ETV Bharat / sukhibhava

ರಾತ್ರಿ ನಿದ್ದೆ ಸರಿಯಿಲ್ಲದಿದ್ದರೂ ಬೆಳಗ್ಗೆ ಮೂಡ್​ ಚೆನ್ನಾಗಿರಬೇಕೆಂದರೆ ಜಸ್ಟ್​ 20 ನಿಮಿಷ ವ್ಯಾಯಾಮ ಮಾಡಿ!

ನಿದ್ದೆಯ ಕೊರತೆ ನೀಗಿಸುವಲ್ಲಿ ವ್ಯಾಯಾಮವೂ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಿದೆ ಎಂದು ಈ ಅಧ್ಯಯನವೊಂದು ತೋರಿಸಿದೆ.

author img

By ETV Bharat Karnataka Team

Published : Nov 24, 2023, 5:30 PM IST

20 minutes of moderate exercises can boost your brain

ಲಂಡನ್​: ರಾತ್ರಿ ನಿದ್ದೆ ಸರಿಯಾಗಿ ಆಗಿಲ್ಲ ಎಂದರೆ, ಬೆಳಗ್ಗೆ ಅದರ ಪರಿಣಾಮ ಬೀರುವುದು ಸುಳ್ಳಲ್ಲ. ಇಂತಹ ಪರಿಣಾಮದಿಂದ ತಪ್ಪಿಸಿಕೊಳ್ಳಬೇಕು ಎಂದರೆ, 20 ನಿಮಿಷ ಸುಧಾರಿತ ವ್ಯಾಯಾಮ ಮಾಡಿ. ಇದು ನಿಮ್ಮ ಮೆದುಳಿಗೆ ಚೈತನ್ಯ ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಪೊರ್ಟಮೌತ್​​ ಯುನಿವರ್ಸಿಟಿ ಸಂಶೋಧಕರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಹೇಗೆ ನಿದ್ದೆ, ಆಮ್ಲಜನಕ ಮಟ್ಟ ಮತ್ತು ವ್ಯಾಯಾಮವೂ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಪರಿಶೀಲನೆ ಮಾಡಿ, ಅದರ ಫಲಿತಾಂಶವನ್ನು ಕಂಡುಕೊಳ್ಳಲಾಗಿದೆ.

ಯಾವುದೇ ವ್ಯಕ್ತಿಯ ನಿದ್ದೆ ಅಥವಾ ಆಕ್ಸಿಜನ್​ ಮಟ್ಟದ ಸ್ಥಿತಿ ಹೊರತಾಗಿ ಸುಧಾರಿತ ತೀವ್ರತೆಯ ವ್ಯಾಯಾಮಗಳು ಅರಿವಿನ ಪ್ರದರ್ಶನದ ಮೇಲೆ ಉತ್ತಮವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ತಂಡವು ಪತ್ತೆ ಮಾಡಿದೆ. ಈಗಾಗಲೇ ಇರುವ ಅನೇಕ ಸಂಶೋಧನೆಗಳು, ಆಮ್ಲಜನಕದ ಮಟ್ಟ ಕಡಿಮೆಯಾದಾಗ ವ್ಯಾಯಾಮವೂ ಅರಿವಿನ ಪ್ರದರ್ಶನವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ತೋರಿಸಿದೆ.

ಆದರೆ, ಈ ಅಧ್ಯಯನವೂ ಮೊದಲ ಬಾರಿ ನಿದ್ದೆಯ ಭಂಗ ಅಥವಾ ಉತ್ತಮ ನಿದ್ದೆ ಹೊಂದಿಲ್ಲದಾಗಲೂ ವ್ಯಾಯಾಮವು ಮಿದುಳನ್ನು ಸಕ್ರಿಯವಾಗಿಸಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ ಎಂದು ಯುನಿವರ್ಸಿಟಿ ಸ್ಕೂಲ್​ ಆಫ್​ ಸ್ಪೋರ್ಟ್​, ಹೆಲ್ತ್​ ಅಂಡ್​ ಎಕ್ಸಸೆಸ್​ ಸೈನ್ಸ್​ನ ಜೋ ಕೊಸ್ಟೆಲ್ಲೊ ತಿಳಿಸಿದ್ದಾರೆ.

ವ್ಯಾಯಾಮಗಳು ಮತ್ತು ಈ ಒತ್ತಡಕಾರಕಗಳ ನಡುವಿನ ಸಂಬಂಧದಲ್ಲಿ ವ್ಯಾಯಾಮಗಳು ದೇಹ ಮತ್ತು ಮೆದುಳಿಗೆ ಔಷಧವಾಗಿ ಕೆಲಸ ಮಾಡುತ್ತದೆ ಎಂಬುದು ಕಂಡು ಬಂದಿದೆ ಎಂದಿದ್ದಾರೆ ಅಧ್ಯಯನಕಾರರು.

ಎರಡು ಗುಂಪಿನಲ್ಲಿ ಅಧ್ಯಯನ: ಸೈಕಲಾಜಿ ಅಂಡ್​ ಬಿಹೇವಿಯರ್​ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. 24 ಜನರನ್ನು ಎರಡು ತಂಡವಾಗಿ ರೂಪಿಸಿ ಎರಡು ಪ್ರಯೋಗಗಳನ್ನು ಮಾಡಲಾಗಿದೆ. ಮೊದಲಿಗೆ ಕೊಂಚ ನಿದ್ದೆ ಅಡೆತಡೆ ಹೊಂದಿರುವ ವ್ಯಕ್ತಿಗಳ ಅರಿವಿನ ಪ್ರದರ್ಶನ ಪರಿಣಾಮ ಮತ್ತು ಒಟ್ಟಾರೆ ನಿದ್ದೆ ಅಡೆಗಡೆ ಮತ್ತು ಹೈಪೋಕ್ಸಿಯಾ ಹೊಂದಿರುವರಲ್ಲಿ ಈ ಪರಿಣಾಮವನ್ನು ಗುರುತಿಸಲಾಗಿದೆ.

ಎರಡು ಗುಂಪಿನವರಲ್ಲಿ 20 ನಿಮಿಷದ ವ್ಯಾಯಾಮವೂ ಅವರ ಅರಿವಿನ ಪ್ರದರ್ಶನವನ್ನು ಸುಧಾರಿಸುವಲ್ಲಿ ಸಹಾಯ ಮಾಡಿದೆ. ಕಾರಣ ವ್ಯಾಯಾಮವೂ ಸಕಾರಾತ್ಮಕ ಮಧ್ಯಂತರ ಹೊಂದಿದೆ ಎಂಬುದನ್ನು ನಾವು ನೋಡಿದೆವು. ನಾವು ಸುಧಾರಿತದಿಂದ ತೀವ್ರತರದ ಕಾರ್ಯಕ್ರಮವನ್ನು ಶಿಫಾರಸು ಮಾಡಿದೆವು ಎಂದು ಕೊಸ್ಟೆಲ್ಲೊ ತಿಳಿಸಿದ್ದಾರೆ.

ಪ್ರಯೋಗದ ಆರಂಭದಲ್ಲಿ ಒಂದು ಗುಂಪಿಗೆ ರಾತ್ರಿ ಕೇವಲ ಐದು ಗಂಟೆ ನಿದ್ದೆಯ ಅವಕಾಶವನ್ನು ಮೂರು ದಿನ ನೀಡಲಾಯಿತು. ಪ್ರತಿ ಬೆಳಗ್ಗೆ 7 ಟಾಸ್ಕ್​ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು. ಬಳಿಕ ಸೈಕ್ಲಿಂಗ್​ಗೆ ಅವಕಾಶ ನೀಡಲಾಯಿತು. ಅಲ್ಲದೇ ಅವರು ಈ ಟಾಸ್ಕ್​ಗೆ ಒಳಗಾಗುವ ಮೊದಲು ನಿದ್ದೆ ಕೊರತೆ ಮತ್ತು ಮೂಡ್​ ಬಗ್ಗೆ ತಿಳಿಸುವಂತೆ ಕೂಡ ಹೇಳಲಾಯಿತು

ಈ ವೇಳೆ ಭಾಗಿದಾರರ ಯಾವುದೇ ನಿದ್ದೆ ಹೊಂದಿದಾಗಿಯೂ ಸುಧಾರಿತ- ತೀವ್ರತೆಯ ವ್ಯಾಯಾಮಗಳು ಅವರ ಪ್ರದರ್ಶನವನ್ನು ಉತ್ತಮಗೊಳಿಸಿದೆ.

ಎರಡನೇ ಗುಂಪಿಗೆ ಇಡೀ ರಾತ್ರಿ ನಿದ್ದೆ ಹೊಂದದಂತೆ ತಿಳಿಸಲಾಗಿದೆ. ಅವರಲ್ಲಿ ಹೈಪೊಕ್ಸಿಕ್​ (ಆಮ್ಲಜನಕ ಮಟ್ಟ ಕಡಿಮೆ) ಪರಿಸರವನ್ನು ನೀಡಲಾಯಿತು. ಆಮ್ಲಜನಕ ಮಟ್ಟ ಕಡಿಮೆ ಇದ್ದಾಗಲೂ ವ್ಯಾಯಾಮಗಳು ಅರಿವಿನ ಪ್ರದರ್ಶನವನ್ನು ಉತ್ತಮಗೊಳಿಸಿದೆ ಎಂಬುದನ್ನು ಈ ಸಂದರ್ಭದಲ್ಲಿ ಕಂಡುಕೊಳ್ಳಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಮಗುವಿನಲ್ಲಿ ಏಕಾಗ್ರತೆ ಕೊರತೆಗೆ ಪ್ರಮುಖ ಕಾರಣ ಈ ಸ್ಕ್ರೀನ್​ ಟೈಂ; ಬೀ ಕೇರ್​​​ಫುಲ್​ ಎಂದ ಸಂಶೋಧಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.