ಲಖನೌ: ಹೃದಯ ವೈಫಲ್ಯ ಎಂಬುದು ಜಾಗತಿಕ ಸಾವಿನ ಸಂಖ್ಯೆಯಲ್ಲಿ ಪ್ರಮುಖ ಕಾರಣವಾಗಿದೆ. ಹೃದಯ ವೈಫಲ್ಯಕ್ಕೆ ವಿವಿಧ ಕಾರಣಗಳನ್ನು ತಜ್ಞರು ಈಗಾಗಲೇ ಪಟ್ಟಿ ಮಾಡಿದ್ದಾರೆ. ಈ ಹೃದಯ ವೈಫಲ್ಯವಾಗುವ ಮುನ್ನ ಇದು ಅನೇಕ ಚಿಹ್ನೆಗಳನ್ನು ಮತ್ತು ಅಪಾಯದ ಎಚ್ಚರಿಕೆಗಳನ್ನ ನೀಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ವೈದ್ಯಕೀಯ ತಜ್ಞರು ತಿಳಿಸುವಂತೆ, ಜನರು ಜೀವನದಲ್ಲಿ ಸಾಮಾನ್ಯ ಆಯಾಸವನ್ನು ಮತ್ತು ಪಾದದಲ್ಲಿ ಊತ ಆಗುವುದನ್ನು ನಿರ್ಲಕ್ಷ್ಯಿಸುತ್ತಾರೆ ಎಂದಿದ್ದಾರೆ.
ಹಿರಿಯ ಹೃದ್ರೋಗ ತಜ್ಞ ಡಾ ನಕುಲ್ ಸಿನ್ಹಾ ಹೇಳುವಂತೆ, ತೊಂದರೆಗೆ ಒಳಗಾಗುವ ಮುನ್ನ ಹೃದಯವೂ ನಿಮ್ಮ ಗಮನಕ್ಕೆ ಬರಲಿ ಎಂದು ಅನೇಕ ಚಿಹ್ನೆಗಳನ್ನು ನೀಡುತ್ತದೆ. ಇದಕ್ಕೆ ಪ್ರತಿಕ್ರಿಯಿಸದೇ ಇರುವುದು ದೊಡ್ಡ ತಪ್ಪು. ಈ ರೀತಿಯ ಚಿಹ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಇವು ಆರಂಭಿಕ ಹಂತದ ಚಿಹ್ನೆಗಳು: ಆಯಾಸ, ಉಸಿರಾಡಲು ಕಷ್ಟ, ಸಾಮಾನ್ಯ ಕೆಲಸ ಮಾಡಲು ಆಗದಿರುವ ನಿಶಕ್ತಿ, ಯಾವುದೇ ಕಾರಣವಿಲ್ಲದೇ ತೂಕದ ಹೆಚ್ಚಳ, ಪಾದದಲ್ಲಿ ಊಟ ಇದು ಹೃದಯ ವೈಫಲ್ಯಕ್ಕೆ ಕಾರಣವಾಗುವ ಆರಂಭಿಕ ಲಕ್ಷಣಗಳಾಗಿದೆ. ಹೃದಯಘಾತ ತಕ್ಷಣಕ್ಕೆ ಸಂಭವಿಸಿದರೂ, ಹೃದಯದ ತೊಂದರೆ ಕ್ರಮೇಣವಾಗಿ ಉಲ್ಬಣಗೊಳ್ಳುತ್ತದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಬಹುದಾಗಿದೆ.
ಮತ್ತೊಬ್ಬ ಪ್ರಮುಖ ಹೃದಯ ತಜ್ಞ ಡಾ ಮನ್ಸೂರ್ ಹಸನ್ ಹೇಳುವಂತೆ, ಹೃದಯ ವೈಫಲ್ಯಕ್ಕೆ ಪ್ರಮುಖ ಕಾರಣ ಯಾವಾಗ ಹೃದಯ ಸರಿಯಾಗಿ ರಕ್ತ ಪರಿಚಲನೆ ಮಾಡಲು ಸಾಧ್ಯವಾಗದೇ ಹೋದಾಗ. ಕಂಜೆಸ್ಟಿವ್ ಹೃದಯ ವೈಫಲ್ಯಕ್ಕೆ ಇಲ್ಲಿಯವರೆಗೆ ಯಾವುದೇ ಗುಣ ಲಕ್ಷಣ ಇಲ್ಲ. ಈ ಹಿನ್ನೆಲೆ ಕೆಲವು ದಿನ ಅಥವಾ ವಾರಗಳಿಂದ ಈ ರೀತಿಯ ಗುಣ ಲಕ್ಷಣ ಕಂಡು ಬಂದರೆ, ತಕ್ಷಣಕ್ಕೆ ವೈದ್ಯರ ಸಂಪರ್ಕಕ್ಕೆ ಒಳಗಾಗಬೇಕು.
ವೈದ್ಯರ ಬಗ್ಗೆ ಆರೋಗ್ಯದ ಇತಿಹಾಸ ತಿಳಿಸಿದೆ: ವೈದ್ಯರ ಬಳಿ ಈ ಹಿಂದಿನ ವೈದ್ಯಕೀಯ ದಾಖಲಾತಿಗಳನ್ನು ಹೇಳಬೇಕು. 10 ವರ್ಷದ ಹಿಂದೆ ಒಂದು ಗಂಟೆ ಎದೆ ನೋವಿನಿಂದ ಹಿಡಿದು ಹೃದಯಕ್ಕೆ ಹಾಕಿರುವ ಸ್ಟಂಟ್ ಸೇರಿದಂತೆ ಪ್ರತಿಯೊಂದನ್ನು ತಿಳಿಸಬೇಕು. ಹೃದಯ ಸಮಸ್ಯೆಗಳ ಕುರಿತು ಮೊದಲೇ ಪತ್ತೆ ಮಾಡಿ, ಚಿಕಿತ್ಸೆ ನೀಡುವುದು ಉತ್ತಮ ಮಾರ್ಗವಾಗಿದೆ.
ಡಾ ಸಿನ್ಹಾ ಹೇಳುವಂತೆ, ಹೃದಯ ಸಮಸ್ಯೆ ಮೊದಲ ಹಂತದ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಮೂರನೇ ಹಂತವೂ ದೊಡ್ಡ ಸವಾಲನ್ನು ಹೊಂದಿರುತ್ತದೆ. ಈ ಮೊದಲು 65 ವರ್ಷ ಮೇಲ್ಪಟ್ಟವರಲ್ಲಿ ಹೃದಯ ವೈಫಲ್ಯಕ್ಕೆ ಒಳಗಾದರೆ ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಇದೀಗ ಜಢ ಜೀವನಶೈಲಿ, ಅಧಿಕ ಮಾಲಿನ್ಯ, ಒತ್ತಡದಿಂದಾಗಿ 60 ಮತ್ತು 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಇಂದು ಈ ಹೃದಯ ವೈಫಲ್ಯಕ್ಕೆ ಒಳಗಾಗುತ್ತಿದ್ದಾರೆ.
ಇದರ ಗಮನಾರ್ಹ ಪರಿಣಾಮದ ಹೊರತಾಗಿ, ಹೃದಯ ವೈಫಲ್ಯವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಈ ಪರಿಸ್ಥಿತಿಯನ್ನು ಪತ್ತೆ ಮಾಡದೇ ಇರುವುದರ ಹಿನ್ನೆಲೆ ಹೃದಯ ವೈಫಲ್ಯದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಏರಿಕೆ ಕಂಡಿದೆ.
ಇದನ್ನೂ ಓದಿ: ಹಠಾತ್ ಸಂಭವಿಸುವ ಹೃದಯಸ್ತಂಭನ.. ಸಾವಿನ ಮನೆ ಬಾಗಿಲು ತಲುಪಿ ಬಂದವರ ಅನುಭವದ ಅಧ್ಯಯನ ಬಹಿರಂಗ