ETV Bharat / sukhibhava

ವೆಟ್​ ವೈಪ್​ಗಳನ್ನು ಬಳಸುವಾಗ ಮಾಡುವ 8 ತಪ್ಪುಗಳು; ನೀವು ಹೀಗೆ ಮಾಡದಿರಿ! - Health tips

ಸಾಮಾನ್ಯವಾಗಿ ವೆಟ್​ ವೈಪ್​ಗಳನ್ನು ಬಳಸುವಾಗ ನಾವು ಮಾಡುವ ಕೆಲ ಸಾಮಾನ್ಯ ತಪ್ಪುಗಳು ಇಲ್ಲಿವೆ. ಆದಷ್ಟು ಇಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸುವುದು ಉತ್ತಮ.

wet wipes
ವೆಟ್​ ವೈಪ್
author img

By

Published : Aug 8, 2020, 5:58 PM IST

ವೆಟ್​ ವೈಪ್ಸ್​ (ಒದ್ದೆ ಒರೆಸುವ ಬಟ್ಟೆ)ಅನ್ನು ಸಾಮಾನ್ಯವಾಗಿ ಚರ್ಮವನ್ನು ಸ್ವಚ್ಛಗೊಳಿಸಲು, ಡೈಪರ್ ಬದಲಾಯಿಸುವಾಗ ಅಥವಾ ಮನೆಯಲ್ಲಿ ಟೇಬಲ್​ ಸೇರಿದಂತೆ ಕೆಲ ಮೇಲ್ಮೈಗಳನ್ನು ಸ್ವಚ್ಛಗೊಳಿಸಲು ಸಹ ಬಳಸಬಹುದು. ಸಾಮಾನ್ಯವಾಗಿ ನಾವು ನಮ್ಮ ಮನೆಯಲ್ಲೇ ವೈರಸ್ ಅನ್ನು ಸ್ವಚ್ಛಗೊಳಿಸುವ ಒರೆಸುವ ಬಟ್ಟೆಗಳನ್ನು ಹುಡುಕುತ್ತೇವೆ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಬ್ಯಾಕ್ಟೀರಿಯಾ ವಿರೋಧಿ ವೆಟ್​ ವೈಪ್​ಗಳನ್ನು ನಾವು ಖರೀದಿಸಿ ಬಳಸುತ್ತೇವೆ.

ವೆಟ್​ ವೈಪ್​ಗಳನ್ನು ಬಳಸುವಾಗ ನಾವು ಮಾಡುವ ಕೆಲ ಸಾಮಾನ್ಯ ತಪ್ಪುಗಳು ಇಲ್ಲಿವೆ. ಆದಷ್ಟು ಇಂತಹ ತಪ್ಪುಗಳು ಆಗದಂತೆ ಎಚ್ಚರ ವಹಿಸುವುದು ಉತ್ತಮ.

1.ದೇಹದ ಸ್ವಚ್ಛತೆಗೆ ಬಳಸುವುದು

ಚರ್ಮದ ಸ್ವಚ್ಛತೆಗಾಗಿ ಸಾಮಾನ್ಯವಾಗಿ ಆ್ಯಂಟಿ ಬ್ಯಾಕ್ಟೀರಿಯಾ ವೆಟ್​ ವೈಪ್ಸ್​ ಬಳಸುತ್ತೇವೆ. ಆದರೆ ಯಾವುದೇ ಅಡ್ಡ ಪರಿಣಾಮವಿಲ್ಲವೆಂದು ನಾವು ನಂಬುವ ಈ ವೈಪ್​ಗಳಿಂದ ದದ್ದುಗಳು, ತುರಿಕೆ ಅಥವಾ ಇತರ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬೇರೆ ಬೇರೆ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಕ್ಕೆಲ್ಲಾ ಅದರಲ್ಲಿರುವ ರಾಸಾಯನಿಕಗಳು ಕಾರಣ. ಹೀಗಾಗಿ ಖರೀದಿಸುವ ಮೊದಲು ಅದರ ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಿ. ವಿಶೇಷವಾಗಿ ಮಕ್ಕಳಿಗಾಗಿ ಖರೀದಿಸುವಾಗ ಇನ್ನೂ ಎಚ್ಚರಿಕೆಯಿಂದಿರಿ.

2. ಗಟ್ಟಿಯಾದ ಮೇಲ್ಮೈಗಳಿಗೆ ಮಾತ್ರ

ಈ ಒರೆಸುವ ವೆಟ್​ ವೈಪ್​ಗಳಿಂ ಸೋಫಾಗಳಂತಹ ಮೃದು ಮೇಲ್ಮೈಗಳನ್ನು ಒರೆಸಲು ಬಳಸಬಾರದು. ಆದ್ದರಿಂದ, ಟೇಬಲ್‌ಗಳಂತಹ ಗಟ್ಟಿ ಮೇಲ್ಮೈಗಳ ಒರೆಸುವಿಕೆಗೆ ಇವು ಉತ್ತಮ. ಅಲ್ಲಿ ಅವುಗಳ ತೇವಾಂಶವು ಸ್ವಲ್ಪ ಸಮಯದವರೆಗೆ ಉಳಿಯುತ್ತದೆ.

3. ವೈಪ್​ಗಳ ಬರುಬಳಕೆ ಬೇಡ

ಒಂದು ಮೇಲ್ಮೈಯನ್ನು ಸ್ವಚ್ಛಗೊಳಿಸಿ, ನಂತರ ಅದೇ ವೈಪ್​ಗಳನ್ನು ಬಳಸುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ನಿಮ್ಮ ಮನೆಯ ಸುತ್ತಲೂ ಹರಡಬಹುದು. ವಿಶೇಷವಾಗಿ ಸೋಂಕಿತ ಮೇಲ್ಮೈಗಳಿಗೆ ಪ್ರತ್ಯೇಕ ವೈಪ್​ಗಳನ್ನು ಬಳಸಿ.

4. ಹಣ್ಣುಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಅಲ್ಲ

ಸೋಂಕುನಿವಾರಕ ವೈಪ್​ಗಳು, ವಿಶೇಷವಾಗಿ ಎಲ್ಲವನ್ನೂ ಸ್ವಚ್ಛಗೊಳಿಸಲು ಸುಲಭ ಆಯ್ಕೆಯೆಂದು ತೋರುತ್ತದೆ. ಆದರೆ ಸೇಬು, ಪೇರಳೆ ಮುಂತಾದ ಹಣ್ಣುಗಳನ್ನು ವೈಪ್​ನಿಂದ ಸ್ವಚ್ಛಗೊಳಿಸಬೇಡಿ. ಏಕೆಂದರೆ ಅದು ಹಾನಿಕಾರಕ. ನೀವು ಅವುಗಳನ್ನು ನೀರಿನಿಂದ ತೊಳೆದು ಸ್ವಚ್ಛವಾದ ಬಟ್ಟೆಯಿಂದ ಹಣ್ಣುಗಳನ್ನು ಒಣಗಿಸಬಹುದು.

5. ಆಟಿಕೆಗಳನ್ನು ಸ್ವಚ್ಛಗೊಳಿಸಲು ಅಲ್ಲ

ಮಕ್ಕಳ ಆಟಿಕೆ ವಸ್ತುಗಳನ್ನು ವೈಪ್​ನಿಂದ ಒರೆಸಬೇಡಿ. ಮಕ್ಕಳು ತಮ್ಮ ಆಟಿಕೆಗಳನ್ನು ಬಾಯಿಗೆ ಹಾಕಿಕೊಳ್ಳಬಹುದು. ಹೀಗಾಗಿ ರಾಸಾಯನಿಕಗಳು ಮಕ್ಕಳ ದೇಹ ಸೇರುತ್ತದೆ. ಇದರ ಬದಲಿಗೆ ಸೋಪ್ ನೀರನ್ನು ಬಳಸಬಹುದು.

6. ಕೊಳೆಯನ್ನು ಸ್ವಚ್ಛಗೊಳಿಸಿ

ಮೇಲ್ಮೈಯಲ್ಲಿ ಯಾವುದೇ ಧೂಳು ಅಥವಾ ಕೊಳಕು ಇದ್ದರೆ, ಅದನ್ನು ಮೊದಲು ಬಟ್ಟೆ ಅಥವಾ ಸಾಬೂನು ನೀರಿನಿಂದ ಸ್ವಚ್ಛಗೊಳಿಸಿ. ನಂತರವೇ ವೈಪ್​ಗಳನ್ನು ಬಳಸಿ.

7. ವೈಪ್​ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿ

ಶೌಚಾಲಯಗಳಲ್ಲಿ ವೈಪ್​ಗಳನ್ನು ಹರಿದು ಹಾಕಬೇಡಿ. ಇದರಿಂದ ಪೈಪ್‌ಲೈನ್‌ಗಳು ಮತ್ತು ಚರಂಡಿಗಳು ಬ್ಲಾಕ್​ ಆಗಬಹುದು. ಇದರಿಂದ ಪರಿಸರ ಮಾತ್ರವಲ್ಲದೆ ಮಾನವನ ಆರೋಗ್ಯಕ್ಕೂ ಒಳ್ಳೆಯದಲ್ಲ. ಮುಚ್ಚಿದ ಕಸದ ತೊಟ್ಟಿಗಳಲ್ಲಿ ಮಾತ್ರವೇ ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡಿ.

8. ಸರಿಯಾಗಿ ಸ್ಟೋರ್​ ಮಾಡಿ

ವೈಪ್​ಗಳನ್ನು ಸ್ಟೋರ್​ ಮಾಡುವುದು ಬಹಳ ಮುಖ್ಯ. ತಂಪಾದ ಒಣ ಸ್ಥಳದಲ್ಲಿ ಇಡುವುದು ಉತ್ತಮ. ಅವುಗಳನ್ನು ಹೆಚ್ಚಿನ ಶಾಖ ಬೀಳುವಲ್ಲಿ ಇಟ್ಟರೆ ಒಣಗಬಹುದು. ಉದಾಹರಣೆಗೆ ಅವುಗಳನ್ನು ಕಾರಿನಲ್ಲಿ ಅಥವಾ ನೇರ ಸೂರ್ಯನ ಬೆಳಕಿಗೆ ಇಟ್ಟರೆ, ಅವು ಒಣಗುತ್ತದೆ. ಆ ಬಳಿಕ ಅದರ ರಾಸಾಯನಿಕ ಆವಿಯಾಗಿ ಬಳಕೆಗೆ ಬರದಂತಾಗುತ್ತದೆ.

ಪ್ರತಿಯೊಂದು ಉತ್ಪನ್ನಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿದ ನಂತರವೇ ಅವುಗಳನ್ನು ಬಳಸಬೇಕು. ಸೋಂಕುನಿವಾರಕ ವೈಪ್​ಗಳನ್ನು ಮನಸ್ಸಿಗೆ ಬಂದಂತೆ ಬಳಸುವುದು ಹಾನಿಕಾರಕ. ಯಾವುದನ್ನಾದರೂ ಖರೀದಿಸುವ ಮೊದಲು ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಿ ಆ ಬಳಿಕ ಖರೀದಿಸಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.