ಭಾರತದಲ್ಲಿ ವರ್ಷದ ಬಹುತೇಕ ಭಾಗ ಮದುವೆ, ಕೌಟುಂಬಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಇಂಥ ಸಮಾರಂಭಗಳಲ್ಲಿ ಕುಟುಂಬಗಳು ಒಗ್ಗೂಡಿ ಸಂಭ್ರಮಿಸುತ್ತವೆ. ಹಬ್ಬ, ಮದುವೆ, ಹುಟ್ಟುಹಬ್ಬ ಪ್ರತಿಯೊಂದನ್ನೂ ಭರ್ಜರಿಯಾಗಿಯೇ ಆಚರಿಸಲಾಗುತ್ತದೆ. ಊಟೋಪಚಾರವನ್ನೂ ಬೊಂಬಾಟ್ ಆಗಿ ಸಿದ್ಧಪಡಿಸಲಾಗುತ್ತದೆ. ಇಂಥ ಸಂತೋಷಕೂಟಗಳಲ್ಲಿ ಸಿಹಿತಿನಿಸಿನ ಪಾಲು ಕೊಂಚ ಹೆಚ್ಚೇ ಇರುತ್ತದೆ. ಈ ಸಂಭ್ರಮದಲ್ಲಿ ಬಾಯಿ ಸಿಹಿ ಮಾಡಿ ಎಂದು ಬಾಯ್ತುಂಬ ಸ್ವೀಟ್ ತುಂಬಿಸಿ ಬಿಡುತ್ತಾರೆ.
ಆದರೆ ಮಧುಮೇಹ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಇದು ಸಂಕಷ್ಟ ತಂದೊಡ್ಡುತ್ತದೆ. ಅತಿಯಾದ ಸಿಹಿ ತಿನಿಸು ಸೇವಿಸುವುದರಿಂದ ಆರೋಗ್ಯ ಕೆಡುತ್ತದೆ. ಆದ್ದರಿಂದ ಇಂಥ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮೊದಲು ಮಧುಮೇಹ ಸಮಸ್ಯೆ ಇರುವವರು ಪೂರ್ವಸಿದ್ದತೆ ಮಾಡಿಕೊಳ್ಳಬೇಕು. ನೀವು ಭಾಗಿಯಾಗುವ ಕಾರ್ಯಕ್ರಮದಲ್ಲಿ ಯಾವೆಲ್ಲ ಆಹಾರ ನಿಮ್ಮ ಆರೋಗ್ಯಕ್ಕೆ ಉತ್ತಮವಲ್ಲ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಸೇವಿಸಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆಯ ಏರಿಳಿತವನ್ನು ತಪ್ಪಿಸಬಹುದು. ಮಧುಮೇಹ ನಿಯಂತ್ರಿಸಲು ಕೆಲವು ಸಲಹೆಗಳು ಇಲ್ಲಿವೆ.
ಪೂರ್ವಯೋಜಿತ ತಯಾರಿ: ನೀವು ಕಾರ್ಯಕ್ರಮಕ್ಕೆ ತೆರಳಲು ಸಿದ್ಧರಾಗಿದ್ದರೆ, ಈ ಸಮಯಕ್ಕಾಗಿ ಮೊದಲೇ ನಿಮ್ಮ ಔಷಧಿ ವೇಳಾಪಟ್ಟಿ, ಆಹಾರ ಮತ್ತು ಜೀವನ ಶೈಲಿಯನ್ನು ನಿಯಂತ್ರಿಸಲು ವೈದ್ಯರೊಂದಿಗೆ ಮುಂಚಿತವಾಗಿ ಮಾತನಾಡಿ. ಅವರು ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಿ. ಅಗತ್ಯವಿರುವ ಎಲ್ಲಾ ಔಷಧಿಗಳನ್ನು ತೆಗೆದುಕೊಂಡು ಹೋಗಿ. ಮುಖ್ಯವಾಗಿ ನೀವು ಮನೆಯ ಹೊರತು ಹೊರಗಡೆ ಇದ್ದ ಪಕ್ಷದಲ್ಲಿ ಖಂಡಿತ ಬ್ಯುಸಿಯಾಗಿದ್ದು ಆಹಾರ, ಮೆಡಿಸಿನ್ಗಳನ್ನು ಮರೆಯಬಹುದು ಇದಕ್ಕಾಗಿ ಅಲಾರಂ ಜೋಡಿಸಿರಿ.
ನಿಮ್ಮವರ ಜೊತೆಯಲ್ಲಿರಿ: ನಿಮ್ಮ ಮಧುಮೇಹ ಆರೈಕೆ ದಿನಚರಿಯನ್ನು ಸರಿಯಾಗಿ ಗಮನಹರಿಸಲು, ನಿಮಗೆ ಸಹಾಯ ಬೇಕಿದ್ದಲ್ಲಿ ಯಾವುದೇ ಸಂದರ್ಭದಲ್ಲಿ ನಿಮ್ಮನ್ನು ಉಪಚರಿಸಲು ನೀವು ಹೋದ ಕಾರ್ಯಕ್ರಮದಲ್ಲಿ ನಿಮ್ಮವರ ಸಂಪರ್ಕದಲ್ಲಿಯೇ ಇರಿ. ಏನಾದರು ಸಮಸ್ಯೆ ಕಾಣಿಸಿಕೊಂಡಲ್ಲಿ ಆರೋಗ್ಯ ಏರುಪೇರಾದ ಸಂದರ್ಭದಲ್ಲಿ ನಿಮ್ಮವರಿಗೆ ಮೊದಲೇ ತಿಳಿಸಿ.
ವ್ಯಾಯಾಮ, ಯೋಗ ಉತ್ತಮ: ಕಾರ್ಯಕ್ರಮದ ದಿನ ಹತ್ತಿರ ಬರುತ್ತಿದ್ದಂತೆ ಮತ್ತು ಆ ದಿನಗಳಲ್ಲಿ ನೀವು ದೈಹಿಕವಾಗಿ ಸದೃಢವಾಗಿರುವುದು ಮುಖ್ಯ. ಇದಕ್ಕಾಗಿ ಯೋಗ, ವ್ಯಾಯಾಮ ಮಾಡಿ. ಇದು ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. ಕ್ಯಾಲರಿಗಳನ್ನು ಬರ್ನ್ ಮಾಡುತ್ತದೆ ಮತ್ತು ನಿಮ್ಮ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈವೆಂಟ್‌ಗಳಿಗೆ ಹೋಗುವ ಮುನ್ನ ಕಡಿಮೆ ಕಾರ್ಬೋಹೈಡ್ರೇಟ್, ಹೆಚ್ಚಿನ ಫೈಬರ್ ಹೊಂದಿರುವ ಆಹಾರ ತಿನ್ನಿರಿ. ಡ್ರೈಫ್ರೂಟ್ಸ್ ಮೊಳಕೆ ಬರಿಸಿದ ಬೀಜಗಳು, ಆರೋಗ್ಯಕರ ತಿಂಡಿಗಳನ್ನು ಒಯ್ಯುವುದು ಮತ್ತು ಸೇವಿಸುವುದು ಉತ್ತಮ.
ನಿಮ್ಮ ಶುಗರ್ ಲೆವೆಲ್ ಪರಿಶೀಲಿಸಿಕೊಳ್ಳಿ: ಮುಂಬೈನ ಕನ್ಸಲ್ಟಿಂಗ್ ಫಿಸಿಶಿಯನ್, ಡಯಾಬಿಟಾಲಜಿಸ್ಟ್, ಕ್ಲಿನಿಕಲ್ ಕಾರ್ಡಿಯಾಲಜಿಸ್ಟ್ ಮತ್ತು ಕ್ರಿಟಿಕಲ್ ಕೇರ್ ಸ್ಪೆಷಲಿಸ್ಟ್ ಆಗಿರುವ ಡಾ.ವಿಶೇಶ್ ಅಗರ್ವಾಲ್ ಮಾತನಾಡಿ, ನಿಮ್ಮ ದೇಹದಲ್ಲಿರುವ ಸಕ್ಕರೆ ಮಟ್ಟ ಗಮನಿಸಿಕೊಳ್ಳಿ. ಈಗಿನ ತಂತ್ರಜ್ಞಾನದ ಮೂಲಕ ಸುಲಭವಾಗಿ ಪತ್ತೆ ಹಚ್ಚಿಕೊಳ್ಳಬಹುದು. ಏಕೆಂದರೆ ಈಗ CGM ಸಾಧನದ ಆಯ್ಕೆಗಳು ಸಾಂಪ್ರದಾಯಿಕ ರಕ್ತದ ಗ್ಲೂಕೋಸ್ ಮೀಟರ್‌ಗಳನ್ನು ಮೀರಿ ಬೆರಳು ಚುಚ್ಚುವಿಕೆಯ ಶೈಲಿಯನ್ನು ಒಳಗೊಂಡಿದೆ. ಈ ಮೂಲಕ ನೀವೇ ನಿಮ್ಮ ಶುಗರ್ ಲೆವೆಲ್ ಖಚಿತಪಡಿಸಿಕೊಳ್ಳಬಹುದು.
FreeStyle Libre ನಂತಹ ನಿರಂತರ ಗ್ಲೂಕೋಸ್ ಮಾನಿಟರಿಂಗ್ ಸಾಧನಗಳನ್ನು ಇರಿಸಿಕೊಳ್ಳುವ ಮೂಲಕ ಸೂಕ್ತವಾಗಿ ನಿಮ್ಮ ದೇಹದ ಮಧುಮೇಹ ಮಟ್ಟವನ್ನು ನೀವು ನೈಜ ಸಮಯದಲ್ಲಿ, ಯಾವುದೇ ಸ್ಥಳದಲ್ಲಿಯೂ ಪರೀಶೀಲನೆ ಮಾಡಬಹುದು. ನಿರಂತರ ಗ್ಲೂಕೋಸ್ ಮಾನಿಟರಿಂಗ್ ಸಾಧನಗಳು ನಿಮಗೆ ಯಾವುದೇ ಹೆಚ್ಚಿನ ಅಥವಾ ಕಡಿಮೆ ರಕ್ತದ ಒಳನೋಟಗಳನ್ನು ನೀಡುತ್ತವೆ ಎಂದು ತಿಳಿಸಿದ್ದಾರೆ.
ಮಧುಮೇಹ ಸ್ನೇಹಿ ಆಹಾರ ಆರಿಸಿ: ಸಮಾರಂಭದ ಭೋಜನಗಳಲ್ಲಿ ಆದಷ್ಟು ಸಿಹಿ ತಿನಿಸುಗಳಿಂದ ದೂರವಿರಿ ಮತ್ತು ಹೆಚ್ಚು ಪಿಷ್ಟರಹಿತ ತರಕಾರಿಗಳು, ಧಾನ್ಯಗಳು, ಸಲಾಡ್ ಇಂಥವುಗಳನ್ನು ಸೇವಿಸಿ. ಆಹಾರವನ್ನು ಸೇವಿಸಿದ ನಂತರ ಸ್ವಲ್ಪ ದೈಹಿಕ ಚಟುವಟಿಕೆ ಮಾಡುವುದು ಉತ್ತಮ. ಆಗ ನಿಮ್ಮ ದೇಹವು ಸ್ವಲ್ಪ ಹಗುರವಾಗುತ್ತದೆ. ನೀವು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಬಹುದು.
ಇದನ್ನೂಓದಿ: ಡೆಮೆನ್ಶಿಯಾದಂತಹ ಅಪಾಯಕ್ಕೆ ಕಾರಣವಾಗುತ್ತದೆ ಸಾಮಾಜಿಕ ಪ್ರತ್ಯೇಕಿಕರಣ