ನವದೆಹಲಿ: ಧೂಮಪಾನದಿಂದ ಆಗುವ ಅನಾರೋಗ್ಯದ ಬಗ್ಗೆ ಬಹುತೇಕರಿಗೆ ತಿಳಿವಳಿಕೆ ಇದೆ. ಈ ಧೂಮಪಾನದಲ್ಲಿನ ತಂಬಾಕಿನಲ್ಲಿ ನೂರಾರು ರಾಸಾಯನಿಕಗಳಿರುತ್ತವೆ. ಅದು ಕ್ಯಾನ್ಸರ್ಗೆ ಕಾರಣವಾಗುತ್ತದೆ. ಧೂಮಪಾನ ಹೃದಯದ ಸಮಸ್ಯೆ ಮತ್ತು ದೀರ್ಘಕಾಲದ ಉಸಿರಾಟದ ಸಮಸ್ಯೆಗೆ ಕೂಡ ಕಾರಣವಾಗುತ್ತದೆ. ಶೇ 50ರಷ್ಟು ಕ್ಯಾನ್ಸರ್ ಸಂಬಂಧಿಸಿದ ಸಾವುಗಳಲ್ಲಿ ತಂಬಾಕಿನ ಬಳಕೆ ಪ್ರಮುಖ ಕಾರಣವಾಗಿದೆ. ಬಾಯಿಯ ಕ್ಯಾನ್ಸರ್ ಭಾರತದಲ್ಲಿ ಪ್ರಚಲಿತದಲ್ಲಿರುವ ಕ್ಯಾನ್ಸರ್ನಲ್ಲಿ ಇದು ಪ್ರಮುಖವಾಗಿದ್ದು, ಇತರ ಕ್ಯಾನ್ಸರ್ಗಳಲ್ಲಿ ಇದರ ಪ್ರಮಾಣ ಶೇ 30ರಷ್ಟಿದೆ. ಭಾರತದಲ್ಲಿ ಬಾಯಿಯ ಕ್ಯಾನ್ಸರ್ಗೆ ಕಾರಣ ತಂಬಾಕು ಬಳಕೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಧೂಮಪಾನದ ವೇಳೆ ತಂಬಾಕಿನಲ್ಲಿನ ರಾಸಾಯನಿಕ ಬಾಯಲ್ಲಿನ ಟಿಶ್ಯೂ ಮೇಲೆ ಹಾನಿ ಮಾಡುವುದರಿಂದ ಅದು ಬಾಯಿಯ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಪೋಲಿಸೈಕ್ಲಿಕ್ ಅರೊಮ್ಯಾಟೆಉಕ್ ಹೈಡ್ರೊಕಾರ್ಬನ್, ನಿಟ್ರೊಸಮಿನೆಸ್ ಮತ್ತು ಬೆಂಜೆನೆ ಬಾಯಲ್ಲಿರುವ ಜೀವಕೋಶದ ಡಿಎನ್ಎಗೆ ಹಾನಿ ಮಾಡಬಹುದು. ಕ್ರಮೇಣವಾಗಿ, ಈ ಸಾಮಾನ್ಯ ಕೋಶಗಳು ಮಾರಣಾಂತಿಕ ಕೋಶಗಳಾಗಬಹುದು. ಬಾಯಿಯಲ್ಲಿನ ಗಾಯವಾಗಿ ಅದು ವಾಸಿಯಾಗದಿರುವುದು, ಬಾಯಿ ಮತ್ತು ಕಿವಿಯಲ್ಲಿ ನೋವು, ನುಂಗುವುದು ಕಷ್ಟ, ಕತ್ತಿನಲ್ಲಿ ದದ್ದು, , ಬಾಯಿಯೊಳಗೆ ಕೆಂಪು ಮತ್ತು ಬಿಳಿ ಮಚ್ಚೆ ಇವು ಬಾಯಿ ಕ್ಯಾನ್ಸರ್ ಲಕ್ಷಣವಾಗಿದೆ.
ಬಾಯಿ ಕ್ಯಾನ್ಸರ್ ತಡೆ ಕ್ರಮ: ಬಾಯಿ ಕ್ಯಾನ್ಸರ್ ತಡೆಗೆ ಪ್ರಮುಖವಾಗಿ ಬಾಯಿಯ ಶುಚಿತ್ವ ಕಾಪಾಡಬೇಕು. ಧೂಮಪಾನ ಬಿಡಬೇಕು. ಹೆಚ್ಚಿನ ಆಲ್ಕೋಹಾಲ್ ಸೇವನೆ ಮಾಡಬಾರದು. ಧೂಮಪಾನ ಮತ್ತು ತಂಬಾಕು ಬಿಡುವುದು ಬಾಯಿಯ ಕ್ಯಾನ್ಸರ್ ತಡೆಯುವ ಉತ್ತಮ ಮಾರ್ಗವಾಗಿದೆ. ತಂಬಾಕು ಸೇವನೆ ತ್ಯಜಿಸುವುದರಿಂದ ಬಾಯಿಯ ಆರೋಗ್ಯದ ಜೊತೆಗೆ ಶ್ವಾಸಕೋಶದ ಕೂಡ ಅಭಿವೃದ್ಧಿ ಹೊಂದಿ ಹೃದಯ ಸಮಸ್ಯೆ ಮತ್ತು ಪಾರ್ಶ್ವವಾಯು ಸಮಸ್ಯೆ ಕಡಿಮೆ ಮಾಡುತ್ತದೆ.
ಬಾಯಿಯ ಕ್ಯಾನ್ಸರ್ ಚಿಕಿತ್ಸೆಗಳು: ಅಭಿವೃದ್ಧಿ ಹೊಂದಿದ ಬಾಯಿ ಕ್ಯಾನ್ಸರ್ಗೆ ಚಿಕಿತ್ಸೆ ನೀಡುವುದು ಸವಾಲಾಗುತ್ತದೆ. ಚಿಕಿತ್ಸೆಯ ಉತ್ತಮ ಫಲಿತಾಂಶಕ್ಕೆ ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಅವಶ್ಯವಾಗಿದೆ. ಬಾಯಿಯ ಕ್ಯಾನ್ಸರ್ಗೆ ಸರ್ಜರಿ, ರೇಡಿಯಷನ್ ಥೆರಪಿ ಮತ್ತು ಕಿಮೋಥೆರಪಿ ಪ್ರಮುಖ ಚಿಕಿತ್ಸಾ ವಿಧಾನಗಳಾಗಿವೆ. ಇದರ ಜೊತೆಗೆ ಅನೇಕ ಅಭಿವೃದ್ಧಿ ಹೊಂದಿದ, ರೋಬೋಟಿಕ್ ಸರ್ಜರಿ, ಅಭಿವೃದ್ಧಿ ಹೊಂದಿದ ಔಷಧಗಳು ಕೂಡ ಇದೀಗ ಕಾಣಬಹುದಾಗಿದೆ.
ಕೆಲವು ಪ್ರಕರಣಗಳಲ್ಲಿ ಈ ಚಿಕಿತ್ಸೆಯ ಸಂಯೋಜನೆಗಳು ಬಳಕೆ ಮಾಡುವ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಇದರ ಹೊರತಾಗಿ ಆರಂಭಿಕ ಹಂತದಲ್ಲೇ ಧೂಮಪಾನ ತೊರೆಯುವವರು ನಿಕೋಟಿನ್ ರಿಪ್ಲೆಸ್ಮೆಂಟ್ ಥೆರಪಿಯ ಪ್ರಯೋಜನವನ್ನು ಕೂಡ ಪಡೆಯಬಹುದು. ತಜ್ಞರ ಜೊತೆಗೆ ಸಮಾಲೋಚನೆ ಮತ್ತು ಗುಂಪುಗಳ ಬೆಂಬಲವನ್ನು ಪಡೆಯುವ ಮೂಲಕ ಕೂಡ ಧೂಮಪಾನ ತೊರೆಯಲು ಮುಂದಾಗಬಹುದು.
ಪರಿಹಾರಕ್ಕಿಂತ ಮುನ್ನೆಚ್ಚರಿಕೆ ಮುಖ್ಯ ಎನ್ನುವಂತೆ ತಂಬಾಕಿನ ಭಾರಿ ಪರಿಣಾಮ ಕಡಿಮೆ ಮಾಡಲು ಅದನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕಿದ್ದು, ಇವುಗಳನ್ನು ನಿಲ್ಲಿಸುವುದು ಅತ್ಯುತ್ತಮ ಮಾರ್ಗವಾಗಿದೆ.
ಇದನ್ನೂ ಓದಿ: 190ಕ್ಕೂ ಹೆಚ್ಚು ವಿಶ್ವ ನಾಯಕರು ಬರೆದಿರುವ ಪತ್ರದಲ್ಲೇನಿದೆ..?