ETV Bharat / sukhibhava

ಡಾರ್ಕ್ ಸರ್ಕಲ್​ ಮೂಡಲು ಕಾರಣಗಳು & ಆಯುರ್ವೇದ ಚಿಕಿತ್ಸೆ - cucumber dark circles

ಅನುಚಿತ ಆಹಾರ, ಅನಾರೋಗ್ಯಕರ ಜೀವನಶೈಲಿ ಅಥವಾ ಆನುವಂಶಿಕತೆಯ ಪರಿಣಾಮವಾಗಿ ಅಥವಾ ದೀರ್ಘಕಾಲದ ಅನಾರೋಗ್ಯ ಮತ್ತು ಅದರ ಔಷಧಗಳ ಕಾರಣದಿಂದಾಗಿ ಡಾರ್ಕ್ ಸರ್ಕಲ್ ಮೂಡಬಹುದು. ಇವುಗಳನ್ನು ಹೋಗಲಾಡಿಸಲು ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಳಿವೆ.

6-ayurvedic-tips-to-get-rid-of-dark-circles

author img

By

Published : Jun 9, 2021, 10:39 PM IST

ಹೈದರಾಬಾದ್: ಅನೇಕ ಕಾರಣಗಳಿಂದಾಗಿ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಮೂಡುತ್ತದೆ. ಅನುಚಿತ ಆಹಾರ, ಅನಾರೋಗ್ಯಕರ ಜೀವನಶೈಲಿ ಅಥವಾ ಆನುವಂಶಿಕತೆಯ ಪರಿಣಾಮವಾಗಿ ಅಥವಾ ದೀರ್ಘಕಾಲದ ಅನಾರೋಗ್ಯ ಮತ್ತು ಅದರ ಔಷಧಗಳ ಕಾರಣದಿಂದಾಗಿ ಡಾರ್ಕ್ ಸರ್ಕಲ್ ಮೂಡಬಹುದು. ಇವುಗಳನ್ನು ಪ್ರತಿಯೊಬ್ಬರೂ ತೊಡೆದುಹಾಕಲು ಬಯಸುತ್ತಾರೆ ಏಕೆಂದರೆ ಅದು ವ್ಯಕ್ತಿಯ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ.

ಆದ್ದರಿಂದ, ಈಟಿವಿ ಭಾರತ್ ಸುಖೀಭವ ತಂಡವು ಆಂಧ್ರಪ್ರದೇಶದ ಸಾಸಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಯಾಸ್ಮಿನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರು ಕೆಲ ಸಲಹೆಗಳನ್ನು ನೀಡಿದ್ದಾರೆ.

ನಿದಾನ ಪರಿವರ್ಜನ :

ಇವುಗಳಲ್ಲಿ ಕೆಲವನ್ನು ಮನೆಯಲ್ಲಿಯೇ ಅಭ್ಯಾಸ ಮಾಡಬಹುದಾದರೂ, ನಾಸ್ಯ ಕರ್ಮ, ನೇತ್ರ ತರ್ಪಣ ಮುಂತಾದವುಗಳನ್ನು ಆಯುರ್ವೇದ ತಜ್ಞರ ಮೇಲ್ವಿಚಾರಣೆಯಲ್ಲಿ ಮಾತ್ರ ಮಾಡಬೇಕು. ಡಾರ್ಕ್ ಸರ್ಕಲ್​ಗಳು ಆಹಾರ ಅಥವಾ ಜೀವನಶೈಲಿಯ ಅಂಶಗಳಿಂದ ಉಂಟಾಗಿದ್ದರೆ, ಅವುಗಳನ್ನು ಬದಲಾಯಿಸಬೇಕಾಗಬಹುದು.

ಪೌಷ್ಠಿಕ ಆಹಾರವನ್ನು ಸೇವಿಸುವುದು, ಸಮಯಕ್ಕೆ ನಿದ್ರೆ ಮಾಡುವುದು, ಸ್ಕ್ರೀನ್ ಟೈಮ್ ಅನ್ನು ಸೀಮಿತಗೊಳಿಸುವುದು, ಹೈಡ್ರೀಕರಿಸುವುದು, ಧೂಮಪಾನವನ್ನು ತ್ಯಜಿಸುವುದು ಮುಂತಾದ ಮೂಲಕ ಆರೋಗ್ಯಕರ ಜೀವನ ನಡೆಸಬೇಕು. ಸೂರ್ಯನಿಗೆ ಒಡ್ಡಿಕೊಳ್ಳುವುದು ಸಹ ಡಾರ್ಕದ ಸರ್ಕಲ್ ಉಂಟಾಗಲು ಒಂದು ಕಾರಣವಾಗಬಹುದು. ಆದ್ದರಿಂದ, ನೀವು ಮನೆಯಿಂದ ಹೊರ ಹೋಗುವಾಗ ಟೋಪಿ, ಸನ್​ಗ್ಲಾಸ್ ಮತ್ತು ಸನ್‌ಸ್ಕ್ರೀನ್ ಧರಿಸಿ.

ಸೌತೆಕಾಯಿ:

ಸೌತೆಕಾಯಿಯ ಎರಡು ಹೋಳುಗಳನ್ನು ಕತ್ತರಿಸಿ 10-15 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇರಿಸಿ. ಸೌತೆಕಾಯಿಯ ತಂಪಾಗಿಸುವ ಗುಣಲಕ್ಷಣಗಳು ಡಾರ್ಕ್ ಸರ್ಕಲನ್ನು ಹಗುರಗೊಳಿಸಲು ಮತ್ತು ಕಣ್ಣುಗಳ ಸುತ್ತಲಿನ ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದೆ ಮತ್ತು ಇದರ ಸೇವನೆಯು ನಿಮ್ಮ ದೇಹವನ್ನು ಹೈಡ್ರೀಕರಿಸುತ್ತದೆ. ಇದು ಸಿಲಿಕಾ, ವಿಟಮಿನ್ ಎ, ಸಿ, ಇ ಮತ್ತು ಕೆ ಜೊತೆಗೆ ಚರ್ಮವನ್ನು ಬಲಪಡಿಸುವ ಗಂಧಕವನ್ನು ಹೊಂದಿರುತ್ತದೆ. ಇದು ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಮತ್ತು ಡಾರ್ಕ್ ಸರ್ಕಲ್ ನಿವಾರಿಸಲು ಸಹಾಯ ಮಾಡುತ್ತದೆ.

ಪ್ರಿಲೇಪಾ (ಬಾಹ್ಯ ಅಪ್ಲಿಕೇಶನ್):

ಕ್ರೀಮ್, ಮುಲಾಮುಗಳು ಮತ್ತು ಗಿಡಮೂಲಿಕೆಗಳ ಪೇಸ್ಟ್ ಡಾರ್ಕ್ ಸರ್ಕಲ್ ನಿವಾರಿಸಲು ಸಹಾಯ ಮಾಡುತ್ತದೆ. ಅನ್ವಯಿಸಬಹುದಾದ ಕೆಲವು ಆಯುರ್ವೇದ ಪೇಸ್ಟ್‌ಗಳು ಇಲ್ಲಿವೆ.

  • ಒಂದು ಚಮಚ ಹರಿತಕಿ ಪುಡಿ, ತಾಜಾ ಅಲೋವೆರಾ ಜೆಲ್, 2 ಹನಿ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಕಣ್ಣುಗಳ ಸುತ್ತ ನಿಧಾನವಾಗಿ ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ. ಇದನ್ನು 15 ನಿಮಿಷಗಳ ಕಾಲ ಒಣಗಲು ಬಿಟ್ಟು, ಬಳಿಕ ತಂಪಾದ ನೀರಿನಿಂದ ತೊಳೆಯಿರಿ.
  • ಚಂದನ ಪೇಸ್ಟ್, ಮದ್ಯಸಾರ ಮತ್ತು ವಾಟರ್ ಪೇಸ್ಟ್ ಅಥವಾ ಮಂಜಿಸ್ತಾ ಮತ್ತು ಜೇನು ಪೇಸ್ಟ್ ಅನ್ನು ಸಹ ಬಳಸಬಹುದು.

ಅಭ್ಯಂಗ (ಆಯಿಲ್ ಮಸಾಜ್):

ಕಳಪೆ ರಕ್ತ ಪರಿಚಲನೆಯು ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್​ಗೆ ಕಾರಣವಾಗಬಹುದು. ಆದ್ದರಿಂದ, ತೆಂಗಿನ ಎಣ್ಣೆ, ಜಿಂಜೆಲಿ ಎಣ್ಣೆ, ಬಾದಾಮಿ ಎಣ್ಣೆ, ಕ್ಯಾಸ್ಟರ್ ಆಯಿಲ್, ಕುಂಕುಮಾದಿ ತೈಲಮ್, ಸತದೌತಾ ಘೃತಂ ಅಥವಾ ಕಣ್ಣುಗಳ ಸುತ್ತಲೂ ಹಸಿ ಹಾಲಿನೊಂದಿಗೆ ಮೃದುವಾಗಿ ಮಸಾಜ್ ಮಾಡುವುದರಿಂದ ರಕ್ತಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ಡಾರ್ಕ್ ಸರ್ಕಲ್ ಹಗುರಗೊಳಿಸಲು ಜೇನು ತುಪ್ಪವು ಸಹಾಯ ಮಾಡುತ್ತದೆ. ಪೀಡಿತ ಪ್ರದೇಶದ ಮೇಲೆ ಸ್ವಲ್ಪ ಪ್ರಮಾಣದ ಜೇನುತುಪ್ಪವನ್ನು 15 ನಿಮಿಷಗಳ ಕಾಲ ಹಚ್ಚಿ ತೊಳೆಯಿರಿ. ನೀವು ಅದನ್ನು ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತೊಳೆಯಬಹುದು.

ನಾಸ್ಯ ಕರ್ಮ (ಮೂಗಿನ ಮೂಲಕ ಔಷಧೀಯ ಎಣ್ಣೆಯನ್ನು ತೆಗೆದುಕೊಳ್ಳುವುದು):

ಸಾಮಾನ್ಯವಾಗಿ, ಕುತ್ತಿಗೆಯ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಗಳಿಗಾಗಿ, ನಾಸ್ಯ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. ಮೂಗಿನ / ಮೌಖಿಕ ಮಾರ್ಗದ ಮೂಲಕ ವಿಷವನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ. ಅನು ತೈಲ ಅಥವಾ ಕುಂಕುಮಾದಿ ಎಣ್ಣೆಯನ್ನು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಬಿಸಿ ಮಾಡಿದ ನಂತರ ಪ್ರತಿ ಮೂಗಿನ ಹೊಳ್ಳೆಯಲ್ಲಿ 2 ಹನಿಗಳನ್ನು ಹಾಕಬಹುದು.

ನೇತ್ರ ತರ್ಪಣ:

ನೇತ್ರ ಎಂದರೆ ಕಣ್ಣು ಮತ್ತು ತರ್ಪಣ ಎಂದರೆ ಪುನರ್ಜಲೀಕರಣ / ಪೋಷಣೆ. ಆಯುರ್ವೇದದಲ್ಲಿನ ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಇದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದರಲ್ಲಿ, ಉದ್ದಿನ ಬೇಳೆ, ಬಾರ್ಲಿ ಹಿಟ್ಟು ಮತ್ತು ತುಪ್ಪವನ್ನು ಬೆರೆಸಿ ಈ ಹಿಟ್ಟನ್ನು ಕಣ್ಣುಗಳ ಸುತ್ತಲೂ ಇಡಲಾಗುತ್ತದೆ. ನಂತರ ತುಪ್ಪ / ಎಣ್ಣೆಯನ್ನು ಹಿಟ್ಟಿನ ಮೂಲಕ, ಕಣ್ಣುಗಳ ಮೇಲೆ ಸುರಿಯಲಾಗುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ಉಳಿಯಲು ಬಿಡಲಾಗುತ್ತದೆ. ಸ್ವಲ್ಪ ಸಮಯದ ನಂತರ, ಹಿಟ್ಟನ್ನು ತೆಗೆದು ತುಪ್ಪವನ್ನು ಒರೆಸಲಾಗುತ್ತದೆ. ಪಂಚಕರ್ಮ ಆಸ್ಪತ್ರೆಗಳಲ್ಲಿ ಇದನ್ನು ಶಿಫಾರಸು ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.