ETV Bharat / sukhibhava

ದೀರ್ಘಾವಧಿ ಕೋವಿಡ್​​ಗೆ ಆಯುರ್ವೇದ ಚಿಕಿತ್ಸೆ ಉತ್ತಮ ಪರಿಹಾರವಾಗಬಲ್ಲದು! - ಕೋವಿಡ್‌ನ ಲಕ್ಷಣಗಳೊಂದಿಗೆ ಹೋರಾಡುತ್ತಿದ್ದಾರೆ

ದೀರ್ಘ ಕೋವಿಡ್‌ನ ಲಕ್ಷಣಗಳನ್ನು ನಿವಾರಿಸಲು ಆಯುರ್ವೇದವು ಸಹಾಯ ಮಾಡುತ್ತದೆ ಎಂದು ತಜ್ಞರು ಸೂಚಿಸುತ್ತಾರೆ.

Ayurvedic treatment can be the best solution for chronic covid!

author img

By

Published : Apr 8, 2023, 11:32 AM IST

ನವದೆಹಲಿ: ಕಳೆದ ಮೂರು ವರ್ಷಗಳ ಹಿಂದೆ ಕಾಡಿದ್ದ ಸೋಂಕಿನಿಂದ ಜಗತ್ತು ಚೇತರಿಕೆ ಕಾಣುತ್ತಿದೆ. ಸೋಂಕಿನ ತೀವ್ರತೆ ಕಡಿಮೆಯಾದರೂ ಅದರ ಉಪತಳಿಗಳು ಭಾದಿಸುತ್ತಲೇ ಇದೆ. ಅನೇಕ ಜನರು ಇನ್ನೂ ದೀರ್ಘಕಾಲದ ಕೋವಿಡ್‌ನ ಲಕ್ಷಣಗಳೊಂದಿಗೆ ಹೋರಾಡುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಉಸಿರಾಟದ ತೊಂದರೆ, ಬ್ರೈನ್​ ಫಾಗ್​​ ಮತ್ತು ಆಯಾಸದಂತಹ ಕೆಲವು ರೋಗಲಕ್ಷಣಗಳು ಉಳಿದಿದ್ದು, ಈ ಸ್ಥಿತಿಯನ್ನು ದೀರ್ಘ ಕೋವಿಡ್ ಎಂದು ಕರೆಯಲಾಗುತ್ತದೆ. ದೀರ್ಘ ಕೋವಿಡ್ ರೋಗ ಲಕ್ಷಣಗಳು ನಿದ್ರಾಹೀನತೆ, ಗ್ಯಾಸ್ಟ್ರಿಕ್​ ಸಮಸ್ಯೆ, ಉಳಿ ತೇಗು, ಆಸಿಡಿಟಿ, ಕರುಳು ಸಮಸ್ಯೆ, ಸ್ನಾಯು ದೌರ್ಬಲ್ಯ ಮತ್ತು ಚಲನಶೀಲತೆಯ ಸಮಸ್ಯೆಗಳಂತಹ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಸಹ ಒಳಗೊಂಡಿವೆ.

ದೇಹಕ್ಕೆ ಪ್ರವೇಶಿಸುವ ಯಾವುದೇ ಸೂಕ್ಷ್ಮಾಣು ವಿಷವನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ದೋಷಗಳ ಅಸಮತೋಲನ ಉಂಟಾಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವವರು ಬಲು ಬೇಗ ಈ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ. ಇದನ್ನು ಆಯುರ್ವೇದ ಚಿಕಿತ್ಸೆಗಳ ಮೂಲಜ ಪಂಚಕರ್ಮವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲಿ, ಪಂಚಕರ್ಮ ವಿಧಾನವನ್ನು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ರೋಗನಿರೋಧಕವಾಗಿ ಬಳಸಲಾಗುತ್ತದೆ. ಮತ್ತೆ ಸೋಂಕು ಬಾರದಂತೆ ಪ್ರತಿರಕ್ಷಣೆ ಮಾಡುತ್ತದೆ.

ಕೋವಿಡ್​ ಸೋಂಕಿತರು ಪರೀಕ್ಷೆ ವೇಳೆ ನೆಗೆಟಿವ್​​ ಕಾಣಿಸಿಕೊಂಡರೂ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪಂಚಕರ್ಮ ಪ್ರಕ್ರಿಯೆಯನ್ನು ಮಾಡಬಹುದು ಎಂದು ಸಿಜಿಎಚ್​ ಅರ್ಥ್​ ವೈದ್ಯರು ಸಲಹೆ ನೀಡುತ್ತಾರೆ. ಈ ರೀತಿಯ ಪ್ರಕ್ರಿಯೆಗಳನ್ನು ನಿದ್ರಾಹೀನತೆ, ಆತಂಕ, ಒತ್ತಡ-ಸಂಬಂಧಿತ ಅಸ್ವಸ್ಥತೆಗಳು ಮತ್ತು ಪ್ರತಿರಕ್ಷಣಾ ವರ್ಧಕ ಕಾರ್ಯವಿಧಾನಗಳನ್ನು ನಿರ್ವಹಿಸಲಾಗುವುದಿಲ್ಲ.

ಏನಿದು ಪಂಚಕರ್ಮ ವಿಧಾನ: ಪಂಚಕರ್ಮ ಶುದ್ಧೀಕರಣ ಕಾರ್ಯ ವಿಧಾನದ ಮೂಲಕ ದೇಹವು ಸ್ವಯಂ ಗುಣವಾಗುವಂತೆ ಮಾಡಲಾಗುವುದು. ಎರಡೂ ವರೆ ತಿಂಗಳಲ್ಲಿ ಶಕ್ತಿಯ ಮಟ್ಟಗಳು ಸಾಮಾನ್ಯ ಅಥವಾ ಸಾಮಾನ್ಯ ಸ್ಥಿತಿಗೆ ಮರಳಲು ಮಾಡುವಂತೆ ಮಾಡಲಾಗುವುದು. ವ್ಯಕ್ತಿಯೂ ಶಸ್ತ್ರಚಿಕಿತ್ಸೆ ಒಳಗಾದ ಬಳಿಕ ಅಥವಾ ಕೆಲವು ಗಂಭೀರ ಕಾಯಿಲೆಗಳಿಗೆ ಒಳಗಾದ ವ್ಯಕ್ತಿಯು ಎರಡೂವರೆ ತಿಂಗಳ ನಂತರ ಈ ಪಂಚಕರ್ಮ ಚಿಕಿತ್ಸೆಗೆ ಒಳಗಾಗಬಹುದು.

ರೋಗಿಗಳಿಂದ ರೋಗಿಗಳಿಗೆ ಈ ದೀರ್ಘಕಾಲದ ಕೋವಿಡ್​ ಪರಿಣಾಮ ವಿಭಿನ್ನವಾಗಿರುತ್ತದೆ. ಈ ಹಿನ್ನೆಲೆ ಅದರ ಚಿಕಿತ್ಸೆ ಕೂಡ ಭಿನ್ನವಾಗುತ್ತದೆ. ಪಂಚ ಕರ್ಮದ ಪ್ರಕ್ರಿಯೆಯ ಭಾಗವಾಗಿರುವ ಬಹು ಕರ್ಮಗಳ ಚಿಕಿತ್ಸೆಗೆ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿ ಪರಿಶೀಲನೆ ಪಡೆಸಬೇಕಿದೆ. ದೀರ್ಘಾವಧಿ ಕೋವಿಡ್​ ಸೋಂಕಿತರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇವರಲ್ಲಿ ಗ್ಯಾಸ್ಟ್ರೊಇನ್ಟೆಸ್ಟಿನಲ್​ ಟ್ರಾಕ್​, ಹೃದಯ ಸಂಬಂಧಿ ಪರಿಸ್ಥಿತಿ, ನರ, ಮಿದುಳು ಮತ್ತು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಕೋವಿಡ್​ ಇಂದ್ರಿಯ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಕೋವಿಡ್​ಗೆ ತುತ್ತಾದವರಲ್ಲಿ ಅನೇಕರು ವಾಸನೆ, ರುಚಿ, ಕೇಳುವಿಕೆ ಮತ್ತು ದೃಷ್ಟಿ ಮೇಲೆ ಕೆಲವು ನಿಗದಿತ ಪರಿಣಾಮಕ್ಕೆ ಒಳಗಾಗಿರುವುದು ಕಾಣಬಹುದಾಗಿದೆ. ಕೋವಿಡ್​ನಂತರ ಅನೇಕ ಮಂದಿ ನಿದ್ರಾಹೀನತೆ, ಬ್ರೈನ್​ ಫಾಗ್​ ಮತ್ತು ಆತಂಕ ಸಮಸ್ಯೆಗೆ ಎದುರಾಗುತ್ತಿರುವುದು ಕಾಣುತ್ತಿದೆ.

ಪಂಚಕರ್ಮ ಸಾಕಷ್ಟು ಆರೋಗ್ಯ ಪರಿಣಾಮ ಹೊಂದಿದೆ. ಕೋವಿಡ್​ ಸೋಂಕಿನ ಬಳಿಕ ರೋಗಿಗಳಲ್ಲಿ ಶಕ್ತಿ ಮಟ್ಟ ಕೂಡ ಕಡಿಮೆಯಾಗುತ್ತದೆ. ಪಂಚಕರ್ಮ ಪ್ರಕ್ರಿಯೆ ದೇಹದ ವಿಷ ಅಂಶವನ್ನು ತೆಗೆಯಲು ಸಹಾಯ ಮಾಡುತ್ತದೆ. ಅಲ್ಲದೇ, ಆಯುರ್ವೇದ ಚಿಕಿತ್ಸೆಗಳು ಆಂತರಿಕ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದಿಲ್ಲ

ಚಿಕಿತ್ಸೆ ವಿಧಾನ: ಕಫ ಸಂಬಂಧಿತ ಶ್ವಾಸಕೋಶದ ಸೋಂಕುಗಳು, ಎದೆ ನೋವು ಮತ್ತು ಸೋಂಕಿತ ಪ್ಲೆರಲ್ ಕುಳಿಗಳಿಗೆ ರೋಗಿಯನ್ನು ಗಿಡಮೂಲಿಕೆ ಔಷಧ-ಪ್ರೇರಿತ ವಾಂತಿದೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಗ್ಯಾಸ್ಟ್ರಿಕ್ ಸೋಂಕಿಗೆ ಅಥವಾ ಯಕೃತ್ತು ಅಥವಾ ಮೇದೋಜ್ಜೀರಕ ಗ್ರಂಥಿಯ ಮೇಲೆ ಪರಿಣಾಮ ಬೀರಿದರೆ ಶುದ್ಧೀಕರಣವನ್ನು ಸೂಚಿಸಲಾಗುತ್ತದೆ. ವಾಸನೆ ಅಥವಾ ರುಚಿಯ ನಷ್ಟದಂತಹ ಸಂವೇದನಾ ಅಂಗಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮುಖ್ಯ ವಿಧಾನವೆಂದರೆ ನಾಸ್ಯ ಅಂದರೆ ಮೂಗಿನ ಚಿಕಿತ್ಸೆ ನೀಡಲಾಗುವುದು. ಸಂಧಿವಾತ, ಕ್ಷೀಣಗೊಳ್ಳುವ ಸ್ನಾಯುಗಳು ಅಥವಾ ಚರ್ಮದ ಸಮಸ್ಯೆಗೆ ವಸ್ತಿ ಅಥವಾ ಔಷಧೀಯ ಎನಿಮಾಗಳನ್ನು ಸೂಚಿಸಲಾಗುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಗಿಡಮೂಲಿಕೆ ಔಷಧಿಗಳನ್ನು ನಿರ್ವಹಿಸಲಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಉಸಿರಾಟದ ಪ್ರದೇಶದ ಸಮಸ್ಯೆಗಳಿರುವವರು ತಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸುವ ಮೂಲಕ ಮತ್ತು ಕಫ ಅಥವಾ ಫೈಬ್ರಾಯ್ಡ್‌ಗಳ ಹೆಚ್ಚುವರಿ ಶೇಖರಣೆಯನ್ನು ತೆಗೆದುಹಾಕುವ ಮೂಲಕ ಈ ಶಿಫಾರಸು ಮಾಡಿದ ಗಿಡಮೂಲಿಕೆ ಔಷಧಿಗಳಿಂದ ಪ್ರಯೋಜನ ಪಡೆಯುತ್ತಾರೆ. ಜಿಐ ಟ್ರಾಕ್ಟ್ ಸಮಸ್ಯೆ ಇರುವವರಿಗೆ ಈ ಔಷಧಿಗಳು ಪ್ರಯೋಜನಕಾರಿ.

ಇದನ್ನೂ ಓದಿ: ದೇಹದ ಶಕ್ತಿ ಕುಂದಿಸುತ್ತದೆ ಸಾಮಾಜಿಕ ಪ್ರತ್ಯೇಕಿಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.