ETV Bharat / sukhibhava

Hepatitis: ಹೆಪಟೈಟಿಸ್​ ಸೋಂಕು: ಮಳೆಗಾಲದಲ್ಲಿ ಇರಲಿ ಎಚ್ಚರ! - ಸೂಕ್ಷ್ಮ ಬ್ಯಾಕ್ಟೀರಿಯಾ ಬೆಳವಣಿಗೆ

Hepatitis in Monsoon: ಮಳೆಗಾಲದಲ್ಲಿ ಕಲುಷಿತ ನೀರು ಮತ್ತು ಆಹಾರ ಸೇವನೆ ಕೂಡ ಅನೇಕ ಸೋಂಕಿಗೆ ಕಾರಣವಾಗುತ್ತದೆ. ಇದರಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

Be aware of hepatitis infection during rainy season

author img

By

Published : Jul 28, 2023, 11:43 AM IST

ಮಳೆಗಾಲದಲ್ಲಿ ವಾತಾವರಣ ತಣ್ಣಗಿದ್ದು ಸೂಕ್ಷ್ಮ ಬ್ಯಾಕ್ಟೀರಿಯಾಗಳ ಬೆಳವಣಿಗೆ ಹೆಚ್ಚು. ಇದರಲ್ಲೊಂದು ಹೆಪಟೈಟಿಸ್​ ಸೋಂಕು. ಹೆಪಟೈಟಿಸ್‌ಗೆ ಆಲ್ಕೋಹಾಲ್​ ಸೇವನೆ ಮತ್ತು ಚಯಾಪಚಯನ ಸಮಸ್ಯೆಯ ಜೊತೆಗೆ ನಿರೋಧಕ ಶಕ್ತಿ ಕೂಡ ಕಾರಣವಾಗುತ್ತದೆ ಎನ್ನುತ್ತಾರೆ ನಾಗರಭಾವಿಯ ಫೋರ್ಟಿಸ್​ ಆಸ್ಪತ್ರೆಯ ವೈದ್ಯ ಡಾ.ಸಂದೀಪ್​ ಆರ್ ಶರ್ಮಾ.

ಮಳೆಗಾಲದಲ್ಲಿ ಹೆಪಟೈಟಿಸ್​ ಎ ಮತ್ತು ಇ ಸೋಂಕುಗಳು ಸಾಮಾನ್ಯ. ಕೆಲವು ಕಾರಣಗಳು ದೀರ್ಘಕಾಲದ ಹೆಪಟೈಟಿಸ್‌ಗೂ ಕಾರಣವಾಗಬಹುದು. ಇದಕ್ಕೆ ಸರಿಯಾದ ಮೇಲ್ವಿಚಾರಣೆ ಮತ್ತು ಚಿಕಿತ್ಸೆಯ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಹೆಪಟೈಟಿಸ್​ ನಿರ್ಲಕ್ಷ್ಯ ಮಾಡುವಂತಿಲ್ಲ.

ಮಧ್ಯ ಕರ್ನಾಟಕ ಭಾಗದಲ್ಲಿ ಹೆಚ್ಚು : ಕರ್ನಾಟಕದಲ್ಲಿ ವಾರ್ಷಿಕವಾಗಿ 10 ಸಾವಿರ ಹೆಪಟೈಟಿಸ್​ ಪ್ರಕರಣಗಳು ವರದಿಯಾಗುತ್ತವೆ. ಅಧ್ಯಯನ ಪ್ರಕಾರ, ಮಧ್ಯ ಕರ್ನಾಟಕದಲ್ಲಿ ಹೆಪಟೈಟಿಸ್​ ಬಿ 2.12 ರಷ್ಟು ಜನರಲ್ಲಿ ಕಂಡುಬಂದಿದ್ದು, ರಕ್ತದಾನದ ಮಾಡುವ ಸಂದರ್ಭದಲ್ಲಿಈ ವಿಚಾರ ಬೆಳಕಿಗೆ ಬಂದಿದೆ ಎಂದು ವೈದ್ಯಕೀಯ ನಿರ್ದೇಶಕ ಡಾ.ಚಂದ್ರಿಕಾ ಕಂಬಂ ಹೇಳಿದ್ದಾರೆ.

ಕರಾವಳಿ ಕರ್ನಾಟಕದಲ್ಲಿ ಆರೋಗ್ಯ ಕಾರ್ಯಕರ್ತರು ಸಮೀಕ್ಷೆ ನಡೆಸಿದ್ದು, ಅಧ್ಯಯನದಲ್ಲಿ ಭಾಗಿಯಾದ 16 ಪ್ರತಿಶತದಷ್ಟು ಜನರು, ಹೆಚ್ಚಾಗಿ ದಾದಿಯರು ಮತ್ತು ಮನೆ ಕೆಲಸಗಾರರು ಹೆಪಟೈಟಿಸ್​ ಲಸಿಕೆ ಪಡೆದಿಲ್ಲ ಎಂಬ ಅಂಶ ಗೊತ್ತಾಗಿದೆ. ಇವರಲ್ಲಿ ರೋಗದ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.

ಬಾಲ್ಯದಲ್ಲೇ ಲಸಿಕೆ ಅವಶ್ಯಕ: ನಾವು ಹೆಪಟೈಟಿಸ್ ಬಿ ವಿರುದ್ಧ ಹೆಚ್ಚಿನ ಅಪಾಯದಲ್ಲಿರುವ ಜನಸಂಖ್ಯೆಗೆ ಲಸಿಕೆ ನೀಡಬೇಕು. ಬಾಲ್ಯದಲ್ಲಿ ಹೆಪಟೈಟಿಸ್ ಬಿ ಮತ್ತು ಎ ಪ್ರತಿರಕ್ಷಣೆ ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಪಟೈಟಿಸ್​ 3 ಪ್ರಕರಣಗಳು ಶೇ 2.1ರಿಂದ 52.5 ರಷ್ಟು ಕಂಡುಬರುತ್ತದೆ. ಹೆಪಟೈಟಿಸ್​ ಬಿ ಸಾಮಾನ್ಯವಾಗಿ 0.87ರಿಂದ 21.4ರಷ್ಟು ಜನಸಂಖ್ಯೆಯಲ್ಲಿದೆ. ಹೆಪಟೈಟಿಸ್​ ಸಿ 0.57ಯಿಂದ 53.7ನಷ್ಟಿದೆ ಎಂದು ಡಾ.ಚಂದ್ರಿಕಾ ಮಾಹಿತಿ ನೀಡಿದರು.

ಹೆಪಟೈಟಿಸ್​ ರೂಪವೂ ಯಕೃತ್​​ ಮೇಲೆ ಪರಿಣಾಮ ಬೀರುತ್ತದೆ. ಈ ಸೋಂಕು ದೇಹದ ಒಳನುಗ್ಗುವುದು ತಿಳಿಯುವುದಿಲ್ಲ. ಇದರ ಅಸ್ತಿತ್ವವನ್ನು ದೇಹದಲ್ಲಿ ಕಡೆಯ ಹಂತದವರೆಗೂ ಮರೆಮಾಚುತ್ತದೆ. ಇದು ಭಾರತದಲ್ಲಿ ಸಾರ್ವಜನಿಕ ಆರೋಗ್ಯದ ಮೇಲೆ ಗಮನಾರ್ಹ ಅಪಾಯ ಉಂಟುಮಾಡುತ್ತದೆ.

ಯಕೃತ್​ ಸಂಪೂರ್ಣವಾಗಿ ಹಾಳಾಗುವವರೆಗೂ ಇದರ ಗುಣಲಕ್ಷಣಗಳು ಪತ್ತೆ ಆಗುವುದಿಲ್ಲ. ರೋಗ ಸಂಭವಿಸಿದಾಗ ಹಸಿವಾಗದೇ ಇರುವುದು, ಆಯಾಸ, ಚರ್ಮ ತುರಿಕೆ, ತಲೆನೋವು, ತೂಕ ನಷ್ಟ, ಕಾಲಿನಲ್ಲಿ ಊತ, ರಕ್ತಸ್ರಾವ ಉಂಟಾಗುತ್ತದೆ. ಇದರ ಹೊರತಾಗಿ ಹೊಟ್ಟೆಯಲ್ಲಿ ದ್ರವ ಸಂಗ್ರಹ, ಚರ್ಮ ಮತ್ತು ಕಣ್ಣು ಹಳದಿಗಟ್ಟುವಿಕೆಯ ಜಾಂಡಿಸ್​, ಅಂಗೈನಲ್ಲಿ ರೆಡ್​ನೆಸ್​, ಉಗುರಗಳಲ್ಲಿ ಬಿರಿತ ಕಾಣುತ್ತದೆ. ಲಿವರ್​ ಸಿರೋಸಿಸ್​ನಿಂದ ಹೈಪರ್​ ಟೆನ್ಷನ್​ ಕೂಡ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಸೋಂಕಿನ ಬಗ್ಗೆ ಎಚ್ಚರವಹಿಸುವುದು ಅತಿ ಅಗತ್ಯ.

ಇದನ್ನೂ ಓದಿ: World Hepatitis Day: ಏನಿದು ಹೆಪಟೈಟಿಸ್ ಕಾಯಿಲೆ? ಲಕ್ಷಣಗಳೇನು, ನಿಯಂತ್ರಣ ಹೇಗೆ? ಸಮಗ್ರ ಮಾಹಿತಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.