ಕಳೆದ ಎರಡು ವರ್ಷಗಳಿಂದ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಎಲ್ಲರು ಬಳಲುತ್ತಿದ್ದೇವೆ. ಸಾಬೂನು ಮತ್ತು ನೀರಿನಿಂದ ಕೈ ತೊಳೆಯುವುದು ಹಾಗೂ ಸ್ಯಾನಿಟೈಜರ್ ಬಳಸುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.
ಕೊರೊನಾ ಸೋಂಕು ತಗುಲಬಾರದೆಂದರೇ ಕೈಗಳನ್ನು ಸೋಪು ಮತ್ತು ಸ್ಯಾನಿಟೈಜರ್ನಿಂದ ತೊಳೆಯುವುದು ಅನಿವಾರ್ಯವಾಗಿದೆ. ಹೀಗೆ ಕೈಯನ್ನು ಹೆಚ್ಚು ತೊಳೆಯುವುದರಿಂದ ಇದು ಡ್ರೈನೆಸ್ಗೆ ಕಾರಣವಾಗಬಹುದು. ಅಲ್ಲದೇ ಒಣಗಿದ ಕೈ ತುರಿಕೆಗೆ ಕಾರಣವಾಗಬಹುದು.
ಹಾಗಂತಾ, ಕೈ ತೊಳೆಯುವುದನ್ನು ಬಿಡಲೂ ಆಗುವುದಿಲ್ಲ. ಕೈ ತೊಳೆಯುವುದು ಮತ್ತು ಶುಚಿಗೊಳಿಸುವುದು ಅತ್ಯಗತ್ಯವಾಗಿರುವುದರಿಂದ, ನಾವು ಚರ್ಮ ಡ್ರೈ ಆಗುವುದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ನೋಡೋಣ. ಕೊಳಕು ಮತ್ತು ಸೂಕ್ಷ್ಮಾಣುಗಳನ್ನು ತೆಗೆದು ಹಾಕಲು ಸೌಮ್ಯವಾದ ಮತ್ತು ಸುಗಂಧಯುಕ್ತ ಸೋಪ್ನ ಬಳಸಬಹುದಾಗಿದೆ.
ಇದನ್ನೂ ಓದಿ: ಹದಿಹರೆಯದವರಿಗೆ ತಮ್ಮ ದೇಹದ ಬಗೆಗಿನ ನಕರಾತ್ಮಕ ಅಂಶಗಳನ್ನು ಫೋಷಕರು ದೂರ ಮಾಡುವುದೇಗೆ?
ಕೈಗಳನ್ನು ತೊಳೆಯಲು ಬಿಸಿ ನೀರಿನ ಬದಲು, ಬೆಚ್ಚಗಿನ ನೀರನ್ನು ಬಳಸುವುದು ಉತ್ತಮವಾಗಿದೆ. ಅಲ್ಲದೇ ಕೈಯನ್ನು ತೊಳೆದ ನಂತರ ಮೃದುವಾದ ಟವೆಲ್‌ನಿಂದ ಒರೆಸಬೇಕು. ಕೈಯಲ್ಲಿನ ತೇವಾಂಶವನ್ನು ಹಾಗೆ ಇಡಲು, ಕೈಗಳಿಗೆ ಉತ್ತಮವಾದ ಕ್ರೀಮ್ ಅಥವಾ ಲೋಷನ್ನನ್ನು ಹಚ್ಚಬಹುದಾಗಿದೆ. ನೀವು ಕೈಗಳನ್ನು ತೊಳೆದಾಗಲೆಲ್ಲಾ ಈ ಕ್ರಮವನ್ನು ಅನುಸರಿಸಿ.
ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ (ಎಎಡಿ) ಪ್ರಕಾರ, ಒಣಗಿದ, ಬಿರುಕು ಬಿಟ್ಟ ಚರ್ಮದ ಮೂಲಕ ಬ್ಯಾಕ್ಟೀರಿಯಾ ಮತ್ತು ಇತರ ಸೂಕ್ಷ್ಮಜೀವಿಗಳು ನಿಮ್ಮ ದೇಹದೊಳಗೆ ಸುಲಭವಾಗಿ ಪ್ರವೇಶಿಸುತ್ತವೆ. ಕೈ ತೊಳೆದ ನಂತರ ಮಾಯಿಶ್ಚರೈಸರ್ನನ್ನು ಹಚ್ಚುವುದರಿಂದ ಒಣಗಿದ ಚರ್ಮವನ್ನು ಸರಿ ಮಾಡಬಹುದಾಗಿದೆ.
ನೀವು ಬಳಸಬಹುದಾದ ಹಲವಾರು ಕ್ರೀಮ್‌ಗಳು, ಮಾಯಿಶ್ಚರೈಸರ್‌ಗಳು ಮತ್ತು ಲೋಷನ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅಲ್ಲದೇ ತೈಲ ಆಧಾರಿತ ಕ್ರೀಮ್ಗಳನ್ನು ಹೆಚ್ಚು ಬಳಸುವುದು ಉತ್ತಮ.
ಒಣ ಚರ್ಮವನ್ನು ಹೋಗಲಾಡಿಸಲು ಪರಿಹಾರ :
ಅಲೋವೆರಾ : ಅಲೋವೆರಾ ಜೆಲ್ ಪ್ರತಿಯೊಂದು ಚರ್ಮದ ಸಮಸ್ಯೆಗೆ ಸರಳ ಮತ್ತು ಸುಲಭವಾದ ಪರಿಹಾರವಾಗಿದೆ. ಇದು ಚರ್ಮ ಒಡೆಯುವುದನ್ನು ಕಡಿಮೆ ಮಾಡುತ್ತದೆ. ಅಲೋವೆರಾ ಚರ್ಮದ ಕಿರಿಕಿರಿ ಮತ್ತು ಚರ್ಮ ಒಡೆಯುವುದರಿಂದ ನೀವು ಅನುಭವಿಸುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಜೆಲ್ ಜೊತೆಗೆ ತಾಜಾ ಅಲೋವೆರಾ ಜೆಲ್ ಹೆಚ್ಚು ಪ್ರಯೋಜನಕಾರಿಯಾಗಿದೆ.
ಪೆಟ್ರೋಲಿಯಂ ಜೆಲ್ಲಿ : ಇದು ಇತರ ಕ್ರೀಮ್‌ಗಳು ಮತ್ತು ಮಾಯಿಶ್ಚರೈಸರ್‌ಗಳಂತೆ ತ್ವರಿತವಾಗಿ ಹೀರಲ್ಪಡದ ಕಾರಣ ಇದು ಸ್ವಲ್ಪ ಜಿಗುಟು ಅನಿಸಬಹುದು. ಆದರೆ, ಇದು ಅತ್ಯಂತ ಪರಿಣಾಮಕಾರಿಯಾಗಿದೆ. ಇದು ತೇವಾಂಶವನ್ನು ಹಿಡಿದಿಡುತ್ತದೆ ಮತ್ತು ಬಿರುಕು ಬಿಟ್ಟ ಚರ್ಮವನ್ನು ಸರಿಪಡಿಸಲು ಸಹಾಯ ಮಾಡುತ್ತದೆ.
ಮಾಯಿಶ್ಚರೈಸಿಂಗ್ ಮಾಸ್ಕ್ : ಸ್ವಲ್ಪ ಅಲೋವೆರಾ ಜ್ಯೂಸ್, ಜೇನುತುಪ್ಪ, ತೆಂಗಿನ ಎಣ್ಣೆ, ಅರಿಶಿನ ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ಕೈಗಳಿಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ಅದನ್ನು ತೊಳೆಯಿರಿ. ಇದು ನಿಮ್ಮ ಕೈಗಳನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ತೆಂಗಿನೆಣ್ಣೆ : ತೆಂಗಿನೆಣ್ಣೆಯು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ ಮತ್ತು ಇದು ತ್ವಚೆಯನ್ನು ಹೆಚ್ಚು ಕಾಲ ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಇದರ ಸಣ್ಣ ಕಣದ ಗಾತ್ರವು ಚರ್ಮದಲ್ಲಿ ಸುಲಭವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ನೀವು ಸೂರ್ಯಕಾಂತಿ ಎಣ್ಣೆಯನ್ನು ಸಹ ಬಳಸಬಹುದು.
ಇದಲ್ಲದೆ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಬಳಸುವುದಕ್ಕಿಂತ ಹೆಚ್ಚಾಗಿ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತೊಳೆಯಲು ಆದ್ಯತೆ ನೀಡಿ. ನೀವು ಮಾಯಿಶ್ಚರೈಸರ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ನನ್ನು ಸಹ ಬಳಸಬಹುದಾಗಿದೆ. ಆದರೆ, ಇದು ಚರ್ಮದ ಮೇಲಿನ ವೈರಸ್ ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಸಾಮಾನ್ಯ ಸ್ಯಾನಿಟೈಸರ್‌ಗಳಂತೆ ಪರಿಣಾಮಕಾರಿಯಾಗಿರುವುದಿಲ್ಲ.
ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಒಣಗಿದ ಕೈಗಳಿಂದ ಹೋರಾಡುವುದು ಕೆಲವೊಮ್ಮೆ ಕಿರಿಕಿರಿ ಉಂಟುಮಾಡಬಹುದು. ಆದರೆ, ನೆನಪಿಡಿ, ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ. ಆದ್ದರಿಂದ, ವೈರಸ್ನೊಂದಿಗೆ ಹಾಸಿಗೆಯ ಮೇಲೆ ಮಲಗುವುದಕ್ಕಿಂತ ನೈರ್ಮಲ್ಯ ಮತ್ತು ಇತರ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಉತ್ತಮ.