ಸಕ್ಕರೆ ತುಂಬಿದ ಸಿಹಿ ತಿಂಡಿಗಳು ಯಾರಿಗೆ ತಾನೇ ರುಚಿಸದೇ ಇರದು ಹೇಳಿ. ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಆದರೆ, ಮಿತವ್ಯಯದ ಸಕ್ಕರೆ ಅರೋಗ್ಯಕ್ಕೆ ಲಾಭದಾಯಕ ಕೂಡ. ಇಂತಹ ಸಕ್ಕರೆ ಕೇವಲ ಆಹಾರದ ರುಚಿಯನ್ನು ಮಾತ್ರ ಹೆಚ್ಚಿಸುವುದಿಲ್ಲ. ಅನೇಕ ಇತರೆ ಪ್ರಯೋಜನಗಳನ್ನು ಕೂಡ ಹೊಂದಿದೆ. ಆಹಾರದ ಹೊರತಾಗಿ ಸಕ್ಕರೆಯನ್ನು ಯಾವೆಲ್ಲದಕ್ಕೆ ಬಳಸಬಹುದು. ಇದರಿಂದ ಆಗುವ ಪ್ರಯೋಜನ ಏನು ಎಂಬ ಮಾಹಿತಿ ಇಲ್ಲಿದೆ.
ನಿತ್ಯ ನಿಮ್ಮ ಮನೆಯಲ್ಲಿರು ಹೂದಾನಿಯ ನೀರನ್ನು ಬದಲಾಯಿಸುತ್ತಿದ್ದರೆ, ಅದಕ್ಕೆ ನೀರಿನ ಜೊತೆ ಇನ್ಮುಂದೆ ಒಂದು ಕಪ್ ಸಕ್ಕರೆ ಬೆರಸಿ. ಈ ಸಕ್ಕರೆ ಬೆರಸಿದ ನೀರು ಹೂವನ್ನು ಬೇಗ ಬಾಡದಂತೆ, ದೀರ್ಘಾವಧಿಯವರೆಗೆ ಕಾಪಾಡುತ್ತದೆ. ಹೂವು ದಿನವಿಡಿ ಅರಳಿರಲು ಈ ಸಕ್ಕರೆ ಸಹಾಯ ಮಾಡುವುದು ಸುಳ್ಳಲ್ಲ. ಬೇಕರಿ ತಿಸಿಸುಗಳ ಬಿಸ್ಕೆಟ್ ಮತ್ತು ಪಫ್ಗಳನ್ನು ಸೇರಿಸುವುದಾದರೆ, ಅದನ್ನು ಶೇಖರಿಸುವ ಡಬ್ಬದಲ್ಲಿ ಒಂದು ಸಣ್ಣ ಪ್ಯಾಕೆಟ್ ಸಕ್ಕರೆಯನ್ನು ಇಡಿ. ಈ ರೀತಿ ಸಕ್ಕರೆಯನ್ನು ಇಡುವುದರಿಂದ ಪದಾರ್ಥ ದೀರ್ಘಾವಧಿವರೆಗೆ ಕೆಡದಂತೆ ಕಾಪಾಡಲಾಗುತ್ತದೆ
ಸಕ್ಕರೆ ಯಾವುದಕ್ಕೆಲ್ಲ ಬೇಕು ಗೊತ್ತಾ: ಗೋಧಿ, ನಿಂಬೆಯಂತಹ ಹಸಿರುವ ಹುಲ್ಲುಗಳನ್ನು ಬೆಳೆಸುವಾಗ ಅದಕ್ಕೆ ಕೊಂಚ ಸಕ್ಕರೆಯನ್ನು ಸೇರಿಸಬೇಕು. ಸಕ್ಕರೆಯಲ್ಲಿನ ಅಂಶ ಅದರ ಬೆಳವಣಿಗೆಗೆ ಸಹಕಾರಿಯಾಗಿದೆ. ಬಟ್ಟೆಯಲ್ಲಿ ಕಲೆಯಾಗಿ ಎನೇ ಮಾಡಿದರೂ ಹೋಗುತ್ತಿಲ್ಲ ಎಂದು ತಲೆ ಕಡೆಸಿ ಕುಳಿತಿದ್ದರೆ, ಅದಕ್ಕೆ ಬಿಸಿ ನೀರಿನೊಂದಿಗೆ ಸಕ್ಕರೆ ಸೇರಿಸಿ, ಕಲೆಯಾದ ಜಾಗದಲ್ಲಿ ಸಿಂಪಡಿಸಿ, ಇದನ್ನು ಅರ್ಧಗಂಟೆ ಬಳಿಕ ಸೋಪ್ ಸಹಾಯದಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ಬಟ್ಟೆಯ ಮೇಲಿ ಕಲೆ ತೆಗೆಯುವ ಕೆಲಸ ಸುಲಭವಾಗಲಿದೆ.
ಗ್ರೀಸ್ ಮೆತ್ತಿಕೊಂಡರೆ ಹೀಗೆ ಮಾಡಿ: ಕೈಯಲ್ಲಿ ಗ್ರೀಸ್ ಕಲೆ ಮೆತ್ತಿಕೊಂಡಿದ್ದರೂ ಅಷ್ಟೆ, ಇದನ್ನು ಬೇಗ ನಿವಾರಿಸಲು ಸಕ್ಕರೆಯ ನೀರನ್ನು ಸಿಂಪಡಸಿ, ಬಳಿಕ ಸೋಪ್ ಸಹಾಯದಿಂದ ಶುಚಿಗೊಳಿಸಿ, ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಆಗಲಿದೆ. ಬಹುತೇಕ ಮಂದಿ ಕೈಯಲ್ಲಿ ಹಾಕಿದ್ದ ಮೆಹಂದಿ ಬಣ್ಣ ಗಾಢವಾಗಿ ಬರಬೇಕು ಎಂದು ಬಯಸುವುದು ಸಹಜ. ಮೆಹಂದಿಗೆ, ನೀಲಿಗಿರಿ ಎಣ್ಣೆ ಹಾಕಿದರೂ ನಿಮ್ಮ ಕೈಯ ಮೆಹಂದಿ ರಂಗು ಗಾಢವಾಗುತ್ತಿಲ್ಲ ಎಂದರೆ, ಕೈಗೆ ಮೆಹಂದಿ ಹಾಕಿದ ಬಳಿಕ ಅರ್ಥಗಂಟೆ ಬಿಟ್ಟು ಸಕ್ಕರೆಯುಕ್ತ ನೀರನ್ನು ಸಿಂಪಡಿಸಬೇಕು. ಇದರಿಂದ ಕೈಯಲ್ಲಿನ ಮೆಹಂದಿ ಗಾಢವಾಗುತ್ತದೆ.
ಇನ್ನು ರುಚಿ ರುಚಿಯಾದ ಫಿಲ್ಟರ್ ಕಾಫಿ ಹೀರುವ ಮನಸ್ಸು ಎಲ್ಲರಿಗೆ ಇರುತ್ತದೆ. ಕೆಲವೊಮ್ಮೆ ಮನೆಯಲ್ಲಿ ಹಾಕಿದ ಫಿಲ್ಟರ್ ಕಾಫಿ ಡಿಕಾಕ್ಷನ್ ದಪ್ಪ ಬರವುದಿಲ್ಲ ಎಂಬುದು ಅನೇಕರ ಮಾತು. ಅಂತಹ ಸಂದರ್ಭದಲ್ಲಿ ಫಿಲ್ಟರ್ಗೆ ಕಾಫಿ ಪುಡಿ ಹಾಕಿದಾಗ, ಒಂದು ಚಮಚ ಸಕ್ಕರೆಯನ್ನು ಹಾಕಿ, ಬಿಸಿ ನೀರು ಸುರಿಯಿರಿ. ಇದರಿಂದ ಕಾಫಿಯ ರುಚಿ ಹೆಚ್ಚುವುದು ಸುಳ್ಳಲ್ಲ. ಇನ್ನು ಅಹಾರದ ಹೊರತಾಗಿ ಸೌಂದರ್ಯವರ್ಧಕವಾಗಿ ಕೂಡ ಈ ಸಕ್ಕರೆಯನ್ನು ಬಳಕೆ ಮಾಡಬಹುದು. ಸ್ಕಬ್ನಂತೆ ಕಾರ್ಯ ನಿರ್ವಹಿಸುತ್ತದೆ ಇದು. ನಿಂಬೆ, ಜೇನುತುಪ್ಪದ ಜೊತೆ ಸಕ್ಕರೆ ಬೆರೆಸಿ ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿ, ಮಸಾಜ್ ಮಾಡುವುದರಿಂದ ಹೊಳೆಯುವ ತ್ವಚೆ ಪಡೆಯಬಹುದು.
ಇದನ್ನೂ ಓದಿ: ನೀವು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ: ರಕ್ತಹೀನತೆ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ..