ಹೈದರಾಬಾದ್: ಅತಿಯಾದ ಅಶಿಸ್ತು, ಹೆಚ್ಚಿನ ಕೆಲಸ, ಡೆಡ್ಲೈನ್ ಒತ್ತಡ ಅಥವಾ ಸೋಮಾರಿತನದ ಜೀವನವನ್ನು ಇಂದು ಅನೇಕ ಮಂದಿ ರೂಢಿಸಿಕೊಂಡಿದ್ದಾರೆ. ಇದರಿಂದ ಜನರು ಜೀವನ ಶೈಲಿ ಮತ್ತು ಆಹಾರ ಶೈಲಿಯಲ್ಲಿ ಬಹಳ ಬದಲಾವಣೆ ಕಾಣಬಹುದಾಗಿದೆ. ಅದರಲ್ಲೂ ಜನರು ನಿಯಮಿತವಾಗಿ ಊಟ ಮಾಡದೇ, ತಮಗೆ ಸಿಕ್ಕ ಸಮಯದಲ್ಲಿ ಊಟ ಅಥವಾ ನಿದ್ದೆ ಮಾಡುತ್ತಾ, ದೀರ್ಘಕಾಲದ ಕೆಲಸವನ್ನು ಮುಂದುವರೆಸುತ್ತಾರೆ. ಈ ಮೂಲಕ ಜನರು ತಮ್ಮ ಜೀವನ ಶೈಲಿಯಲ್ಲಿ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿ, ಡೆಡ್ಲೈನ್ ಮುಗಿಸಲು ಕಷ್ಟಪಟ್ಟು ಹೋರಾಡುತ್ತಾರೆ.
ಡಯಟ್ನಲ್ಲಿ ಪೋಷಕಾಂಶದ ಕೊರತೆ ಅಥವಾ ಕಡಿಮೆ ಕ್ರಿಯಾಶೀಲತೆ ಅಗತ್ಯವಾಗಿದೆ. ದೈಹಿಕ ಆರೋಗ್ಯದ ವಿಚಾರಣೆಯಲ್ಲಿ ಸಣ್ಣ ಮತ್ತು ದೊಡ್ಡ ಅಭ್ಯಾಸಗಳು ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಈ ಅಭ್ಯಾಸಗಳು ಜನರಲ್ಲಿ ಕೆಲವು ವೇಳೆ ಕೀಲು, ಮೂಳೆ, ಅದರಲ್ಲೂ ವಿಶೇಷದಲ್ಲಿ ಸ್ನಾಯುಗಳ ನೋವಿಗೆ ಕಾರಣವಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಎಲ್ಲ ವಯೋಮಾನದವರಲ್ಲಿ ಈ ಜಡ ಜೀವನ ಶೈಲಿಯು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಸ್ನಾಯು ನೋವಿಗೆ ಕಾರಣ: ಇಂದೋರ್ನ ಫಿಜಿಯೋಥೆರಪಿಸ್ಟ್ ಡಾ. ಸದ್ಯ ನವನಿ, ಎಲ್ಲಾ ವಯೋಮಾನದಲ್ಲಿ ಸ್ನಾಯು ನೋವು ಮತ್ತು ಬಿಗಿತನದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಬೆಳಗ್ಗೆ ಎದ್ದಾಕ್ಷಣ ಸ್ನಾಯುಗಳಲ್ಲಿ ಭುಜ, ಕತ್ತು ಅಥವಾ ಕಾಲುಗಳಲ್ಲಿ ಈ ಬಿಗಿತನದ ಸಮಸ್ಯೆಗಳು ಬೆಳಗ್ಗೆ ಎದ್ದಾಕ್ಷಣ ಕಾಡುತ್ತದೆ. ಕೆಲವೊಮ್ಮೆ ಈ ಸಮಸ್ಯೆ ಕೆಟ್ಟಾದಾಗುತ್ತದೆ. ಇದರಿಂದ ಬೆಳಗ್ಗೆ ಎದ್ದಾಕ್ಷಣ ಮೇಲೆ ಏಳುವುದು ಕಷ್ಟವಾಗತ್ತದೆ ಎಂದು ವಿವರಿಸಿದ್ದಾರೆ.
ಈ ಸಮಸ್ಯೆಗಳು ಗಾಯಗೊಂಡವರು, ರೋಗಸ್ಥರು ಅಥವಾ ಇನ್ನಿತರ ಸಮಸ್ಯೆ ಹೊಂದಿರುವವರಲ್ಲಿ ಮಾತ್ರವಲ್ಲದೇ ಎಲ್ಲಾ ರೀತಿ ಜನರಲ್ಲಿ ಕಾಣುತ್ತದೆ. ಇಂದಿನ ದಿನದಲ್ಲಿ ಸಂಪೂರ್ಣವಾಗಿ ಆರೋಗ್ಯಯುತ ಜನರಲ್ಲಿ ಕೂಡ ಕಾಣಬಹುದು. ನಗರ ಪ್ರದೇಶದಲ್ಲಿ ಅಥವಾ ಮೆಟ್ರೊ ನಗರದಲ್ಲಿ ವಾಸಿಸುವ ಜನರಲ್ಲಿ ಈ ಸಮಸ್ಯೆ ವಿಶೇಷವಾಗಿ ಕಾಣುತ್ತದೆ.
ಆಹಾರ ಪದ್ದತಿ: ಅನಾರೋಗ್ಯಕರ ಜೀವನಶೈಲಿಯಿಂದಾಗಿ ಸಾಮಾನ್ಯ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಡಾ. ಸಂಧ್ಯಾ ತಿಳಿಸಿದ್ದಾರೆ. ಇಂದಿನ ದಿನದಲ್ಲಿ ಕೆಲಸ ಮತ್ತಿತ್ತರ ಸಮಸ್ಯೆ ಕಾರಣದಿಂದ ತಡವಾಗಿ ಮಲಗುವ, ಏಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಸಮಯದ ಕೊರತೆಯು ತಿನ್ನುವ ಅಥವಾ ಮಲಗುವ ಅಭ್ಯಾಸಗಳು ಇತರ ಅರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಪೋಷಕಾಂಶದ ಆಹಾರ ಪದ್ಧತಿ ರೂಢಿಸಿಕೊಳ್ಳದೇ ಅವರು ಈ ನಿದ್ರಾ ಸಮಸ್ಯೆಯಿಂದ ಪರಿಹಾರ ಕಾಣುವುದಿಲ್ಲ. ಇಂತಹ ಸಮಸ್ಯೆ ಜನರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತಿತ್ತರೆ ಅಗತ್ಯ ಪೋಷಕಾಂಶಗಳ ಕೊರತೆ ಕಾಣಬಹುದಾಗಿದೆ.
ತಮ್ಮ ಕೆಲಸ, ಓದು ಅಥವಾ ಕೆಲಸದ ಕಾರಣದಿಂದಾಗಿ ಅವರು ದೀರ್ಘಾಕಾಲ ಮಲಗುವ ಅಥವಾ ಕೂರುತ್ತಾರೆ. ಈ ರೀತಿ ದೀರ್ಘಕಾಲ ಮೊಬೈಲ್ ಅಥವಾ ಕೆಲಸ ಮಾಡುತ್ತಾ ಕುಳಿತುಕೊಳ್ಳುವುದರಿಂದ ಸ್ನಾಯುವಿನಲ್ಲಿ ಬಿಗಿತನ ಮತ್ತು ನೋವಿಗೆ ಕಾರಣವಾಗುತ್ತದೆ. ಅಗತ್ಯ ವಿಶ್ರಾಂತಿ ಇಲ್ಲದೇ, ಈ ರೀತಿ ಕೆಲಸಗಳ ನಿರ್ವಹಣೆಯಿಂದ ಬೆಳಗ್ಗೆ ಎದ್ದಾಕ್ಷಣ ಇಡೀ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಇಂದಿನ ಕಾಲದಲ್ಲಿ ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಆರೋಗ್ಯಯುತ ಜೀವನಶೈಲಿಗೆ ಉತ್ತಮ, ಸಮತೋಲಿತ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ವ್ಯಾಯಮದಂತಹ ದೈನಂದಿನ ದಿನಚರಿ ರೂಢಿಸಿಕೊಳ್ಳುವುದು ಅವಶ್ಯ.
ಇದಕ್ಕಾಗಿ ರೂಢಿಸಿಕೊಳ್ಳಬೇಕಾದ ಕೆಲವು ಸರಳ ಅಭ್ಯಾಸಗಳು ಹೀಗಿದೆ
ಬೆಳಗ್ಗೆ ಎದ್ದಾಕ್ಷಣ ಒಂದು ಲೋಟ ನೀರು ಕಡಿಯಬೇಕು. ಜೊತೆಗೆ ದಿನವೀಡಿ ಅಗತ್ಯವಿರುವ ನೀರನ್ನು ಕುಡಿಯಬೇಕು. ನಿಮ್ಮ ಆಹಾರ ಪದ್ದತಿಯಲ್ಲಿ ಸರಿಯಾದ ಪೋಷಕಾಂಶ ಇದ್ದು, ಸರಿಯಾದ ಸಮಯಕ್ಕೆ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು.
- ಇದರಲ್ಲಿ ಹಣ್ಣು, ತರಕಾರಿ, ಧಾನ್ಯ, ಒಣಹಣ್ಣು, ಬೀಜ ಮತ್ತು ನೀರಿನಾಂಶ ಇರುವಂತೆ ನೋಡಿಕೊಳ್ಳಿ.
- ಬೆಳಗ್ಗೆ ಎದ್ದಾಕ್ಷಣ ಸ್ನಾಯು ನೋವು ಕಾಡಿದರೆ, ಎದ್ದು ಕುಳಿತುಕೊಳ್ಳುವ ಬದಲು, ಹಾಸಿಗೆ ಮೇಲೆ ಕೆಲಕಾಲ ಇರಿ. ಕೈ-ಕಾಲುಗಳನ್ನು ಸ್ಟ್ರೆಚ್ ಮಾಡಿ.
- ಕೆಲಸದ ಬೇಳೆ ಬಿಗಿತನ ಅನುಭವ ಆದರೆ, ಅದಕ್ಕೆ ಸ್ಟ್ರೆಚಿಂಗ್ ವ್ಯಾಯಾಮ ಮಾಡುವುದು ಉತ್ತಮ
- ಸರಿಯಾದ ಭಂಗಿಯಲ್ಲಿ ನಡೆಯುವಾಗ. ಕುಳಿತುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು.
- ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ಕೆಲಸಮಾಡುವಾಗ, ಕೆಲವು ನಿಮಿಷಗಳ ಕಾಲ ಕಣ್ಣು ಮತ್ತು ಭುಜ ಮತ್ತು ಕುತ್ತಿಗೆಗೆ ಸಣ್ಣ ವ್ಯಾಯಾಮ ನಡೆಸಿ.
- ದಿನದಲ್ಲಿ ಕನಿಷ್ಠ 20-30 ನಿಮಿಷ ವ್ಯಾಯಾಮ ಅಥವಾ ಸ್ಟ್ರೆಚಿಂಗ್ ರೂಢಿಸಿಕೊಳ್ಳಬೇಕು.
ಇದನ್ನೂ ಓದಿ: ಬೇಸಿಗೆಯ ಡಯಟ್ನಲ್ಲಿ ಈ ಆಹಾರ ಸೇವಿಸಿ ತಂಪಾಗಿರಿ