ಸ್ಯಾನ್ಫ್ರಾನ್ಸಿಸ್ಕೋ: ವರ್ಷದ ಮಗುವು ದಿನದ ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ಟೆಲಿವಿಷನ್, ಕಂಪ್ಯೂಟರ್, ಟ್ಯಾಬ್ಲೆಟ್ಸ್ ಅಥವಾ ಸ್ಮಾರ್ಟ್ ಫೋನ್ ವೀಕ್ಷಣೆ ಮಾಡುವುದರಿಂದ ಅವರಲ್ಲಿ ಎರಡರಿಂದ ನಾಲ್ಕು ವರ್ಷದಲ್ಲಿ ಅಭಿವೃದ್ಧಿಯಾಗುವ ಸಂವಹನ ಮತ್ತು ಸಮಸ್ಯೆಗಳ ಪರಿಹಾರ ಮಾಡುವ ಕೌಶಲ್ಯ ಅಭಿವೃದ್ಧಿ ನಿಧಾನವಾಗಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ.
ಜಾಮಾ ಪಿಡಿಯಾಟ್ರಿಕ್ಸ್ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ವರ್ಷದ ಮಗುವನ್ನು ತನ್ನ ಗೆಳೆಯರಿಗಿಂತ ಹೆಚ್ಚಾಗಿ ಸ್ಕ್ರೀನ್ ಟೈಮ್ಗೆ ಒಳಪಡಿಸಲಾಗಿತ್ತು. ಈ ವೇಳೆ ಅವರಲ್ಲಿ ಮೋಟಾರು ಮತ್ತು ಸಾಮಾಜಿಕ ಕೌಶಲ್ಯಗಳ ಅಭಿವೃದ್ಧಿ ನಿಧಾನವಾಗುತ್ತದೆ. ಈ ಅಧ್ಯಯನಕ್ಕೆ 7 ಸಾವಿರ ಜಪಾನಿ ಮಕ್ಕಳನ್ನು ತೊಡಗಿಸಲಾಗಿತ್ತು. ಮಗು ದಿನವೊಂದಕ್ಕೆ ಎಷ್ಟು ಗಂಟೆಗಳ ಕಾಲ ಸ್ಕ್ರೀನ್ ಟೈಮ್ ವೀಕ್ಷಣೆ ಮಾಡುತ್ತದೆ ಎಂಬ ವರದಿಯನ್ನು ತಾಯಿಯಿಂದ ಪಡೆದು ಅದರ ಆಧಾರದ ಮೇಲೆ ವಿಶ್ಲೇಷಣೆ ನಡೆಸಲಾಗಿದೆ.
ಸಂಶೋಧಕರು ಎರಡರಿಂದರಿಂದ ನಾಲ್ಕು ವರ್ಷದ ಮಕ್ಕಳಲ್ಲಿ ಕೂಡ ಅನೇಕ ಅಭಿವೃದ್ಧಿಯ ಪರೀಕ್ಷೆಯನ್ನು ನಡೆಸಿದ್ದಾರೆ. ಎರಡು ವರ್ಷದ ಮಗು ದಿನದ ನಾಲ್ಕು ಗಂಟೆಗಳ ಕಾಲ ಸ್ಕ್ರೀನ್ ಟೈಮ್ ವೀಕ್ಷಣೆ ಮಾಡುವುದರಿಂದ ಅವರಲ್ಲಿ ಸಂವಹನ ಮತ್ತು ಸಮಸ್ಯೆ ಪರಿಹಾರ ಕೌಶಲ್ಯವೂ ವಿಳಂಬ ಆಗುತ್ತದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.
ಒಂದು ವರ್ಷದ ಮಗುವಿನ ಸ್ಕ್ರೀನ್ ಟೈಂ ವೀಕ್ಷಣೆ ಪರಿಣಾಮವು ಮಗುವಿನ 2 ವರ್ಷದ ಮೋಟಾರು ಮತ್ತು ವೈಯಕ್ತಿಕ ಮತ್ತು ಸಾಮಾಜಿಕ ಕೌಶಲ್ಯದ ಡೊಮೇನ್ನೊಂದಿಗೆ ಸಂಬಂಧವನ್ನು ಹೊಂದಿದೆ ಎಂಬುದು ಅಧ್ಯಯನದಲ್ಲಿ ಗಮನಿಸಿದ್ದೇವೆ. ಆದಾಗ್ಯೂ ಈ ಸಂಬಂಧವನ್ನು ಮಗುವಿನ ನಾಲ್ಕು ವರ್ಷದವರೆಗೆ ದೃಢಪಡಿಸಲು ಸಾಧ್ಯವಾಗುವುದಿಲ್ಲ. ಈ ಸಂಶೋಧನೆಯಲ್ಲಿ ಎರಡು ಸಂಭಾವ್ಯ ಊಹೆಗಳಿವೆ. ಮೊದಲನೇ ಊಹೆ ಪ್ರಕಾರ, ಎರಡು ವರ್ಷದ ಮಗುವಿನ ವಿಳಂಬ ಸಂವಹನ ಮತ್ತು ಸಾಮಾಜಿಕ ಕೌಶಲ್ಯವೂ ಮಗುವಿಗೆ ನಾಲ್ಕು ವರ್ಷ ಆದಾಗ ಕಂಡು ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದಕ್ಕಿಂತ ಹೆಚ್ಚಾಗಿ ಮಗುವು ದಿನದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಸ್ಕ್ರೀಂ ಟೈಂ ವೀಕ್ಷಣೆ ಮಾಡುವುದರಿಂದ ಅವರ ಸಂವಹನ ಕೌಶಲ್ಯ ಕಳಪೆಯಾಗಿದೆ. ಜೊತೆಗೆ ನಾಲ್ಕು ವರ್ಷದಲ್ಲಿ ಸಂವಹನ ಮತ್ತು ಸಮಸ್ಯೆ ನಿವಾರಣೆ ಕೌಶಲ್ಯ ಕಾಡಬಹುದು. ಸಣ್ಣ ವಯಸ್ಸಿನಲ್ಲೇ ಮಗುವು ಅಧಿಕ ಕಾಲ ಸ್ಕ್ರೀನ್ ಟೈಂ ವೀಕ್ಷಣೆ ಮಕ್ಕಳ ತಾಯಂದಿರುವ ಕಡಿಮೆ ಆದಾಯ ಮತ್ತು ಶಿಕ್ಷಣದ ಮಟ್ಟ ಮತ್ತು ಪ್ರಸವಾನಂತರದ ಖಿನ್ನತೆಯಿಂದ ಬಳಲುತ್ತಿರುವ ಸಾಧ್ಯತೆಯಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
ಇದನ್ನೂ ಓದಿ: ಅಧಿಕ ಸ್ಕ್ರೀನ್ ಟೈಮ್, ಮಗುವಿನ ತಾರ್ಕಿಕ ಕೌಶಲ್ಯದ ಮೇಲೆ ಬೀರುತ್ತದೆ ಪರಿಣಾಮ!