ETV Bharat / sukhibhava

ಅಪಘಾತದ ಸ್ಥಳದಲ್ಲಿ ರೋಗಿಯ ನಿರ್ವಹಣೆ ಶೇ 90ರಷ್ಟು ಕಳಪೆ ಮಟ್ಟದಲ್ಲಿರುತ್ತದೆ: ವೈದ್ಯಕೀಯ ತಜ್ಞರು - ತಪ್ಪಾಗಿ ನಡುವಳಿಕೆಗಳಿಂದ ಶೇ 90ರಷ್ಟು

ಅಪಘಾತದ ಸ್ಥಳದಲ್ಲಿ ಗಾಯಾಳುವಿಗೆ ಸರಿಯಾದ ಚಿಕಿತ್ಸೆ ನೀಡಿದಲ್ಲಿ, ರಕ್ತಸ್ರಾವ ತಡೆಯುವ, ಮೂಳೆ ಮುರಿತ ತಪ್ಪಿಸುವ ಮತ್ತು ಶೀಘ್ರ ಗುಣಮುಖದ ಭರವಸೆ ಕಾಣಬಹುದು. ಆದರೆ ಅದು ಆಗುತ್ತಿಲ್ಲ ಎನ್ನವುದೇ ಈಗಿರುವ ದೊಡ್ಡ ಸಮಸ್ಯೆಯಾಗಿದೆ.

90 per cent of the accident scene patient management is poor

author img

By ETV Bharat Karnataka Team

Published : Oct 18, 2023, 4:11 PM IST

ಲಖನೌ( ಉತ್ತರಪ್ರದೇಶ): ಅಪಘಾತ ಆದ ಸ್ಥಳದಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಯ ನಿರ್ವಹಣೆ ಸಂದರ್ಭದಲ್ಲಿ ನಡೆಸಲಾಗುವ ತಪ್ಪಾಗಿ ನಡುವಳಿಕೆಗಳಿಂದ ಶೇ 90ರಷ್ಟು ಆಘಾತ ಪ್ರಕರಣಗಳು ಸಂಭವಿಸುತ್ತದೆ. ಇದು ರೋಗಿಯ ಗಾಯವನ್ನು ಮತ್ತಷ್ಟು ಕೆಟ್ಟದಾಗಿಸುವ ಜೊತೆಗೆ ದೀರ್ಘಕಾಲಿನ ಚಿಕಿತ್ಸೆ ಬೇಡುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ಕಿಂಗ್​ ಜಾರ್ಜ್​ನ ಮೆಡಿಕಲ್​ ಯುನಿವರ್ಸಿಟಿಯ ಟ್ರಾಮಾ ಸರ್ಜರಿ ವಿಭಾಗ ಅಪಘಾತ ವಲಯದಲ್ಲಿ ಹೇಗೆ ಆಘಾತ ಪ್ರಕರಣಗಳನ್ನು ನಿರ್ವಹಣೆ ಮಾಡಲಾಗುತ್ತದೆ ಎಂದು ಸಾರ್ವಜನಿಕರೊಂದಿಗೆ ಸಂವಹನ ಸೆಷನ್​ ನಡೆಸಿದೆ. ಟ್ರಾಮಾ ಸರ್ಜರಿ ವಿಭಾಗದ ಹಿರಿಯ ಸಿಬ್ಬಂದಿ ಪ್ರೋ ಸಮೀರ್​ ಮಿಶ್ರಾ ಮಾತನಾಡಿ, ಅಪಘಾತದ ಸ್ಥಳದಲ್ಲಿ ಗಾಯಾಳುವಿನ ಸರಿಯಾದ ಚಿಕಿತ್ಸೆಯನ್ನು ನೀಡಿದಲ್ಲಿ, ರಕ್ತಸ್ರಾವ ತಡೆಯುವ, ಮೂಳೆ ಮುರಿತ ತಪ್ಪಿಸುವ ಮತ್ತು ಶೀಘ್ರ ಗುಣಮುಖದ ಭರವಸೆ ಕಾಣಬಹುದು. ದುರದೃಷ್ಟ ಇಂತಹವುಗಳು ನಡೆಯುವುದಿಲ್ಲ ಶೇ 90ರಷ್ಟು ಅಪಘಾತ ಪ್ರಕರಣದಲ್ಲಿ ಕೆಟ್ಟ ಗಾಯಗಳ ಫಲಿತಾಂಶದಿಂದ ಕೂಡಿರುತ್ತದೆ ಎಂದಿದ್ದಾರೆ.

ಸುರಕ್ಷತಾ ನಿಯಮ ಅನುಕರಣೆ: ಅಪಘಾತ ಸ್ಥಳದಲ್ಲಿ ಪ್ಯಾರಾಮೆಡಿಕ್​ಗಳ ಅಥವಾ ಇತರ ಜನರು, ಅಪಘಾತಗೊಂಡ ವ್ಯಕ್ತಿಯ ಅಘಾತವನ್ನು ತಡೆಯುವ ಸರಳ ಅಭ್ಯಾಸಗಳನ್ನು ಅನುಸರಿಸಬಹುದು. ಉದಾಹರಣೆಗೆ ವ್ಯಕ್ತಿಯನ್ನು ಸ್ಟ್ರೇಚರ್​ ಮೇಲೆ ಮಲಗಿಸುವಾಗ ನಾಲ್ಕು ಜನ ಗಾಯಾಳುವನ್ನು ಎತ್ತಬೇಕು. ಕಾರಣ ಈ ಸಂದರ್ಭದಲ್ಲಿ ಬೆನ್ನು ಹುರಿ ಮೇಲೆ ಯಾವುದೇ ಒತ್ತಡ ಆಗದಂತೆ ನೋಡಿಕೊಳ್ಳುವುದು ಉತ್ತಮ.

ಟ್ರಾಮಾ ಸರ್ಜರಿ ಮುಖ್ಯಸ್ಥ ಪ್ರೋ ಸಂದೀಪ್​ ತಿವಾರಿ ಹೇಳುವಂತೆ, ಡ್ರೈವಿಂಗ್​ ವೇಳೆ ಮೊಬೈಲ್​ ನೋಡುವುದು ತಪ್ಪಿಸುವುದು ಅತಿ ಮುಖ್ಯವಾಗಿದೆ. ಇದರಿಂದ ಅಪಘಾತವನ್ನು ತಪ್ಪಿಸಬಹುದು. ಚಾಲನೆ ವೇಳೆ ಮೊಬೈಲ್​ ಬಳಕೆಯು ಗಂಭೀರ ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ರಸ್ತೆ ಅಪಘಾತದಿಂದ ಗಂಭೀರ ಬೆನ್ನುಹುರಿ ಸಮಸ್ಯೆ ಮತ್ತು ಇದಕ್ಕೆ ಸಂಬಂಧಿಸಿದ ಅನೇಕ ಗಾಯಗಳಿಗೆ ಒಳಗಾಗುತ್ತಿರುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಟ್ರಾಮ ಮತ್ತು ಬೆನ್ನು ಹುರಿ ಗಾಯಕ್ಕೆ ಸಂಬಂಧಿಸಿದಂತೆ ಅನೇಕ ರೋಗಿಗಳು ಹೆಚ್ಚಾಗುತ್ತಿದೆ. ಭಾರತದಲ್ಲಿ ರಸ್ತೆ ಅಪಘಾತ-2021 ವರದಿಯ ಪ್ರಕಾರ, ದಿನಕ್ಕೆ ಒಂದು ಸಾವಿರ ಅಪಘಾತಗಳು ವರದಿಯಾಗುತ್ತದೆ. ಈ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಮಾರಾಣಾಂತಿಕ ಗಾಯಗಳನ್ನು ತಪ್ಪಿಸಬಹುದು ಎಂದು ವೈದ್ಯ ಡಾ ಅಭಿಶೇಕ್​ ಶುಕ್ಲಾ ತಿಳಿಸುತ್ತಾರೆ. (ಐಎಎನ್​ಎಸ್​)

ಇದನ್ನೂ ಓದಿ: ನಿದ್ರೆ ಮತ್ತು ಒತ್ತಡ ಎಲೆಪ್ಸಿ ರೋಗದೊಂದಿಗೆ ಸಂಬಂಧ ಹೊಂದಿದೆ; ಇದರಿಂದ ಆಗುವ ಸಮಸ್ಯೆಗಳೇನು? ಇದಕ್ಕೇನು ಪರಿಹಾರ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.