ವಾಷಿಂಗ್ಟನ್: ವಾರದ ರಜೆ ಸಂದರ್ಭದಲ್ಲಿ ಉದ್ಯೋಗ ಸಂಬಂಧಿತ ನೋಟಿಫೀಕೆಷನ್ಗಳನ್ನು ಆಫ್ ಮಾಡುವುದು, ಇಮೇಲ್ಗಳನ್ನು ನಿರ್ಲಕ್ಷ್ಯಿಸುವುದರಿಂದ ನಿಮ್ಮಲ್ಲಿನ ನಾಯಕನನ್ನು ಹೊರತರಲಯ ಸಾಧ್ಯವಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ವಾರದ ರಜೆ ದಿನದಲ್ಲಿ ಕೆಲಸಗಳಿಂದ ಮುಕ್ತಿ ಪಡೆಯುವುದರಿಂದ ಮರು ದಿನ ಅವರಲ್ಲಿ ಹೊಸ ಉತ್ಸಾಹ, ನವೋಲ್ಲಾಸ ಕಾಣಬಹುದು. ಇದರಿಂದ ಪರಿಣಾಮಕಾರಿ ನಾಯಕತ್ವವನ್ನು ಗುರುತಿಸಬಹುದು ಎಂದು ತಿಳಿಸಲಾಗಿದೆ. ಅಲ್ಲದೇ, ಮಧ್ಯಮ ವರ್ಗದ ಉದ್ಯೋಗಿಗಳನ್ನು ಬಾಸ್ಗಳಂತೆ ಕೆಲಸದ ಬಗ್ಗೆ ಚಿಂತೆ ಮಾಡುವ ಬದಲು ಅವರಿಗೆ ಕೊಂಚ ನಿರಾಳತೆ ನೀಡುವುದರಿಂದ ಅವರು ಕೆಲಸದಲ್ಲಿ ಉತ್ತಮ ಪ್ರಗತಿ ಕಾಣಬಹುದು. ಅದರಲ್ಲೂ ಕಡಿಮೆ ಅನುಭವಿ ನಾಯಕರು ಮನೆಯಲ್ಲೂ ಕೆಲಸದ ಬಗ್ಗೆ ಯೋಚಿಸುವಂತೆ ಆದರೆ, ಅವರಲ್ಲಿ ಪರಿಣಾಮಕಾರಿ ನಾಯಕತ್ವ ಕಾಣಲು ಸಾಧ್ಯವಿಲ್ಲ ಎಂದರು.
ಕಚೇರಿಯಲ್ಲಿ ಉತ್ತಮ ನಾಯಕನಾಗಬೇಕು ಎಂದರೆ ಉತ್ತಮ ವರ್ಕ್ ಲೈಫ್ ಬ್ಯಾಲೆನ್ಸ್ ಇರಬೇಕು ಎಂದು ತಿಳಿಸಲಾಗಿದೆ ಈ ಸಂಬಂಧ ಪ್ಲೋರಿಡಾ ಯುನಿವರ್ಸಿಟಿ ಮತ್ತು ಅರಿಜೋನಾ ಯುನಿವರ್ಸಿಟಿ ಅಧ್ಯಯನ ನಡೆಸಿದೆ. ಈ ಅಧ್ಯಯನವನ್ನು ಜರ್ನಲ್ ಆಫ್ ಅಪ್ಲೈಡ್ ಸೈಕಾಲೋಜಿಯಲ್ಲಿ ಪ್ರಕಟಿಸಲಾಗಿದೆ.
ಈ ಅಧ್ಯಯನದ ಸರಳ ಸಂದೇಶ ಎಂದರೆ ನೀವು ಕೆಲಸದ ಸ್ಥಳದಲ್ಲಿ ಪರಿಣಾಮಕಾರಿ ನಾಯಕನಾಗಬೇಕು ಎಂದರೆ, ಕೆಲಸವನ್ನು ಕೆಲಸದ ಸ್ಥಳದಲ್ಲೇ ಬಿಟ್ಟು, ಮನೆಯಲ್ಲಿ ಕೆಲಸದ ಬಗ್ಗೆ ಯೋಜನೆ ಮಾಡಬಾರದು ಎಂದಿದ್ದಾರೆ ಪ್ರೊ ಕ್ಲಿಡಿಯಾನ ಲನಜ್. ಅನಾನುಭವಿ ನಾಯಕರಿಗೆ ಇದು ಪ್ರಮುಖವಾಗಿದೆ. ಅವರು ಮನೆಗೆ ಹೋದ ಬಳಿಕವೇ ಅವರು ಇದರ ಅನುಭವದ ಪ್ರಯೋಜನ ಪಡೆಯಲು ಸಾಧ್ಯ. ನಾಯಕರು ತಮ್ಮದೇ ಆದ ಜವಾಬ್ದಾರಿಯನ್ನು ಹೆಚ್ಚು ಜಾಗೃತಿಯಿಂದ ನಿರ್ವಹಿಸುವುದರಿಂದ ಅವರಿಗೆ ಕೆಲಸಗಳಲ್ಲಿ ಸವಾಲು ಹೊಂದಿರುತ್ತಾರೆ. ಅವರು ತಮ್ಮ ಬೇಡಿಕೆಗಳಿಂದ ಚೇತರಿಸಿಕೊಳ್ಳಲು ನಾಯಕತ್ವದ ಪಾತ್ರ ಅಗತ್ಯವಾಗಿರುತ್ತದೆ ಎಂದಿದ್ದಾರೆ.
ಅಮೆರಿಕದಲ್ಲಿ ಬ್ಯುಸಿನೆಸ್ನಲ್ಲಿ 2019ರಿಂದ 2022ರವರೆಗೆ ಉದ್ಯೋಗಿಗಳ ಸಮೀಕ್ಷೆ ನಡೆಸಿ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ, ಕೆಲಸ ಮುಗಿಸಿ ಮನೆಗೆ ಹೋದ ವ್ಯಕ್ತಿ ಕೆಲಸದಿಂದ ದೂರವಾದಾಗ ಆತನ ಅಂದರೆ ರಾತ್ರಿಗೂ ಮುನ್ನ ಅವರ ಶಕ್ತಿ ಮಟ್ಟ ಹೆಚ್ಚಿರುತ್ತದೆ, ಇದು ಯಾವ ಮಟ್ಟಕ್ಕೆ ಇರುತ್ತದೆ ಎಂದರೆ ಬೆಳಗೆ ಅವರು ಕೆಲಸಕ್ಕೆ ಬಂದಾಗ ತಮ್ಮಲ್ಲಿ ನಾಯಕನನ್ನು ಗುರುತಿಸಿಕೊಳ್ಳಬಹುದು. ಉದ್ಯೋಗಿಯ ಸಾಮರ್ಥ್ಯದಿಂದ ಅವರು ತಂಡವನ್ನು ನಡೆಸಬಹುದು.
ಉದ್ಯೋಗಿ ಕೆಲಸದ ಅವಧಿ ಮುಗಿದ ಮೇಲೆ ಸಂಪೂರ್ಣವಾಗಿ ತಮ್ಮ ಕಚೇರಿ ಕೆಲಸದಿಂದ ಹೊರಗೆ ಬಂದಾಗ ಮರು ದಿನ ಅವರಲ್ಲಿ ಶಕ್ತಿ ಮಟ್ಟ ಹೆಚ್ಚಿದ್ದು, ಅವರ ಕೆಲಸದಲ್ಲಿ ನಾಯಕತ್ವಕ್ಕೆ ಅವರು ಸಂಪರ್ಕಗೊಳ್ಳುತ್ತಾರೆ. ಅಲ್ಲದೇ, ಅವರು ಇತರರನ್ನು ಉದ್ಯೋಗದಲ್ಲಿ ಪ್ರೇರೇಪಿಸಿ, ಕೆಲಸದಲ್ಲಿ ಅವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ಲನಜ್ ತಿಳಿಸಿದ್ದಾರೆ.
ಯಾವಾಗ ಉದ್ಯೋಗಿ ರಾತ್ರಿ ಸಮಯದಲ್ಲಿ ತಮ್ಮ ಕೆಲಸದ ನಕಾರಾತ್ಮಕತೆಯನ್ನು ಚಿಂತಿಸುತ್ತಾರೆ. ಅವರಲ್ಲಿ ಬೆಳಗ್ಗೆ ಶಕ್ತಿ ಮಟ್ಟ ಕಾಣುವುದಿಲ್ಲ. ಅವರು ತಮ್ಮಲ್ಲಿನ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲರಾಗುತ್ತಾರೆ. ಅಲ್ಲದೇ, ಇತರ ಮೇಲೆ ಪರಿಣಾಮ ಬೀರುವುದರಲ್ಲಿ ಕೂಡ ಸೋಲುತ್ತಾರೆ.
ಇದನ್ನೂ ಓದಿ: ಜಿಮ್ನಂತಹ ಅಭ್ಯಾಸ ರೂಢಿಯಾಗಲು ಇಂತಿಷ್ಟೆ ಸಮಯವಂತಿಲ್ಲ..