ಮುಂಬೈ: ಮನೆ ಮತ್ತು ಕಚೇರಿಯಲ್ಲಿನ ಅತಿ ಹೆಚ್ಚಿನ ಕೆಲಸ ಆಯಾಸಕ್ಕೆ ಕಾರಣವಾಗುತ್ತದೆ. ಯಾವುದೇ ವಯೋಮಾನದವರಲ್ಲಿ ಇರಲಿ ಆಯಾಸ ಕಾಡುವುದು ಸಹಜ. ಹಿರಿಯರಲ್ಲಿ ಇದು ಕಾಮನ್ ಕೂಡಾ. ಆದರೆ, 80 ವರ್ಷದ ಅಜ್ಜಿಯೊಬ್ಬರ ಉತ್ಸಾಹ ನೋಡಿದರೆ ನೀವು ಬೆರಾಗುತ್ತೀರಿ. ಈ ವಯಸ್ಸಿನಲ್ಲೂ ಇವರು ಯಾರದೇ ಸಹಾಯವನ್ನು ಪಡೆಯದೇ ಎಲ್ಲಾ ಕೆಲಸಗಳನ್ನು ಅವರು ನಿರ್ವಹಿಸುತ್ತಾರೆ.
ಇತ್ತೀಚೆಗೆ ಅವರು ಟಾಟಾ ಮುಂಬೈ ಮರಾಧಾನ್ನಲ್ಲಿ ಕೂಡ ಭಾಗಿಯಾಗಿದ್ದಾರೆ. ಇದರಲ್ಲಿ ಅವರು ಯಾವುದೇ ಆಯಾಸವಿಲ್ಲದೇ ಅವರು 5 ಕಿ.ಮೀ ಅನ್ನು ಓಡಿ, ಎಲ್ಲರನ್ನು ಅಚ್ಚರಿ ಪಡಿಸಿದ್ದಾರೆ. ಈ ಉತ್ಸಾಹಕ್ಕೆ ಕಾರಣ ಏನು? ಅಜ್ಜಿಯ ಉತ್ಸಾಹದ ಗುಟ್ಟು ಏನು ಎಂಬುದು ಇಲ್ಲಿದೆ. ಮ್ಯಾರಾಥಾನ್ ಓಟಕ್ಕೆ ವಯಸ್ಸು ಗಣನೆಗೆ ಬರುವುದಿಲ್ಲ. ಮಕ್ಕಳಿಂದ ವಯಸ್ಸಾದವರು ಕೂಡ ಇದರಲ್ಲಿ ಓಡಬಹುದಾಗಿದೆ. ಪ್ರತಿಯೊಬ್ಬರು ಕ್ರಿಯಾಶೀಲರಾಗಿ ಇದರಲ್ಲಿ ಭಾಗಿಯಾಗುವುದನ್ನು ಕಾಣಬಹುದಾಗಿದೆ. ಮುಂಬೈನಲ್ಲಿ ಪ್ರತಿ ವರ್ಷ 'ಟಾಟಾ ಮುಂಬೈ ಮರಾಥಾನ್' ಏರ್ಪಡಿಸಲಾಗುತ್ತದೆ. ಇದರಲ್ಲಿ 80 ವರ್ಷದ ಅಜ್ಜಿ ಎರಡು ವರ್ಷದ ಅಂತರದ ಬಳಿಕ ಈ ಮ್ಯಾರಾಥಾನ್ನಲ್ಲಿ ಭಾಗಿಯಾಗಿ, ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
50 ನಿಮಿಷದಲ್ಲಿ.. 5 ಕಿ.ಮೀ..!: ಮಹಾರಾಷ್ಟ್ರದ 80 ವರ್ಷದ ಭಾರ್ತಿ ಎಂಬುವವರು ಈ ಸಾಹಸ ತೋರಿದ ಅಜ್ಜಿ. 9 ಗಜದ ಸೀರೆಯುಟ್ಟ ಅಜ್ಜಿ, ಸ್ಪೋರ್ಟ್ಸ್ ಶೂ ಧರಿಸಿ ಓಡಿದ್ದರು. ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಅವರು 51 ನಿಮಿಷದಲ್ಲೇ 4.2 ಕಿ.ಮೀ ಓಡಿ ಗಮನ ಸೆಳೆದಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಭಾರ್ತಿ ಉತ್ಸಾಹ, ವೇಗ ಕೆಲವೊಮ್ಮೆ ನಿಧಾನವಾಗಿ ಓಡಿದರೆ ಹೊರತು ಅವರಿಗೆ ಆಯಾಸ ಕಾಡಲಿಲ್ಲ.
ಈ ವಯಸ್ಸಿನಲ್ಲಿ ಈ ರೀತಿ ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿ, ಉತ್ಸಾಹದಿಂದ ಓಡಿದ ಗುಟ್ಟೇನು ಎಂಬುದರ ಕಾರಣವನ್ನು ಬಿಚ್ಚಿಟ್ಟಿರುವ ಭಾರ್ತಿ ಅಜ್ಜಿ, ಇದು ನನ್ನ ಐದನೇ ಮ್ಯಾರಾಥಾನ್. ಓಟ ಮತ್ತು ವಾಕಿಂಗ್ನಂತಹ ಅಭ್ಯಾಸವನ್ನು ಇಂದಿಗೂ ರೂಢಿಸಿಕೊಂಡಿದ್ದೇನೆ. ಇದೇ ನನ್ನನ್ನು ಈ ವಯಸ್ಸಿನಲ್ಲೂ ಉತ್ಸಾಹ ಮತ್ತು ಆರೋಗ್ಯದಿಂದ ಇರುವಂತೆ ಸಹಾಯ ಮಾಡಿದೆ. ಬಹುತೇಕರು ವಯಸ್ಸಾಗುತ್ತಿದ್ದಂತೆ ತಮ್ಮನ್ನು ತಾವು ನಿಯಂತ್ರಿಸಿ, ಅದು ಮಾಡಬಾರದು, ಇದು ಮಾಡಬಾರದು ಎಂದು ಗಡಿ ಹಾಕಿಕೊಳ್ಳುತ್ತಾರೆ. ಆದರೆ, ನಾನು ಆ ರೀತಿ ಇಲ್ಲ. ವಯಸ್ಸು ಎಂಬುದು ನೋಡುಗರಲ್ಲಿ ಕಾಣುವ ಸಂಖ್ಯೆಯಾಗಿದೆ. ನಿಮಗೆ ಏನು ಬೇಕು ಅದು ಮಾಡಿ. ಯಾವುದಕ್ಕೂ ವಯಸ್ಸು ಅಡ್ಡಿ ಬರುವುದಿಲ್ಲ ಎನ್ನುತ್ತಾರೆ ಅಜ್ಜಿ.
ಸ್ಟಾರ್ ಅಜ್ಜಿ: ಭಾರ್ತಿ ಅಜ್ಜಿ ಮ್ಯಾರಾಥಾನ್ ಓಡುತ್ತಿರುವ ಫೋಟೋಗಳನ್ನು ಅವರ ಮೊಮ್ಮಗಳು ಡಿಂಪಲ್ ಮೆಹ್ತಾ ಫರ್ನಾಂಡಿಸ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. 'ನನ್ನ ಅಜ್ಜಿಯ ಧೈರ್ಯ ಮತ್ತು ಸಮರ್ಪಣೆ... ಅವರು ನಮಗೆ ಸ್ಪೂರ್ತಿ' ಎಂದು ಬರೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಂದಿನ ಪೀಳಿಗೆ ಜನರು ಅವರಿಂದ ಪ್ರೇರಣೆಯನ್ನು ಪಡೆದಿದ್ದಾರೆ. ಇದಾದ ಬಳಿಕ ಸ್ಟಾರ್ ಅಜ್ಜಿ ಎಲ್ಲರ ಮೆಚ್ಚುಗೆ ಗಳಿಸಿದರು. ಈ ಎಲ್ಲದರ ನಡುವೆ ದೈನಂದಿನ ಆರೋಗ್ಯಕರ ವ್ಯಾಯಾಮದಂತಹ ಚಟುವಟಿಕೆಗಳನ್ನು ರೂಢಿಸಿಕೊಳ್ಳುವ ಮೂಲಕ ವಯಸ್ಸನ್ನೇ ನಾಚಿಸುವಂತೆ ಉತ್ಸಾಹವನ್ನು ಪಡೆದಿದ್ದಾರೆ ಎಂದರೆ ತಪ್ಪಾಗಲಾರದು.
ಇದನ್ನೂ ಓದಿ: ಹೃದಯ ಆರೋಗ್ಯ ಕಾಪಾಡಲು ಮಹಿಳೆಯರೇ ಈ ಸಲಹೆಗಳನ್ನು ಪಾಲಿಸಿ