ETV Bharat / sukhibhava

ಪರಿಸರ ಕಾಳಜಿಗೆ ಶ್ರಮಿಸುತ್ತಿರುವ 7ರ ಪೋರ: ಮೂರ್ತಿ ಚಿಕ್ಕದಾದ್ರೂ ಈತನ ಸಾಧನೆ ದೊಡ್ಡದು - ಮಕ್ಕಳು ದೊಡ್ಡ ಸಾಧನೆ

7 ವರ್ಷದ ಮಕ್ಕಳ ಆಟ, ಪಾಠದಲ್ಲಿ ಮುಳುಗಿರುವ ಹೊತ್ತಿನಲ್ಲಿ ಈ ಹುಡುಗನ ಪರಿಸರ ಮತ್ತು ಅರಣ್ಯ ಸಂರಕ್ಷಣೆಯ ಕಾಳಜಿಗೆ ಮೆಚ್ಚಲೇ ಬೇಕಿದೆ.

7 year old Boy working for conservation of forest and nature

author img

By

Published : May 19, 2023, 4:02 PM IST

ಹೈದರಾಬಾದ್​: ಮಕ್ಕಳ ಬಾಲ್ಯಾವಸ್ಥೆ ಪೋಷಕರಿಗೆ ಸದಾ ಚೆಂದವೇ ಸರಿ. ಅವರು ದೊಡ್ಡವರಾದಂತೆ ತಮಗಿಂತ ಮಕ್ಕಳು ದೊಡ್ಡ ಸಾಧನೆ ಮಾಡಬೇಕು ಎಂಬುದು ಪೋಷಕರ ಇಚ್ಚೆ. ಆದರೆ, ಈ ಮಗು ತಮ್ಮ ಬಾಲ್ಯದಲ್ಲೇ ಅಪ್ಪ- ಅಮ್ಮನಿಗೆ ಕೀರ್ತಿ ತರುವ ಕೆಲಸ ಮಾಡುವ ಮೂಲಕ ಜನರಿಗೂ ಪರಿಸರ ಕಾಳಜಿ ಪಾಠ ಮಾಡಿದೆ. ಈತನ ವಯಸ್ಸಿನ ಮಕ್ಕಳು ಅಭಿವ್ಯಕ್ತಪಡಿಸುವುದಕ್ಕೆ ಕಷ್ಟಪಡುತ್ತಿರುವ ವಯಸ್ಸಿನದಲ್ಲಿ ಈ ಪೋರ ಪರಿಸರ ಕಾಳಜಿಯ ಪಾಠದಿಂದ ಇಡೀ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದ್ದಾರೆ. 10 ವರ್ಷ ತುಂಬುವ ಮೊದಲೇ ಎಲ್ಲರ ಪ್ರಶಂಸೆ ಪಡೆದ ಈ ಮಗುವನ್ನು ಇತ್ತೀಚೆಗೆ ನಡೆದ ಬ್ರಿಟನ್​ ರಾಜನ ಪಟ್ಟಾಭಿಷೇಕಕ್ಕೂ ಆಹ್ವಾನಿಸಲಾಗಿತ್ತು.

ಇಷ್ಟೆಲ್ಲ ಸಾಧನೆ ಮಾಡಿದ ಹುಡುಗ ಯಾರು, ಏನಿತನ ಸಾಧನೆ? ಎಂಬ ಕುತೂಹಲ ಮೂಡುವುದು ಸಹಜ. ಈತನ ಹೆಸರು ಆನೀಶ್ವರ್​. ಬ್ರಿಟನ್​​ನಲ್ಲಿ ನೆಲೆಸಿರುವ ಆಂಧ್ರ ಪ್ರದೇಶದ ಮೂಲದ ಕುಂಚಲ ಅನಿಲ್​ - ಸ್ನೇಹ ಅವರ 7 ವರ್ಷದ ಮಗ. 4ನೇ ವಯಸ್ಸಿನಲ್ಲೇ ಕಾಡುಪ್ರಾಣಿಗಳ ಸಂರಕ್ಷಣೆಗೆ ಈತ ಆಸಕ್ತಿ ತೋರಿದ್ದಾನೆ. ಮನೆಯಲ್ಲಿ ತನ್ನ ಸ್ನೇಹಿತರು ಸಂಬಂಧಿಗಳೊಡನೆ ಮಾತನಾಡುವಾಗ ಈತನ ಪ್ರಾಣಿ ಪ್ರೇಮ ವ್ಯಕ್ತವಾಗಿದೆ.

ಒಮ್ಮೆ ಹೀಗೆ ಅನೀಶ್​ ಟಿವಿ ಕಾರ್ಯಕ್ರಮ ನೋಡುತ್ತಿದ್ದಾಗ, 100 ವರ್ಷದ ವ್ಯಕ್ತಿ ಕೋವಿಡ್​ ಬಿಕ್ಕಟ್ಟಿನಿಂದ ಬ್ರಿಟನ್​ನಲ್ಲಿ ವೈದ್ಯಕೀಯ ಸೇವೆಗೆ ದೇಣಿಗೆ ಸಂಗ್ರಹಿಸುತ್ತಿದ್ದನ್ನು ಗಮನಿಸಿ, ಪೋಷಕರಿಗೆ ತಿಳಿಸಿದ್ದಾನೆ. ಈ ವೇಳೆ ತಾನು ಕೂಡ ದೇಣಿಗೆ ಸಂಗ್ರಹಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ. ಭಾರತಕ್ಕೆ 3 ಸಾವಿರ ಪೌಂಡ್​ ಹಣ ಮತ್ತು ಪಿಪಿ ಕಿಟ್​ ಸಹಾಯ ಮಾಡಿದ್ದಾನೆ. ಈ ಕೆಲಸಕ್ಕೆ ಅನಿಶ್​ ಲಿಟಲ್​ ಪೆಡ್ಲರ್​ ಚಾಲೆಂಜ್​ ಎಂಬ ಸಂಘಟನೆ ನಿರ್ಮಿಸಿ, ಹಣ ಸಂಗ್ರಹ ಮಾಡಿದ್ದಾನೆ.

ಇದಕ್ಕಾಗಿ ಸೈಕಲ್​ ಸವಾರಿ ಮಾಡುತ್ತಾ ಜನರಿಗೆ ಕೋವಿಡ್​ ಬಗ್ಗೆ ಅರಿವು ಮೂಡಿಸುವ ಯತ್ನ ಮಾಡಿದ್ದಾರೆ. ಇದಕ್ಕಾಗಿ ತಮ್ಮ ಸ್ನೇಹಿತರ ಗುಂಪನ್ನು ಈ ಸವಾಲನ್ನು ಎದುರಿಸಲು ಸೇರಿಸಿಕೊಂಡಿದ್ದಾನೆ. ತಮ್ಮ ಈ ಲಿಟ್ಟಲ್​ ಪೆಡ್ಲರ್​ ಚಾಲೆಂಜ್​ ಅನ್ನು 57 ಮಕ್ಕಳೊಂದಿಗೆ ಪೂರ್ಣಗೊಳಿಸಿ, ಅನೇಕರಿಗೆ ಸ್ಪೂರ್ತಿಯಾಗಿದ್ದಾನೆ.

ಚಿಕ್ಕ ವಯಸ್ಸಿನಲ್ಕೇ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಈತ ಒಳಗೊಳ್ಳುವುದನ್ನು ಕಂಡ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಲ್ಲಿ ಹೆಮ್ಮೆ ಮೂಡಿದೆ. ಇಷ್ಟೇ ಅಲ್ಲದೇ ಆತ ಗೊಂಬೆಗಳೊಂದಿಗೆ ಅದ್ಬುತವಾಗಿ ಆಟವಾಡುತ್ತಾರೆ. ಜೊತೆಗೆ ಅಮೆರಿಕ ಮತ್ತು ಬ್ರಿಟನ್​ ಪ್ರಖ್ಯಾತ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುತ್ತಾರೆ. ಬ್ರಿಟನ್ಸ್​ ಗಾಟ್​ ಟ್ಯಾಲೆಂಟ್​​ನ ಕಾರ್ಯಕ್ರಮದಲ್ಲಿ ಫಿನಾಲೆ ತಲುಪಿದ ಭಾರತೀಯ ವಲಸಿಗರಲ್ಲಿ ಈತ ಖ್ಯಾತಿ ಪಡೆದಿದ್ದಾರೆ. ಅಲ್ಲದೇ ತಮ್ಮ ಕವನ ವಾಚನದಿಂದಲೂ ಈತ ಹಲವರನ್ನು ಮೋಡಿ ಮಾಡಿದ್ದಾನೆ.

ಮಕ್ಕಳಿಂದ ದೊಡ್ಡವರವರೆಗೆ ಅರಣ್ಯ ಮತ್ತು ಪರಿಸರ ಸಂರಕ್ಷಣೆ ಪ್ರಮುಖವಾಗಿದೆ ಎಂದು ವಾದಿಸಿರುವ ಈತ ಈ ಕುರಿತು ಇತ್ತೀಚೆಗೆ ಬ್ರಿಟಿಷ್​ ಪ್ರಧಾನಿ ರಿಷಿ ಸುನುಕ್​ ಭೇಟಿಯಾಗಿ ಈ ಕುರಿತು ಮಾತನಾಡಿದ್ದಾನೆ. ಈ ಹಿಂದೆ ಕೂಡ ಅನೀಶ್​​ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಮತ್ತು ಆತನ ಹೆಂಡತಿ ಜಿಲ್​ ಬೈಡನ್​ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಿದ್ದು, ಹವಾಮಾನ ಬದಲಾವಣೆ ಮತ್ತು ಪರಿಸರ ಸಂರಕ್ಷಣೆ ಕುರಿತು ಚರ್ಚಿಸಿದ್ದ.

ಪರಿಸರ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ಅನೀಶ್​​ ಇದಕ್ಕಾಗಿ ದುಬೈನಲ್ಲಿ ನಡೆಸುತ್ತಿರುವ ಕೊಪ್​ 28 ಸಮ್ಮೇಳದಲ್ಲಿ ಭಾಗಿಯಾಗುವ ಇಚ್ಛೆಯನ್ನು ಹೊಂದಿದ್ದಾನೆ.

ಇದನ್ನೂ ಓದಿ: ಗ್ರೀನ್​ ಕಾರ್ಡ್ ವಿತರಣೆ ವಿಳಂಬ; ಅಮೆರಿಕದಲ್ಲಿ ಶಾಶ್ವತ ನೆಲೆ ಕನಸಿನ ಭಾರತೀಯರಿಗೆ ಬೇಸರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.