ಲಂಡನ್: ಸ್ಮಾರ್ಟ್‌ಫೋನ್ ಎಂಬುದು ಇಂದು ಕೇವಲ ಸಾಧನವಾಗಿಲ್ಲ. ಇದು ಅದಕ್ಕಿಂತಲೂ ಹೆಚ್ಚಾಗಿದೆ. ಇದೇ ಕಾರಣಕ್ಕೆ ಇಂದಿನ ಪೀಳಿಗೆಯ ಅನೇಕ ಮಂದಿಗೆ ಸ್ಮಾರ್ಟ್‌ಫೋನ್ ಇಲ್ಲದೇ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದೇ ತಿಳಿದಿಲ್ಲ. ಅಷ್ಟೇ ಅಲ್ಲ, ಮೊಬೈಲ್ ಆವಿಷ್ಕಾರಕ್ಕೂ ಮುನ್ನ ಪೋಷಕರು ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದರು ಎಂಬ ಕಲ್ಪನೆಯೂ ಇತ್ತೀಚಿಗಿನ ಪೋಷಕರಲ್ಲಿಲ್ಲ ಎಂಬ ವಿಷಯವನ್ನು ಹೊಸ ಅಧ್ಯಯನ ಬಹಿರಂಗಪಡಿಸಿದೆ.
ಇದು ಅಚ್ಚರಿಯೆನಿಸಿದರೂ ಸತ್ಯ. ಸ್ಮಾರ್ಟ್‌ಫೋನ್ ಕಾಲಘಟ್ಟದ ಸುಮಾರು ಅರ್ಧದಷ್ಟು ಅಂದರೆ ಶೇ 43ರಷ್ಟು ಪೋಷಕರಿಗೆ ಮೊಬೈಲ್ ಇಲ್ಲದೇ ಮಕ್ಕಳನ್ನು ಬೆಳೆಸುವುದೇ ತಿಳಿದಿಲ್ಲವಂತೆ. OnePoll.com ಫೋನ್ ಕಂಪನಿಯ ಸಹಯೋಗದೊಂದಿಗೆ ನಡೆಸಿದ ಅಧ್ಯಯನದಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಅತಿಯಾಗಿ ಸ್ಮಾರ್ಟ್‌ಫೋನ್ ಮೇಲೆ ಅವಲಂಬಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆರು ಮತ್ತು ಆರು ವರ್ಷದೊಳಗಿನ ಮಕ್ಕಳನ್ನು ಹೊಂದಿರುವ 1,000 ಭಾಗಿದಾರರ ದತ್ತಾಂಶವನ್ನು ಅಧ್ಯಯನದಲ್ಲಿ ಸಂಗ್ರಹಿಸಲಾಗಿತ್ತು. ಇದರಲ್ಲಿ ಶೇ 61ರಷ್ಟು ಭಾಗಿದಾರರು ತಮ್ಮ ಪೋಷಕತ್ವ ನಿರ್ವಹಣೆಗೆ ಸ್ಮಾರ್ಟ್‌ಫೋನ್ ತುಂಬಾ ಪ್ರಯೋಜನಕಾರಿ ಸಾಧನ ಎಂದು ತಿಳಿಸಿದ್ದಾರೆ. ಶೇ 77ರಷ್ಟು ಮಂದಿ ಪೋಷಕರು ಮಗುವಿನ ಆರೈಕೆಯ ಸಲಹೆ ಪಡೆಯಲು ವಾರದಲ್ಲಿ 77 ಬಾರಿ ತಮ್ಮ ಬಳಕೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಅಧ್ಯಯನದಲ್ಲಿ ತಂದೆ ಮತ್ತು ತಾಯಿ ತಮ್ಮ ಮಗುವಿಗೆ ಶಾಪಿಂಗ್ಗೂ ಹೆಚ್ಚಾಗಿ ಸ್ಮಾರ್ಟ್‌ಫೋನ್ ಬಳಕೆ ಮಾಡುವುದಾಗಿ ಹೇಳಿದ್ದಾರೆ.
ಜನಜೀವನದಲ್ಲಿ ಸ್ಮಾರ್ಟ್ಫೋನ್ಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಮಗೆ ಗೊತ್ತು. ಸಂಶೋಧನೆಯ ಪ್ರಕಾರ, ಮಕ್ಕಳು ಜನಿಸಿದ ಬಳಿಕ ಅವರ ಜೀವನದಲ್ಲಿ ಈ ಸ್ಮಾರ್ಟ್ಫೋನ್ಗಳು ಮತ್ತಷ್ಟು ಪ್ರಮುಖ ಪಾತ್ರವನ್ನುವಹಿಸುತ್ತಿವೆ. ಕುಟುಂಬದಲ್ಲಿ ಫೋನ್ಗಳ ಮೇಲಿನ ಅವಲಂಬನೆ ಹೆಚ್ಚಿದೆ ಎಂದು ಏಸ್ಲಿನ್ ಒ ಕೊನ್ನೊರ್ ತಿಳಿಸಿದ್ದಾರೆ. ಇದರ ಹೊರತಾಗಿ ಮನರಂಜನೆ, ವೈದ್ಯರ ಸಂಪರ್ಕ ಸೇರಿದಂತೆ ದೈನಂದಿನ ಜೀವನದಲ್ಲಿ ಮೊಬೈಲ್ ಫೋನ್ಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಇದಕ್ಕಿಂತಲೂ ಹೆಚ್ಚಾಗಿ, ಸ್ಮಾರ್ಟ್‌ಫೋನ್ ಡಾಟಾ ಬಳಕೆ ಹೆಚ್ಚಿಸಿದೆ. ಇದೇ ಕಾರಣಕ್ಕೆ ಫೋನ್ ಬಳಕೆ ಹೆಚ್ಚಿರುವುದು. ಸುಮಾರು 34ರಷ್ಟು ಪೋಷಕರು ತಮ್ಮ ಡಾಟಾ ಪ್ಲಾನ್ ಹೆಚ್ಚಿಸುತ್ತಾರೆ ಎಂಬುದಾಗಿ ವರದಿ ತಿಳಿಸಿದೆ. ಪೋಷಕರು ತಮ್ಮ ಮಾಸಿಕ ಡಾಟಾವನ್ನು ಹೆಚ್ಚು ಮಾಡುತ್ತಿದ್ದಾರೆ. ಅಲ್ಲದೇ, ಪೋಷಕರು ಮಕ್ಕಳ ಮನರಂಜನೆಗಾಗಿ ಡಾಟಾ ಬಳಕೆ ಮಾಡುತ್ತಿದ್ದಾರೆ.
ಮಕ್ಕಳು ಮನೋರಂಜನೆಗೆ ವಿಡಿಯೋಗಳ ಪ್ರಸಾರ ಮಾಡುವುದು ಮತ್ತು ಡೌನ್ಲೋಡ್ ಮಾಡುವುದರಿಂದ ಅವರಲ್ಲಿ ಬಹುತೇಕ ಡಾಟಾಗಳು ಖಾಲಿ ಆಗುತ್ತಿದೆ. ವಾರದಲ್ಲಿ 12 ಗಂಟೆಗಳು ಈ ಚಟುವಟಿಕೆಗೆಗಾಗಿ ಮೀಸಲಿರಿಸಲಾಗಿದೆ ಎಂದು ಅಧ್ಯಯನ ಹೇಳುತ್ತದೆ. ಇದರ ಹೊರತಾಗಿ ಪೋಷಕರು ಕೂಡ ತಮ್ಮ ಇನ್ನಿತರ ಅವಶ್ಯಕತೆಗೆ ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿಸಿದ್ದಾರೆ. ಶೇ 67ರಷ್ಟು ಪೋಷಕರು ಪ್ರಾಥಮಿಕ ಕಾರಣಕ್ಕೆ ಅಂದರೆ, ಫೋಟೋ ತೆಗೆಯಲು ಮೊಬೈಲ್ ಬಳಕೆ ಮಾಡುತ್ತಾರೆ. ಶೇ 62ರಷ್ಟು ಮಂದಿ ವಾಟ್ಸ್‌ಆ್ಯಪ್ ಮೆಸೇಜ್ ಕಳುಹಿಸಲು ಸ್ಮಾರ್ಟ್‌ಫೋನ್ ಬಳಕೆ ಮಾಡಿದರೆ, ಶೇ 60ರಷ್ಟು ಮಂದಿ ಹವಾಮಾನ ತಿಳಿಯಲು ಬಳಕೆ ಮಾಡುತ್ತಾರೆ ಎಂದು ವರದಿ ಹೇಳುತ್ತದೆ.
ಇದನ್ನೂ ಓದಿ: ಅಧಿಕ ಸ್ಕ್ರೀನ್ ಟೈಮ್, ಮಗುವಿನ ತಾರ್ಕಿಕ ಕೌಶಲ್ಯದ ಮೇಲೆ ಬೀರುತ್ತದೆ ಪರಿಣಾಮ!