ಸುರಪುರ: ಯಲ್ಲಮ್ಮನ ಜಾತ್ರೆ ನಿಮಿತ್ತ ಅನೇಕ ಮಹಿಳೆಯರು ದೇಹಕ್ಕೆ ಬೇವಿನ ಸೊಪ್ಪು ಕಟ್ಟಿಕೊಂಡು, ಅರೆ ಬೆತ್ತಲೆ ಮೆರವಣಿಗೆ ಮಾಡಿದ ಘಟನೆ ಸುರಪುರ ನಗರ ಸೇರಿದಂತೆ ಯಾದಗಿರಿ ಜಿಲ್ಲೆಯಾದ್ಯಂತ ನಡೆಯುತ್ತಿವೆ.
ರಾಜ್ಯದಲ್ಲಿ ಮೌಢ್ಯ ನಿರ್ಬಂಧ ಕಾಯ್ದೆ ಜಾರಿಯಲ್ಲಿದ್ದರೂ, ದೇವರ ಹೆಸರಿನಲ್ಲಿ ನಡೆಯುವ ಮೌಢ್ಯಾಚರಣೆಗಳು ಮಾತ್ರ ನಿಂತಿಲ್ಲ. ಸುರಪುರ ನಗರದ ಹೊರ ವಲಯದ ಕುಂಬಾರಪೇಟೆಯಲ್ಲಿ ಹರಕೆಯ ನೆಪದಲ್ಲಿ ಮಹಿಳೆಯರ ಅರೆ ಬೆತ್ತಲೆ ಸೇವೆ ನಡೆಯಿತು. ಯಲ್ಲಮ್ಮನ ಜಾತ್ರೆ ಸಮಯದಲ್ಲಿ ಪ್ರತಿವರ್ಷ ಈ ರೀತಿಯ ಆಚರಣೆ ಕೆಲ ಸಮುದಾಯಗಳು ಆಚರಿಸುತ್ತೇವೆ. ದೇವರಿಗೆ ಹರಕೆ ತೀರಿಸುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಅರೇ ಬೆತ್ತಲೆ ಮಾಡಿ, ದೇಹಕ್ಕೆ ಬೇವಿನ ಸೊಪ್ಪನ್ನು ಕಟ್ಟಿ ಉರಿ ಬಿಸಿಲಿನಲ್ಲಿ ರಸ್ತೆಯಲ್ಲಿ ಮೆರವಣಿಗೆ ಸಹ ಮಾಡಿಸಲಾಗುತ್ತದೆ.
ಓದಿ:ಮಾಣಿಕೇಶ್ವರಿ ಮಾತೆ ಆರಾಧನೆಯಲ್ಲಿ ಭಾಗವಹಿಸಿ: ಚಿಂಚನಸೂರ್ ಕರೆ
ಜಿಲ್ಲೆಯ ಖಾನಾಪುರ, ಗುಂಡಗುರ್ತಿ, ಬಿಜಾಸಪುರ ಸೇರಿದಂತೆ ಬಹುತೇಕ ಕಡೆ ಇದೆ ರೀತಿಯ ಆಚರಣೆ ಇಂದು ನಡೆದಿದೆ. ಇನ್ನೂ ಸುರಪುರ ಪಟ್ಟಣದಲ್ಲಿಯೇ ಇಂತಹ ಅನಿಷ್ಠ ಪದ್ಧತಿಗಳು ರಾಜಾರೋಷವಾಗಿ ನಡೆಯುತ್ತಿದ್ದರೂ, ಜಿಲ್ಲಾಡಳಿತ ಮತ್ತು ತಾಲೂಕು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿ. ಜಿಲ್ಲಾ ಮತ್ತು ತಾಲೂಕು ಆಡಳಿತ ಇಂತಹ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಎಲ್ಲೆಡೆ ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಕಾನೂನುಗಳ ಅರಿವು ಮೂಡಿಸಬೇಕೆಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.