ಡೆನ್ಮಾರ್ಕ್: ಶ್ರೋಣಿಯ ನೋವು ಮತ್ತು ಭಾರೀ ಮುಟ್ಟಿನ ರಕ್ತಸ್ರಾವವನ್ನು ಉಂಟುಮಾಡುವ ದೀರ್ಘಕಾಲದ ಸ್ಥಿತಿಯಾದ ಅಡೆನೊಮೈಯೋಸಿಸ್ ಹೊಂದಿರುವ ಮಹಿಳೆಯರು ಬಂಜೆತನದ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ. ಇವರು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಸಮಸ್ಯೆಗಳಿಗೆ ಒಳಗಾಗುತ್ತಾರೆ ಎಂದು ಯುರೋಪಿಯನ್ ಸೊಸೈಟಿ ಆಫ್ ಹ್ಯೂಮನ್ ರಿಪ್ರೊಡಕ್ಷನ್ ಅಂಡ್ ಎಮಬ್ರೊಯೊಲಾಜಿಯ 39ನೇ ವಾರ್ಷಿಕ ಸಭೆಯಲ್ಲಿ ಸಂಶೋಧಕರು ತಿಳಿಸಿದ್ದಾರೆ.
ಮೊದಲ ಅಧ್ಯಯನದ ದತ್ತಾಂಶದಲ್ಲಿ 9 ಮಿಲಿಯನ್ ತಾಯಿಯಾಗುತ್ತಿರುವ ಅಡೆನೊಮೈಯೋಸಿಸ್ ಹೊಂದಿರುವ ಮಹಿಳೆಯರು ಹೆಚ್ಚಿನ ತೊಂದರೆಯ ದರವನ್ನು ಹೊಂದಿರುತ್ತಾರೆ. ಅತಿ ಹೆಚ್ಚಿನ ಅಪಾಯವೂ ಸೀಸೆರಿಯನ್ ಡೆಲಿವರಿಯಲ್ಲಿ ಹೊಂದಿದೆ. ಇದು ಸಾಮಾನ್ಯ ಸ್ಥಿತಿಗಿಂತ ಶೇ 20ರಷ್ಟು ಹೆಚ್ಚು ಅಪಾಯಕಾರಿಯಾಗಿದೆ. ಈ ವೇಳೆ ಗರ್ಭಾಶಯ ಮತ್ತು ಅದರ ಗಾಯದ ತೊಂದರೆಗಳು ಹೆಚ್ಚಾಗುವ ಸಂಭವ ಇದೆ ಎಂದು ಫಲಿತಾಂಶ ತೋರಿಸುತ್ತಿದೆ ಎಂದಿದ್ದಾರೆ.
ಜಾಗತಿಕವಾಗಿ ಅಡೆನೊಮೈಯೋಸಿಸ್ ಹೊಂದಿರುವ ಮಿಲಿಯನ್ಗಟ್ಟಲೇ ಮಹಿಳೆಯರನ್ನು ಮಾನಿಟರಿಂಗ್ ಮಾಡುವ ಅಗತ್ಯ ಇದೆ ಎಂದು ಲೇಖಕರು ತಿಳಿಸುತ್ತಾರೆ. ಇದು ಮಹಿಳೆಯರ ಗಂಭೀರ ಸಮಸ್ಯೆಗಳು ಅಥವಾ ಮಗು ಅಥವಾ ತಾಯಿಯ ಸಾವಿನ ಅಪಾಯವನ್ನು ಕಡಿಮೆ ಮಾಡಲು ಅಥವಾ ತಗ್ಗಿಸಲು ಸಹಾಯ ಮಾಡುತ್ತದೆ. ಅಡೆನೊಮೈಯೋಸಿಸ್ ಹೊಂದಿರುವ ಮಹಿಳೆಯರು ಫಲವತ್ತತ್ತೆಯ ಸಮಸ್ಯೆ, ಅವಧಿ ಪೂರ್ವ ಜನನ ಅಥವಾ ಸ್ತ್ರಿರೋಗ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಎಂದು ಅಧ್ಯಯನ ಪ್ರಮುಖ ಲೇಖಕ ಡಾ ಮೊಹಮ್ಮದ್ ಬಸರಾಹ್ ತಿಳಿಸಿದ್ದಾರೆ.
ಗರ್ಭಾವಸ್ಥೆಯ ಪರಿಣಾಮದ ದೀರ್ಘ ಉರಿಯೂತದಂತಹ ಹಲವು ಅಂಶಗಳ ಮೇಲೆ ಅಧ್ಯಯನವೂ ಆಳವಾದ ವಿಶ್ಲೇಷಣೆಯನ್ನು ನೀಡುತ್ತದೆ. ಇದು ರೋಗಿಗಳ ಕಾಳಜಿ ಮತ್ತು ಮಾನಿಟರ್ ಮಾಡಲು ವೈದ್ಯರಿಗೆ ಸಹಾಯ ಮಾಡುತ್ತದೆ. ಅಡೆನೊಮೈಯೋಸಿಸ್ ಮಹಿಳೆಯರ ಸಂತಾನೋತ್ಪತ್ತಿಯ ವಯಸ್ಸಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಎಂಡೊಮೆಟ್ರಿಯಲ್ ಅಂಗಾಂಶ ಮತ್ತು ಸಾಮಾನ್ಯವಾಗಿ ಗರ್ಭಾಶಯವನ್ನು ಆವರಿಸಿರುವ ಗ್ರಂಥಿಗಳು ಗರ್ಭಾಶಯದ ಸ್ನಾಯುವಿನ ಗೋಡೆಯಲ್ಲಿ ಕಂಡುಬಂದಾಗ ಅಥವಾ ಬೆಳೆಯುವಾಗ ಇದು ಸಂಭವಿಸುತ್ತದೆ.
ಋತುಚಕ್ರದಲ್ಲಿ ಈ ದಪ್ಪ ಟಿಶ್ಯೂ ಮತ್ತು ರಕ್ತಸ್ರಾವಗಳು ಸಾಮಾನ್ಯವಾಗು ಗರ್ಭಾಶಯದಲ್ಲಿ ಇರುತ್ತದೆ. ಅನೇಕ ನೋವು, ಅಧಿಕ ರಕ್ತಸ್ರಾವ ಮತ್ತು ಲೈಂಗಿಕತೆ ಸಮಯದಲ್ಲಿ ನೋವಿನಂತಹ ಗುಣಲಕ್ಷಣವನ್ನು ಹೊಂದಿದೆ. ಆದಾಗ್ಯೂ, ಕೆಲವು ಮಹಿಳೆಯರು ಈ ಸಮಸ್ಯೆ ಪತ್ತೆಯಾಗುವವರೆಗೆ ದೈಹಿಕವಾಗಿ ಯಾವುದೇ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ. ಅಡೆನೊಮೈಯೋಸಿಸ್ ಎಂಡೊಮೆಟ್ರಿಯಲ್ ಜೊತೆ ಉಂಟಾಗಬಹುದು. ಇದು ಅದೇ ರೀತಿ ಇದ್ದರೂ, ಇದು ಪತ್ಯೇಕ ಸ್ಥಿತಿಯಾಗಿದೆ.
ಅಡೆನೊಮೈಯೋಸಿಸ್ ರೋಗಿಗಳು ಹೆಚ್ಚಾಗಿ ಪ್ರಸೂತಿ ಮತ್ತು ಸ್ತ್ರಿರೋಗದ ಸಮಸ್ಯೆಯನ್ನು ಅನುಭವ ಹೊಂದಿರುತ್ತಾರೆ. ಈ ಕುರಿತು ಅಧ್ಯಯನಕ್ಕಾಗಿ 2004ರಿಂದ 204ರವರೆಗೆ ದೇಶಾವ್ಯಾಪಿ ಒಳರೋಗಿಗಳ (ಎನ್ಐಎಸ್) ಮಾದರಿಗಳ ದತ್ತಾಂಶವನ್ನು ಬಳಕೆ ಮಾಡಲಾಗುತ್ತದೆ. ಅಮೆರಿಕದಲ್ಲಿ ಆರೋಗ್ಯ ಕಾಳಜಿ ವೆಚ್ಚ ಮತ್ತು ಬಳಕೆ ಯೋಜನೆಯ ಭಾಗವಾಗಿ ಈ ಎನ್ಐ ಇದೆ. ಇದು ಒಳರೋಗಿಗಳ ದೊಡ್ಡ ಮಟ್ಟದ ದತ್ತಾಂಶ ಸಂಗ್ರಹಣೆ ಆಗಿದೆ. ಈ ಅಧ್ಯಯನದಲ್ಲಿ 9, 094,321 ಅಡೆನೊಮೈಯೋಸಿಸ್ ಹೊಂದಿರದ ಗರ್ಭಿಣಿರುತು ಮತ್ತು 2,467 ಅಡೆನೊಮೈಯೋಸಿಸ್ ಗರ್ಭಿಣಿಯರ ದತ್ತಾಂಶವನ್ನು ಪಡೆಯಲಾಗಿದೆ. ಈ ವೇಳೆ ಇಬ್ಬರ ಫಲಿತಾಂಶವನ್ನು ಹೋಲಿಕೆ ಮಾಡಲಾಗಿದೆ. ಫಲಿತಾಂಶದಲ್ಲಿ ಅಡೆನೊಮೈಯೋಸಿಸ್ ವಯಸ್ಸಾದ, ಸ್ಥೂಲಕಾಯ ಮತ್ತು ಅಧಿಕ ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆ, ಪೂರ್ವದಲ್ಲಿ ಸಿ ಸೆಕ್ಷನ್ ಅಥವಾ ಐವಿಎಫ್ ಹೊಂದಿರುವವರಲ್ಲಿ ಪತ್ತೆಯಾಗಿದೆ. ಅಡೆನೊಮೈಯೋಸಿಸ್ ಹೊಂದಿರುವ ಮಹಿಳೆಯರು ಹೆರಿಗೆ ವೇಳೆ 5.86 ಪಟ್ಟು ಹೆಚ್ಚಿನ ಅಪಾಯ ಹೊಂದಿರುತ್ತಾರೆ.
ಇದನ್ನೂ ಓದಿ: Infertility: ಬಂಜೆತನದಿಂದ ಬಳಲುವ ದಂಪತಿಗಳಿಗೆ ವರವಾಗಲಿದೆ ಹಾರ್ಮೋನ್ ಚಿಕಿತ್ಸೆ; ಏನಿದು ಹೊಸ ವಿಧಾನ?