ETV Bharat / sukhibhava

ಶ್ವಾಸಕೋಶ ರೋಗಿಗಳಿಗೆ ಬೀಟ್​ರೂಟ್​ ಜ್ಯೂಸ್​ನ ಪೂರಕಗಳು ಪ್ರಯೋಜನಕಾರಿ: ಅಧ್ಯಯನ - ಉಸಿರಾಟ ಸಮಸ್ಯೆ ಮತ್ತು ದೈಹಿಕ ಕ್ರಿಯೆ

ಸಿಒಪಿಡಿಯನ್ನು ಸಂಪೂರ್ಣವಾಗಿ ಉಪಶಮನ ಮಾಡಲು ಸಾಧ್ಯವಿಲ್ಲ. ಆದರೆ, ಈ ಪರಿಸ್ಥಿತಿ ಹೊಂದಿರುವ ರೋಗಿಗಳು ಬದುಕಿರುವಷ್ಟು ಕಾಲ ಹೃದಯ ರಕ್ತನಾಳದ ಸಮಸ್ಯೆ ಅಪಾಯವನ್ನು ಕಡಿಮೆ ಮಾಡಬಹುದು.

Beetroot juice supplement helps for chronic obstructive pulmonary disease

author img

By ETV Bharat Karnataka Team

Published : Dec 20, 2023, 9:34 PM IST

ಲಂಡನ್​​​: ದೀರ್ಘಕಾಲದ ಬ್ರಾಂಕಾಯೈಟಿಸ್​​ ಮತ್ತು ಎಂಫೆಸೆಮ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ (ಸಿಒಪಿಡಿ) ಸಮಸ್ಯೆಗಳಿಂದ ಜಾಗತಿಕವಾಗಿ 400 ಮಿಲಿಯನ್​ ಜನ ಬಳಲುತ್ತಿದ್ದಾರೆ. ಇದು ಜನರಲ್ಲಿ ಉಸಿರಾಟ ಸಮಸ್ಯೆ ಮತ್ತು ದೈಹಿಕ ಕ್ರಿಯೆಗೆ ಅಡ್ಡಿ ಉಂಟುಮಾಡುತ್ತದೆ. ಅಲ್ಲದೇ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇಂತಹ ಸಮಸ್ಯೆಗೆ ಒಳಗಾದವರು 12 ವಾರಗಳ ಕಾಲ ಪ್ರತಿನಿತ್ಯದ ಬೀಟ್​ರೂಟ್​ ಜ್ಯೂಸ್​ ಸೇವಿಸುವುದರಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಸಂಶೋಧನೆ ತಿಳಿಸಿದೆ.

ಯುರೋಪಿಯನ್​ ರೆಸ್ಪಿರೆಟರಿ ಜರ್ನಲ್​ನಲ್ಲಿ ಈ ಕುರಿತು ವರದಿ ಪ್ರಕಟಿಸಲಾಗಿದೆ. ಬೀಟ್​ರೂಟ್​ ಜ್ಯೂಸ್‌ನಲ್ಲಿ ಅಧಿಕ ಮಟ್ಟದ ನೈಟ್ರೆಟ್​​​ ಪೂರಕ ಇದ್ದು, ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಅಥ್ಲಿಟ್​​ಗಳಿಗೆ ತಮ್ಮ ಕ್ರೀಡಾ ಚಟುವಟಿಕೆಯಲ್ಲಿ ಉತ್ತಮ ನೈಟ್ರೆಟ್​ ಪೂರಕದ ಮೂಲದಂತೆ ಬಳಕೆ ಮಾಡಬಹುದು. ಅಲ್ಲದೇ ಇದು ರಕ್ತದೊತ್ತಡ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ ಎಂದು ಯುಕೆಯ ಲಂಡನ್​ ಇಂಪಿರಿಯಲ್​ ಕಾಲೇಜ್​ನ ಪ್ರೊ.ನಿಕೊಲಾಸ್​​ ಹಾಪ್ಕಿನ್ಸ್​​ ತಿಳಿಸಿದ್ದಾರೆ.

ರಕ್ತದಲ್ಲಿನ ಹೆಚ್ಚಿನ ಮಟ್ಟದ ನೈಟ್ರೆಟ್​​ಗಳು ನೈಟ್ರಿಕ್​ ಆಮ್ಲದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈ ರಾಸಾಯನಿಕವು ರಕ್ತನಾಳಗಳು ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಇದು ಸ್ನಾಯುಗಳ ಸಾಮರ್ಥ್ಯ ಹೆಚ್ಚಿಸುತ್ತದೆ. ಸಿಒಪಿಡಿ ಹೊಂದಿರುವ 81 ಜನರ ಮೇಲೆ ಅಧ್ಯಯನ ನಡೆಸಲಾಯಿತು. ಇವರಲ್ಲಿ ಸಿಸ್ಟೊಲಿಕ್​ ರಕ್ತದೊತ್ತಡ ಮಾಪನ ಮಾಡಿದಾಗ 130ಎಂಎಂಎಚ್​ಜಿಗಿಂತ ಹೆಚ್ಚಿತು. ಈ ಸಿಸ್ಟೊಲಿಕ್​ ರಕ್ತದೊತ್ತಡವು ರಕ್ತದೊತ್ತಡ ಮಟ್ಟ ಹೆಚ್ಚಲು ಕಾರಣ ಇದು 90 ಮತ್ತು 120 ಎಂಎಂಎಚ್​ಜಿ ನಡುವಿರಬೇಕು.

ಈ ಅಧ್ಯಯನದಲ್ಲಿ ರೋಗಿಗಳು 6 ನಿಮಿಷ ನಡೆಯುವಾಗ ರಕ್ತದೊತ್ತಡ ಪರಿಶೀಲನೆ ಮಾಡಲಾಗಿದೆ. ಈ ವೇಳೆ ನೈಟ್ರೆಟ್​ ಸಮೃದ್ಧ ಬೀಟ್​​ರೂಟ್​ ನೀಡಲಾಗಿದೆ. ಮತ್ತೊಂದು ಗುಂಪಿಗೆ ಪ್ಲಸೆಬೊ ನೀಡಲಾಗಿದೆ. ಪ್ಲಸೆಬೊ ಗುಂಪಿಗೆ ಹೋಲಿಸಿದಾಗ ಬೀಟ್​ರೊಟ್​ ಸೇವಿಸುವವರಲ್ಲಿ ಸಿಸ್ಟೋಲಿಕ್​ ರಕ್ತದೊತ್ತಡ 4.5 ಎಂಎಂಎಚ್​ಜಿ ಕಡಿಮೆಯಾಗಿದೆ. ಅಲ್ಲದೇ ಹೆಚ್ಚವರಿಯಾಗಿ 6 ನಿಮಿಷದ ನಡಿಗೆ ಕಂಡುಬಂದಿದೆ.

ಸಿಒಪಿಡಿಯನ್ನು ಸಂಪೂರ್ಣವಾಗಿ ಉಪಶಮನ ಮಾಡಲು ಸಾಧ್ಯವಿಲ್ಲ. ಆದರೆ, ಈ ಪರಿಸ್ಥಿತಿ ಹೊಂದಿರುವ ರೋಗಿಗಳು ಬದುಕಿರುವಷ್ಟು ಕಾಲ ಹೃದಯ ರಕ್ತನಾಳದ ಸಮಸ್ಯೆ ಅಪಾಯ ಕಡಿಮೆ ಮಾಡಬಹುದು ಎಂದು ಸ್ವೀಡನ್​ನ ಕರೊಲಿನ್ಸಕ ಇನ್ಸುಟಿಟ್ಯೂನ ಪ್ರೊ.ಅಪೊಸ್ಟೊಲೊಸ್​ ಬೊಸ್ಸೊಯ್ಸ್​​ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಇಂದು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನ: ಏನಿದರ ಮಹತ್ವ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.