ETV Bharat / sukhibhava

ಶಾಖದ ಅಲೆಗಳಿಂದ ಅಸ್ತಮಾ ಉಲ್ಬಣ.. ಇದರಿಂದ ಬಚಾವ್​ ಆಗಲು ತಜ್ಞರು ನೀಡಿರುವ ಸಲಹೆಗಳೇನು?

author img

By

Published : May 2, 2023, 3:38 PM IST

ಹೆಚ್ಚಿನ ತಾಪಮಾನ ಮತ್ತು ಆದ್ರತೆ ಊರಿಯೂತ, ಸಂಕುಚಿತಕ್ಕೆ ಕಾರಣವಾಗುತ್ತದೆ. ಇದರಿಂದ ಉಸಿರಾಟಲೂ ಕಷ್ಟವಾಗುತ್ತದೆ

Asthma exacerbation due to heat waves; Experts

ನವದೆಹಲಿ: ಭಾರತದಲ್ಲಿ ಹವಾಮಾನ ಮಾದರಿಗಳು ಬಿಸಿ ಶಾಖ ಹೆಚ್ಚುತ್ತಿರುವುದರನ್ನು ಸೂಚಿಸುತ್ತಿದ್ದು, ಇದರಿಂದ ಅಸ್ತಮಾ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರ ಮೇಲೆ ಹೆಚ್ಚಿನ ಪರಿಣಾಮ ಹೊಂದಿದೆ ಎಂದು ತಜ್ಞರು ತಿಳಿಸಿದ್ದಾರೆ. ವಿಶ್ವ ಅಸ್ತಮಾ ದಿನದ ಹಿನ್ನೆಲೆ ದೀರ್ಘಕಾಲದ ಉಸಿರಾಟ ಸಮಸ್ಯೆ ಹೊಂದಿರುವ ಜಗತ್ತಿನಾದ್ಯಂತ ಅರಿವು ಮೂಡಿಸುವ ಯತ್ನ ನಡೆಸಲಾಗಿದೆ.

ವಿಶ್ವ ಆರೋಗ್ಯ ಸಂಘಟನೆ ಪ್ರಕಾರ, ಸರಿಸುಮಾರು 339 ಮಿಲಿಯನ್​ ಜನರು ಜಾಗತಿಕವಾಗಿ ಅಸ್ತಮಾದಿಂದ ಬಳಲುತ್ತಿದ್ದಾರೆ. 2025ರ ವೇಳೆಗೆ ಈ ಸಂಖ್ಯೆ 400 ಮಿಲಿಯನ್​ಗೆ ಏರಿಲಿದೆ ಎಂದು ಅಂದಾಜಿಸಲಾಗಿದೆ. ಅಸ್ತಮಾ ಹೊಂದಿರುವ ಜನರಿಗೆ ಈ ಶಾಖದ ಅಲೆಗಳು ಭಾರೀ ಸವಾಲನ್ನು ಒಡ್ಡುತ್ತದೆ. ವಿಪರೀತ ಶಾಖ ಇದರ ಲಕ್ಷಣವನ್ನು ಮತ್ತಷ್ಟು ಬಿಗಾಡಯಿಸುವುದರ ಜೊತೆಗೆ ಪ್ರಚೋದಿಸಬಹುದು ಎನ್ನು ಅಸ್ತಮಾ ಅಟ್ಯಾಕ್​ ಎನ್ನಬಹುದು ಎಂದು ಡಾ ನಿಖಿಲ್​ ಮೋದಿ ತಿಳಿಸಿದ್ದಾರೆ.

ಹೆಚ್ಚಿನ ತಾಪಮಾನ ಮತ್ತು ಆದ್ರತೆ ಊರಿಯೂತ, ಸಂಕುಚಿತಕ್ಕೆ ಕಾರಣವಾಗುತ್ತದೆ. ಇದರಿಂದ ಉಸಿರಾಡಲೂ ಕಷ್ಟವಾಗುತ್ತದೆ. ಇದು ಉಸಿರಾಟ ತೊಂದರೆ, ಉಬ್ಬಸ, ಕೆಮ್ಮು ಮತ್ತು ಎದೆ ಬಿಗಿತನಕ್ಕೆ ಕಾರಣವಾಗುತ್ತದೆ. ಇದಕ್ಕಿಂತ ಹೆಚ್ಚಾಗಿ, ಬಿಸಿ ತಾಪಮಾನ ಓಝೋನ್​ನಂತಹ ವಾಯು ಮಾಲಿನ್ಯ ಮಟ್ಟ ಹೆಚ್ಚಿಸುತ್ತದೆ. ಇದು ಅಸ್ತಮಾ ರೋಗ ಲಕ್ಷಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜಾಗತಿಕ ಹವಾಮಾನ ಬಿಕ್ಕಟ್ಟು ಶಾಖದ ಅಲೆಗಳು ಭಾರತದಲ್ಲಿ ಹೆಚ್ಚು, ತೀವ್ರವಾದ ಮಾರಕವಾಗಿರಲಿದೆ.

2022ರಲ್ಲಿ ಭಾರತ ಅತಿ ಹೆಚ್ಚು ಶಾಖವನ್ನು ಅನುಭವಿಸಿತು. 122 ವರ್ಷಗಳ ಬಳಿಕ ಅಧಿಕ ತಾಪ ದಾಖಲಾಗಿದೆ. 2023ರ ಜನವರಿ ಮತ್ತು ಅಕ್ಟೋಬರ್​ ನಡುವೆ 273 ಮತ್ತು 242 ದಿನಗಳಲ್ಲಿ ವಿಪರೀತ ಹವಾಮಾನಕ್ಕೆ ಸಾಕ್ಷಿಯಾಗಿದೆ ಎಂದು ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ. ಭಾರತದ ಸುಮಾರು 90ಪ್ರತಿಶತದಷ್ಟು ಶಾಖದ ಅಲೆ ಎಚ್ಚರಿಕೆಯನ್ನು ಹೊಂದಿದೆ. ಅದರಲ್ಲೂ ದೆಹಲಿಯೂ ಹೆಚ್ಚಿನ ಶಾಖದ ಅಲೆಗೆ ಗುರಿಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ಭಾರತದ ಹವಾಮಾನ ಇಲಾಖೆ ಕಳೆದ ವಾರ ಅಂದಾಜಿಸಿದಂತೆ ದೇಶದಲ್ಲಿ ಮೇ ಅಂತ್ಯದವರೆಗೆ ಸರಾಸರಿ ತಪಾಮಾನ ಮತ್ತು ಶಾಖದ ಅಲೆ ಕಾಡಲಿದೆ. ಬಿಹಾರ, ಜಾರ್ಖಂಡ್​, ಒಡಿಶಾ, ಪಶ್ವಿಮ ಬಂಗಾಳ, ಪೂರ್ವ ಉತ್ತರ ಪ್ರದೇಶ, ಕರಾವಳಿ ಆಂಧ್ರಪ್ರದೇಶ, ಛತ್ತೀಸ್​ಗಢ, ಮಧ್ಯ ಪ್ರದೇಶ, ತೆಲಂಗಾಣ ಮತ್ತು ಕರಾವಳಿ ಗುಜರಾತ್​ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ಅಲೆ ಕಾಣಲಿದೆ.

ಈ ಶಾಖಲದ ಅಲೆಗಳು ಅಸ್ತಮಾದ ಮೇಲೆ ಹೆಚ್ಚಿನ ಪರಿಣಾಮ ಹೊಂದಿದ್ದು, ಇದು ಹೆಚ್ಚಾಗದಂತೆ ತಡೆಯಲು ಕೆಲವು ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಆರೋಗ್ಯ ತಜ್ಞರು ಹೇಳುವಂತೆ ಅಸ್ತಮಾ ಹೊಂದಿರುವ ಜನರು ಬಿಸಿಲಿನ ದಿನಗಳಲ್ಲಿ ಮನೆಯೊಳಗೆ ಇರುವುದು ಉತ್ತಮ ಅದರಲ್ಲೂ ಬೆಳಗ್ಗೆ 11ರಿಂದ 3ರವರೆಗೆ ಹೊರಗಿನ ಚಟುವಟಿಕೆ ದೂರು ಇರುವುದು ಮುಖ್ಯ. ಅಸ್ತಮಾ ಹೊಂದಿರುವ ಜನರು ಬಿಸಿನ ಶಾಖಕ್ಕೆ ಒಳಗಾಗುವುದನ್ನು ತಪ್ಪಿಸುವ ಜೊತೆಗೆ ಹೈಡ್ರೇಟ್​ ಆಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ನಿಮ್ಮನ್ನು ನೀರು ರಕ್ಷಿಸಿಕೊಳ್ಳಲು ಸದಾ ಇನ್​ಹೇಲರ್​ ಇಟ್ಟುಕೊಳ್ಳುವುದು ಉತ್ತಮ. ಹೆಚ್ಚುವರಿಯಾಗಿ ಮಾಸ್ಕ್​ ಬಳಸುವುದು ಅವಶ್ಯ. ಆಲ್ಕೋಹಾಲ್​ ಮತ್ತು ಕೆಫಿನ್​ ತಪ್ಪಿಸುವುದು ಅವಶ್ಯವಾಗಿದೆ.

ಇದನ್ನೂ ಓದಿ: ವಿಶ್ವ ಅಸ್ತಮಾ ದಿನ: ರೋಗ ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು ಗೊತ್ತಿರಲಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.