ವೃತ್ತಿ ಜೀವನದಕ್ಕೆ ಪೋಷಕರು ಸಂಬಂಧಿಕರಿಂದ ದೂರಾಗಿ ಗೊತ್ತಿಲ್ಲದ ಊರಿನಲ್ಲಿ ಬದುಕು ಆರಂಭಿಸಲು ಅನೇಕ ಯುವತಿಯರು ಮುಂದಾಗುತ್ತಾರೆ. ಕಚೇರಿ ಕೆಲಸದಲ್ಲಿ ಸುಸ್ತಾಗುವ ಅವರು ಮನೆಗೆ ತಲುಪುವ ಹೊತ್ತಿಗೆ ಆಲಸಿಗಳಾಗಿ, ಅವರ ಎಲ್ಲಾ ಶಕ್ತಿ ಕೂಡ ಕುಂದಿರುತ್ತದೆ. ಈ ವೇಳೆ ಹೊಟ್ಟೆ ಹಸಿದಾಗ ಆರ್ಡರ್ ಮಾಡಿ ಅಥವಾ ಸ್ನೇಹಿತರ ಜೊತೆಗೆ ಹೋಗಿ ಊಟ ಮುಗಿಸುತ್ತಾರೆ. ಇದರಿಂದ ನೀವು ಬೇಸತ್ತಿದ್ದೀರಾ ಎಂದರೆ, 'ನಿಮಗಾಗಿ' ನೀವು ಏನನ್ನಾದರೂ ತಯಾರಿಸಿಕೊಳ್ಳಿ ಎನ್ನುತ್ತಾರೆ ಆಹಾರ ತಜ್ಞರು. ಇದು ಕೇವಲ ಹೊಟ್ಟೆ ತುಂಬಲು ಅಲ್ಲ, ನಿಮ್ಮ ಒತ್ತಡ ನಿವಾರಣೆಗೆ ಕೂಡ ಪರಿಹಾರವಾಗುತ್ತದೆ.
ಹೌದು, ಅನೇಕ ಮಂದಿ ತಮಗಾಗಿ ಯಾವತ್ತೂ ಚಿಂತಿಸುವುದೇ ಇಲ್ಲ. ಆದರೆ, ಇದು ನಂತರದಲ್ಲಿ ಅವರಿಗೆ ಎಲ್ಲಾ ರೀತಿಯ ಪ್ರಯೋಜನವನ್ನು ನೀಡದೇ ಇರಲಾರದು. ಅಡುಗೆ ಗೊತ್ತಿಲ್ಲ ಎಂದರೂ ಸಣ್ಣದಾಗಿ ನಿಮಗಿಷ್ಟದ ಸರಳವಾದ ತಿಂಡಿಯನ್ನು ತಯಾರಿಸಿ. ಉತ್ತಮ ಆಲೋಚನೆಗಳು ಹೊಟ್ಟೆ ತುಂಬಿದಾಗ ಮಾತ್ರ ಬರುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು. ಇದಕ್ಕಾಗಿ ನಿಮ್ಮನ್ನು ನೀವು ತೃಪ್ತಿಯಿಂದ ಇಟ್ಟುಕೊಳ್ಳಬೇಕು. ನೀವು ಖುಷಿಯಿಂದ ಇದ್ದರೆ, ಅದರ ಹಿಂದೆ ಎಲ್ಲವೂ ಸುಗಮವಾಗಿ ಸಾಗುತ್ತದೆ.
ಆರೋಮೆಟಿಕ್ಸ್: ಅರೋಮ ಥೆರಪಿ ಎಂಬುದು ಅಂತಹ ಒಂದು ಪರಿಹಾರದ ಮೂಲವಾಗಿದೆ. ನೀವು ಯಾವಾಗ ಒತ್ತಡವನ್ನು ಅನುಭವಿಸುತ್ತೀರೋ ಆಗ ಅಡುಗೆಯನ್ನು ಮಾಡಿ. ಅದರ ಘಮ ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಓಡಿಸುತ್ತದೆ ಎಂದು ಈ ಚಿಕಿತ್ಸೆ ತಿಳಿಸುತ್ತದೆ.
ಚಿತ್ರ ಬಿಡಿಸುವುದು ಮತ್ತು ಹೊಸದನ್ನು ಸೃಷ್ಟಿಸುವುದು ಎಲ್ಲವೂ ಸೃಜನಶೀಲತೆಯ ಭಾಗವಾಗಿದೆ. ಅಡುಗೆ ಮಾಡುವುದು ಕೂಡ ಇದೇ ವರ್ಗಕ್ಕೆ ಸೇರುತ್ತದೆ. ಆಕರ್ಷಣಿಯ ಆಕಾರಗಳು, ಬಣ್ಣ, ರುಚಿ ಅದನ್ನು ಪ್ರದರ್ಶಿಸುವ ಮಾರ್ಗ ಕೂಡ ಸೃಜನಶೀಲತೆ ಆಗಿದೆ.
ಅಧ್ಯಯನದ ಹೇಳುವಂತೆ ಯಾವುದೇ ರೀತಿಯ ಸ್ನೇಹದಲ್ಲಿ ಸ್ವಾರ್ಥ ಇರಬಹುದು. ಆದರೆ ಆಹಾರದ ಸ್ನೇಹದಲ್ಲಿ ಅದಕ್ಕೆ ಅವಕಾಶ ಇಲ್ಲ. ಹೊಸ ಪಾಕವಿಧಾನಗಳನ್ನು ಹುಡುಕುತ್ತಿರುವಾಗ ಅಂತಹ ಸ್ನೇಹಕ್ಕಾಗಿ ಅವಕಾಶಗಳಿದೆ. ಈ ವೇಳೆ ನಿಮಗೆ ಜೀವದ ಗೆಳೆಯರು ಸಿಗುತ್ತಾರೆ. ನಿಮ್ಮ ಸ್ನೇಹಿತರಿಗೆ ಕರೆ ಮಾಡಿ, ನಿಮ್ಮ ಪಾಕ ಪ್ರಾವೀಣ್ಯತೆಯನ್ನು ಪ್ರದರ್ಶಿಸುವ ಮೂಲಕ ಪ್ರಶಂಸೆ ಪಡೆಯಬಹುದು.
ಇವೆಲ್ಲವೂ ಅವಿವಾಹಿತ ಯುವತಿಯರಿಗೆ ಆದರೆ, ಗೃಹಿಣಿಯರಿಗೆ ಒತ್ತಡ ನಿವಾರಣೆಗೆ ಏನು ಪರಿಹಾರ. ದಿನವಿಡಿ ಅವರು ಅಡುಗೆ ಮನೆಯಲ್ಲಿ ಕಾಲ ಕಳೆಯುದಿಲ್ಲವಾ ಎಂಬ ಪ್ರಶ್ನೆ ಕಾಡುತ್ತದೆ. ಆದರೆ, ನೆನಪಿನಲ್ಲಿಡಿ ಅವರು ಅಡುಗೆ ಮಾಡುವುದು ಗಂಡ ಮತ್ತು ಮಕ್ಕಳಿಗಾಗಿ. ಅವರು ಕೂಡ ನನಗಾಗಿ ಎಂಬ ನಿಯಮವನ್ನು ಪಾಲಿಸಿದರೆ ಲಾಭ ಇದೆ. ಪ್ರತಿಬಾರಿ ನೀವು ಮಾಡುವ ಅಡುಗೆ ನಿಮಗೆ ಇಷ್ಟಾನಾ ಎಂದು ಕೇಳಿಕೊಳ್ಳಿ. ಹಾಗೇ ಇಲ್ಲ ಎಂದರೆ, ಮೇಲೆ ಹೇಳಿದ 'ನನಗಾಗಿ' ಎಂಬ ನಿಯಮವನ್ನು ಅನುಸರಿಸಿ.
ಇದನ್ನೂ ಓದಿ: ಭಾರತೀಯ ಆಹಾರದಲ್ಲಿ ಆಲೂಗಡ್ಡೆಗೆ ಹೆಚ್ಚಿನ ಪ್ರಾಮುಖ್ಯತೆ: ಶೇ 65ರಷ್ಟು ಜನರ ಮನಗೆಲ್ಲುವಲ್ಲಿ ಸಫಲ