ಯಾದಗಿರಿ: ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಈಚೆಗೆ ಮಹಿಳೆ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ಮೂರು ಗಂಡು ಮಕ್ಕಳು ಜನಿಸಿರುವುದಕ್ಕೆ ದಂಪತಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ತಾಲೂಕಿನ ಇಬ್ರಾಹಿಂಪೂರ ಗ್ರಾಮದ ಮೆಹರುನ್ನೀಸಾ ಸರ್ದಾರ್ ಪಟೇಲ್ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಆಗಿದ್ದಾರೆ.
ಜನ್ಮ ನೀಡಿದ ಮಹಿಳೆಗೆ ಇದು ಮೂರನೇಯ ಹೆರಿಗೆ ಆಗಿದೆ. ಅವಳಿ ಮಕ್ಕಳು ಜನಿಸಿರಬಹುದು ಎಂದು ವೈದ್ಯರು ನಿರೀಕ್ಷಿಸಿದ್ದರು. ತಾಯಿ ತ್ರಿವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ತಾಯಿ ಮತ್ತು ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ಆಯುಷ್ಮಾನ್ ಭಾರತ ಯೋಜನೆ ಅಡಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಸಿಬ್ಬಂದಿ ಉತ್ತಮ ಆರೈಕೆಯಿಂದ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಲ್ಲಪ್ಪ ಕಣಜಿಗಿಕರ್ ತಿಳಿಸಿದರು.
ನಾನು ಮತ್ತು ಮೂವರು ಮಕ್ಕಳು ಆರೋಗ್ಯವಾಗಿದ್ದೇವೆ. ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಆಸ್ಪತ್ರೆಯ ಸಿಬ್ಬಂದಿ ಉತ್ತಮ ಆರೈಕೆ ಮಾಡುತ್ತಿದ್ದಾರೆ. ನನಗೆ ಇದು ಮೂರನೇಯ ಹೆರಿಗೆ ಆಗಿದೆ. ಇದಕ್ಕೂ ಮೊದಲು ಗಂಡು ಮಗು ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದೆ ಎಂದು ತಾಯಿ ಮೇಹರುನ್ನಿಸಾ ತಿಳಿಸಿದರು.
ಇದನ್ನೂ ಓದಿ: ಬಾಲ್ಯ ವಿವಾಹ ವಿಡಿಯೋ ವೈರಲ್: ಕ್ರಮಕ್ಕೆ ಮುಂದಾದ ರಾಜಸ್ಥಾನ ಸರ್ಕಾರ