ಸಾಮಾನ್ಯ ರಕ್ತದ ಪರೀಕ್ಷೆಯಿಂದ ಟೈಪ್ 2 ಮಧುಮೇಹಿಗಳಲ್ಲಿ ಹೃದಯ ಮತ್ತು ಮೂತ್ರಪಿಂಡ ಸಮಸ್ಯೆಯ ಬೆಳವಣಿಗೆ ಅಪಾಯವನ್ನು ಅಂದಾಜಿಸಬಹುದು ಎಂದು ಹೊಸ ಅಧ್ಯಯನ ಹೇಳಿದೆ. ಈ ಸಂಬಂಧ ಟೈಪ್ 2 ಮಧುಮೇಹ ಹೊಂದಿರುವ 2,500ಕ್ಕೂ ಹೆಚ್ಚು ಮಂದಿಯನ್ನು ಕ್ಲಿನಿಕಲ್ ಟ್ರಯಲ್ಗೆ ಗುರಿಪಡಿಸಲಾಗಿತ್ತು. ರಕ್ತ ಪರೀಕ್ಷೆಯ ನಾಲ್ಕು ಬಯೋಮಾರ್ಕ್ ಮೂಲಕ ಕಿಡ್ನಿ, ಹೃದಯ ಸಮಸ್ಯೆ ಅಂದಾಜಿಸಬಹುದು. ಈ ಕುರಿತು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಫ್ಲಾಗ್ಶಿಪ್ ಜರ್ನಲ್ ಸರ್ಕ್ಯೂಲೇಷನ್‌ನಲ್ಲಿ ವರದಿ ಪ್ರಕಟಿಸಲಾಗಿದೆ.
ಉನ್ನತ ಮಟ್ಟದ ಕೆಲವು ಬಯೋಮಾರ್ಕ್ಗಳು ಹೃದಯ ಮತ್ತು ಕಿಡ್ನಿ ಸಮಸ್ಯೆಗಳನ್ನು ಸೂಚಿಸುತ್ತವೆ. ಇದು ಭವಿಷ್ಯದ ಅಪಾಯವನ್ನು ಅಂದಾಜಿಸಲು ಸಹಾಯಕ ಎಂದು ಅಧ್ಯಯನ ಪ್ರಮುಖ ಲೇಖಕ ಜೇಮ್ಸ್ ಜಾನುಜಿ ಹೇಳಿದ್ದಾರೆ.
ಮೂರು ವರ್ಷದ ಈ ಅಧ್ಯಯನದ ಅವಧಿಯಲ್ಲಿ ಕ್ಯಾನಗ್ಲಿಫ್ಲಿಸಿನ್ ತೆಗೆದುಕೊಂಡ ಜನರಲ್ಲಿ ಗ್ಲುಕೋಸ್ ಕೋ ಟ್ರಾನ್ಸ್ಪೊರ್ಟ್ 2 ಇನ್ಹಿಬಿಟರ್ ನಾಲ್ಕು ಬಯೋಮಾರ್ಕ್ಗೆ ಹೋಲಿಸಿದರೆ ಕಡಿಮೆ ಮಟ್ಟದಲ್ಲಿತ್ತು. ಮೆಟ್ಫೋರ್ಮಿನ್ ಪರೀಕ್ಷೆಯ ಬಳಿಕ ಕ್ಯಾನಗ್ಲಿಫ್ಲಿಸಿನ್ ಮೂರನೇ ಹಂತದ ಔಷಧವಾಗಿದೆ. ಇದು ಟೈಪ್ 2 ಡಯಾಬಿಟೀಸ್ಗೆ ಮೊದಲ ಪ್ರಾಧಾನ್ಯತೆಯ ಔಷಧ.
ಕ್ಯಾನಗ್ಲಿಫ್ಲಿಸಿನ್ ಹೃದಯ ವೈಫಲ್ಯ ಮತ್ತು ಇತರೆ ಹೃದಯ ಸಮಸ್ಯೆಗಳ ಅಪಾಯ ತಗ್ಗಿಸುತ್ತದೆ. ಸಂಶೋಧಕರು ಅಧ್ಯಯನಕ್ಕಾಗಿ 2,627 ರಕ್ತದ ಮಾದರಿಗಳಿಂದ ಬಯೋಮಾರ್ಕರ್ ಅನ್ನು ವಿಶ್ಲೇಷಣೆ ಮಾಡಿದ್ದಾರೆ. ಇವರು ಕ್ಯಾನಗ್ಲಿಫ್ಲಿಸಿನ್ ಪರಿಣಾಮವನ್ನು ನಾಲ್ಕು ಬಯೋಮಾರ್ಕ್ನಲ್ಲಿ ಗಮನಿಸಿದ್ದಾರೆ. ಇದಕ್ಕಾಗಿ ರೋಗಿಗಳನ್ನು ಕಡಿಮೆ, ಮಧ್ಯಮ ಮತ್ತು ಅಧಿಕ ಅಪಾಯದ ವರ್ಗವಾಗಿ ವಿಂಗಡಿಸಲಾಗಿದೆ.
ಅಧಿಕ ಅಪಾಯದಲ್ಲಿರುವ ಜನರು ಕಿಡ್ನಿ ವೈಫಲ್ಯ ಮತ್ತು ಹೃದಯ ರೋಗ ಸಮಸ್ಯೆ ಅಪಾಯವನ್ನು ಹೆಚ್ಚು ಹೊಂದಿರುವುದು ಮೂರು ವರ್ಷದ ಅಧ್ಯಯನದಲ್ಲಿ ಪತ್ತೆಯಾಗಿದೆ. ಕ್ಯಾನಗ್ಲಿಫ್ಲೊಜಿನ್ ಅಧಿಕ ಆರೋಗ್ಯ ಸಂಕೀರ್ಣತೆ ಹೊಂದಿರುವವರಲ್ಲಿ ಅಪಾಯ ಕಡಿಮೆ ಮಾಡುತ್ತದೆ ಎಂಬುದನ್ನು ಈ ಅಧ್ಯಯನ ದೃಢೀಕರಿಸಿದೆ. ಭವಿಷ್ಯದಲ್ಲಿ ಕಾಯಿಲೆಯೊಂದಿಗೆ ಟೈಪ್ 2 ಮಧುಮೇಹವು ಹೇಗೆ ಬೆಳವಣಿಗೆಯಾಗುತ್ತವೆ ಮತ್ತು ಪ್ರಗತಿಯಾಗುತ್ತವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹೊಸ ಅಧ್ಯಯನಗಳ ಅಗತ್ಯವಿದೆ. ಇದರಿಂದಾಗಿ ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳು ಸಂಭವಿಸುವ ಮೊದಲು ನಾವು ಜೀವ ಉಳಿಸುವ ಚಿಕಿತ್ಸೆಯನ್ನು ಪ್ರಾರಂಭಿಸಬಹುದು ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: Diabetes: ಕೆಲಸದ ಸ್ಥಳದಲ್ಲಿ ಮಧುಮೇಹ ನಿರ್ವಹಣೆಗೆ ಈ ನಿಯಮ ಪಾಲಿಸಿ..