ETV Bharat / sukhibhava

ಬೇಸಿಗೆಯಲ್ಲಿ ತಲೆಕೂದಲ ಆರೈಕೆ ಹೇಗೆ? ಈ 7 ಸಲಹೆಗಳನ್ನು ಪಾಲಿಸಿ.. - ಬೇಸಿಗೆಯಲ್ಲಿ ಕೂದಲು ಸಂಬಂಧಿತ ಸಮಸ್ಯೆ

ಬೇಸಿಗೆಯಲ್ಲಿ ಒಣ ಮತ್ತು ನಿರ್ಜೀವ ಕೂದಲು ಹೊಂದುವುದು ಸಾಮಾನ್ಯವಾಗಿದೆ. ನೀವೆನಾದ್ರೂ ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದರೆ ಅದನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಇಲ್ಲಿವೆ ಕೆಲವು ಸಲಹೆಗಳು..

hair healthy during summers
ಕೂದಲು
author img

By

Published : Apr 18, 2022, 8:16 PM IST

ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಬೇಸಿಗೆಯಲ್ಲಿ ಕೂದಲು ಸಂಬಂಧಿತ ಸಮಸ್ಯೆಗಳನ್ನು ಎದುರಿಸುವುದು ಸರ್ವೇ ಸಾಮಾನ್ಯ. ಇದಕ್ಕೆ ಕಾರಣ ಬಿಸಿಲಿನ ಬೇಗೆ, ಬೆವರುವಿಕೆ, ತೇವಾಂಶದ ಕೊರತೆ, ತಲೆಹೊಟ್ಟು, ನೆತ್ತಿಯ ಸೋಂಕುಗಳು ಮತ್ತು ಹೇನು. ಇವು ಸುಲಭವಾಗಿ ಕೂದಲು ಒಡೆಯಲು ಮಾತ್ರವಲ್ಲದೆ ಅದನ್ನು ಮಂದ ಮತ್ತು ನಿರ್ಜೀವಗೊಳಿಸುತ್ತವೆ. ಇದೇ ವಿಚಾರವಾಗಿ ಈಟಿವಿ ಭಾರತ ಸುಖೀಭವ ತಂಡ ಉತ್ತರಾಖಂಡ ಮೂಲದ ಚರ್ಮರೋಗ ತಜ್ಞೆ ಡಾ.ಆಶಾ ಸಕ್ಲಾನಿ ಅವರೊಂದಿಗೆ ಮಾತನಾಡಿದೆ.

ಬೇಸಿಗೆಯಲ್ಲಿ ಸರಿಯಾಗಿ ಕೂದಲನ್ನು ಶುಚಿಗೊಳಿಸುವುದು ಮತ್ತು ಕೂದಲಿನ ಆರೈಕೆಯು ಅತ್ಯಗತ್ಯವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಹೆಚ್ಚು ತಾಪಮಾನ ಮತ್ತು ವಾಯುಮಾಲಿನ್ಯ ಹೊಂದಿರುವ ನಗರಗಳಲ್ಲಿ ವಾಸಿಸುವವರು ಇದನ್ನು ಪಾಲಿಸಲೇಬೇಕಾಗಿದೆ. ತಲೆಯಲ್ಲಿ ಕೊಳಕು, ಸೂರ್ಯನ ಬೆಳಕು ಮತ್ತು ಬೆವರು ಇವು ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ: ಪಿಸ್ತಾ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ? ನಿಮಗೆ ಗೊತ್ತಿರಬೇಕಾದ ಉಪಯುಕ್ತ ಮಾಹಿತಿ..

ಹೆಚ್ಚಿನ ಜನರು ಬೇಸಿಗೆಯಲ್ಲಿ ತಲೆಯ ಮೇಲೆ ಯಾವುದೇ ರೀತಿಯ ಬಟ್ಟೆಯನ್ನು ಹಾಕಿಕೊಳ್ಳದೇ, ಮನೆಯಿಂದ ಹೊರಬರುತ್ತಾರೆ. ಈ ವೇಳೆ ನಮ್ಮ ನೆತ್ತಿಯು ಧೂಳು, ಮಾಲಿನ್ಯಕಾರಕಗಳು ಮತ್ತು ತೀವ್ರವಾದ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ನಮ್ಮ ನೆತ್ತಿಯು ನಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದೇ ಸಮಯದಲ್ಲಿ, ದ್ವಿಚಕ್ರ ವಾಹನಗಳಲ್ಲಿ ದೀರ್ಘಕಾಲ ಹೆಲ್ಮೆಟ್ ಧರಿಸುವವರು ವಿಪರೀತ ಬೆವರುವಿಕೆಯನ್ನು ಎದುರಿಸುತ್ತಾರೆ. ಇದರಿಂದ ಕೊಳಕು ಮತ್ತು ಮಾಲಿನ್ಯಕಾರಕಗಳ ಜೊತೆಗೆ ಬೆವರು ನೆತ್ತಿಯ ಮೇಲೆ ಸಂಗ್ರಹವಾಗುತ್ತದೆ, ಇದು ಮತ್ತಷ್ಟು ಸೋಂಕುಗಳು, ತುರಿಕೆ, ದದ್ದುಗಳು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡಬಹುದು.

ಏನು ಮಾಡಬಹುದು? ಡಾ. ಆಶಾ ಅವರು ಕೆಲವು ಸಲಹೆಗಳನ್ನು ಸೂಚಿಸಿದ್ದಾರೆ..

  • ನಿಮ್ಮ ಕೂದಲನ್ನು ಸೌಮ್ಯ ಅಥವಾ ಗಿಡಮೂಲಿಕೆ ಶಾಂಪೂ ಬಳಸಿ ವಾರಕ್ಕೆ ಮೂರು ಬಾರಿ ತೊಳೆಯಿರಿ. ವಿಶೇಷವಾಗಿ ದಿನನಿತ್ಯ ಹೆಚ್ಚು ಧೂಳು ಮತ್ತು ಮಾಲಿನ್ಯಕ್ಕೆ ಒಡ್ಡಿಕೊಳ್ಳುವವರು ಅಥವಾ ದೀರ್ಘಕಾಲದವರೆಗೆ ಹೆಲ್ಮೆಟ್ ಧರಿಸುವವರು ಸರಿಯಾಗಿ ಕೂದಲನ್ನು ತೊಳೆಯುವುದು ಉತ್ತಮ.
  • ಮನೆಯಿಂದ ಹೊರಬರುವಾಗ, ಕೆಲವು ನಿಮಿಷಗಳ ಕಾಲ, ಹತ್ತಿ ಬಟ್ಟೆ, ದುಪಟ್ಟಾ ಅಥವಾ ಕ್ಯಾಪ್ನಿಂದ ನಿಮ್ಮ ತಲೆಯನ್ನು ಮುಚ್ಚಲು ಮರೆಯಬೇಡಿ. ನಿಮ್ಮ ಕೂದಲನ್ನು ನೇರ ಸೂರ್ಯನ ಬೆಳಕು ಅಥವಾ ಧೂಳಿಗೆ ಒಡ್ಡಲು ಬಿಡಬೇಡಿ. ಅಲ್ಲದೆ, ಹೆಲ್ಮೆಟ್ ಧರಿಸುವಾಗ, ಮೊದಲು ನಿಮ್ಮ ತಲೆಯ ಮೇಲೆ ಹತ್ತಿ ಬಟ್ಟೆಯನ್ನು ಧರಿಸಿ ಅಥವಾ ನಿಮ್ಮ ಕೂದಲನ್ನು ದುಪಟ್ಟಾದಿಂದ ಮುಚ್ಚಿಕೊಳ್ಳಿ. ಅತಿಯಾದ ಬೆವರನ್ನು ಒಣಗಿಸುವುದರ ಜೊತೆಗೆ ಅದರಿಂದ ಉಂಟಾಗುವ ಸೋಂಕುಗಳನ್ನೂ ಇದರಿಂದ ತಡೆಯಬಹುದಾಗಿದೆ.
  • ಅತಿಯಾದ ಶಾಖವು ಕೂದಲಿನಿಂದ ಮತ್ತು ನಮ್ಮ ದೇಹದಿಂದ ಕೂಡ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ. ಆದ್ದರಿಂದ, ದಿನವಿಡೀ ನಿಮ್ಮನ್ನು ಸರಿಯಾಗಿ ಹೈಡ್ರೀಕರಿಸಿ. ನೀರಿನ ಹೊರತಾಗಿ ಇತರ ದ್ರವಗಳು ಮತ್ತು ಕಲ್ಲಂಗಡಿ, ಸೀಬೆಹಣ್ಣು ಮುಂತಾದ ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸಹ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
  • ಮಹಿಳೆಯರು ತಮ್ಮ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಬಾರದು, ಏಕೆಂದರೆ ಬೆವರು ಮತ್ತು ಸೂರ್ಯನ ಬೆಳಕು ಬೇರುಗಳು ದುರ್ಬಲಗೊಳ್ಳಲು ಕಾರಣವಾಗಬಹುದು. ಇದು ಕೂದಲು ಒಡೆಯುವಿಕೆಗೆ ಕಾರಣವಾಗುತ್ತದೆ.
  • ಬೇಸಿಗೆ ಅಥವಾ ಇತರ ಯಾವುದೇ ಋತುವಿನಲ್ಲಿ, ನಿಮ್ಮ ಕೂದಲನ್ನು ಒಣಗಿಸಲು ಟವೆಲ್​ನಿಂದ ಉಜ್ಜಬೇಡಿ. ಇದು ಘರ್ಷಣೆಯನ್ನು ಉಂಟುಮಾಡುತ್ತದೆ ಮತ್ತು ಒಡೆಯುವಿಕೆಗೆ ಕಾರಣವಾಗುತ್ತದೆ. ಕೂದಲಿನ ನೈಸರ್ಗಿಕ ತೇವಾಂಶವನ್ನು ತೆಗೆದುಹಾಕುತ್ತದೆ. ಆದ್ದರಿಂದ, ಕೂದಲು ಒಣಗಲು ಹತ್ತಿ ಬಟ್ಟೆ ಸೂಕ್ತವಾಗಿದೆ. ಇಲ್ಲಿಯೂ ಉಜ್ಜುವ ಬದಲು ಯಾವಾಗಲೂ ನಿಮ್ಮ ಕೂದಲನ್ನು ಒರೆಸಿಕೊಳ್ಳಿ.
  • ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಿಮ್ಮ ಕೂದಲನ್ನು ಸ್ಟೈಲಿಂಗ್ ಮಾಡುವುದನ್ನು ತಪ್ಪಿಸಿ ಅಂದರೆ ಸ್ಟ್ರೈಟ್ನರ್, ಕರ್ಲರ್ ಅಥವಾ ಡ್ರೈಯರ್ ಅನ್ನು ಬಳಸುವುದನ್ನು ತಪ್ಪಿಸಿ. ಅಲ್ಲದೆ, ಹೆಚ್ಚಿನ ಪ್ರಮಾಣದ ರಾಸಾಯನಿಕಗಳನ್ನು ಒಳಗೊಂಡಿರುವ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ ಅಥವಾ ಕೂದಲಿನ ನೈಸರ್ಗಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಕೂದಲಿನ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಡಿ.
  • ನಿಮ್ಮ ಕೂದಲಿಗೆ ವಾರಕ್ಕೆ ಎರಡು ಬಾರಿ ಎಣ್ಣೆ ಹಚ್ಚಿ, ಆದ್ರೆ ಎಣ್ಣೆಯನ್ನು ಹೆಚ್ಚು ಕಾಲ ಬಿಡಬೇಡಿ. ಬೇಸಿಗೆಯಲ್ಲಿ, ಶಾಂಪೂ ಹಾಕುವ ಮೊದಲು ನಿಮ್ಮ ಕೂದಲಿಗೆ 15-60 ನಿಮಿಷಗಳ ಕಾಲ ಎಣ್ಣೆ ಹಾಕಿ.

ಇಷ್ಟೆಲ್ಲ ಮುನ್ನೆಚ್ಚರಿಕೆಗಳ ನಂತರವೂ ತುರಿಕೆ, ದದ್ದು ಇತ್ಯಾದಿ ಸಮಸ್ಯೆ ಮುಂದುವರಿದರೆ ತಕ್ಷಣ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಎನ್ನುತ್ತಾರೆ ಡಾ.ಆಶಾ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.