ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಮಾನವ ಸೇವೆ ಇಲಾಖೆ (ಎಚ್ಎಚ್ಎಸ್) ಮನೆಯಲ್ಲಿಯೇ ಕೋವಿಡ್ ಪರೀಕ್ಷೆ ನಡೆಸುವ ಕೋವಿಡ್ 19 ಕಿಟ್ ತಯಾರಿಸಲು 600 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಅಲ್ಲದೇ ಈ ಟೆಸ್ಟ್ ಕಿಟ್ಗಳನ್ನು ಉಚಿತವಾಗಿ ದೇಶಾದ್ಯಂತ ಪ್ರತಿ ಮನೆಗೂ ಹಂಚುವುದಾಗಿ ತಿಳಿಸಿದೆ.
ಏಳು ರಾಜ್ಯಗಳಲ್ಲಿನ 12 ಯುಎಸ್ ತಯಾರಕರು ನಿರ್ಣಾಯಕ ಹೂಡಿಕೆ ಮಾಡಲಿದ್ದು, ಇದರಿಂದ ನಮ್ಮ ದೇಶಿಯ ಕೋವಿಡ್ 19 ತಕ್ಷಣದ ಪರೀಕ್ಷಾ ಉತ್ಪಾದನಾ ಮಟ್ಟ ಬಲಗೊಳ್ಳುತ್ತದೆ. ಇದು ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಎಚ್ಎಚ್ಎಸ್ ಕಾರ್ಯದರ್ಶಿ ಕ್ಸೇವಿಯರ್ ಬೆಸೆರಾ ತಿಳಿಸಿದ್ದಾರೆ.
ಉಚಿತವಾಗಿ ಮನೆ ತಲುಪಲಿದೆ ಕಿಟ್: ಕೋವಿಡ್ ಕಿಟ್ಗಳನ್ನು ಸೆಪ್ಟೆಂಬರ್ 25ರ ಬಳಿಕ ಪ್ರತಿ ಕುಟುಂಬಗಳು ನಾಲ್ಕು ಉಚಿತ ಪರೀಕ್ಷಾ ಕಿಟ್ ಆರ್ಡರ್ ಮಾಡಬಹುದು. ಈ ಕಿಟ್ ಮೂಲಕ ಸದ್ಯ ಇರುವ ಕೋವಿಡ್ ರೂಪಾಂತರ ತಳಿಯ ವೈರಸ್ ಅನ್ನು ಪತ್ತೆ ಮಾಡಬಹುದು. ಈ ವರ್ಷಾಂತ್ಯದಲ್ಲಿ ಇದರ ಬಳಕೆ ನಡೆಯಲಿದೆ ಎಂದು ಕ್ಸಿನ್ಹವಾ ಸುದ್ದಿ ಸಂಸ್ಥೆ ತಿಳಿಸಿದೆ.
ಅಮೆರಿಕದ ಪೋಸ್ಟಲ್ ಸರ್ವೀಸ್ ಪ್ರೋವೈಡರ್ ದೇಶಾದ್ಯಂತ 755 ಮಿಲಿಯನ್ ಟೆಸ್ಟ್ ಅನ್ನು ಮನೆಗಳಿಗೆ ಉಚಿತವಾಗಿ ಒದಗಿಸಲಿದೆ. ಶಾಲೆಗಳು, ಕಡಿಮೆ-ಆದಾಯದ ಹಿರಿಯ ವಸತಿ ಪ್ರದೇಶ, ವಿಮೆ ಮಾಡದ ವ್ಯಕ್ತಿಗಳು ಮತ್ತು ಕಡಿಮೆ ಸಮುದಾಯಗಳಿಗೆ ಉಚಿತ ಕೋವಿಡ್ -19 ಪರೀಕ್ಷಾ ಕಿಟ್ಗಳನ್ನು ನೀಡುವ ಪ್ರಯತ್ನ ನಡೆಸಲಾಗಿದೆ. ಈ ಹಿಂದೆ 500 ಮಿಲಿಯನ್ ಪರೀಕ್ಷಾ ಕಿಟ್ಗಳನ್ನು ಒದಗಿಸಲಾಗಿದೆ.
ಬೂಸ್ಟರ್ಗೂ ಅನುಮೋದನೆ: ಕೋವಿಡ್ ಸಾರ್ವಜನಿಕ ತುರ್ತುಸ್ಥಿತಿ ಅಂತ್ಯದವರೆಗೆ ಕಿಟ್ಗಳನ್ನು ನೀಡಲಾಯಿತು. ಇದೀಗ ಕೋವಿಡ್ ಪ್ರಕರಣಗಳು ಮತ್ತೆ ದೇಶದಲ್ಲಿ ಉಲ್ಬಣಿಸಿದ್ದು, ಅಮೆರಿಕ ರೂಪಾಂತರಿ ವೈರಸ್ಗಳನ್ನು ಗಮನದಲ್ಲಿರಿಸಿ ಹೊಸ ಲಸಿಕೆಗಳಿಗೂ ಕೂಡ ಅನುಮೋದನೆ ನೀಡಿದೆ. ಹೊಸ ಕೋವಿಡ್ ವೈರಸ್ ಬೂಸ್ಟರ್ ಡೋಸ್ಗೆ ಕಳೆದ ವಾರವಷ್ಟೆ ಅನುಮೋದನೆ ನೀಡಿತು. 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರೂ ನವೀಕರಿಸಿದ ಕೋವಿಡ್ ಬೂಸ್ಟರ್ ಅನ್ನು ಪಡೆಯಬಹುದು ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಶಿಫಾರಸು ಮಾಡಿದೆ. (ಐಎಎನ್ಎಸ್)
ಇದನ್ನೂ ಓದಿ: ಯುಕೆಯಲ್ಲಿ ಕೋವಿಡ್ ಉಲ್ಬಣ; 65 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಪಡೆಯುವಂತೆ ಮನವಿ