ವಾಷಿಂಗ್ಟನ್: ಪ್ರಸ್ತುತ ಇಂಜೆಕ್ಷನ್ ರೂಪದಲ್ಲಿ ನೀಡಲಾಗುವ ಇನ್ಸುಲಿನ್ ನಂತಹ ಔಷಧಗಳನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ದೇಹಕ್ಕೆ ತಲುಪಿಸಲು ಅಮೆರಿಕದ ವಿಜ್ಞಾನಿಗಳು ರೋಬೋಟಿಕ್ ಮಾತ್ರೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಿಧಾನದಲ್ಲಿ ಔಷಧಗಳು ದೇಹಕ್ಕೆ ಉತ್ತಮ ವಿತರಣೆಯಾಗುವುದು ನಿರ್ಣಾಯಕವಾಗಿದೆ.
ಮಾತ್ರೆಗಳು ದೇಹದ ಉದ್ದೇಶಿತ ಸ್ಥಳವನ್ನು ತಲುಪಲು ಜೀರ್ಣಾಂಗ ವ್ಯವಸ್ಥೆಯಲ್ಲಿನ ಆಮ್ಲಗಳು, ಕಿಣ್ವಗಳು ಮತ್ತು ಲೋಳೆಯ ತಡೆಗೋಡೆಗಳ ಮೂಲಕ ಔಷಧವು ಹಾದು ಹೋಗಬೇಕು. ಪ್ರೋಟೀನ್ಗಳು ಅಥವಾ ನ್ಯೂಕ್ಲಿಯಿಕ್ ಆಮ್ಲಗಳನ್ನು ಹೊಂದಿರುವ ಔಷಧಗಳನ್ನು ಪ್ರಸ್ತುತ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತಿದೆ.
ಆದರೆ, ಅಮೆರಿಕಾದ MIT ವಿಜ್ಞಾನಿಗಳು ರೋಬೋಕಾಪ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಇನ್ಸುಲಿನ್ನಂತಹ ಭಾರಿ ಪ್ರೋಟೀನ್ ಔಷಧಗಳನ್ನು ಬಾಯಿಯ ಮೂಲಕ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಇದು ಸಣ್ಣ ಕರುಳು ತಲುಪಿದ ನಂತರ, ಅದು ಲೋಳೆಯ ತಡೆಗೋಡೆಯ ಮೂಲಕ ಹಾದುಹೋಗುತ್ತದೆ ಮತ್ತು ಕರುಳಿನ ಒಳ ಪದರದ ಜೀವಕೋಶಗಳಿಗೆ ಔಷಧ ನೇರವಾಗಿ ನೀಡುತ್ತದೆ. ಈ ರೋಬೋಟಿಕ್ ಮಾತ್ರೆಯನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿದೆ. ಸಾಮಾನ್ಯ ಕ್ಯಾಪ್ಸೂಲ್‌ಗೆ ಹೋಲಿಸಿದರೆ ಈ ಮಾತ್ರೆ ಮೂಲಕ 20 - 40 ಪಟ್ಟು ಹೆಚ್ಚು ಔಷಧಗಳನ್ನು ವಿತರಿಸಬಹುದು ಎಂದು ಕಂಡುಕೊಳ್ಳಲಾಗಿದೆ.
ಇದನ್ನೂ ಓದಿ: ಮೇದೋಜೀರಕ ಗ್ರಂಥಿ ಕ್ಯಾನ್ಸರ್ ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲಿ ವೈಫಲ್ಯಗಳಿವೆ: ಸಂಶೋಧನೆ