂ ತಿಳಿದಿರುವ ಜ್ಞಾನವಾಗಿದೆ ಎಂದು ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಲೇಖಕ ರಯಾನ್ ಮಾಸ್ಟರ್ಸ್ ಹೇಳಿದರು. ವೈದ್ಯರು ಮತ್ತು ವಿಜ್ಞಾನಿಗಳು ಸಾಮಾನ್ಯವಾಗಿ ಆರೋಗ್ಯದ ಅಳತೆಗೋಲಾಗಿ ಬಳಸುವ ಬಿಎಂಐ, ತೂಕ ಮತ್ತು ಎತ್ತರವನ್ನು ಆಧರಿಸಿದೆ ಮತ್ತು ದೇಹದ ಸಂಯೋಜನೆಯಲ್ಲಿನ ವ್ಯತ್ಯಾಸಗಳಿಗೆ ಅಥವಾ ವ್ಯಕ್ತಿಯು ಎಷ್ಟು ಸಮಯದವರೆಗೆ ಅಧಿಕ ತೂಕ ಹೊಂದಿದ್ದಾನೆ ಎಂಬುದನ್ನು ಅವರು ಗಮನಿಸುವುದಿಲ್ಲ ಎಂಬುದನ್ನು ರಯಾನ್ ಮಾಸ್ಟರ್ಸ್ ಉಲ್ಲೇಖಿಸಿದ್ದಾರೆ.

ಇದು ಒಂದು ಸಮಯದಲ್ಲಿ ಒಂದು ಸ್ಥಿತಿಯ ಪ್ರತಿಬಿಂಬವಾಗಿದೆ ಅಷ್ಟೇ. ಇದು ದೇಹದ ಎಲ್ಲಾ ಸೂಕ್ಷ್ಮ ವ್ಯತ್ಯಾಸಗಳು ಮತ್ತು ವಿಭಿನ್ನ ಗಾತ್ರಗಳು ಮತ್ತು ಆಕಾರಗಳನ್ನು ಸಂಪೂರ್ಣವಾಗಿ ಗುರುತಿಸುವುದಿಲ್ಲ ಎಂದು ಅವರು ತಿಳಿಸಿದರು. ಆದರೆ ಈ ಎಲ್ಲ ಸೂಕ್ಷ್ಮ ವ್ಯತ್ಯಾಸಗಳನ್ನು ಪರಿಗಣಿಸಿದಾಗ ಏನಾಗುತ್ತದೆ ಎಂಬುದನ್ನು ತಿಳಿಯಲು ಮಾಸ್ಟರ್ಸ್ 4,468 ಸಾವುಗಳು ಸೇರಿದಂತೆ 17,784 ಜನರ ಡೇಟಾ ಪರಿಶೀಲಿಸಿದರು. ಆರೋಗ್ಯಕರ ತೂಕ ಎಂದು ನಿರೂಪಿಸಲಾದ ಜನರಲ್ಲಿ ಶೇಕಡಾ 20 ರಷ್ಟು ಜನ ಹಿಂದಿನ ದಶಕದಲ್ಲಿ ಅಧಿಕ ತೂಕ ಅಥವಾ ಬೊಜ್ಜು ಪೀಡಿತ ವರ್ಗದಲ್ಲಿದ್ದರು ಎಂಬುದನ್ನು ಅವರು ಕಂಡುಹಿಡಿದರು. ಇವರನ್ನು ಪ್ರತ್ಯೇಕಿಸಿ ನೋಡಿದಾಗ ಈ ಗುಂಪು ತೂಕ ಸ್ಥಿರವಾಗಿರುವ ವರ್ಗದಲ್ಲಿರುವವರಿಗಿಂತ ಗಮನಾರ್ಹ ಪ್ರಮಾಣದಲ್ಲಿ ಕೆಟ್ಟ ಆರೋಗ್ಯ ಪ್ರೊಫೈಲ್ ಅನ್ನು ಹೊಂದಿತ್ತು.

ಒಟ್ಟಾರೆಯಾಗಿ ಬಿಎಂಐ ಸಂಬಂಧಿತ ಹಲವಾರು ಅಧ್ಯಯನಗಳು ಗಮನಾರ್ಹವಾಗಿ ಪಕ್ಷಪಾತತನದಿಂದ ಪ್ರಭಾವಿತವಾಗಿವೆ ಎಂದು ಸಂಶೋಧನೆಗಳು ದೃಢಪಡಿಸುತ್ತವೆ. ಹಿಂದಿನ ಅಧ್ಯಯನಗಳ ಪ್ರಕಾರ, ಅಧಿಕ ತೂಕ ವರ್ಗವು (BMI 25-30) ಆಶ್ಚರ್ಯಕರವಾಗಿ ಕಡಿಮೆ ಮರಣದ ಅಪಾಯವನ್ನು ಹೊಂದಿದೆ. ಸ್ಥೂಲಕಾಯ ವರ್ಗದಲ್ಲಿರುವವರು (30-35), ಆರೋಗ್ಯಕರ ವರ್ಗ (18.5-25) ಎಂದು ಕರೆಯಲ್ಪಡುವ ವರ್ಗಕ್ಕಿಂತ ಕಡಿಮೆ ಅಥವಾ ಹೆಚ್ಚಿನ ಅಪಾಯವನ್ನು ಹೊಂದಿರುವುದಿಲ್ಲ. ಕಡಿಮೆ ತೂಕ (18.5 ಕ್ಕಿಂತ ಕಡಿಮೆ) ಮತ್ತು ಅತಿ ಹೆಚ್ಚಿನ ಬೊಜ್ಜು (35 ಮತ್ತು ಹೆಚ್ಚಿನ) ಎರಡೂ ಸಾವಿನ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಈ ಹಿಂದಿನ ಬಹುತೇಕ ಅಧ್ಯಯನಗಳು ಹೇಳಿವೆ.

ಆದಾಗ್ಯೂ ಕಡಿಮೆ ಬಿಎಂಐ (18.5-22.5) ಹೊಂದಿರುವವರು ಕಡಿಮೆ ಮರಣದ ಅಪಾಯವನ್ನು ಹೊಂದಿರುತ್ತಾರೆ ಎಂದು ಮಾಸ್ಟರ್ಸ್ ಕಂಡುಕೊಂಡಿದ್ದಾರೆ. ಹಿಂದಿನ ಸಂಶೋಧನೆಗೆ ವಿರುದ್ಧವಾಗಿ, ಅಧ್ಯಯನವು ಕಡಿಮೆ ತೂಕ ವರ್ಗಕ್ಕೆ ಯಾವುದೇ ಗಮನಾರ್ಹವಾದ ಮರಣದ ಅಪಾಯ ಇರುವುದಿಲ್ಲ ಎಂದು ಕಂಡುಹಿಡಿದಿದೆ. ಬಿಎಂಐ ಆಧಾರದ ಮೇಲೆ ತೀರ್ಮಾನಗಳನ್ನು ಮಾಡುವಾಗ ಅತ್ಯಂತ ಜಾಗರೂಕರಾಗರಬೇಕೆಂದು ಸಂಶೋಧನೆಯು ವಿಜ್ಞಾನಿಗಳನ್ನು ಎಚ್ಚರಿಸುತ್ತದೆ ಎಂದು ಮಾಸ್ಟರ್ಸ್ ಹೇಳಿದರು.

ಇದನ್ನೂ ಓದಿ: ಪ್ರತಿನಿತ್ಯ ಮಿಶ್ರ ಒಣಹಣ್ಣು ಸೇವನೆಯಿಂದ ಹೃದಯರಕ್ತನಾಳ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.