ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಎರಡು ಡೋಸ್ ಲಸಿಕೆ ಪಡೆದವರಿಗೆ ಹೋಲಿಕೆ ಮಾಡಿದರೆ, ಬೂಸ್ಟರ್ ಡೋಸ್ ಪಡೆದವರಲ್ಲಿ ಸಾವಿನ ಪ್ರಮಾಣ ಶೇ 90ರಷ್ಟು ಕಡಿಮೆ ಇದೆ ಎಂಬುದನ್ನು ಹೊಸ ಅಧ್ಯಯನ ತಿಳಿಸಿದೆ. ಮೂರನೇ ಡೋಸ್ ಲಸಿಕೆಗಳಾದ BNT162b2, mRNA ಲಸಿಕೆ ಅಥವಾ ಕೋವಿಡ್ ಲಸಿಕೆ ಪಡೆದವರಿಗೆ ಕೋವಿಡ್ ಸಂಬಂಧಿತ ಸಾವಿನ ಅಪಾಯ ಕಡಿಮೆ ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ಡಾ.ಈಸ್ತರ್ ಚಾನ್ ತಿಳಿಸಿದ್ದಾರೆ.
18 ವರ್ಷ ಮೇಲ್ಪಟ್ಟ ರಕ್ತದೊತ್ತಡ, ಡಯಾಬಿಟಿಸ್, ಕಿಡ್ನಿ ಸಮಸ್ಯೆಯಂತಹ ದೀರ್ಘ ಸಮಸ್ಯೆ ಹೊಂದಿರುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವರು ಮಾರ್ಚ್ 11, 2021 ಮತ್ತು ಮಾರ್ಚ್ 31, 2022ರಲ್ಲಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ. ಇವರನ್ನು ಎರಡು ಡೋಸ್ ಲಸಿಕೆ ಪಡೆದವರೊಂದಿಗೆ ಹೋಲಿಕೆ ಮಾಡಿ ಅಧ್ಯಯನ ನಡೆಸಲಾಗಿದೆ.
ಈ ಅಧ್ಯಯನದಲ್ಲಿ 1,20,724 ಫೈಜರ್- ಬಯೋಟೆಕ್ ಲಸಿಕೆ ಪಡೆದವರು, ಇವರಲ್ಲಿ 87,289 ಮಂದಿ ಬೂಸ್ಟರ್ ಡೋಸ್ ಪಡೆದವರು ಮತ್ತು 1,27,318 ಕೊರೊನಾವಾಕ್ ಲಸಿಕೆ, ಇದರಲ್ಲಿ 94,977 ಮಂದಿ ಬೂಸ್ಟರ್ ತೆಗೆದುಕೊಂಡವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಫೈಜರ್- ಬಯೋಟೆಕ್ ಲಸಿಕೆದಾತರಿಗೆ ಹೋಲಿಸಿದರೆ ಕೊರೊನಾವಾಕ್ ಲಸಿಕೆ ಪಡೆದವರ ಸಾವಿನ ಸಂಖ್ಯೆ ಅಧಿಕವಾಗಿದೆ.
ಓಮಿಕ್ರಾನ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಎರಡು ಲಸಿಕೆಗಳೊಂದಿಗೆ ಬೂಸ್ಟರ್ ಡೋಸ್ ಪ್ರಧಾನ ಪಾತ್ರ ನಿರ್ವಹಿಸಿದೆ. ಹಾಂಕಾಂಗ್ 2021ರಲ್ಲಿ ಒಮ್ರಿಕಾನ್ (ಬಿಎ.2) ರೂಪಾಂತರಕ್ಕೆ ಒಳಗಾಗಿತ್ತು. ಈ ವೇಳೆ ನಗರದಲ್ಲಿ ಅಧಿಕ ಸಂಖ್ಯೆಯ ಕೋವಿಡ್ ಸಾವು ಸಂಭವಿಸಿತ್ತು. ಜಗತ್ತಿನಾದ್ಯಂತ ಕೋವಿಡ್ ಸಾವಿನ ಸಂಖ್ಯೆಗೆ ಹೋಲಿಕೆ ಮಾಡಿದರೆ, ಇಲ್ಲಿನ ಪ್ರಮಾಣ ಅಧಿಕವಾಗಿತ್ತು. ನವೆಂಬರ್ 11, 2021 ರಿಂದ ವಯಸ್ಕರು, ಆರೋಗ್ಯ ವೃತ್ತಿಪರರು ಮತ್ತು ಇತರ ಆದ್ಯತೆಯ ಗುಂಪುಗಳು ಫೈಜರ್ ಬಯೋಟೆಕ್ ಅಥವಾ ಕೊರೊನಾವಾಕ್ ಲಸಿಕೆಗಳ ಬೂಸ್ಟರ್ ಡೋಸ್ ಸ್ವೀಕರಿಸಲು ಮುಂದಾಗಿದ್ದರು. ಹೆಚ್ಚು ಅನಾರೋಗ್ಯದಿಂದ ಬಳಲುತ್ತಿರುವ ದುರ್ಬಲರು ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಯಸ್ಕರಲ್ಲಿ SARS-CoV-2 ಬೂಸ್ಟರ್ ಡೋಸ್ ಹೆಚ್ಚಿನ ಪ್ರಯೋಜನ ಹೊಂದಿದೆ.
ವಿಶೇಷವಾಗಿ, ಹಲವು ರೋಗದಿಂದ ಬಳಲುವವರಲ್ಲಿ ಸಾರ್ವಜನಿಕ ಆರೋಗ್ಯ ಕ್ರಮವು ಸಾಂಕ್ರಾಮಿಕ ರೋಗದ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದು ನಮ್ಮ ಅಧ್ಯಯನದಲ್ಲಿ ತಿಳಿದು ಬಂದಿದೆ ಎಂದು ಲೇಖಕರು ಮತ್ತು ಹಾಂಕಾಂಗ್ ಯುನಿವರ್ಸಿಟಿ ಪ್ರೊಫೆಸರ್ ಫ್ರಾನ್ಸಿಸ್ಕೊ ಲೈ ತಿಳಿಸಿದ್ದಾರೆ. ಕೋವಿಡ್ 19 ಸಾವಿನ ವಿರುದ್ಧ ರಕ್ಷಣೆ ನೀಡುವಲ್ಲಿ ಬೂಸ್ಟರ್ ಬಲವಾದ ಪರಿಣಾಮ ಹೊಂದಿದೆ. SARS-CoV-2 ಲಸಿಕೆಯನ್ನು ಅಧ್ಯಯನಕ್ಕೆ ಬಳಸಲಾಗಿತ್ತು ಎಂದು ಆಧ್ಯಯನದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬರಲಿದೆ ಕುಡಿಯಬಹುದಾದ ಕೋವಿಡ್ 19 ಲಸಿಕೆ!