ETV Bharat / sukhibhava

Obesity: ಸ್ಥೂಲಕಾಯದ ವಿರುದ್ಧ ಹೋರಾಡಲು ಇದೀಗ ಮಾತ್ರೆ ಸಾಕು! - ನಿವಾರಣೆ ಮಾತ್ರೆಗಳಿದ್ದರೆ ಹೇಗೆ

ಅಧಿಕ ಸ್ಥೂಲಕಾಯತೆ ಸಮಸ್ಯೆಯಿಂದ ಬಳಲುತ್ತಿರುವವರು ಚುಚ್ಚುಮದ್ದಿನ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಇದರಿಂದ ನೋವು ಹೆಚ್ಚಿರುವ ಹಿನ್ನೆಲೆ ಮಾತ್ರೆಗಳ ಪತ್ತೆ ವಿಧಾನಕ್ಕೆ ಸಂಶೋಧಕರು ಮುಂದಾಗಿದ್ದಾರೆ.

A pill is now enough to fight obesity
A pill is now enough to fight obesity
author img

By

Published : Jun 26, 2023, 5:04 PM IST

ಬೆಂಗಳೂರು: ಸ್ಥೂಲಕಾಯತೆ ಇಂದು ಜಾಗತಿಕ ಸಮಸ್ಯೆಯಾಗಿದ್ದು, ಇದರ ನಿವಾರಣೆ ಮಾತ್ರೆಗಳಿದ್ದರೆ ಹೇಗೆ ಎಂದು ಯೋಚಿಸುತ್ತಿರುವವರಿಗೆ ಇದೀಗ ಹೊಸ ಭರವಸೆ ಸಿಗುವ ನಿರೀಕ್ಷೆ ಇದೆ. ಕಾರಣ ಸ್ಥೂಲಕಾಯತೆ ವಿರುದ್ಧ ಹೋರಾಡುವ ಮಾತ್ರೆಯೊಂದು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದ್ದು, ಇದು ಅಮೆರಿಕನ್ನರ ಪಾಲಿಗೆ ವರವಾಗಲಿದೆ ಎನ್ನಲಾಗಿದೆ. ಕಾರಣ ಅಮೆರಿಕದಲ್ಲಿ ಶೇ 40ರಷ್ಟು ಮಂದಿ ಸ್ಥೂಲಕಾಯತೆ ವಿರುದ್ಧ ಹೋರಾಡುತ್ತಿದ್ದಾರೆ.

ಸದ್ಯ ತೂಕ ನಷ್ಟ ಔಷಧವಾಗಿ ವೆಗೋವಿ ನೀಡಲಾಗುತ್ತಿದ್ದು, ಇದರಲ್ಲಿನ ಔಷಧಿಗಳ ಹೆಚ್ಚಿನ ಡೋಸ್ ಪ್ಯಾರಿಂಗ್ ಪೌಂಡ್‌ಗಳು ಚುಚ್ಚುಮದ್ದುವಾಗಿ ಕಾರ್ಯ ನಿರ್ವಹಿಸಲಿದ್ದು, ಇದೇ ಮೌಖಿಕ ಆವೃತ್ತಿ (oral pill) ಹೊಂದಲಿದೆ. ಕಳೆದೆರಡು ಅಧ್ಯಯನದ ಫಲಿತಾಂಶದ ಅನುಸಾರ, ಸಾಮರ್ಥ್ಯದಾಯಕ ಮಾತ್ರೆಗಳು ಈಗಾಗಲೇ ಮಧುಮೇಹ ಹೊಂದಿರುವ ಮತ್ತು ತೂಕ ಇಳಿಸುವ ಕಷ್ಟಪಡುತ್ತಿರುವವರಿಗೆ ಸಹಾಯವಾಗಲಿದೆ.

ಮಾತ್ರೆಗೆ ಜನರ ಒಲವು: ಔಷಧ ತಯಾರಕ ನೊವೊ ನೊರ್ಡಿಸ್ಕ್​ ಅಮೆರಿಕ ಆಹಾರ ಮತ್ತು ಔಷಧ ಆಡಳಿತಕ್ಕೆ ಈ ಮಾತ್ರೆ ಒಪ್ಪಿಗೆ ಪಡೆಯಲು ಯೋಜನೆ ನಡೆಸುತ್ತಿದ್ದಾರೆ. ನಿಮಗೆ ಚುಚ್ಚುಮದ್ದು ಬೇಕಾ ಅಥವಾ ಮಾತ್ರೆ ಬೇಕಾ ಎಂದು ಜನರನ್ನು ನೀವು ಯಾದೃಚ್ಚಿಕವಾಗಿ ಪ್ರಶ್ನಿಸಿದಾಗ, ಅವರು ಮಾತ್ರೆಯನ್ನು ಆಯ್ಕೆ ಮಾಡುತ್ತಾರೆ ಎಂದು ಡಾ ಡೆನಿಯಲ್​ ಬೆಸ್ಸೆನ್​ ತಿಳಿಸಿದ್ದಾರೆ. ಪ್ರಸ್ತುತ ಅವರು ಸ್ಥೂಲಕಾಯದ ಜನರಿಗೆ ಚಿಕಿತ್ಸೆ ನೀಡುತ್ತಿದ್ದು, ಅವರು ಸಂಶೋಧನೆಯ ಭಾಗವಾಗಿಲ್ಲ.

ಬೆಸ್ಸೆನ್​ ಹೇಳುವಂತೆ, ಎರಡು ಮಾರ್ಗದಲ್ಲೂ ಚಿಕಿತ್ಸೆ ತೆಗೆದುಕೊಳ್ಳುವುದು ಸರಿ ಸಮಾನವಾಗಿ ಪರಿಣಾಮಕಾರಿಯಾಗಿದ್ದು, ಲಭ್ಯವೂ ಇದ್ದು, ಕೈಗೆಟುಕುವ ದರದಲ್ಲಿದೆ. ಮಾರುಕಟ್ಟೆಯಲ್ಲಿ ಯಾವುದೇ ತೂಕ ಕಳೆದುಕೊಳ್ಳುವ ಮಾತ್ರೆ ಇಲ್ಲ. ಆದರೆ, ವೆಗೋವಿಯ ರೀತಿಯಲ್ಲಿ ಚುಚ್ಚುಮದ್ದು ಗಣನೀಯವಾಗಿದೆ. ಜನರು ಮೌಖಿಕವಾಗಿ ಔಷಧಿ ತೆಗೆದುಕೊಳ್ಳುವ ಆಯ್ಕೆ ಪರಿಣಾಮದ ಬಗ್ಗೆ ಹೆಚ್ಚು ಕಾತರರಾಗಿದ್ದಾರೆ ಎಂದು ಡಾ ಕಥೆರಿನ್​ ಸೌಂಡರ್ಸ್​ ತಿಳಿಸಿದ್ದಾರೆ.

ನೊವಾ ನೊರ್ಡಿಸ್ಕ್​ ಈಗಾಗಲೇ ರೈಬೆಲ್ಸುಸ್​​ ಅನ್ನು ಮಾರಾಟ ಮಾಡುತ್ತಿದ್ದು, ಇದು ಮಧುಮೇಹ ಚಿಕಿತ್ಸೆಗೆ ಒಪ್ಪಿಗೆ ಪಡೆದಿದೆ. ಇದರ ಮೌಖಿತ ಆವೃತ್ತಿ ಸೆಮಗುಲಟೈಡ್​ ಆಗಿದೆ. ಇದೇ ರೀತಿಯ ಔಷಧವನ್ನು ಡಯಾಬೀಟಿಸ್​ ಡ್ರಗ್​​ ಡಜೆಂಪಿಕ್​ ಮತ್ತು ವೆಗೋವಿ ಬಳಕೆ ಮಾಡುತ್ತಿದೆ. ಇದು 24 ಮಿಲಿಗ್ರಾಂನಲ್ಲಿ ಬರುತ್ತದೆ. ಇದರ ಗೋಲ್ಡ್​ ಸ್ಟಾಂಡರ್ಡ್​​ ಡ್ರಯಲ್​ಗಳನ್ನು ಅಮೆರಿಕದ ಡಯಾಬೀಟಿಸ್​ ವಾರ್ಷಿಕ ಸಭೆಯಲ್ಲಿ ಬಿಡುಗಡೆ ಮಾಡಲಾಗಿತ್ತು.

16 ತಿಂಗಳ ಅಧ್ಯಯನ: ಟೈಪ್​ 2 ಡಯಾಬೀಟಿಸ್​ ಹೊಂದಿರುವ ಸ್ಥೂಲಕಾಯದ 1600 ಜನರಲ್ಲಿ 16 ತಿಂಗಳ ಕಾಲ ಪ್ರತಿದಿನ ಹೈ ಡೋಸ್ ಮಾತ್ರೆ ನೀಡಲಾಗಿದೆ. ಇದು ರಕ್ತದ ಸಕ್ಕರೆಯನ್ನು ಗಮನಾರ್ಹವಾಗಿ ತಗ್ಗಿಸಿದೆ. ಬೇಸ್​ಲೈನ್​ 212 ಪೌಂಡ್​ಗಳ ತೂಕವನ್ನು ಕಡಿಮೆ ಡೋಸ್​ಗೆ ಹೋಲಿಕೆ ಮಾಡಿದಾಗ ಹೆಚ್ಚಿ ಡೋಸ್​ಗಳು 15 ರಿಂದ 20 ಪೌಂಡ್​ ಕಡಿಮೆ ಮಾಡಿದೆ. ​ಮತ್ತೊಂದು 16 ತಿಂಗಳ ಅಧ್ಯಯನದಲ್ಲಿ ಮಧುಮೇಹ ಹೊಂದಿರದ 660 ವಯಸ್ಕ ಸ್ಥೂಲಕಾಯ ಹೊಂದಿರುವವರಲ್ಲಿ 50 ಮಿಲಿಗ್ರಾಂ ಪ್ರತಿ ನಿತ್ಯದ ಮಾತ್ರೆ ಶೇ 15ರಷ್ಟು ತೂಕ ಇಳಿಕೆಗೆ ಕಾರಣವಾಗಿದೆ.

ವೆಗೋವಿಯ ಅತ್ಯಧಿಕ ಡೋಸ್‌ನ ವಾರದ ಡೋಸ್​ಗಳು ಉತ್ತೇಜಿತವಾದ ತೂಕ ನಷ್ಟದೊಂದಿಗೆ ಅದು ಗಮನಾರ್ಹವಾಗಿ ಸ್ಥಿರವಾಗಿದೆ ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ. ಆದರೆ, ಇದರಿಂದ ಅಡ್ಡ ಪರಿಣಾಮಗಳಿದ್ದವು. ಮೌಖಿಕ ಸೆಮಾಗ್ಲುಟೈಡ್‌ನ ಯಾವುದೇ ಗಾತ್ರದ ಪ್ರಮಾಣವನ್ನು ಸ್ವೀಕರಿಸುವ ಸುಮಾರು ಶೇ 80ರಷ್ಟು ಭಾಗಿದಾರರಲ್ಲಿ ವಾಕರಿಕೆ, ಮಲಬದ್ಧತೆ ಮತ್ತು ಅತಿಸಾರದಂತಹ ಸೌಮ್ಯದಿಂದ ಮಧ್ಯಮ ಕರುಳಿನ ಸಮಸ್ಯೆಗಳಿಗೂ ಇದು ಕಾರಣವಾಗಿದೆ.

ಇದನ್ನೂ ಓದಿ: Cancer vaccine: ಕ್ಯಾನ್ಸರ್‌ಗೆ ಲಸಿಕೆ ಶೀಘ್ರ! ವೈದ್ಯಕೀಯ ಕ್ಷೇತ್ರದಲ್ಲಿ ಭರದಿಂದ ಸಾಗಿದೆ ಸಂಶೋಧನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.