ನವದೆಹಲಿ: ದಿನದ ದಣಿವು ಆರಿಸುವಲ್ಲಿ ಸ್ನಾನ ವಿಶ್ರಾಂತಿದಾಯಕ ಅನುಭೂತಿಯನ್ನು ನೀಡಯತ್ತದೆ. ಮೈ- ಮನಸ್ಸುಗಳ ಪುನರ್ಯೌವನಗೊಳಿಸುವಲ್ಲಿ ಉತ್ತಮ ಅನುಭವವನ್ನು ಉತ್ತಮ ಸ್ನಾನ ನೀಡಬಲ್ಲದು. ಇದರ ಜೊತೆಗೆ ತ್ವಚೆಯ ಕಾಳಜಿಗೆ ಗಮನವಹಿಸಬಹುದು. ಇಂತಹ ಅದ್ಬುತ ಸ್ನಾನಗಳ ಅನುಭೂತಿ ಸೌಂದರ್ಯ ವೃದ್ಧಿಗೂ ಸಹಾಯಕವಾಗಲಿದೆ. ಈ ಕುರಿತು ಹಿರಿಯ ನಟಿ ಮತ್ತು ವಿವೆಲ್ ವೇದ ವಿದ್ಯಾನ ರಾಯಭಾರಿಯಾಗಿರುವ ಶರ್ಮಿಳಾ ಟ್ಯಾಗೋರ್ ಹಲವು ಸಲಹೆ ನೀಡಿದ್ದಾರೆ.
ಕೃತಕ ಸೌಂದರ್ಯ ವರ್ಧಕಗಳ ಬದಲಾಗಿ, ನೈಸರ್ಗಿಕ ಪದಾರ್ಥಗಳ ಮಿಶ್ರಣಗಳು ಸ್ನಾನವನ್ನು ಮತ್ತುಷ್ಟು ಉತ್ಕೃಷ್ಟಗೊಳಿಸುತ್ತದೆ. ಅದರಲ್ಲೂ ಶ್ರೀಗಂಧವನ್ನು ಸ್ನಾನದಲ್ಲಿ ಸೇರಿಸುವುದು ತ್ವಚೆಗೆ ಅಗತ್ಯವಾಗಿದೆ. ಸ್ನಾನದಲ್ಲಿ ವಿವಿಧ ಗಿಡಮೂಲಿಕೆ, ಬೇರುಗಳು ಮತ್ತು ಎಣ್ಣೆಗಳಂತಹ, ವಿವಿಧ ಪುರಾತನ ಪದಾರ್ಥಗಳನ್ನು ಬಳಸಿ ಸ್ನಾನ ಅಭ್ಯಾಸ ಮಾಡುವುದರಿಂದ ತ್ವಚೆಗೆ ಆಳವಾದ ಪೋಷಣೆ ಲಭ್ಯವಾಗುತ್ತದೆ. ಇಂತಹ ಶ್ರೀಮಂತ ಐಷಾರಾಮಿ ಸ್ನಾನ ಪ್ರಕ್ರಿಯೆ ಕೆಲವು ಸ್ನಾನದ ವಿಧಾನಗಳನ್ನು ಅವರು ತಿಳಿಸಿದ್ದಾರೆ.
ನರ್ಗಿಸ್ ಹೂವುಗಳು: ನರ್ಗಿಸ್ ಹೂವುಗಳು ಪರಿಮಳಯುಕ್ತ ತೈಲವು ಅಪರೂಪ ಮತ್ತು ಹೆಚ್ಚು ಮೌಲ್ಯಯುತವಾಗಿದೆ. ಸಾಮಾನ್ಯವಾಗಿ ಇದು ಡ್ಯಾಫೋಡಿಲ್ ಕರೆಯಲಾಗುತ್ತದೆ. ಈ ಹೂವಿನ ಎಣ್ಣೆಗಳು ಚರ್ಮವನ್ನು ಹೈಡ್ರೇಟ್ ಆಗಿ ಇಡುತ್ತದೆ. ಚರ್ಮದ ಆರೋಗ್ಯ ಸುಧಾರಿಸುವಲ್ಲಿ ಈ ಹೂವುಗಳು ಮ್ಯಾಜಿಕಲ್ ಪರಿಹಾರವನ್ನು ನೀಡುತ್ತದೆ ಜೊತೆಗೆ ಅನೇಕ ಚರ್ಮ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ಕುಂಕುಮಾದಿ ತೈಲಂ: ಸಂಪ್ರದಾಯಿಕ ಆಯುರ್ವೇದ ಎಣ್ಣೆ ಮಿಶ್ರಣ ಇದಾಗಿದೆ. ಇದರಿಂದ ಚರ್ಮಕ್ಕೆ ಹಲವಾರು ಪ್ರಯೋಜನ ಇದೆ. ಇದನ್ನು ಸಾಮಾನ್ಯವಾಗಿ ಕೇಸರಿ, ಶ್ರೀಗಂಧ, ಎಳ್ಳು ಎಣ್ಣೆ, ಅರಿಶಿಣಮ ರೋಸ್ ಆಯಿಲ್ , ಬಾದಾಮಿ ಎಣ್ಣೆ ಜೊತೆ ಮಿಶ್ರಣ ಮಾಡಿ ಬಳಕೆ ಮಾಡಲಾಗುವುದು. ಇದರಿಂದ ಚರ್ಮದ ಯೌವನವನ್ನು ಪಡೆಯಲು ಸಾಧ್ಯ. ಅಲ್ಲದೇ ಇದು ಅಸಮ ಚರ್ಮದ ಸಮಸ್ಯೆ ನಿವಾರಣೆ ಮಾಡಿ, ಕಾಂತಿಯನ್ನು ಹೆಚ್ಚಿಸುತ್ತದೆ. ಇದು ಆ್ಯಂಟಿ ಏಜಿಂಗ್ ಗುಣ ಗೊಂಡಿದ್ದು, ಚರ್ಮವನ್ನು ಹೈಡ್ರೆಡ್ ಮಾಡುವ ಗುಣ ಹೊಂದಿದೆ. ಜೊತೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ನಾಗರಮೋಠ: ಇದರ ಕಷಾಯದ ಗುಣವು ಅತಿಯಾದ ಎಣ್ಣೆ ಉತ್ಪಾದನೆಯನ್ನು ತಡೆದುಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಸ್ಕೀನ್ ಟೋನ್ ಕಾಪಾಡಿ, ಚರ್ಮದಲ್ಲಿ ಉಂಟಾಗುವ ರಂಧ್ರಗಳನ್ನು ಮುಚ್ಚುತ್ತದೆ. ಅಲ್ಲದೇ, ಇದು ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಇದರಲ್ಲಿನ ಆ್ಯಂಟಿಮೈಕ್ರೋಬಿಯಲ್ ಅಂಶ ಚರ್ಮವನ್ನು ಬಿಗಿ ಮಾಡುತ್ತದೆ. ಇದು ಸತ್ತ ಚರ್ಮದ ಕೋಸವನ್ನು ತೊಡೆದು ಚರ್ಮದ ವಿನ್ಯಾಸವನ್ನು ಹೆಚ್ಚಿಸುತ್ತದೆ, ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಚರ್ಮವನ್ನು ಹಾನಿಯಾಗದಂತೆ ರಕ್ಷಿಸುತ್ತದೆ.
ಬಹುಮಂಜರಿ ಎಣ್ಣೆ: ತುಳಸಿ ಎಣ್ಣೆಯನ್ನು ಸಾಮಾನ್ಯವಾಗಿ ಬಹುಮಂಜರಿ ಎಣ್ಣೆ ಎಂದು ಕರೆಯುತ್ತೇವೆ. ಇದು ಕೂಡ ಉತ್ತಮ ಆರೋಗ್ಯಕರ ಚರ್ಮದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಇದರು ಚರ್ಮಕ್ಕೆ ಆಳವಾದ ಆರೈಕೆ ನೀಡುತ್ತದೆ. ಇದು ಚರ್ಮದಲ್ಲಿನ ಅಧಿಕ ಎಣ್ಣೆ, ಮಾಲಿನ್ಯವನ್ನು ತೊಡೆದು ಹಾಕುತ್ತದೆ. ಇದು ಕೂಡ ಚರ್ಮವನ್ನು ಪುನರುಜ್ಜೀವನಗೊಳಿಸಿ, ಅದರ ಯೌವನದ ಹೊಳಪನ್ನು ಪುನಃಸ್ಥಾಪಿಸುತ್ತದೆ.
ಚಂದನ: ಶ್ರೀಗಂಧವು ಅನಾದಿ ಕಾಲದಿಂದಲೂ ಅನೇಕ ಆಚರಣೆಗಳಲ್ಲಿ ಬಳಸಲಾಗುವ ಪವಿತ್ರ ವಸ್ತುವಾಗಿದ್ದು, ಇದರ ಮೂಲಿಕೆ ಹಲವು ಪ್ರಯೋಜನ ಹೊಂದಿದೆ. ಚರ್ಮದ ಕಲೆಗಳನ್ನು ದೂರ ಮಾಡುವುದರ ಜೊತೆಗೆ ಇದು ಚರ್ಮದ ಕಲ್ಮಶ ತೆಗೆದು ಹೊಳಪು ನೀಡುತ್ತದೆ. ಇದು ಊರಿಯೂತದ ನಿವಾರಣೆಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ.
ಬಾದಾಮಿ ಎಣ್ಣೆ: ಒಣ ಚರ್ಮ, ಹೈಪಟ್ರೋಪಿಕ್ ಚರ್ಮದ ನಿವಾರಣೆ ಮಾಡುತ್ತದೆ. ಆಯುರ್ವೇದದಲ್ಲಿ ಮತ್ತು ಚೀನಿ ವೈದ್ಯ ಪದ್ದತಿಯಲ್ಲಿ ಇದನ್ನು ಬಳಕೆ ಮಾಡಲಾಗುವುದು. ಇದು ಚರ್ಮವನ್ನು ನಯಗೊಳಿಸುವುದರ ಜೊತೆಗೆ ಪೋಷಕಾಂಶ ಒದಗಿಸುತ್ತದೆ. ಊರಿಯುತ ನಿವಾರಣೆ ಜೊತೆಗೆ ಸೂರ್ಯನ ಯುವಿ ಕಿರಣದ ಹಾನಿಯಾಗದಂತೆ ಚರ್ಮವನ್ನು ಕಾಪಾಡುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಕಾಡುವ ಎಣ್ಣೆ ಚರ್ಮ ಸಮಸ್ಯೆ: ಇಲ್ಲಿದೆ ಪರಿಹಾರ