ನವದೆಹಲಿ: 71ನೇ ವಿಶ್ವ ಸುಂದರಿ (ಮಿಸ್ ವರ್ಲ್ಡ್) ಸ್ಪರ್ಧೆ ಈ ಬಾರಿ ಭಾರತದಲ್ಲಿ ನಡೆಯಲಿದೆ. 2023ರಲ್ಲಿ ನಡೆಯುವ ಈ ಸ್ಪರ್ಧೆಯ ಗೌರವವನ್ನು ಶ್ರೀಮಂತ ಸಾಂಸ್ಕೃತಿಕತೆ ಹೊಂದಿರುವ ದೇಶಕ್ಕೆ ನೀಡುತ್ತಿರುವುದಾಗಿ ದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಟಿ ಮಿಸ್ ವರ್ಲ್ಡ್ ವಿಜೇತೆ ಕ್ಯಾರೊಲಿನ ಬೆಲವಸ್ಕಾ ತಿಳಿಸಿದರು.
ಇನ್ನು ಭಾರತದಲ್ಲಿ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಮಿಸ್ ವರ್ಲ್ಡ್ ಫೈನಲ್ ನಡೆಯಲಿದ್ದು, ಈ ದಿನಾಂಕ ಮತ್ತು ಸ್ಥಳದ ಕುರಿತು ಸ್ಪರ್ಧಿಗಳು ಕುತೂಹಲ ಹೊಂದಿದ್ದಾರೆ. ಈ ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಳ್ಳಲು 130 ದೇಶದ ಸ್ಪರ್ಧಿಗಳು ಸೊದ್ದತೆ ನಡೆಸಿದ್ದು, ಇವರೆಲ್ಲಾ ಭಾರತದಲ್ಲಿ ಸೇರಲಿದ್ದಾರೆ. ಇದಾದ ಬಳಿಕ ಸ್ಪರ್ಧಿಗಳ ಸಾಮರ್ಥ್ಯ ಪ್ರದರ್ಶನಕ್ಕೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಇದರಲ್ಲಿ ಕ್ರೀಡಾ ಸವಾಲು ಸೇರಿದಂತೆ ಸಾಮಾಜಿಕ ಸೇವೆಗಳು ಇರಲಿವೆ.
ನವೆಂಬರ್/ ಡಿಸೆಂಬರ್ 2023ರಲ್ಲಿ ನಿಗದಿಯಾಗಿರುವ ಗ್ರಾಂಡ್ ಫಿನಾಲೆಗೆ ಮೊದಲು ಅನೇಕ ಸುತ್ತುಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅಂತಿಮ ಕಾರ್ಯಕ್ರಮ ಎಲ್ಲಿ ಯಾವಾಗ ನಡೆಯಲಿದೆ ಎಂಬುದು ನಂತರ ದಿನದಲ್ಲಿ ನಿರ್ಧರಿಸಲಾಗುವುದು ಎಂದರು.
ಮಿಸ್ ವರ್ಲ್ಡ್ ಸಂಘಟನೆ ಅಧ್ಯಕ್ಷೆ ಮತ್ತು ಮುಖ್ಯಸ್ಥೆ ಆಗಿರುವ ಜೂಲಿಯಾ ಮೊರ್ಲೆ ಮಾತನಾಡಿ, ಭಾರತದಲ್ಲಿ 71ನೇ ಮಿಸ್ ವರ್ಲ್ಡ್ ಫಿನಾಲೆ ನಡೆಸುತ್ತಿರುವುದಕ್ಕೆ ಸಂತಸ ತಂದಿದೆ. ಭಾರತದೊಂದಿಗೆ ನನಗೆ ಬಹಳ ಹತ್ತಿರ ಸಂಬಂಧ ಇದೆ. ಈ ಅದ್ಬುತ ದೇಶಕ್ಕೆ 30 ವರ್ಷದ ಹಿಂದೆ ನಾನು ಬಂದಿದ್ದೆ. ಭಾರತದ ವೈಶಿಷ್ಟ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಹಂಚಿಕೊಳ್ಳಲು ಕಾತುರಾರಾಗಿದ್ದೇವೆ. ಇಲ್ಲಿ ವಿಶ್ವದ ಗಮನ ಸೆಳೆಯುವ ಅದ್ಬುತ ತಾಣಗಳಿದ್ದು, ಎಲ್ಲರ ಮನಸೊರೆಗೊಳ್ಳುತ್ತದೆ ಎಂದು ತಿಳಿಸಿದರು.
71ನೇ ವಿಶ್ವ ಸುಂದರಿ 130 ರಾಷ್ಟ್ರೀಯ ಚಾಂಪಿಯನ್‌ಗಳ ಸಾಧನೆಗಳನ್ನು 'ಇನ್‌ಕ್ರೆಡಿಬಲ್ ಇಂಡಿಯಾ'ದಾದ್ಯಂತ ತಮ್ಮ ಒಂದು ತಿಂಗಳ ಪ್ರಯಾಣದಲ್ಲಿ ಪ್ರದರ್ಶನ ಕಾರ್ಯಕ್ರಮ ನಡೆಸಲಾಗುವುದು. ಈ ಮೂಲಕ 71ನೇ ಮಿಸ್ ವರ್ಲ್ಡ್ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತೇವೆ. ಭಾರತದಲ್ಲಿ 71 ನೇ ವಿಶ್ವ ಸುಂದರಿ 2023 ಅನ್ನು ಆಯೋಜಿಸುವ ಮೂಲಕ ಮೌಲ್ಯಗಳನ್ನು ವರ್ಧಿಸಲು ಮತ್ತು ಅರ್ಥಪೂರ್ಣ ಸಂಭಾಷಣೆಗಳು ಮತ್ತು ಕ್ರಿಯೆಗಳಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.
ಭಾರತದಲ್ಲಿ 71 ನೇ ವಿಶ್ವ ಸುಂದರಿ ಲೋಕೋಪಕಾರಿ ಚಟುವಟಿಕೆಗಳ ಮೂಲಕ ದತ್ತಿ ಕಾರ್ಯಗಳನ್ನು ಉತ್ತೇಜಿಸುತ್ತದೆ. ಸ್ಪರ್ಧಿಗಳು ತಮ್ಮ ಸಮುದಾಯಗಳಲ್ಲಿ ಧನಾತ್ಮಕ ಪ್ರಭಾವ ಬೀರಲು ಮತ್ತು ಸಮಾಜಕ್ಕೆ ಕೊಡುಗೆ ನೀಡಲು ಪ್ರೇರೇಪಿಸುತ್ತದೆ. ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ ಮತ್ತು ಮಾನುಷಿ ಚಿಲ್ಲರ್ ಸೇರಿದಂತೆ ಆರು ಭಾರತೀಯರು ಇದುವರೆಗೆ ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಏನಿದು ಮಿಸ್ ವರ್ಲ್ಡ್ ಸ್ಪರ್ಧೆ: ಮಹಿಳೆಯರ ಸೌಂದರ್ಯದ ಜೊತೆಗೆ ಅವರ ಪ್ರತಿಭೆಯನ್ನು ಸಂಭ್ರಮಿಸಲು ಇರುವ ಅತ್ಯಂತ ಗೌರವನ್ವಿತ ಸ್ವರ್ಧೆಗಳಲ್ಲಿ ಮಿಸ್ ವರ್ಲ್ಡ್ ಒಂದಾಗಿದೆ. ಜೊತೆಗೆ ಇದು ಮಹಿಳೆಯರ ಸಬಲೀಕರದ ಜೊತೆಗೆ ಅವರಿಗೆ ಧ್ವನಿಯನ್ನು ನೀಡುತ್ತದೆ. ಜಾಗತಿಕ ಮಟ್ಟದಲ್ಲಿ ಧನಾತ್ಮಕ ಬದಲಾವಣೆಯನ್ನು ಉತ್ತೇಜಿಸುತ್ತಾರೆ.
ಇದನ್ನೂ ಓದಿ: ಮದುವೆ ವೇಳೆ ತ್ವಚೆಯ ಸೌಂದರ್ಯ ಹೆಚ್ಚಿಸುವುದು ಹೇಗೆ? ಈ ಅಂಶಗಳ ಬಗ್ಗೆ ಕಾಳಜಿವಹಿಸಿ